ಫೇಸ್ ಬುಕ್ ಮನೆ ಒಡೆಯುವ ಕೆಲಸ ಮಾಡುತ್ತಿದೆಯೆ?

|
ಫೇಸ್ ಬುಕ್ ಮನೆ ಒಡೆಯುವ ಕೆಲಸ ಮಾಡುತ್ತಿದೆಯೆ?

ಫೇಸ್ ಬುಕ್ ಮನೆ ಒಡೆಯುವ ಕೆಲಸ ಮಾಡುತ್ತಿದೆಯೆ ? ಹೌದು ಎಂದು ಇತ್ತೀಚಿಗೆ ನಡೆಸಿದ ಸಂಶೋಧನೆಯು ದೃಢ ಪಡಿಸಿದೆ. ದಿನದಿಂದ ದಿನಕ್ಕೆ ಫೇಸ್ ಬುಕ್ ನಿಂದ ಕುಟುಂಬ ಕಲಹಗಳು ಮತ್ತಷ್ಟು ಹೆಚ್ಚಾಗುತ್ತಿದ್ದು 2009-11ರಲ್ಲಿ ಸುಮಾರು 20%ನಷ್ಟು ವಿಚ್ಛೇದನಗಳು ಇದರಿಂದಾಗಿ ಆಗಿವೆ.

ಫೇಸ್ ಬುಕ್ ನಿಂದ ವಿಚ್ಛೇದನ ಆಗಲು ಪ್ರಮುಖ ಕಾರಣ ದಂಪತಿಗಳ ಮಾಜಿ ಪ್ರೇಯಸಿ ಅಥವಾ ಮಾಜಿ ಪ್ರಿಯತಮನ ಬಗ್ಗೆ ಬರೆಯುವುದು, ತಮ್ಮ ದಾಂಪತ್ಯದಲ್ಲಿ ಸಣ್ಣ ಪುಟ್ಟ ಕಲಹಗಳನ್ನು ಫೇಸ್ ಬುಕ್ ನಲ್ಲಿ ಹಾಕುವುದು ಇವೆಲ್ಲವೂ ಕೌಟುಂಬಿಕ ಕಲಹವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ.

ಫೇಸ್ ಬುಕ್ ನಿಂದ ಈ ಕೆಳಗಿನ ಪ್ರಮುಖ ಕಾರಣಕ್ಕೆ ಹೆಚ್ಚಾಗಿ ವಿಚ್ಚೇದನಗಳು ಆಗುತ್ತಿದೆ.

1. ವಿರುದ್ಧ ಲಿಂಗದಿಂದ ಬರುವ ಕೆಲವು ಮೆಸೇಜ್ ಗಳು ಸಂಸಾರದಲ್ಲಿ ಅನಾವಶ್ಯಕವಾದ ಸಂಶಯವನ್ನು ಉಂಟು ಮಾಡುತ್ತಿದೆ.

2. ದಂಪತಿಗಳು ತಮ್ಮ ನಡುವೆ ಇರುವ ಕಿತ್ತಾಟವನ್ನು ಫೇಸ್ ಬುಕ್ ನಲ್ಲಿ ಮುಂದುವರೆಸುವುದು.

3. ಸ್ನೇಹಿತರ ಕಾಮೆಂಟ್ಸ್

ಅನೇಕ ಮದುವೆಗಳು ಕೂಡ ಫೇಸ್ ಬುಕ್ ನಿಂದ ಮುರಿದು ಬಿದ್ದ ಉದಾಹರಣೆಗಳಿವೆ. ಆದರೆ ಫೇಸ್ ಬುಕ್ ನಿಂದ ಸ್ಕೂಲ್ ಫ್ರೆಂಡ್ಸ್ ಗಳು ಸಿಕ್ಕಿ ಗೆಳತನ ಮುಂದುವರೆಯಲೂ ಸಹಾಯವಾಗಿದೆ. ಈ ಫೇಸ್ ಬುಕ್ ನ ಬಳಕೆಯ ಬಗ್ಗೆ ಅರಿವುಯಿದ್ದರೆ ಕೌಟುಂಬಿಕ ಕಲಹಕ್ಕೆ ಅವಕಾಶವಿರುವುದಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X