ಫೋನ್ ಫೋಟೋಗ್ರಫಿ ತಿಳಿದುಕೊಳ್ಳಬೇಕಾಗಿರುವ ಅಂಶಗಳೇನು?

By Shwetha
|

ನಿಮ್ಮಲ್ಲಿರುವ ಸ್ಮಾರ್ಟ್‌ಫೋನ್ ಬಳಸಿ ನಿಮ್ಮ ಫೋಟೋಗ್ರಾಫಿಕ್ ಕಲೆಯನ್ನು ಇನ್ನಷ್ಟು ವೃದ್ಧಿಸಬಹುದು ಎಂಬ ವಿಷಯವನ್ನು ನೀವು ಅರಿತಿದ್ದೀರಾ? ಉತ್ತಮ ಕ್ಯಾಮೆರಾ ಇದ್ದಲ್ಲಿ ಮಾತ್ರವೇ ಬೆಸ್ಟ್ ಫೋಟೋಗಳನ್ನು ತೆಗೆಬಹುದು ಎಂಬ ಸಿದ್ಧಾಂತವನ್ನು ಮರೆತುಬಿಡಿ. ನಿಮ್ಮ ಬಳಿ ಇರುವ ಸಾಧಾರಣ ಫೋನ್ ಬಳಸಿ ಕೂಡ ಅತ್ಯುತ್ತಮ ಫೋಟೋಗಳನ್ನು ತೆಗೆಯಬಹುದು.

ಓದಿರಿ: ಖರೀದಿಸಿ ರೂ 15,000 ಕ್ಕೆ ಬೆಸ್ಟ್ ಕ್ಯಾಮೆರಾ ಫೋನ್ಸ್

ಅದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಆತುರಪಡುತ್ತಿದ್ದೀರಾ? ಹಾಗಿದ್ದರೆ ಈ ಲೇಖನವನ್ನು ನೀವು ಓದಲೇಬೇಕು. ಕೆಳಗಿನ ಸ್ಲೈಡರ್‌ಗಳಲ್ಲಿ ಈ ಕುರಿತು ನಾವು ಮಾಹಿತಿಯನ್ನು ನೀಡಿದ್ದು ಅದು ನಿಮಗೆ ಪ್ರಯೋಜನಕಾರಿ ಎಂದೆನಿಸಬಹುದು.

ಎಚ್‌ಡಿಆರ್ ಮೋಡ್ ಅನ್ನು ಯಾವಾಗ ಬಳಸಬೇಕು

ಎಚ್‌ಡಿಆರ್ ಮೋಡ್ ಅನ್ನು ಯಾವಾಗ ಬಳಸಬೇಕು

ಇಂದು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಎಚ್‌ಡಿಆರ್ ಮೋಡ್ ಅನ್ನು ಹೊಂದಿವೆ. ಚಿತ್ರದಲ್ಲಿ ಬೆಳಕನ್ನು ನಿಯಂತ್ರಿಸಲು ಈ ಮೋಡ್ ಸಹಾಯ ಮಾಡುತ್ತದೆ. ಹೆಚ್ಚು ಗಾಢವಾಗಿರುವ ಮತ್ತು ನೆರಳಿನಿಂದ ಕೂಡಿರುವ ಚಿತ್ರಗಳನ್ನು ಸುಲಭವಾಗಿ ನಿಮಗೆ ಸೆರೆಹಿಡುಯಬಹುದಾಗಿದೆ.

ಸಿಲೆಕ್ಟೀವ್ ಫೋಕಸಿಂಗ್

ಸಿಲೆಕ್ಟೀವ್ ಫೋಕಸಿಂಗ್

ಫೋಕಸ್‌ನಲ್ಲಿ ಸರಿಯಾದ ಆಬ್ಜೆಕ್ಟ್ ಅನ್ನು ಕಂಡುಹಿಡಿಯುವುದು ಹಿನ್ನಲೆಯನ್ನು ನಿಖರವಾಗಿಸುವುದು ಚಿತ್ರವನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಕ್ಯಾಮೆರಾವನ್ನು ಪಾಯಿಂಟ್ ಮಾಡುವ ಬದಲಾಗಿ ನೀವು ತೆಗೆಯಬೇಕೆಂದಿರುವ ಚಿತ್ರಕ್ಕೆ ಆದ್ಯತೆ ನೀಡಿ.

ಕ್ವಿಕ್ ಲಾಂಚ್

ಕ್ವಿಕ್ ಲಾಂಚ್

ಕ್ಯಾಮೆರಾ ಅಪ್ಲಿಕೇಶನ್ ಅನ್ನು ಲಾಂಚ್ ಮಾಡುವುದು ಆದಷ್ಟು ಬೇಗನೇ ಇರಲಿ. ನೀವು ಫೋಟೋ ತೆಗೆಯಬೇಕೆಂದಲ್ಲಿ ನಿಮ್ಮ ಡಿಜಿಟಲ್ ಕ್ಯಾಮೆರಾಗೆ ಎಷ್ಟು ಸಮಯ ಹಿಡಿಯುತ್ತದೆ? ಇದರ ಬಗ್ಗೆ ಗಮನ ನೀಡಿ. ಆದ್ದರಿಂದ ಕ್ಯಾಮೆರಾ ಕ್ವಿಕ್ ಲಾಂಚ್‌ನಿಂದಾಗಿ ಕೆಲವೇ ನಿಮಿಷಗಳಲ್ಲಿ ನಿಮಗೆ ಫೋಟೋಗಳನ್ನು ತೆಗೆಯಬಹುದಾಗಿದೆ.

ಕ್ಯಾಮೆರಾ ಬಟನ್

ಕ್ಯಾಮೆರಾ ಬಟನ್

ಲ್ಯಾಂಡ್ ಸ್ಕೇಪ್ ಮೋಡ್‌ನಲ್ಲಿ ವಾಲ್ಯೂಮ್ ಬಟನ್ ಅಥವಾ ಕ್ಯಾಮೆರಾ ಬಟನ್ ಅನ್ನು ಬಳಸಿ ಫೋಟೋ ತೆಗೆಯಿರಿ. ನಿಮ್ಮ ಫೋನ್‌ನಲ್ಲಿ ಡೆಡಿಕೇಟೆಡ್ ಕ್ಯಾಮೆರಾ ಬಟನ್ ಇಲ್ಲ ಎಂದಾದಲ್ಲಿ, ಸೆಟ್ಟಿಂಗ್ ಪರಿಶೀಲಿಸಿ ಮತ್ತು ವಾಲ್ಯೂಮ್ ಬಟನ್ ಅನ್ನು ಶಟರ್ ಬದಲಿಗೆ ಬಳಸಬಹುದಾಗಿದೆ.

ಲೈಟ್

ಲೈಟ್

ಬೆಳಕಿನ ಸಂಯೋಜನೆಯನ್ನು ಹೊಂದಿಸುವುದು ಹೆಚ್ಚು ಮುಖ್ಯವಾಗಿದೆ. ಬೆಳಕಿಲ್ಲದೆ ಫೋಟೋಗ್ರಫಿ ತೆಗೆಯುವುದು ತುಂಬಾ ಕಷ್ಟ. ನಿಮ್ಮ ಬಳಕೆಗೆ ಅನುಗುಣವಾಗಿ ಬೆಳಕನ್ನು ಹೇಗೆ ಬಳಸುವುದು ಎಂಬುದನ್ನು ನೀವು ತಿಳಿದುಕೊಂಡಿರಬೇಕು.

ಕಾಂಪೊಸಿಶನ್

ಕಾಂಪೊಸಿಶನ್

ಫ್ರೇಮ್ ಕಂಪೋಸ್ ಮಾಡುವುದು ಹೆಚ್ಚು ಅಗತ್ಯವಾಗಿರುವ ವಿಷಯವಾಗಿದೆ. ಹೆಚ್ಚಿನ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ಗ್ರಿಡ್ ವ್ಯೂ ಇರುತ್ತದೆ. ಇದನ್ನು ಒಮ್ಮೆ ನೀವು ಸಕ್ರಿಯಗೊಳಿಸದರೆ, ಫ್ರೇಮ್ ಅನ್ನು ಒಂಭತ್ತು ಸಮಾನ ಭಾಗಗಳನ್ನಾಗಿ ವಿಂಗಡಿಸುವ ನಾಲ್ಕು ಗೆರೆಗಳನ್ನು ಪರದೆಯಲ್ಲಿ ನಿಮಗೆ ಕಾಣಬಹುದು. ನಿಮ್ಮ ವಸ್ತು ಈ ಗೆರೆಗಳಲ್ಲೊಂದರಲ್ಲಿ ಇರಬೇಕು.

ತಾಳ್ಮೆ

ತಾಳ್ಮೆ

ತಾಳ್ಮೆ ಎಂಬುದು ಫೋಟೋಗ್ರಾಫರ್‌ಗಳಲ್ಲಿ ಇರುವುದು ಅತ್ಯವಶ್ಯಕವಾಗಿದೆ. ಸರಿಯಾದ ಕ್ಷಣದಲ್ಲಿ ಈವೆಂಟ್ ಅನ್ನು ಸೆರೆಹಿಡಿಯುವುದು ಉತ್ತಮ ಚಿತ್ರ ಮತ್ತು ಅತ್ಯುತ್ತಮ ಚಿತ್ರದ ನಡುವಿನ ವ್ಯತ್ಯಾಸಕ್ಕೆ ಉದಾಹರಣೆಯಾಗಿದೆ.

Best Mobiles in India

English summary
Smartphones have become the world's most popular cameras because they're always with you, are easy to use, and allow you to quickly take and share pictures. So here is Seven Simple Tips to Take Better Photos With Your Smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X