Subscribe to Gizbot

ಫೇಸ್‌ಬುಕ್ ಸ್ಲಿಂಗ್‌ಶಾಟ್ ಇನ್ನು ಆಂಡ್ರಾಯ್ಡ್ ಮತ್ತು ಐಫೋನ್‌ನಲ್ಲೂ

Written By:

ಫೇಸ್‌ಬುಕ್ ತನ್ನ ಮೆಸೇಜಿಂಗ್ ಅಪ್ಲಿಕೇಶನ್ ಆದ ಸ್ಲಿಂಗ್‌ಶಾಟ್ ಅನ್ನು ಜಾರಿಗೆ ತಂದು ಹೆಚ್ಚು ಸಮಯವೇನೂ ಆಗಲಿಲ್ಲ. ಆದರೆ ಈ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಇನ್ನಷ್ಟು ಬದಲಾವಣೆಗಳನ್ನು ಮಾಡುವ ಮೂಲಕ ಬಳಕೆದಾರರಿಗೆ ಇದು ಇನ್ನಷ್ಟು ಹತ್ತಿರವಾಗುವ ಕಾಲ ಸನ್ನಿಹಿತವಾಗಿದೆ.

ಈಗ ಈ ಅಪ್ಲಿಕೇಶನ್ ಜಗತ್ತಿನಾದ್ಯಂತ ಲಭ್ಯವಿದ್ದು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಬಹುದಾಗಿದೆ. ತಂಡವು ಹೇಳುವಂತೆ ಈ ಮೆಸೇಜಿಂಗ್ ಅಪ್ಲಿಕೇಶನ್ ಅನ್ನು ಬಳಸಲು ಗ್ರಾಹಕರು ಹೆಚ್ಚು ಉತ್ಸುಕರಾಗಿದ್ದು ಇದನ್ನು ಜಗತ್ತಿನಾದ್ಯಂತ ಜನಪ್ರಿಯಗೊಳಿಸಿ ನಾವು ಉತ್ತಮ ಕೆಲಸವನ್ನೇ ಮಾಡಿದ್ದೇವೆ. ಇದು ಅಂತರಾಷ್ಟ್ರೀಯವಾಗಿ ಲಭ್ಯವಿರುವುದರಿಂದ ಸ್ಲಿಂಗ್‌ಶಾಟ್‌ಗಿರುವ ಬೇಡಿಕೆ ಹಚ್ಚಾಗಲಿದೆ ಎಂದು ತಂಡವು ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.

ಇನ್ನು ಸ್ಮಾರ್ಟ್‌ಫೋನ್‌ಗಳಲ್ಲೂ ಸ್ಲಿಂಗ್‌ಶಾಟ್ ಲಭ್ಯ

ಐಓಎಸ್ ಮತ್ತು ಆಂಡ್ರಾಯ್ಡ್ ಈ ಎರಡಕ್ಕೂ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಆಗುವಂತೆ ವ್ಯವಸ್ಥಿತಗೊಳಿಸಿದ್ದರೂ ಸದ್ಯಕ್ಕೆ ಆಂಡ್ರಾಯ್ಡ್ ಬಳಕೆದಾರರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಐಓಎಸ್ ಬಳಕೆದಾರರಿಗೆ ಇದು ಲಭ್ಯವಾಗಲು ಸ್ವಲ್ಪ ಸಮಯವಾದರೂ ಬೇಕು.

ಸ್ನ್ಯಾಪ್‌ಚಾಟ್‌ನಂತೆ ಫೇಸ್‌ಬುಕ್‌ನ ಸ್ಲಿಂಗ್‌ಶಾಟ್‌ನ ಫೀಚರ್‌ಗಳು ಒಂದೇ ತೆರನಾಗಿದ್ದರೂ ಸ್ವಲ್ಪ ಭಿನ್ನತೆ ಇದಕ್ಕಿದೆ. ನೀವು ಕಳುಹಿಸುವ ಫೋಟೋಗಳು ಮತ್ತು ಸಂದೇಶಗಳನ್ನು ನಿಮ್ಮ ಸ್ನೇಹಿತರು ಸ್ಲಿಂಗ್‌ಶಾಟ್‌ನಲ್ಲಿ ನೋಡಬಹುದಾಗಿದೆ ಆದರೆ ಅವರು ತಮ್ಮ ಫೋನ್‌ಗಳಲ್ಲಿ ಸ್ಲಿಂಗ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot