ನಿಮ್ಮ ಮನೆಯ ಸುರಕ್ಷತೆಗೆ ಇವು ಅತ್ಯುತ್ತಮ ಸ್ಮಾರ್ಟ್ ಕ್ಯಾಮೆರಾಗಳಾಗಿವೆ!

|

ಕಛೇರಿಗಳಿಗೆ ಮತ್ತು ಅಂಗಡಿಗಳಿಗೆ ಸಿಸಿಟಿವಿ ಬಳಕೆ ಮಾಡುವಂತೆ ಮನೆಗಳಿಗೂ ಇಂದು ಸಿಸಿಟಿವಿ/ ಸೆಕ್ಯುರಿಟಿ ಕ್ಯಾಮೆರಾಗಳನ್ನು ಬಳಕೆ ಮಾಡುವುದು ಹೆಚ್ಚಾಗಿ ಹಾಗೆಯೇ ಅದು ಸಾಮಾನ್ಯ ಎಂಬಂತಾಗಿದೆ. ಬಹುತೇಕರು ತಮ್ಮ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಬಳಕೆ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಸ್ತುತ ಮಾರುಕಟ್ಟೆಯಲ್ಲಿ ಅನುಕೂಲಕರ ಆಯ್ಕೆಗಳನ್ನು ಒಳಗೊಂಡಿರುವ ಸಿಸಿಟಿವಿ ಕ್ಯಾಮೆರಾಗಳು ಲಭ್ಯ ಇವೆ.

ವಿನ್ಯಾಸ

ಸದ್ಯ ಸೆಕ್ಯುರಿಟಿ (CCTV) ಕ್ಯಾಮೆರಾಗಳನ್ನು ಬಹುತೇಕ ಬಳಕೆದಾರರು ತಮ್ಮ ಮನೆಗಳಲ್ಲಿ ಬಳಕೆ ಮಾಡುತ್ತಿದ್ದಾರೆ. ಭಿನ್ನ ವಿನ್ಯಾಸ ಪಡೆದಿರುವ ಈ ಕ್ಯಾಮೆರಾಗಳು ರೆಕಾರ್ಡಿಂಗ್, ಅಧಿಕ ಬ್ಯಾಕ್‌ಅಪ್‌ ಸಾಮರ್ಥ್ಯದಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಇನ್ನು ಇಂದಿನ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು 360 ಡಿಗ್ರಿ ಕವರೇಜ್‌ ಮಾಡುವ ಡಿಸೈನ್ ಪಡೆದಿವೆ. ಫೀಚರ್ಸ್‌ಗಳ ಅನುಗುಣವಾಗಿ ಭಿನ್ನ ಪ್ರೈಸ್‌ ಟ್ಯಾಗ್‌ ಹೊಂದಿವೆ. ಅದಾಗ್ಯೂ, ಮಾರುಕಟ್ಟೆಯಲ್ಲಿ ಬಜೆಟ್‌ ದರದಲ್ಲಿ ಸಿಗುವ ಸಿಸಿಟಿವಿ ಕ್ಯಾಮೆರಾಗಳಿಗೆ ಬೇಡಿಕೆ ಅಧಿಕ. ಈ ಲೇಖನದಲ್ಲಿ ಕೆಲವು ಅತ್ಯುತ್ತಮ ಸಿಸಿಟಿವಿ/ ಸೆಕ್ಯುರಿಟಿ ಕ್ಯಾಮೆರಾಗಳ ಬಗ್ಗೆ ತಿಳಿಯೋಣ ಬನ್ನಿರಿ.

ಗೂಗಲ್ ನೆಸ್ಟ್ ಕ್ಯಾಮ್ (Google Nest Cam)

ಗೂಗಲ್ ನೆಸ್ಟ್ ಕ್ಯಾಮ್ (Google Nest Cam)

ಗೂಗಲ್‌ ಸಂಸ್ಥೆಯ ಗೂಗಲ್‌ ನೆಸ್ಟ್ ಕ್ಯಾಮ್ ಸಹ ಆಕರ್ಷಕ ಡಿವೈಸ್‌ ಎನಿಸಿದೆ. ಈ ನೆಸ್ಟ್ ಕ್ಯಾಮ್ ಸಾಧನವು ಸುಮಾರು 3.27 ಇಂಚಿನ ಅಗಲವಿದೆ ಮತ್ತು ಮ್ಯಾಗ್ನೆಟಿಕ್ ಕನೆಕ್ಟರ್‌ನೊಂದಿಗೆ ಬೇಸ್‌ಗೆ ಅಂಟಿಕೊಳ್ಳುತ್ತದೆ. ಈ ಸಾಧನವು ಸಾಕಷ್ಟು ಸುರಕ್ಷಿತವಾಗಿದೆ ಮತ್ತು ಬೇಸ್ ಅನ್ನು ಫಿಕ್ಸ್‌ ಮಾಡಲು ಸುಲಭವಾಗಿದೆ. ಈ ಸಾಧನವು IP54 ಪ್ರಮಾಣೀಕೃತವಾಗಿದ್ದು, ಮಳೆಯಿಂದ ಸ್ಪ್ಲಾಶ್‌ಗಳಿಗೆ ಸುರಕ್ಷಿತ ರಚನೆ ಎನಿಸಿದೆ. ನೆಸ್ಟ್‌ ಕ್ಯಾಮ್ 130-ಡಿಗ್ರಿ ವೀಕ್ಷಣೆ ನೋಟವನ್ನು ಪಡೆದುಕೊಂಡಿದೆ. ಜೊತೆಗೆ 6X ಡಿಜಿಟಲ್ ಜೂಮ್, ಎರಡು-ಮಾರ್ಗದ ಆಡಿಯೊವನ್ನು ಒಳಗೊಂಡಿದೆ. ಇದು 1080P ಕ್ಯಾಮರಾ ಹೊಂದಿದ್ದು, ಸ್ಪಷ್ಟ ಫೋಟೊಗಳನ್ನು ನೀಡುತ್ತದೆ.

ರಿಯಲ್‌ಮಿ ಸ್ಮಾರ್ಟ್‌ ಕ್ಯಾಮ್ (Realme Smart Cam)

ರಿಯಲ್‌ಮಿ ಸ್ಮಾರ್ಟ್‌ ಕ್ಯಾಮ್ (Realme Smart Cam)

ರಿಯಲ್‌ಮಿ ಸ್ಮಾರ್ಟ್ ಕ್ಯಾಮ್ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾವು 1080p ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ ನೀಡುತ್ತದೆ. ಇದು 128 ಜಿಬಿ ವರೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಇದು AI ಚಲನೆಯ ಸಂವೇದಕದೊಂದಿಗೆ ಬರುತ್ತದೆ ಮತ್ತು ಅದು ಕೋಣೆಯಲ್ಲಿ ಚಲನೆಯನ್ನು ಗ್ರಹಿಸುತ್ತದೆ ಹಾಗೂ ಬಳಕೆದಾರರನ್ನು ಎಚ್ಚರಿಸುತ್ತದೆ. ಇದಲ್ಲದೆ, ಇದು ಅತಿಗೆಂಪು ರಾತ್ರಿ ದೃಷ್ಟಿಯೊಂದಿಗೆ ಬರುತ್ತದೆ.

Mi 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ (Mi Home Security Camera)

Mi 360 ಹೋಮ್ ಸೆಕ್ಯುರಿಟಿ ಕ್ಯಾಮೆರಾ (Mi Home Security Camera)

ಮಿ 360 ಡಿಗ್ರಿ ಡ್ಯುಯಲ್ ಮೋಟಾರ್ ಹೆಡ್ ವಿನ್ಯಾಸದೊಂದಿಗೆ ಬರುತ್ತದೆ. ಇದು ಕ್ಯಾಮೆರಾವನ್ನು 360 ಡಿಗ್ರಿ ಸಮತಲ ನೋಟ ಮತ್ತು 96 ಡಿಗ್ರಿ ಲಂಬ ನೋಟವನ್ನು ತಿರುಗಿಸಲು ಮತ್ತು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಕ್ಯಾಮೆರಾದ ಆಘಾತ ನಿರೋಧಕ ವಿನ್ಯಾಸ ಮತ್ತು ಸ್ತಬ್ಧ ಮೋಟರ್ ಸುಗಮ ಮತ್ತು ಮೂಕ ತಿರುಗುವಿಕೆಗೆ ಅವಕಾಶ ನೀಡುತ್ತದೆ. ಕ್ಯಾಮೆರಾ ತನ್ನ 20 ಮೆಗಾಪಿಕ್ಸೆಲ್‌ಗಳು, 1080p ರೆಸಲ್ಯೂಶನ್ ಮತ್ತು ವೈಡ್ ಡೈನಾಮಿಕ್ ರೇಂಜ್ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಉತ್ತಮ ಚಿತ್ರ ಗುಣಮಟ್ಟವನ್ನು ನೀಡುತ್ತದೆ.

ಜೆಬ್‌ ಸ್ಮಾರ್ಟ್‌ ಕ್ಯಾಮ್‌ 102 (Zeb-Smart Cam 102)

ಜೆಬ್‌ ಸ್ಮಾರ್ಟ್‌ ಕ್ಯಾಮ್‌ 102 (Zeb-Smart Cam 102)

ಝೆಬ್ರಾನಿಕ್ಸ್ ಸಂಸ್ಥೆಯ ಜೆಬ್‌ ಸ್ಮಾರ್ಟ್‌ ಕ್ಯಾಮ್‌ 102 ಕ್ಯಾಮೆರಾವು ಅತ್ಯುತ್ತಮ ಕ್ಯಾಮೆರಾಗಳಲ್ಲಿ ಒಂದಾದಗಿದೆ. ಇದು 128GB ವರೆಗಿನ ಮೈಕ್ರೋ SD ಕಾರ್ಡ್‌ಗಳಿಗೆ ಬೆಂಬಲ ಪಡೆದಿದೆ. ಜೊತೆಗೆ ಇದು ಝೆಬ್ರಾನಿಕ್ಸ್ ಕ್ಲೌಡ್ ಸ್ಟೋರೇಜ್ ಆಯ್ಕೆಯನ್ನು ಸಹ ನೀಡುತ್ತದೆ ಹಾಗೂ Zeb ಹೋಮ್ ಅಪ್ಲಿಕೇಶನ್‌ ಆಯ್ಕೆ ಹೊಂದಿದೆ. ಇನ್ನು ಇದು 2 ಮೆಗಾ ಪಿಕ್ಸಲ್‌, 1080p ಒಳಾಂಗಣ ಕ್ಯಾಮರಾ ವಿಶಾಲ ಡೈನಾಮಿಕ್ ಶ್ರೇಣಿ, ನೈಟ್‌ ಮೋಡ್ ಮತ್ತು 5 ಮೀಟರ್ ಅತಿಗೆಂಪು ಶ್ರೇಣಿಯ ಚಲನೆಯನ್ನು ಪತ್ತೆ ಮಾಡುತ್ತದೆ. 2 ವೇ ಆಡಿಯೊ, ಇನ್‌ಬಿಲ್ಟ್‌ ಮೈಕ್ ಮತ್ತು ಸ್ಪೀಕರ್‌ನೊಂದಿಗೆ ಸೂಕ್ತವಾದ ಟಾಕ್ ಬ್ಯಾಕ್ ಆಯ್ಕೆ ಹೊಂದಿದೆ.

Best Mobiles in India

English summary
Few best Smart Cameras to Secure your home.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X