2000 ವರ್ಷಗಳ ಹಿಂದಿನ 'ಅನಲಾಗ್‌ ಕಂಪ್ಯೂಟರ್‌' ಗ್ರೀಸ್‌ನಲ್ಲಿ ಪತ್ತೆ

By Suneel
|

ಕಂಪ್ಯೂಟರ್‌ ಆವಿಷ್ಕಾರ ಆದದ್ದು 1822'ರಲ್ಲಿ ಎಂದು ಎಲ್ಲರೂ ತಿಳಿದಿರುವ ವಿಷಯ. ಆದರೆ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಕಂಪ್ಯೂಟರ್‌ ಇತಿಹಾಸದ ಬಗ್ಗೆ ಕುತೂಹಲದ ಮಾಹಿತಿ ನೀಡುತ್ತಿದೆ. ಚಾರ್ಲ್ಸ್ ಬ್ಯಾಬೇಜ್‌'ರವರು ಆವಿಷ್ಕರಿಸಿದ ಕಂಪ್ಯೂಟರ್‌ ಮೊದಲ ಕಂಪ್ಯೂಟರ್‌ ಆವಿಷ್ಕಾರವಲ್ಲ ಎಂಬ ಹೊಸ ಸಂಶಯವನ್ನು ಹುಟ್ಟಿಹಾಕುವ ಮಾಹಿತಿ ಇದು.

ಕಂಪ್ಯೂಟರ್‌ ಬಗೆಗಿನ ಹೊಸ ಕುತೂಹಲ ಮಾಹಿತಿ ಎಂದರೆ, 2000 ವರ್ಷಗಳ ಹಿಂದಿನ ಅನಲಾಗ್ ಕಂಪ್ಯೂಟರ್ ಗ್ರೀಸ್‌ನಲ್ಲಿ ಪತ್ತೆಯಾಗಿದೆ. ಅಂದಹಾಗೆ ಅದರ ಹೆಸರು "ಆಂಟಿಕಿಥೆರಾ ಮೆಕ್ಯಾನಿಸಮ್‌". ಪ್ರಾಚೀನ ಕಾಲದಲ್ಲಿಯ ಅನಲಾಗ್‌ ಕಂಪ್ಯೂಟರ್‌ ಇದಾಗಿದೆ. ಈ ಕಂಪ್ಯೂಟರ್ ಅನ್ನು ಪ್ರಾಚೀನ ಕಾಲದಲ್ಲಿ ಯಾವ ಕಾರ್ಯಗಳಿಗಾಗಿ ಬಳಸಲಾಗುತ್ತಿತ್ತು ಎಂಬ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

1

1

ಆಂಟಿಕಿಥೆರಾ ಚಂದ್ರನ ಹಂತಗಳು, ಗ್ರಹಗಳ ಸ್ಥಾನಗಳು ಮತ್ತು ಗ್ರಹಣಗಳು ಲೆಕ್ಕ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿದೆ.

2

2

ಆಂಟಿಕಿಥೆರಾ 2,000 ವರ್ಷಗಳಿಗಿಂತ ಹಿಂದಿನ ಟೆಕ್ನಾಲಜಿಯಾಗಿದ್ದು, ಖಗೋಳದ ಬಗ್ಗೆ ಭವಿಷ್ಯವನ್ನು ತಿಳಿಸುವ ಸಾಮರ್ಥ್ಯವನ್ನು ಸಹ ಹೊಂದಿತ್ತಂತೆ.

3

3

ಆಂಟಿಕಿಥೆರಾ ಮೆಕ್ಯಾನಿಷಮ್‌ ಗ್ರೀಸ್‌ ಹಡಗಿಗೆ 45 ಮೀಟರ್‌ ನೀರಿನ ಆಳದಲ್ಲಿ ದೊರೆತಿದೆ. ಅಲ್ಲದೇ ಕ್ರಿಸ್ತ ಪೂರ್ವ 150-100 ನಡುವೆ ಈ ಮೆಕ್ಯಾನಿಸಮ್‌ ಅನ್ನು ಅಭಿವೃದ್ದಿ ಪಡಿಸಲಾಗಿದೆ ಎಂದು ಹೇಳಲಾಗಿದೆ.

4

4

ಮೊಟ್ಟ ಮೊದಲ ಅನಲಾಗ್‌ ಕಂಪ್ಯೂಟರ್‌ ಎನ್ನಲಾದ ಆಂಟಿಕಿಥೆರಾ ಕಂಪ್ಯೂಟರ್‌ ಬಾಕ್ಸ್‌ ಒಂದು ಡಯಲ್ ಮುಳ್ಳು ಮತ್ತು 30 ಕಂಚಿನ ಚಕ್ರಗಳ ವ್ಯವಸ್ಥೆಯನ್ನು ಹೊಂದಿತ್ತಂತೆ.
ಚಿತ್ರ ಕೃಪೆ: ARGO, Brett Seymour

5

5

ವಿಶೇಷ ಅಂದ್ರೆ ಇದುವರೆಗೂ ಸಹ ಯಾವುದೇ ಪ್ರಾಚೀನ ಬರಹಗಳಲ್ಲಿ ಅಥವಾ ಇತಿಹಾಸದ ಪುಸ್ತಕಗಳಲ್ಲಿ ಈ ಟೆಕ್ನಾಲಜಿ ಬಗ್ಗೆ ಮಾಹಿತಿ ತಿಳಿಸಲಾಗಿಲ್ಲ. ಆಂಟಿಕಿಥೆರಾ ಮೆಕ್ಯಾನಿಸಮ್‌ ಕೆಲವು ಕಾರಣಗಳಿಂದ ಕಳೆದುಹೋಗಿದ್ದು, 14 ಶತಮಾನದ ವರೆಗೂ ಸಹ ಯೂರೋಪ್‌ನಲ್ಲಿ ಕಾಣಸಿಕೊಂಡಿಲ್ಲ.

6

6

ಆಂಟಿಕಿಥೆರಾ ಮೆಕ್ಯಾನಿಸಮ್‌ ನಿಗೂಢ ಖಗೋಳ ಸ್ಥಾನಗಳನ್ನು ಊಹಿಸುವ ಸಾಮರ್ಥ್ಯವನ್ನು, ಅಸಾಮಾನ್ಯ ನಿಖರತೆಯೊಂದಿಗೆ ಕ್ಯಾಲೆಂಡರ್‌ ಮತ್ತು ಜ್ಯೋತಿಷ್ಯ ಶಾಸ್ತ್ರದ ಉದ್ದೇಶಗಳಿಗಾಗಿ ಬಳಕೆಯಾಗುತ್ತಿತ್ತು.

7

7

ಆಂಟಿಕಿಥೆರಾ ಅನಲಾಗ್‌ ಕಂಪ್ಯೂಟರ್‌ನ ಇನ್ನೊಂದು ವಿಶೇಷವೆಂದರೆ ಗ್ರೀಸ್‌ನಲ್ಲಿ ನಡೆಯುವ ಒಲಿಂಪಿಕ್ ಕ್ರೀಡೆಗಳ ದಿನಾಂಕವನ್ನು ಲೆಕ್ಕಚಾರ ಮಾಡುವ ಸಾಮರ್ಥ್ಯ ಹೊಂದಿತ್ತು.

8

8

ಬ್ಯಾಬಿಲೋನಿಯನ್'ರ ಗಣಿತ ಶಾಸ್ತ್ರವು ಬಹುಶಃ ಆಂಟಿಕಿಥೆರಾ ಮೆಕ್ಯಾನಿಸಮ್‌ ಡಿವೈಸ್‌ ಅನ್ನು ಅಭಿವೃದ್ದಿಪಡಿಸಲು ಸಹಾಯವಾಗಿರಬಹುದು, ಕಾರಣ ಅವರು ನಂಬರ್‌ 60 ವ್ಯವಸ್ಥೆಯನ್ನು ಬಳಸುತ್ತಿದ್ದರು ಎಂದು ಸಂಶೋಧಕರು ಊಹಿಸಿದ್ದಾರೆ.

9

9

ಬುಧ, ಶುಕ್ರ, ಮಂಗಳ, ಗುರು, ಮತ್ತು ಶನಿ ಗ್ರಹಗಳ ಸ್ಥಾನಗಳು ಪ್ರಾಚೀನ ಕಾಲದ ಜನತೆಗೆ ತಿಳಿದಿತ್ತು, ಬಹುಶಃ ಅವರು ಆಂಟಿಕಿಥೆರಾ ಮೆಕ್ಯಾನಿಸಮ್‌ ಮೂಲಕ ತಿಳಿಯುತ್ತಿದ್ದರು ಎಂದು ಊಹಿಸಲಾಗಿದೆ. ಆದರೆ ಆಂಟಿಕಿಥೆರಾ ಮೆಕ್ಯಾನಿಸಮ್‌ ಅನಲಾಗ್‌ ಕಂಪ್ಯೂಟರ್‌ ಅನ್ನು ಯಾರು ಅಭಿವೃದ್ದಿಪಡಿಸಿರಬಹುದು ಎಂಬ ಮಾಹಿತಿ ಮಾತ್ರ ನಿಗೂಢವಾಗಿದೆ.

rn

10

ಆಂಟಿಕಿಥೆರಾ ಮೆಕ್ಯಾನಿಷಮ್‌ ಅನಲಾಗ್‌ ಕಂಪ್ಯೂಟರ್‌ ಕುರಿತ ವೀಡಿಯೋ ನೋಡಿರಿ.
ವೀಡಿಯೋ ಕೃಪೆ :TheVendor101

Most Read Articles
Best Mobiles in India

English summary
2,000 Year Old Analog Computer Was Found In Greece. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X