ನೀವಿಲ್ಲದ ವೇಳೆ ನಿಮ್ಮ ಕಂಪ್ಯೂಟರ್‌ಗೆ ಯಾರು, ಯಾವಾಗ ಲಾಗಿನ್‌ ಆಗಿದ್ದರು ತಿಳಿಯುವುದು ಹೇಗೆ?

Written By:

ಕಂಪ್ಯೂಟರ್/ಲ್ಯಾಪ್‌ಟಾಪ್‌ ಮನೆಯಲ್ಲೇ ಇರಲಿ ಅಥವಾ ಕೆಲಸ ಮಾಡುವ ಕಛೇರಿಗಳಲ್ಲೇ ಇರಲಿ. ಕೆಲವರಿಗೆ ತಾವಿಲ್ಲದ ಸಮಯದಲ್ಲಿ ತಮ್ಮ ಕಂಪ್ಯೂಟರ್‌/ ಲ್ಯಾಪ್‌ಟಾಪ್‌ ಆನ್‌ಮಾಡಿ ಯಾರಾದ್ರು ವೈಯಕ್ತಿಕ ಡಾಟಾವನ್ನು ಕದ್ದು ನೋಡಿ ಬಿಟ್ರೆ, ಯಾವುದಾದ್ರು ಫೈಲ್‌ ಅಥವಾ ಡಾಟಾವನ್ನು ಡಿಲೀಟ್ ಮಾಡಿಬಿಟ್ರೆ ಎಂಬ ಹಲವು ಸಂಶಯಗಳು ಕಾಡುತ್ತಲೇ ಇರುತ್ತವೆ. ಅಂತಹವರು ಸುಲಭವಾಗಿ ತಾವು ಮತ್ತೆ ಕಂಪ್ಯೂಟರ್‌ ಆನ್‌ ಮಾಡಿದಾಗ ತಮ್ಮ ಕಂಪ್ಯೂಟರ್‌ಗೆ ಯಾರು, ಯಾವಾಗ ಲಾಗಿನ್‌ ಆಗಿದ್ದರು ಎಂದು ತಿಳಿಯಬಹುದು.

ನೀವಿಲ್ಲದ ವೇಳೆ ಕಂಪ್ಯೂಟರ್‌ಗೆ ಯಾರು, ಯಾವಾಗ ಲಾಗಿನ್‌ ಆಗಿದ್ದರು ಪತ್ತೆ ಹೇಗೆ?

ಹೌದು, ವಿಂಡೋಸ್ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ ಬಳಕೆದಾರರು ಕೇವಲ ಲಾಗಾನ್ ಆಡಿಟಿಂಗ್ ಟ್ರ್ಯಾಕ್‌ ಎನೇಬಲ್ ಮಾಡುವ ಮುಖಾಂತರ ಯಾವ ಬಳಕೆದಾರರು ಸಿಸ್ಟಮ್‌ಗೆ ಲಾಗಿನ್ ಆಗಿದ್ದಾರೆ, ಯಾವಾಗ ಲಾಗಿನ್‌ ಆಗಿದ್ದಾರೆ ಎಂದು ತಿಳಿಯಬಹುದು.

ಎಚ್ಚರ: ಈ ಕಂಪ್ಯೂಟರ್ ತಪ್ಪುಗಳು ನಿಮ್ಮಿಂದಲೂ ನಡೆಯಬಹುದು

ವಿಂಡೋಸ್ ಕಂಪ್ಯೂಟರ್(Computer) ಬಳಕೆದಾರರು ಹಲವು ಲಾಗಿನ್ ಖಾತೆಗಳನ್ನು ಹೊಂದಿದ್ದಲ್ಲಿ, ಯಾರು, ಯಾವಾಗ ಲಾಗಿನ್ ಆಗಿದ್ದರು, ಎಷ್ಟು ಗಂಟೆಗೆ ಲಾಗೌಟ್‌ ಮಾಡಿದ್ದಾರೆ ಎಂಬಿತ್ಯಾದಿ ಮಾಹಿತಿಗಳನ್ನು ಸುಲಭವಾಗಿ ಟ್ರ್ಯಾಕ್‌ ಮಾಡಬಹುದು. ಲೋಕಲ್ ಲಾಗಿನ್ ಮತ್ತು ನೆಟ್‌ವರ್ಕ್‌ ಲಾಗಿನ್ ಎರಡನ್ನು ಟ್ರ್ಯಾಕ್‌ ಮಾಡಬಹುದು. ಅದು ಹೇಗೆ ಎಂದು ತಿಳಿಯಲು ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿ. ಫೋಟೋಗಳನ್ನು ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ 1

ಹಂತ 1

ಮೊದಲಿಗೆ ಸ್ಟಾರ್ಟ್‌ ಮೆನುವಿನಲ್ಲಿ "gpedit.msc" ಎಂದು ಟೈಪಿಸಿ ಎಂಟರ್ ಮಾಡಿ.

ಹಂತ 2

ಹಂತ 2

ನಂತರ ಈ ಫೋಲ್ಡರ್‌ ಅನ್ನು ಬ್ರೌಸ್‌ ಮಾಡಿ: ಲೋಕಲ್ ಕಂಪ್ಯೂಟರ್ ಪಾಲಿಸಿ>> ಕಂಪ್ಯೂಟರ್ ಕಾನ್ಫಿಗರೇಷನ್ >> ವಿಂಡೋಸ್ ಸೆಟ್ಟಿಂಗ್ಸ್ >> ಸೆಕ್ಯೂರಿಟಿ ಸೆಟ್ಟಿಂಗ್ಸ್ >> ಲೋಕಲ್ ಪಾಲಿಸೀಸ್ >> ಆಡಿಟ್ ಪಾಲಿಸಿ

(Local Computer Policy -> Computer Configuration -> Windows Settings -> Security Settings -> Local Policies -> Audit Policy.)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ 3

ಹಂತ 3

ಈ ಹಂತದಲ್ಲಿ ನೀವು 'Audit Logon events' ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ನಂತರ "Success" ಮತ್ತು "Failure" ಅನ್ನು ಚೆಕ್‌ ಮಾಡಿ "OK' ಎಂಬಲ್ಲಿ ಕ್ಲಿಕ್ ಮಾಡಿ.

ಹಂತ 4

ಹಂತ 4

ಈಗ ನೀವು ಪುನಃ ಸ್ಟಾರ್ಟ್‌ ಮೆನುವಿನಲ್ಲಿ "Event Viewer" ಎಂದು ಟೈಪಿಸಿ ಎಂಟರ್ ಮಾಡಿ

ಹಂತ 5

ಹಂತ 5

ವಿಂಡೋಸ್ ಲಾಗ್ಸ್ >> ಸೆಕ್ಯೂರಿಟಿ (Windows logs -> Security) ಗೆ ಹೋಗಿ.

ಹಂತ 6

ಹಂತ 6

ಪ್ರಸ್ತುತದಲ್ಲಿ ಈ ಹಂತದಲ್ಲಿ ID 4624 ಈವೆಂಟ್ ಕ್ಲಿಕ್ ಮಾಡಿ. ಚಿತ್ರ ಗಮನಿಸಿ.

ಹಂತ 7

ಹಂತ 7

ಮೇಲೆ ತಿಳಿಸಿದ ಈವೆಂಟ್‌ ಮೇಲೆ ಡಬಲ್‌ ಕ್ಲಿಕ್ ಮಾಡಿ ಇತರರು ನಿಮ್ಮ ಕಂಪ್ಯೂಟರ್‌ಗೆ ಲಾಗಿನ್‌ ಆದ ಸಮಯ ಮತ್ತು ಇತರೆ ಹಲವು ಮಾಹಿತಿಗಳನ್ನು ತಿಳಿಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
How To Find Who Logged Into Your Computer And When. Here we will be discussing useful trick that will help you to find who logged into your computer and when. Go through the article to know about it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot