ಫೇಸ್ ಬುಕ್ ಟೈಮ್ ಲೈನ್ ತೆಗೆಯುವುದು ಹೇಗೆ ?

Posted By: Varun
ಫೇಸ್ ಬುಕ್ ಟೈಮ್ ಲೈನ್ ತೆಗೆಯುವುದು ಹೇಗೆ ?

ಫೇಸ್ ಬುಕ್ ಬಳಸುವ ಸುಮಾರು ಜನ ಈ ಟೈಮ್ ಲೈನ್ಅಂದರೇನೆ ಬೇಜಾರು ಮಾಡಿಕೊಳ್ಳುತ್ತಾರೆ ಕಣ್ರೀ. ಫೇಸ್ ಬುಕ್ ಉಪಯೋಗಿಸಲು ಮೊದಲು ಚೆನ್ನಾಗಿರುತ್ತಿತ್ತು. ಈಗ ದೊಡ್ಡದಾದ ಕವರ್ ಫೋಟೋ ಹಾಕುವ, ಡಬಲ್ ಲೇಔಟ್ ಬಂದಿದೆ. ಅಪ್ಡೇಟ್ ಮಾಡುವ, ಲೈಕ್ ಮಾಡುವ ಮಾಹಿತಿಯನ್ನೂ ಕ್ಯಾಲೆಂಡರ್ ಥರ ತೋರಿಸುತ್ತದೆ, ಪ್ರೊಫೈಲ್ ಫೋಟೋ ಬೇರೆ ಚಿಕ್ಕದಾಗಿದೆ, ಇದು ನಮಗೆ ಇಷ್ಟ ಇಲ್ಲಅಂತ. ಹಳೆ ಮಾದರಿಯ ಫೇಸ್ ಬುಕ್ ಪ್ರೊಫೈಲ್ ಗೆ ಮರಳಲು ಏನಾದರೂ ಐಡಿಯಾ ಇದ್ರೆ ಕೊಡಿ ಅಂತ ಸುಮಾರು ಜನ ಕೇಳಿದ್ದರು. ಹಾಗಾಗಿ ಈ ಅಂಕಣ ಬರೆಯಬೇಕಾಗಿ ಬಂತು.

ನೀವು ಫೇಸ್ ಬುಕ್ ಉಪಯೋಗಿಸುತ್ತಿದ್ದು, ಟೈಮ್ ಲೈನ್ ಇಷ್ಟವಿಲ್ಲದವರು ಈ ಕೆಳಗಿನ ಹಂತಗಳನ್ನು ಪಾಲಿಸಿದರೆ ಸಾಕು ಟೈಮ್ ಲೈನ್ ಕಾಟದಿಂದ ತಪ್ಪಿಸಿಕೊಳ್ಳಬಹುದು.

  • ಮೊದಲಿಗೆ ನಿಮ್ಮ ಕಂಪ್ಯೂಟರಿನಲ್ಲಿ ಫೈರ್ ಫಾಕ್ಸ್ ಬ್ರೌಸರ್ ಇರಬೇಕು.

  • ನಂತರ timelineremove ಕ್ಲಿಕ್ ಮಾಡಿ ಆ ವೆಬ್ಸೈಟಿಗೆ ಹೋಗಿ.

  • ಇದಾದ ನಂತರ ಆ ವೆಬ್ಸೈಟಿನ ಹೋಂ ಪೇಜಿನ ಭಾಗದಲ್ಲಿ "how to install Extentions ಕೆಳಗೆ ಕ್ಲಿಕ್ ಮಾಡಿ.

  • ನೀವು ಕ್ಲಿಕ್ ಮಾಡಿದೊಡನೆ ಫೈರ್ ಫಾಕ್ಸ್ Add on ಆಗುತ್ತದೆ. ಅದನ್ನು install ಮಾಡಿಕೊಳ್ಳಿ

  • ನಂತರ ನಿಮ್ಮ ಫೇಸ್ ಬುಕ್ ಖಾತೆಗೆ Sign in ಮಾಡಿ ಪ್ರೊಫೈಲ್ ಪೇಜ್ ಗೆ ಹೋಗಿ ರಿಫ್ರೆಶ್ ಮಾಡಿದರೆ ಸಾಕು, ಟೈಮ್ ಲೈನ್ ಮಾಯವಾಗಿ ಹಳೆ ಸ್ಟೈಲ್ ನ ಡಿಸೈನ್ ಮೂಡುತ್ತದೆ.
 

ನಿಮಗೆ ಮುಂದೆ ಎಂದಾದರೊಂದು ದಿನ ಮತ್ತೆ ಟೈಮ್ ಲೈನ್ ಬೇಕು ಎನಿಸಿದರೂ, ಈ extention ಅನ್ನು uninstall ಮಾಡಿಕೊಂಡು ಮತ್ತೆ ಟೈಮ್ ಲೈನ್ ಪಡೆಯಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot