Subscribe to Gizbot

ಆಂಡ್ರಾಯ್ಡ್ ಗೇಮ್ ಡೌನ್‌ಲೋಡ್ ಮಾಡುವ ಮುನ್ನ ಗೇಮ್ ಆಡಬಹುದು!!

Written By:

ಸ್ಮಾರ್ಟ್‌ಫೋನಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುವವರಿಗೆ ಗೂಗಲ್ ಹೊಸದೊಂದು ವೈಶಿಷ್ಟ್ಯವನ್ನು ನೀಡಿದೆ. ಆಪ್‌ಸ್ಟೋರ್‌ನಲ್ಲಿರುವ ಲಕ್ಷಾಂತರ ಗೇಮ್‌ಗಳಲ್ಲಿ ಅತ್ಯುತ್ತಮ ಗೇಮ್ ಯಾವುದು ಎಂಬುದನ್ನು ಡೌನ್‌ಲೋಡ್ ಮಾಡದೇ ತಿಳಿಯಬಹುದಾದ ಆಯ್ಕೆಯನ್ನು ಗೂಗಲ್ ತನ್ನ ಆಪ್‌ ಸ್ಟೋರ್‌ನಲ್ಲಿ ಹೊರತಂದಿದೆ.!!

ಹೌದು, ಆಪ್‌ಸ್ಟೋರ್‌ಗೆ ಬಂದಿರುವ ನೂತನ ಗೇಮ್ ಯಾವುದು ಮತ್ತು ಹೇಗಿದೆ ಎಂದು ಪ್ರತಿದಿನ ಸಾವಿರಾರು ಗೇಮ್‌ಗಳನ್ನು ಆಂಡ್ರಾಯ್ಡ್ ಬಳಕೆದಾರರು ಡೌನ್‌ಲೋಡ್ ಮಾಡುತ್ತಿದ್ದಾರೆ. ಆದರೆ, ಇವುಗಳಲ್ಲಿ ಹಲವು ಗೇಮ್‌ಗಳು ಅಷ್ಟೇನು ಉತ್ತಮವಾಗಿಲ್ಲದೇ ಇರುವುದರಿಂದ ಅವುಗಳನ್ನು ಡಿಲೀಟ್ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ.!!

ಆಂಡ್ರಾಯ್ಡ್ ಗೇಮ್ ಡೌನ್‌ಲೋಡ್ ಮಾಡುವ ಮುನ್ನ ಗೇಮ್ ಆಡಬಹುದು!!

ಹಾಗಾಗಿ, ಗ್ರಾಹಕರ ಮನಸ್ಥಿತಿಯನ್ನು ಮನಗೊಂಡಿರುವ ಗೂಗಲ್ ಹೊಸ "ಆರ್ಕೇಡ್" ಟ್ಯಾಬ್‌ನಲ್ಲಿ ವೀಡಿಯೊ ಟ್ರೈಲರ್‌ಗಳನ್ನು ಪರಿಶೀಲಿಸಬಹುದಾದ ಹಾಗೂ ಆ ಗೇಮ್‌ ಅನ್ನು ಡೌನ್‌ಲೋಡ್ ಮಾಡದೇ ಆಡಬಹುದಾದ ಆಯ್ಕೆಯನ್ನು ತಂದಿದೆ. ಇದರಿಂದ ಆಂಡ್ರಾಯ್ಡ್ ಬಳಕೆದಾರರು ಗೇಮ್ ಅನುಭವ ಪಡೆದ ನಂತರ ಗೇಮ್ ಡೌನ್‌ಲೋಡ್ ಮಾಡಬಹುದು.!!

ಆಂಡ್ರಾಯ್ಡ್ ಗೇಮ್ ಡೌನ್‌ಲೋಡ್ ಮಾಡುವ ಮುನ್ನ ಗೇಮ್ ಆಡಬಹುದು!!

ಇದಕ್ಕಾಗಿಯೇ ಗೂಗಲ್ ಪ್ಲೇಸ್ಟೋರ್‌ನಲ್ಲಿ ಗೂಗಲ್ ಪ್ಲೇ ಗೇಮ್ ಅಪ್ಲಿಕೇಶನ್ ಅನ್ನು ಮರುವಿನ್ಯಾಸಗೊಳಿಸಿದೆ. ಹಾಗಾಗಿ, ಇನ್ಮುಂದೆ ಆಂಡ್ರಾಯ್ಡ್ ಬಳಕೆದಾರರು ಆಪ್‌ ಸ್ಟೋರ್‌ನಲ್ಲಿರುವ ಯಾವ ಗೇಮ್ ಉತ್ತಮವಾಗಿದೆ ಎಂಬುದನ್ನು ಒಮದು ಟ್ಯಾಪ್‌ನಲ್ಲಿ ತಿಳಿದು ನಂತರ ಆ ಗೇಮ್‌ ಡೌನ್‌ಲೋಡ್ ಮಾಡಿ ಎಂಜಾಯ್ ಮಾಡಬಹುದು.!! ಏನಂತಿರಾ?

Do you know what all u can do by Downloading Hike Messenger app.?

ಓದಿರಿ: ನಿಮ್ಮ ಹಳೆ ಸ್ಮಾರ್ಟ್‌ಪೋನ್ ಮಾರುವ ಮುನ್ನ ಈ ಎಚ್ಚರಿಕೆಗಳಿರಲಿ!!

English summary
Google announces new Google Play Instant.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot