ಮೆಮೊರಿ ಕಾರ್ಡ್‌ನಿಂದ ಫೋಟೋ ಮರುಪಡೆಯುವುದು ಹೇಗೆ?
ನಿಮ್ಮ ಫೋನ್ ಮೆಮೊರಿ ಕಾರ್ಡ್‌ನಿಂದ ಫೋಟೋಗಳು ಅದೃಶ್ಯವಾಗಿವೆ ಎಂದಾದಲ್ಲಿ ನಿಮ್ಮ ಬಾಯಿಂದ ಅಯ್ಯೋ ಎಂಬ ಉವಾಚ ಬರುವುದು ಸಹಜ. ಹಾಗಿದ್ದರೆ ನಿಮ್ಮ ಇಷ್ಟದ ಚಿತ್ರಗಳು ಅಳಿಸಿ ಹೋದಲ್ಲಿ ಅದನ್ನು ಮರುಪಡೆದುಕೊಳ್ಳುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ಅರಿತುಕೊಳ್ಳೋಣ.
ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಅತಿ ವಿಶೇಷ ವೈಶಿಷ್ಟ್ಯ ಫೋನ್‌ಗಳು
ನಾವು ಇಲ್ಲಿ ನೀಡಿರುವ ಸರಳ ಹಂತಗಳು ತುಂಬಾ ಪ್ರಯೋಜನಕಾರಿಯಾಗಿದ್ದು ನಿಮ್ಮಲ್ಲಿ ಹೊಸ ಹುರುಪನ್ನು ನೀಡುವುದು ಖಂಡಿತ. ಕೆಳಗಿನ ಹಂತಗಳು ಹೆಚ್ಚು ಉಪಯೋಗಕಾರಿಯಾಗಿದ್ದು ನಿಮ್ಮ ಸುಂದರ ನೆನಪುಗಳನ್ನು ಮರುಪಡೆದುಕೊಳ್ಳುವಲ್ಲಿ ಸಹಕಾರಿ ಎಂದೆನಿಸಲಿದೆ.

#1
ನಿಮ್ಮ ಮೆಮೊರಿ ಕಾರ್ಡ್‌ನಲ್ಲಿದ್ದ ಫೋಟೋಗಳು ಅಳಿಸಿ ಹೋಯಿತು ಎಂದಾದಲ್ಲಿ ನಿಮ್ಮ ಮೆಮೊರಿ ಕಾರ್ಡ್‌ಗೆ ಏನೂ ಮಾಡದಿರಿ. ಅಂದರೆ ಮೆಮೊರಿ ಕಾರ್ಡ್ ಬಳಸಿ ಹೆಚ್ಚು ಫೋಟೋಗಳನ್ನು ತೆಗೆಯದಿರಿ ಮತ್ತು ಕ್ಯಾಮೆರಾದಿಂದ ಮೆಮೊರಿ ಕಾರ್ಡ್ ಅನ್ನು ಹೊರತೆಗೆಯಿರಿ.

#2
ರಿಕವರಿ ಸೂಟ್ ಅನ್ನು ಆಯ್ಕೆಮಾಡಿ. ಫೋಟೋ ರಿಕವರಿಗ ಅತ್ಯುತ್ತಮವಾಗಿರುವ ಸಾಫ್ಟ್‌ವೇರ್ ಅನ್ನು ಬಳಸಿ.

#3
ನಿಮ್ಮ ಪಿಸಿಯಲ್ಲಿ ಸಾಫ್ಟ್‌ವೇರ್ ಅನ್ನು ಇನ್‌ಸ್ಟಾಲ್ ಮಾಡಿ ಮತ್ತು ಹೊಂದಿಸಿ.

#4
ಪ್ರೊಗ್ರಾಮ್ ಅನ್ನು ಪ್ರಾರಂಭಿಸಿ ಮತ್ತು ಯಾವ ರೀತಿಯ ಫೈಲ್‌ಗಳನ್ನು ಪ್ರಯತ್ನಿಸಬೇಕು ಮರುಪಡೆಯಬೇಕು ಎಂಬುದನ್ನು ಆರಿಸಿ. ರಿಕೂವಾ ಅನ್ನು ಬಳಸಿ.

#5
ನೀವು ಯಾವ ಸ್ಥಾನವನ್ನು ನೋಡಬೇಕು ಎಂದು ಹೇಳುವವರೆಗೆ ಮೆನು ಮೂಲಕ ಕ್ಲಿಕ್ ಮಾಡಿ. ನಿಮ್ಮ ಕಾರ್ಡ್ ರೀಡರ್ ಅನ್ನು ಕಂಪ್ಯೂಟರ್‌ಗೆ ಪ್ಲಗಿನ್ ಮಾಡಿ.


Click it and Unblock the Notifications








