ಆಸೂಸ್‌ನ ಹೊಸ ಝೆನ್‌ಬುಕ್ S13 ಶೀಘ್ರದಲ್ಲಿ ಲಾಂಚ್!

|

ತೈವಾನ್ ಮೂಲದ ಆಸೂಸ್ ಟೆಕ್ ಸಂಸ್ಥೆಯು ತನ್ನ ಅತ್ಯುತ್ತಮ ಗುಣಮಟ್ಟದ ಗ್ಯಾಜೆಟ್‌ ಉತ್ಪನ್ನಗಳ ಮೂಲಕ ಹೆಸರುವಾಸಿಯಾಗಿದ್ದು, ಹೊಸ ಹೊಸ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತಾ ಸಾಗಿರುವ ಆಸೂಸ್ ಸಂಸ್ಥೆಯ ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿವೆ. ಇದೀಗ ಆಸೂಸ್ ಸಂಸ್ಥೆಯು ನೂತನ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಲ್ಯಾಪ್‌ಟಾಪ್‌ ಮಾರುಕಟ್ಟೆಗೆ ಪರಿಚಯಿಸಲಿದೆ.

 ಆಸೂಸ್‌ನ ಹೊಸ ಝೆನ್‌ಬುಕ್ S13 ಶೀಘ್ರದಲ್ಲಿ ಲಾಂಚ್!

ಆಸೂಸ್ ಬಹುನಿರೀಕ್ಷಿತ ''ಝೆನ್‌ಬುಕ್ ಎಸ್‌ 13 ಮಿನಿ'' ಲ್ಯಾಪ್‌ ಬಿಡುಗಡೆ ಮಾಡುತ್ತಿದ್ದು, ಈ ಲ್ಯಾಪ್‌ಟಾಪ್ ಅತೀ ಚಿಕ್ಕ ಬೆಝಲ್ ಲ್ಯಾಪಿ ಆಗಿರಲಿದೆ. ಆಸೂಸ್ ಸಂಸ್ಥೆಯು ಈ ಹೊಸ ಝೆನ್‌ಬುಕ್ ಚಿಕ್ಕದಾಗಿದ್ದರು ಸಹ ಅತೀ ಯೂನಿಕ್ ಫೀಚರ್ಸ್‌ಗಳನ್ನು ಹೊಂದಿರಲಿದೆ ಮತ್ತು ಇದರ ಡಿಸೈನ್‌ ಗ್ರಾಹಕರಿಗೆ ಇಷ್ಟವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಆಸೂಸ್ ಈ ಚಿಕ್ಕ ಝೆನ್‌ಬುಕ್ ಅನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುಲಾಗುತ್ತಿದೆ.

 ಆಸೂಸ್‌ನ ಹೊಸ ಝೆನ್‌ಬುಕ್ S13 ಶೀಘ್ರದಲ್ಲಿ ಲಾಂಚ್!

ಆಸೂಸ್‌ನ ಈ ಝೆನ್‌ಬುಕ್ ಎಸ್‌ 13 ಲ್ಯಾಪ್‌ಟಾಪ್ ಅತ್ಯಂತ ಹಗುರವಾಗಿದ್ದು, ಪವರ್‌ಫುಲ್ ಕಾರ್ಯವೈಖರಿ ಹೊಂದಿರುವುದು ಇದರ ಮತ್ತೊಂದು ವಿಶೇಷ. ಅದ್ಭುತ ಫೀಚರ್ಸ್‌ಗಳನ್ನು ಒಳಗೊಂಡಿರುವುದರಿಂದ ಗ್ರಾಹಕರು ಇದರ ಯಾವ ಫೀಚರ್ ಬಗ್ಗೆಯು ರಾಜಿ ಮಾಡಿಕೊಳ್ಳುವ ಪ್ರಶ್ನೇಯೇ ಇರುವುದಿಲ್ಲ ಎನ್ನಲಾಗುತ್ತಿದೆ. ಹಾಗಾದರೇ ಈ ಲ್ಯಾಪ್ ಏನೆಲ್ಲಾ ಗುಣವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ನೋಡೊಣ.

 ಆಸೂಸ್‌ನ ಹೊಸ ಝೆನ್‌ಬುಕ್ S13 ಶೀಘ್ರದಲ್ಲಿ ಲಾಂಚ್!

ಸ್ಪೆಷಲ್ ಫೀಚರ್ಸ್‌ಗಳು
* 1920x1080 ರೆಸಲ್ಯೂಶನೊಂದಿಗೆ, 13.9 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ.
* ಇಂಟೆಲ್‌ ಕೋರ್ i7-8565U ಅಥವಾ ಕೋರ್ i5-8265U ಪ್ರೋಸೆಸ್ಸರ್‌ಗಳಲ್ಲಿ ಲಭ್ಯ.
* ಪೋರ್ಟೆಬಲ್ ಅಲ್ಟ್ರಾ ಬುಕ್ ಇದಾಗಿದೆ.
* ಡೈಮನ್‌ಷನ್ 31.6 x 12.9 x 1.95 ಸೆ.ಮೀ ಆಗಿದೆ.
* ಇದರ ತೂಕ 1.6kg, ಆಗಿದ್ದು, ಹಗುರವಾಗಿದೆ.
* 50Whr ನ ಬ್ಯಾಟರಿ ಹೊಂದಿದ್ದು, 15 ಗಂಟೆಗಳ ಕಾಲ ಬ್ಯಾಟರಿ ಬಾಳಿಕೆ ಬರಲಿದೆ.
* USB-A, 2x USB-C, ಮೈಕ್ರೋSD ಸ್ಲಾಟ್‌ ಹೊಂದಿದೆ.
* 16GB RAM ನೊಂದಿಗೆ 1TB ಸಂಗ್ರಹ ಸಾಮರ್ಥ್ಯ ನೀಡಲಾಗಿದೆ.

 ಆಸೂಸ್‌ನ ಹೊಸ ಝೆನ್‌ಬುಕ್ S13 ಶೀಘ್ರದಲ್ಲಿ ಲಾಂಚ್!

ಬೆಲೆ ಎಷ್ಟು?
ಈ ಝೆನ್ ಬುಕ್ ಎಸ್ 13 ಬರುವ ಮುಂದಿನ ಮೂರು ತಿಂಗಳ ಒಳಗಾಗಿ ಲಾಂಚ್ ಆಗುವ ಸಾಧ್ಯತೆಗಳು ಇದೆ ಎನ್ನಲಾಗುತ್ತಿದೆ. ಈ ಮಿನಿ ಲ್ಯಾಪಿಯ ಬೆಲೆ $1,199 (85,200ರೂಪಾಯಿಗಳು) ಇರಬಹುದು ಎಂದು ಅಂದಾಜಿಸಲಾಗಿದೆ.

Most Read Articles
Best Mobiles in India

English summary
The Asus ZenBook S13 packs a whole lot of power into a small, beautifully designed package that even features a unique 'reverse' notch. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X