ಫೇಸ್‌ಬುಕ್ ಮಾಡಲಿದೆ ಅಪ್ಲಿಕೇಶನ್‌ನಲ್ಲಿ ಬದಲಾವಣೆ ಮೋಡಿ

Written By:

ನಿಯಮಿತ ಫೀಚರ್‌ಗಳು ಮತ್ತು ಕೆಲವೊಂದು ಸಮಸ್ಯೆಗಳನ್ನು ನಿವಾರಿಸುವ ಮೂಲಕ ಫೇಸ್‌ಬುಕ್ ತನ್ನ ಐಓಎಸ್ ಮತ್ತು ಆಂಡ್ರಾಯ್ಡ್ ಆವೃತ್ತಿಗಳನ್ನು ಅಪ್‌ಡೇಟ್ ಮಾಡುತ್ತಿದೆ. ಕಳೆದ ವಾರವಷ್ಟೇ ತನ್ನ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿದ್ದ ಕಂಪೆನಿ ಬಳಕೆದಾರರಿಗೆ ಇದು ತ್ವರಿತವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿತ್ತು.

ಕೆಲವೊಂದು ಚಾಲೆಂಜಿಂಗ್ ಸಮಯಗಳಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಪರೀಕ್ಷೀಸಲು ಇತ್ತೀಚೆಗೆ ಆಫ್ರಿಕಾಕ್ಕೆ ಹೋಗಿದ್ದ ತಂಡವು ಈ ಅಪ್ಲಿಕೇಶನ್ ಇನ್ನೂ ಕೆಲವೊಂದು ಬದಲಾವಣೆಗಳನ್ನು ಹೊಂದಬೇಕೆಂದು ತೀರ್ಮಾನಿಸಿದೆ. ಇತ್ತೀಚಿನ ಬ್ಲಾಗ್ ಪೋಸ್ಟ್‌ನಲ್ಲಿ, ಫೇಸ್‌ಬುಕ್ ಇಂಜಿನಿಯರ್ ಅಲೆಕ್ಸ್ ಸುರಾವ್ ಹೇಳುವಂತೆ ಅಪ್ಲಿಕೇಶನ್‌ಗೆ ಕಂಪೆನಿಯು ಹೆಚ್ಚಿನ ಸಂಖ್ಯೆಯ ಬದಲಾವಣೆಗಳನ್ನು ಮಾಡಿದ್ದು ಕೆಲವೊಂದು ಸಮಸ್ಯೆಯನ್ನು ನಿವಾರಿಸಿದೆ ಎಂದು ಹೇಳಿದ್ದಾರೆ.

ಬದಲಾವಣೆಯೇ ಜಗದ ನಿಯಮ ಫೇಸ್‌ಬುಕ್ ಹೊಸ ಮಂತ್ರ!!!

ದೇಶದಲ್ಲಿ ಆಂಡ್ರಾಯ್ಡ್ ಡಿವೈಸ್‌ಗಳಲ್ಲಿನ ಮೊಬೈಲ್ ಪ್ರವೇಶವು ತುಂಬಾ ನಿಧಾನವಾಗಿದೆ. ಡಿವೈಸ್‌ನಲ್ಲಿನ ಮೆಮೊರಿಯು ಕೆಲವೊಂದು ಕ್ರ್ಯಾಶ್‌ಗಳಲ್ಲಿ ಸಿಲುಕಿದೆ. ತಂಡದ ಸದಸ್ಯರೂ ಕೂಡ ಈ ಅಪ್ಲಿಕೇಶನ್ ಅನ್ನು ಬಳಸುವಾಗ ಕೆಲವೊಂದು ಸಮಸ್ಯೆಗಳನ್ನು ಅನುಭವಿಸಿದ್ದು ಇದು ಅಪ್ಲಿಕೇಶನ್ ಕುರಿತಾದ ಬದಲಾವಣೆಯನ್ನು ಮಾಡುವಲ್ಲಿ ನೆರವಾಗಿದೆ.

ಮೊಬೈಲ್ ಕಾರ್ಯನಿರ್ವಹಣೆ, ಡೇಟಾ ಲಭ್ಯತೆ, ನೆಟ್‌ವರ್ಕ್ ಸಾಮರ್ಥ್ಯ, ಹಾಗೂ ವರ್ಧಿಸುತ್ತಿರುವ ಮಾರುಕಟ್ಟೆಗೆ ತಕ್ಕಂತೆ ಅಪ್ಲಿಕೇಶನ್ ಗಾತ್ರ ಮುಂತಾದ ಲಕ್ಷ್ಯಗಳನ್ನಿರಿಸಿಕೊಂಡು ನಮ್ಮ ಆಫ್ರಿಕಾ ಪ್ರವಾಸವನ್ನು ನಾವು ಕೈಗೊಂಡಿದ್ದು ಈ ವಲಯಗಳಲ್ಲಿ ಇನ್ನಷ್ಟು ಅಭಿವೃದ್ಧಿಯನ್ನು ತರಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಮುಂಚಿನಿಂದಲೂ ಯಶಸ್ಸನ್ನು ಗಳಿಸುತ್ತಿದ್ದೇವೆ ಎಂದು ತಂಡ ಹೇಳಿಕೊಂಡಿದೆ.

ಈ ಪ್ರವಾಸದಿಂದ ಕಂಪೆನಿಯು ಸಾಕಷ್ಟು ತಿಳಿದುಕೊಂಡಿದ್ದು ಕೆಲವೊಂದು ಹೊಸ ಫೀಚರ್‌ಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ತಂಡ ಹೇಳಿದೆ. ಇದೀಗ ಫೇಸ್‌ಬುಕ್ ಎಲ್ಲಾ ಪ್ರಮುಖ ಫೀಚರ್‌ಗಳನ್ನು ಪರೀಕ್ಷಿಸಿದ್ದು ಮತ್ತು ಕೆಲವೊಂದು ಪೂರ್ ನೆಟ್‌ವರ್ಕ್ ಪ್ರದೇಶಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದೆ.

ತಮ್ಮ ಬಲಾವಣೆಗಳ ಮೇಲಿನ ಫಲಿತಾಂಶವನ್ನು ಅರಿತುಕೊಳ್ಳಲು ಸಾಧ್ಯವಾಗುವಂತೆ ತಂಡವು ಯೋಜನೆಗಳನ್ನು ರೂಪಿಸಿದ್ದು ಇದರಿಂದ ಎಲ್ಲೆಲ್ಲಿ ಹೇಗೆ ಯಾವ ರೀತಿಯಲ್ಲಿ ಬದಲಾವಣೆ ಮಾಡಬೇಕೆಂಬುದನ್ನು ತಿಳಿದುಕೊಳ್ಳಲು ಸಹಾಯಕವಾಗಿದೆ. ಇದಲ್ಲದೆ ಕಂಪೆನಿಯು ತನ್ನ ಪ್ಲೇಬುಕ್ ಅನ್ನು ಇತರ ಅಪ್ಲಿಕೇಶನ್‌ಗಳಾದ ಮೆಸೆಂಜರ್ ಮತ್ತು ಇನ್ಸಟಾಗ್ರಾಮ್‌ಗೆ ವಿಸ್ತರಿಸಿದೆ.

ಮುಂದುರಿವರಿಯುತ್ತಿರುವ ಮಾರುಕಟ್ಟೆ ಆದ್ಯತೆಗಳಿಗೆ ತಕ್ಕಂತೆ ಫೇಸ್‌ಬುಕ್ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ಇರಾದೆ ನಮ್ಮದಾಗಿದ್ದು ಪ್ರತಿಯೊಂದು ರಂಗದಲ್ಲೂ ಈ ಬದಲಾವಣೆ ಮೋಡಿ ಮಾಡಲಿದೆ ಎಂದು ಸುರಾವ್ ತಿಳಿಸಿದ್ದಾರೆ. ಈ ಅಪ್ಲಿಕೇಶನ್ ಬೇರೆ ಬೇರೆ ಹ್ಯಾಂಡ್‌ಸೆಟ್‌ಗಳಲ್ಲಿ, ನೆಟ್‌ವರ್ಕ್ ಪರಿಸರದಲ್ಲಿ, ಮತ್ತು ಆಪರೇಟಿಂಗ್ ಸಿಸ್ಟಮ್‌ನಲ್ಲಿ
ಕಾರ್ಯನಿರ್ವಹಿಸುವುದರ ಕುರಿತು ನಾವು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ ಎಂದವರು ತಿಳಿಸಿದ್ದಾರೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot