ಚೀನಾದಿಂದ ವಿಶ್ವದ ವೇಗದ ಸೂಪರ್‍ ಕಂಪ್ಯೂಟರ್‌ ಅಭಿವೃದ್ಧಿ

Posted By:

ಚೀನಾದ ಸೂಪರ್‌ ಕಂಪ್ಯೂಟರ್‌ ಅಮೆರಿಕದ ಸೂಪರ್‌ ಕಂಪ್ಯೂಟರನ್ನು ಹಿಂದಿಕ್ಕಿ ವಿಶ್ವದ ಅತೀ ವೇಗದ ಕಂಪ್ಯೂಟರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೂಪರ್‌ ಕಂಪ್ಯೂಟರ್‌ ತಿಯಾನ್‌ಹೆ-2 (Tianhe-2) ಸೂಪರ್‌ ಕಂಪ್ಯೂಟರ್‌‌ಗಳ ವೇಗದ ಸಾಮರ್ಥ್ಯ‌ ಅಳೆಯುವ LINPACK Benchmarks ಪರೀಕ್ಷೆಯಲ್ಲಿ ಸೆಕೆಂಡ್‌ಗೆ 33,860 ಟ್ರಿಲಿಯನ್( ಒಂದು ಟ್ರಿಲಿಯನ್‌ =10ರ ಮುಂದೆ 18 ಸೊನ್ನೆಗಳನ್ನು ಹಾಕಿದರೆ ಬರುವ ಉತ್ತರ) ವೇಗದಲ್ಲಿ ಲೆಕ್ಕಾಚಾರವನ್ನು ನಡೆಸಿ 500 ಸೂಪರ್‌ ಕಂಪ್ಯೂಟರ್‌ಗಳ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನಗಳಿಸಿದೆ.

ಸೂಪರ್‌ ಕಂಪ್ಯೂಟರ್‌ಗಳಿಕೆ ರ್‍ಯಾಂಕಿಂಗ್‌ ನೀಡುವ 'ಟಾಪ್‌ 500 ಸೂಪರ್‌ ಕಂಪ್ಯೂಟರ್‌ ಸೈಟ್‌' ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈವರೆಗೆ ವಿಶ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸೂಪರ್‌ ಕಂಪ್ಯೂಟರ್‌ಗಳಲ್ಲೇ ಅತೀ ವೇಗದ ಸೂಪರ್‌ ಕಂಪ್ಯೂಟರ್‌ ಎಂಬ ಪಟ್ಟ ಈ ಸೂಪರ್‌ ಕಂಪ್ಯೂಟರ್‌ಗೆ ಲಭಿಸಿದೆ. 2010ರ ನವೆಂಬರ್‌ವರೆಗೆ ತಿಹಾನ್‌ಹೆ-1 ವಿಶ್ವದ ಅತೀ ವೇಗದ ಸೂಪರ್‌ ಕಂಪ್ಯೂಟರ್‍ ಎಂಬ ಪಟ್ಟವನ್ನು ಹೊಂದಿತ್ತು. ಆದರೆ ನಂತರ ಅಮೆರಿಕದವರು ಅಭಿವೃದ್ಧಿ ಪಡಿಸಿದ ಟೈಟಾನ್‌ ಇದನ್ನು ಹಿಂದಿಕ್ಕಿ ಅಗ್ರಸ್ಥಾನವನ್ನು ಪಡೆದಿತ್ತು. ಈಗ ಈ ಸೂಪರ್‌ ಕಂಪ್ಯೂಟರ್‌ಗೆ ಸಿಕ್ಕಿರುವ ಮಾನ್ಯತೆಯಿಂದಾಗಿ ಚೀನಾ ಮರಳಿ ನಂ.1 ಪಟ್ಟವನ್ನು ಪಡೆದಿದೆ.

ಚೀನದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾನಿಲಯ ಈ ಸೂಪರ್‌ ಕಂಪ್ಯೂಟರ್‌ನ್ನು ಅಭಿವೃದ್ಧಿಪಡಿಸಿದೆ. ಇದರ ಹೆಚ್ಚಿನ ಭಾಗಗಳನ್ನು ಚೀನಾದಲ್ಲೇ ಅಭಿವೃದ್ಧಿಪಡಿಸಲಾಗಿದ್ದು, ಪ್ರೊಸೆಸರ್‌ನ್ನು ಅಮೆರಿಕದ ಇಂಟೆಲ್‌ ಸಂಸ್ಥೆ ತಯಾರಿಸಿದೆ.
ಹೀಗಾಗಿ ಇಲ್ಲಿ ಹೊಸದಾಗಿ ಬಿಡುಗಡೆಯಾಗಿರುವ ಟಾಪ್‌ 10 ಸೂಪರ್‌ ಕಂಪ್ಯೂಟರ್‌ಗಳ ಮಾಹಿತಿಯಿದೆ. ಒಂದೊಂದೆ ಪುಟ ತಿರುಗಿಸಿ ರ್‍ಯಾಂಕಿಂಗ್‌ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
# 1. Tianhe-2 - China

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 2. Titan - U.S.

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

#3. Sequoia - U.S.

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 4. K computer - Japan

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

#5. Mira - U.S.

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 6. Stampede - U.S.

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 7. Juqueen - Germany

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

#8. Vulcan - U.S.

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 9. SuperMuc - Germany

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

# 10. Tianhe-1A - China

ವಿಶ್ವದ ಟಾಪ್‌- 10 ಸೂಪರ್‌ ಕಂಪ್ಯೂಟರ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot