ಇಂಟರ್ನೆಟ್‌ ಬಳಕೆಯಿಂದ ಡಿಜಿಟಲ್‌ ಮರೆವು: ಹೇಗೆ ಗೊತ್ತೇ?

Written By:

ಪ್ರತಿ ದಿನವು ಸಹ ಟೆಕ್‌ ಗ್ಯಾಜೆಟ್‌ಗಳ ಮೇಲೆ ಖಂಡಿತ ಕೈಯಾಡಿಸದೆ ಇರಲಾರೆವು. ಇತ್ತೀಚಿನ ಟೆಕ್‌ಗಳು ಯಾವುವು ಎಂದು ತಿಳಿಯಲು ಅಥವಾ ಸೋಶಿಯಲ್‌ ಮೀಡಿಯಾಗಳಲ್ಲಿನ ಹಾಟ್‌ ಮಾಹಿತಿಗಳು ಏನು ಎಂಬುದನ್ನು ನೋಡಲು ಸಹ ಅತಿಯಾಗಿ ಇಂಟರ್ನೆಟ್‌ ಬಳಸುವಲ್ಲಿ ಇಂದಿನ ಯುವಜನತೆ ಬ್ಯುಸಿಯಾಗಿರುತ್ತದೆ. ಆದರೆ ಅದು ಎಷ್ಟು ಮುಖ್ಯ ಎಂಬುದರ ಮೇಲೆ ಆಧಾರವಾಗಿರಬೇಕಾಗಿದೆ. ಅಂತಹವರು ಸಾಕಷ್ಟು ಮಾಹಿತಿ ಹೇಳಬಹುದು. ಆದರೆ ನೆನಪಿಡಿ 'ಡಿಜಿಟಲ್‌ ಅಮ್ನೇಸಿಯಾ"ದಿಂದ ಬಳಲುತ್ತಿರುವುದರಲ್ಲಿ ಸಂಶಯವಿಲ್ಲ.

ಹೌದು, ಅತಿಯಾದ ಇಂಟರ್ನೆಟ್‌ ಬಳಕೆಯಿಂದ ಡಿಜಿಟಲ್‌ ಮರೆವು (ತಿಳಿದ ಮಾಹಿತಿ ಎಲ್ಲವನ್ನು ಮರೆಯುವ) ಎಂಬ ರೋಗಕ್ಕೆ ತುತ್ತಾಗುವುದು ಬೆಳಕಿಗೆ ಬಂದಿದೆ. "ಡಿಜಿಟಲ್‌ ಅಮ್ನೇಶಿಯಾ"ಗೆ ತುತ್ತಾಗುವ ಮುನ್ಸೂಚನೆಗಳು ಯಾವುವು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೇರವಾದ ಸಂವಹನದಲ್ಲಿ ಹಿಂಜರಿಕೆ

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಡಿಜಿಟಲ್‌ ಅಮ್ನೇಸಿಯಾದ ಮೊದಲ ಮುನ್ಸೂಚನೆ ಎಂದರೆ ಕೇವಲ ಸೋಶಿಯಲ್‌ ಮೀಡಿಯಾಗಳಲ್ಲೆ ಸಂವಹನ ನಡೆಸಿ ನಡೆಸಿ ನೇರವಾಗಿ ಇತರರೊಂದಿಗೆ ಮಾತನಾಡಲು ಹಿಂಜರಿಯುವುದು ಕಷ್ಟವಾಗುತ್ತದಂತೆ.

ಕಡಿಮೆ ಉತ್ಪಾದಕತೆ

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಅತಿಯಾದ ಇಂಟರ್ನೆಟ್‌ ಬಳಕೆಯಿಂದ ನಿಮ್ಮ ಸಮಯವೆಲ್ಲವು ಮತ್ತು ದೈಹಿಕ ಶಕ್ತಿ ಅಲ್ಲೇ ಕಡಿಮೆಯಾಗಿ ನಿಮ್ಮ ಮರೆವು ಹೆಚ್ಚಾಗುತ್ತದಂತೆ. ಅಲ್ಲದೇ ಕೆಲವೊಂದು ಡೆಡ್‌ಲೈನ್‌ ಮೀರುವುದರಿಂದ ಕೆಲಸದಲ್ಲಿ ಉದಾಸೀನ ಉಂಟಾಗುತ್ತದೆ. ಅಲ್ಲದೇ ಕೆಲವು ಸಂಬಂಧಗಳನ್ನು ಕಳೆದುಕೊಳ್ಳಬೇಕಾಗುತ್ತದೆ.

ತಂತ್ರಜ್ಞಾನಕ್ಕೆ ಅಂಟಿಕೊಂಡ ಗೀಳು

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಇಂಟರ್ನೆಟ್‌ ಅನ್ನುವುದು ಒಂದು ರೀತಿಯಲ್ಲಿ ಗಾಳಿಯಂತೆ ಒಮ್ಮೆ ಅದಕ್ಕೆ ಅಂಟಿಕೊಂಡರೆ ಅದನ್ನು ಬಿಟ್ಟು ಇರಲು ಸಾಧ್ಯವಿಲ್ಲ. ಈ ಅನುಭವ ನಿಮಗೆ ಇಂಟರ್ನೆಟ್‌ ನೆಟ್‌ವರ್ಕ್‌ ಇಲ್ಲದ ಸಮಯದಲ್ಲಿ ಆಗುತ್ತದೆ.

ಮಾಹಿತಿ ಕೇವಲ ಮೊಬೈಲ್‌ನಲ್ಲಿ ಮಾತ್ರ, ಮೆದುಳಿನಲ್ಲಿ ಅಲ್ಲ

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಇಂದು ಕೇವಲ ಸಣ್ಣ ಮಾಹಿತಿಯನ್ನು ಸಹ ಬಹುಸಂಖ್ಯಾತರು ತಮ್ಮ ಮೊಬೈಲ್‌ನಲ್ಲಿ ಶೇಖರಿಸುತ್ತಾರೆಯೇ ಹೊರತು ಮೆದುಳಿನಲ್ಲಿ ಅಲ್ಲ. ಇಮೇಲ್‌ ವಿಳಾಸ, ಪಾಸ್‌ವರ್ಡ್‌, ಫೋನ್‌ ನಂಬರ್, ಹುಟ್ಟಿದ ದಿನಾಂಕ, ಸಭೆಗಳ ಸಮಯ ಹೀಗೆ ಹಲವಾರು ಸಣ್ಣ ಮಾಹಿತಿಯನ್ನು ಸಹ ಮೊಬೈಲ್‌ನಲ್ಲಿ ಶೇಖರಿಸುತ್ತಾರೆ. ಇದು ನೆನಪಿನ ಸಾಮರ್ಥ್ಯ ಕುಗ್ಗಿಸುವಲ್ಲಿ ಕಾರಣವಾಗುತ್ತದೆ.

 ಎಲ್ಲಕ್ಕೂ ಗೂಗಲ್‌

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಇಂಟರ್ನೆಟ್‌ ಬಳಸುವ ಗೀಳು ಹೊಂದಿರುವ ನೀವು ಸಣ್ಣ ಮಾಹಿತಿಗೂ ಸಹ ಗೂಗಲ್‌ ಮೋರೆ ಹೋಗುತ್ತೀರಿ. ಆದರೆ ಮೊದಲು ನಿಮ್ಮ ಮೆದುಳಿಗೆ ಕೆಲಸ ಕೊಡದೆ ಅಥವಾ ಗೆಳೆಯರನ್ನು ಕೇಳದೇ ಗೂಗಲ್‌ ಉತ್ತರ ಹುಡುಕುತ್ತೀರಿ. ಇಂದು ಒಂದು ರೀತಿಯಲ್ಲಿ ಗೂಗಲ್‌ ಹಲವು ಉತ್ತರ ನೀಡುವುದರಿಂದ ನಿಮಗೆ ಗೊಂದಲ ಉಂಟಾಗುವುದು ಸಾಮಾನ್ಯವಾಗಿದೆ.

ಯಾವುದೇ ಸಂಪರ್ಕ ನಂಬರ್‌ಗಳು ಹೆಚ್ಚು ಕಾಲ ಇರಲಾರೆವು

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಹಲವು ಸಂಪರ್ಕಗಳನ್ನು ನೆನಪಿನಲ್ಲಿ ಇಡಲು ಮಾರ್ಗಗಳಿರುತ್ತವೆ. ಆದರೆ ಅವುಗಳನ್ನು ಸಹ ಮರೆಯುವುದು ಇಂಟರ್ನೆಟ್‌ ಅತಿಯಾದ ಬಳಕೆಯಿಂದ ರೂಢಿಯಾಗಿದೆ.

ಡೇಟಾ ಕಳೆದು ಕೊಳ್ಳುವ ಭಯ

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಹಲವು ಬಹುಮುಖ್ಯ ಮಾಹಿತಿಗಳನ್ನು ಇಂದು ನೀವು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಲ್ಲಿ ಶೇಖರಿಸಿಡಬಹುದು. ಅಂತಹ ಮಾಹಿತಿಗಳು ಕೆಲವೊಮ್ಮೆ ಕಾರಣಾಂತರದಿಂದ ಡಿಲೀಟ್‌ ಆಗಿ ಬಿಟ್ಟರೆ ಎಂಬ ಭಯ ನಿಮ್ಮನ್ನು ಕಾಡುತ್ತಿರುತ್ತದೆ.

ಡಿಜಿಟಲ್‌ ಮರೆವು ನಿಯಂತ್ರಣ ಹೇಗೆ?

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ನೀವು ಟೆಕ್ನಾಲಜಿಯನ್ನು ನಿಯಂತ್ರಿಸಬಹುದೇ ಹೊರತು, ಟೆಕ್ನಾಲಜಿ ನಿಮ್ಮನ್ನು ನಿಯಂತ್ರಿಸುವುದಿಲ್ಲ ನೆನಪಿರಲಿ. ಆದ್ದರಿಂದ ಆಗಾಗ ನೋಟಿಫಿಕೇಶನ್‌ ಅನ್ನು ಚೆಕ್‌ ಮಾಡುವುದನ್ನು ನಿಯಂತ್ರಿಸಿ. ಅದು ಸಾಮಾಜಿಕ ಜಾಲತಾಣದಲ್ಲಿ ಆಗಿರಬಹುದು ಅಥವಾ ಆಪ್‌ಗಳಲ್ಲಿ ಆಗಿರಬಹುದು.

ಟೈಮ್‌ ಪಾಸ್ ಮತ್ತು ಫೇಮಸ್

ಡಿಜಿಟಲ್‌ ಅಮ್ನೇಸಿಯಾ ಮುನ್ಸೂಚನೆಗಳು

ಇಂಟರ್ನೆಟ್‌ ಅನ್ನು ಅಗತ್ಯಕ್ಕಾಗಿ ಬಳಸಿ. ಅಗತ್ಯಕ್ಕಿಂತ ಹೆಚ್ಚಾಗಿ ಹಾಗೂ ಟೈಮ್‌ ಪಾಸ್‌ಗಾಗಿ ಬಳಸುವುದರಿಂದ ಚಟವಾಗಿ ಇದು ನಿಮ್ಮಲ್ಲಿ ಡಿಜಿಟಲ್‌ ಮರೆಗುಳಿತನ (Digital Amnesia) ಬಳಲಿಕೆಯನ್ನು ಹೆಚ್ಚು ಮಾಡುವಲ್ಲಿ ಸಂಶಯವಿಲ್ಲ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಅಗ್ಗದ ಬೆಲೆಯ ಐಫೋನ್ ಎಸ್‌ಇ: ಎಲ್ಲರೂ ತಿಳಿಯಲೇಬೇಕಾದ ಮಾಹಿತಿ

ಮೊಬೈಲ್‌ನಲ್ಲಿ ಫೇಸ್‌ಬುಕ್‌ ಸ್ಪೀಡ್‌ಗಾಗಿ "ಫೇಸ್‌ಬುಕ್‌ ಲೈಟ್"‌ ಆಪ್‌

ಬಳಸಿದ ಐಫೋನ್‌ ಖರೀದಿಯಲ್ಲಿ, ಕಳ್ಳತನದ್ದೋ/ಇಲ್ಲವೋ ಪತ್ತೆ ಹೇಗೆ?

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
7 Signs Of Having Digital Amnesia Due To Excessive Addiction Towards And Internet. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot