ಕಂಪ್ಯೂಟರ್‌ಗೆ ದಿಗ್ಬಂಧನ ಹೀಗಿರಲಿ

Written By:

ನಿಮ್ಮ ಕಂಪ್ಯೂಟರ್ ನಿಮಗೆ ಮೆಚ್ಚಿನದ್ದು ಪ್ರೀತಿ ಪಾತ್ರವಾಗಿರಬಹುದು, ಆದರೆ ನೀವು ಮಾಡುವ ಕೈ ಚಳಕವನ್ನೇ ಇನ್ನೊಬ್ಬರು ಮಾಡಿ ನಿಮ್ಮ ಪ್ರೀತಿಯನ್ನು ಕಸಿದುಕೊಂಡರೆ ಆಲೋಚಿಸಿದ್ದೀರಾ?

ನಿಮ್ಮ ಡಿಜಿಟಲ್ ಬಾಳುವೆಯನ್ನು ಆದಷ್ಟು ಮರೆ ಮಾಚುವುದು ಅತೀ ಅಗತ್ಯ. ಪಾಸ್‌ವರ್ಡ್ ಸುರಕ್ಷಿತ ಫೈಲ್‌ಗಳನ್ನು ಕಾಪಿಡುವುದು, ಫೋಲ್ಡರ್‌ಗಳಿಗೆ ಎನ್‌ಕ್ರಿಪ್ಶನ್ ಹೆಸರನ್ನು ನೀಡುವುದು ಇವೇ ಮುಂತಾದ ಸರಳ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಖಾಸಗಿ ವಿಷಯ ಸಾರ್ವಜನಿಕವಾಗುವುದನ್ನು ತಪ್ಪಿಸಬಹುದು.

ಇದನ್ನೂ ಓದಿ: ಸಪ್ಟೆಂಬರ್ ತಿಂಗಳ ಫೋನ್ ಲಾಂಚ್ ಸುಗ್ಗಿ

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಕೆಲವೊಂದು ಮುಂಜಾಗ್ರತಾ ಸಲಹೆಗಳನ್ನು ನೀವು ಅನುಸರಿಸಲೇಬೇಕು. ನಿಮ್ಮ ಖಾಸಗಿ ಒಡೆತನದಲ್ಲಿರುವ ನೀವು ಮಾತ್ರವೇ ನೋಡಲಿಚ್ಛಿಸುವಂತಹ ಕೆಲವೊಂದು ಗೌಪ್ಯ ವಿಷಯಗಳು ಯಾವುವು ಮತ್ತು ಅವುಗಳ ಸಂರಕ್ಷಣೆ ಹೇಗೆಂಬುದನ್ನು ಕೆಳಗೆ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೊಡುಗೆಗೆಳ ಪಟ್ಟಿ
  

ಕೊಡುಗೆಗೆಳ ಪಟ್ಟಿ

ಈ ಹಬ್ಬದ ದಿನಗಳಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಕೊಡುಗೆಗಳನ್ನು ನೀಡುವುದು ಸರ್ವೇ ಸಾಮಾನ್ಯ. ನೀವು ಈ ಪಟ್ಟಿಯನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸಿದ್ಧಪಡಿಸಿದ್ದೀರಿ ಎಂದಾದಲ್ಲಿ ಅದನ್ನು ಮರೆಮಾಚುವುದು ಅತೀ ಅಗತ್ಯವಾದುದು.

ಕ್ರೆಡಿಟ್, ಟ್ಯಾಕ್ಸ್ ಮಾಹಿತಿ
  

ಕ್ರೆಡಿಟ್, ಟ್ಯಾಕ್ಸ್ ಮಾಹಿತಿ

ನಿಮ್ಮ ಆನ್‌ಲೈನ್ ಬ್ಯಾಂಕಿಂಗ್ ಮಾಹಿತಿ ಇರುವಂತಹ ಫೈಲ್‌ಗಳು, ಖಾತೆ ಅಂಕೆಗಳು ಮತ್ತು ಇತರ ಆರ್ಥಿಕ ಮಾಹಿತಿಗಳನ್ನು ಗೌಪ್ಯವಾಗಿಡಿ.

ಉದ್ಯೋಗ ಅರ್ಜಿಗಳು
  

ಉದ್ಯೋಗ ಅರ್ಜಿಗಳು

ನೀವು ನಿಮ್ಮ ಉದ್ಯೋಗ ಅರ್ಜಿಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಸಿದ್ದೀರಿ ಎಂದಾದಲ್ಲಿ ಅದರ ಸಂರಕ್ಷಣೆ ನಿಮ್ಮ ಕೈಯಲ್ಲಿ ಅಡಗಿದೆ. ನಿಮ್ಮ ಸಹೋದ್ಯೋಗಿಗಳು ಇದನ್ನು ನೋಡುವ ಅಪಾಯ ಹೆಚ್ಚಿರುವುದರಿಂದ ಇದರ ಸುರಕ್ಷತೆಯನ್ನು ನೀವು ಅತ್ಯವಶ್ಯಕವಾಗಿ ಮಾಡಲೇಬೇಕು.

ಖಾಸಗಿ ಮಾಹಿತಿಯ ಫೈಲ್‌ಗಳು
  

ಖಾಸಗಿ ಮಾಹಿತಿಯ ಫೈಲ್‌ಗಳು

ನಿಮ್ಮ ಜನನ ಮಾಹಿತಿ, ಪಾಸ್‌ಪೋರ್ಟ್ ದಾಖಲೆಗಳು, ಸಾಮಾಜಿಕ ಭದ್ರತಾ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮೊದಲಾದ ಖಾಸಗಿ ಮಾಹಿತಿಯ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಸುರಕ್ಷಿತವಾಗಿರಿಸಿ ಇದಕ್ಕೆ ಲಾಕ್ ಅಥವಾ ಪಾಸ್‌ವರ್ಡ್ ಅನ್ನು ಭದ್ರಪಡಿಸಿ.

ಬ್ರೌಸಿಂಗ್ ಇತಿಹಾಸ
  

ಬ್ರೌಸಿಂಗ್ ಇತಿಹಾಸ

ನಿಮ್ಮ ಬ್ರೌಸಿಂಗ್ ಇತಿಹಾಸದ ಬಗ್ಗೆ ಹೆಚ್ಚಿನ ಕಾಳಜಿಯನ್ನು ನೀವು ವಹಿಸಬೇಕು. ಇದನ್ನು ನೀವು ಅಳಿಸಿಲ್ಲ ಎಂದಾದಲ್ಲಿ ನಿಮ್ಮನ್ನು ಹಿಂಬಾಲಿಸುತ್ತಿರುವ ವ್ಯಕ್ತಿ ನಿಮ್ಮ ಖಾಸಗಿ ಮಾಹಿತಿಯನ್ನು ಇದರ ಮೂಲಕ ಸುಲಭವಾಗಿ ಪಡೆದುಕೊಳ್ಳಬಹುದು. ಆದ್ದರಿಂದ ಕಟ್ಟೆಚ್ಚರ ಅತೀ ಅಗತ್ಯ.

ಬಳಕೆದಾರ ಹೆಸರು ಪಾಸ್‌ವರ್ಡ್ ಹೊಂದಿರುವ ಫೈಲ್‌ಗಳು
  

ಬಳಕೆದಾರ ಹೆಸರು ಪಾಸ್‌ವರ್ಡ್ ಹೊಂದಿರುವ ಫೈಲ್‌ಗಳು

ಈ ವಿಷಯದಲ್ಲಂತೂ ನೀವು ಹೆಚ್ಚುವರಿ ಮುಂಜಾಗ್ರತೆಯನ್ನು ವಹಿಸಲೇ ಬೇಕು. ಬಗೆ ಬಗೆಯ ಪಾಸ್‌ವರ್ಡ್ ಅನ್ನು ಬಳಸಿ ನಿಮ್ಮ ಫೈಲ್‌ಗಳನ್ನು ಕಾಪಾಡುವುದು ಸುರಕ್ಷಿತ ಎಂದು ನೀವು ಆಲೋಚಿಸಿರಬಹುದು ಆದರೆ ಇದು ನಿಮ್ಮನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ನಿಮ್ಮ ಫೈಲ್‌ಗಳನ್ನು ಮರೆಮಾಡಿ ಇಲ್ಲವೇ ಎನ್‌ಕ್ರಿಪ್ಟ್ ಮಾಡಿ.

ಡೈರಿಗಳು ಮತ್ತು ವೃತ್ತಪತ್ರಿಕೆಗಳು
  

ಡೈರಿಗಳು ಮತ್ತು ವೃತ್ತಪತ್ರಿಕೆಗಳು

ನಿಮ್ಮ ಖಾಸಗಿ ಡೈರಿಗಳು ಮತ್ತು ನಿಮ್ಮ ಅಸ್ತಿತ್ವದಲ್ಲಿರುವ ಕೆಲವೊಂದು ವೃತ್ತ ಪತ್ರಿಕೆಗಳು ಕಂಪ್ಯೂಟರ್‌ನಲ್ಲಿದ್ದರೆ ಅದನ್ನು ಸಂರಕ್ಷಿಸಿ. ಇವುಗಳಲ್ಲಿರುವ ನಿಮ್ಮ ಮಾಹಿತಿಗಳು ಆಗಂತುಕರ ಕೈ ಸೇರಿದವೆಂದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ರಹಸ್ಯ ಕಾರ್ಯ ದಾಖಲೆಗಳು
  

ರಹಸ್ಯ ಕಾರ್ಯ ದಾಖಲೆಗಳು

ನೀವು ಯಾವುದಾದರೂ ಕಂಪೆನಿಯಲ್ಲಿ ಕೆಲಸ ಮಾಡುವವರಾಗಿದ್ದಲ್ಲಿ ಅಲ್ಲಿ ಕೆಲವೊಂದು ನಿಯಮಗಳಿರುತ್ತವೆ ಅಂದರೆ ನಿಮ್ಮ ಫೈಲ್‌ಗಳನ್ನು ರಹಸ್ಯವಾಗಿಡುವುದು ಮುಂತಾದ ಕಚೇರಿ ಮಾಹಿತಿಗಳ ಸಂರಕ್ಷಣೆ ನಿಮ್ಮ ಜವಬ್ದಾರಿಯಾಗಿರುತ್ತದೆ. ಈ ಸಮಯದಲ್ಲಿ ನೀವು ಮೈಯೆಲ್ಲಾ ಕಣ್ಣಾಗಿ ನಿಮ್ಮ ಫೈಲ್‌ಗಳ ರಕ್ಷಣೆಯನ್ನು ಮಾಡಬೇಕಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about 8 Things You Should Consider Hiding on Your Computer.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot