Subscribe to Gizbot

ಜಸ್ಟಿನ್ ಬೀಬರ್ಗೂ ಪ್ಯಾರ್‌ಗೆ ಆಗ್ಬಿಟ್ಟೈತೆ

Posted By: Super
ಜಸ್ಟಿನ್ ಬೀಬರ್ಗೂ ಪ್ಯಾರ್‌ಗೆ ಆಗ್ಬಿಟ್ಟೈತೆ

"You know you love me, I know you care

Just shout whenever, and I'll be there

You are my love, you are my heart

And we will never ever ever be apart"

ಈ ಮೇಲಿನ ಹಾಡನ್ನು ಹಾಡಿದ ಹುಡುಗ ಜಸ್ಟಿನ್ ಬೀಬರ್ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಕೆನಡಾದ ಯಾವುದೋ ಮೂಲೆಯಲ್ಲಿದ್ದ ಈ 18 ವರ್ಷದ ಹುಡುಗ ಯೂಟ್ಯೂಬಿನಲ್ಲಿ ಯಾವ ಘಳಿಗೆಯಲ್ಲಿ ತನ್ನ ಬೇಬಿ ಬೇಬಿ ಹಾಡನ್ನು ಅಪ್ಲೋಡ್ ಮಾಡಿದನೋ ಏನೋ, ಈ ಹಾಡು ಯೂಟ್ಯೂಬ್ ನಲ್ಲಿ ನೋಡಿದ ಜನ ಆತನ ಕಂಠಕ್ಕೆ ಮಾರುಹೋಗಿ ವಿಶ್ವದಾದ್ಯಂತ ಅಭಿಮಾನಿಗಳಾಗಿಬಿಟ್ಟರು.

ಅದೇ ಯಾವುದೋ ಫೇಮಸ್ ಆಡಿಯೋ ಕಂಪನಿಯ ಚಾನ್ಸಿಗಾಗಿ ಕಾದು ಆಲ್ಬಮ್ ಬಿಡುಗಡೆ ಮಾಡಿದ್ದರೆ, ಬೀಬರ್ ಇಷ್ಟು ಫೇಮಸ್ ಆಗುತ್ತಿರಲಿಲ್ಲವೇನೋ . ಆದರೆ ಯೂಟ್ಯೂಬ್ ಮಾಡಿದ ಮೋಡಿ ನೋಡಿ. ಆತನನ್ನು ಹುಚ್ಚೆದ್ದು ಆರಾಧಿಸುವ ಮಟ್ಟಿಗೆ ಅವನನ್ನು ಕೊಂಡೊಯ್ತು. ಇದೆ ಟ್ರೆಂಡ್ ಅನ್ನು ಫಾಲೋ ಮಾಡಿದ ಧನುಶ್ ನ "ಕೊಲವರಿ" ಹಾಡಿರಬಹುದು, ಇಲ್ಲವೇ ನಮ್ಮ ಕನ್ನಡದ "ಪ್ಯಾರ್ ಗೆ ಆಗ್ಬಿಟೈತೆ" ಹಾಡಿರಬಹುದು, ವೈರಸ್ ಥರ ಯೂಟ್ಯೂಬಿನಲ್ಲಿ ಪ್ರಚಾರ ಪಡೆದುಕೊಂಡಿತು.

ಈಗ ಮತ್ತೆ ಅದೇ ರೀತಿಯ "going viral " ಎಫೆಕ್ಟ್ ಕೊಟ್ಟಿದೆ, ಜಸ್ಟಿನ್ ಬೀಬರ್ ನ ಹೊಸ "ಬಾಯ್ ಫ್ರೆಂಡ್" ಹೆಸರಿನ ಹಾಡು. ಯೂಟ್ಯೂಬಿನಲ್ಲಿ, ಅಪ್ಲೋಡ್  ಮಾಡಿದ 24 ಗಂಟೆಯಲ್ಲಿ 80 ಲಕ್ಷ ವೀಕ್ಷಣೆ ಕಂಡು ದಾಖಲೆ ಸೃಷ್ಟಿಸಿದೆ! ಅದೂ ಅಲ್ಲದೆ ಕಳೆದ ವಾರ ಬಿಡುಗಡೆಯಾದ ರಿಹಾನ್ನಾ'ಳ ಹಾಡು "ವೇರ್ ಹ್ಯಾವ್ ಯು ಬೀನ್ " ನ ಆನ್ಲೈನ್ ವೀಕ್ಷಣೆಯ ದಾಖಲೆಯನ್ನು ಚಿಂದಿ ಮಾಡಿದೆ. "ಬಾಯ್ ಫ್ರೆಂಡ್" ಹಾಡನ್ನು ಯೂಟ್ಯೂಬಿನ ಮೋಸ್ಟ್ ಫೇಮಸ್ ವೀಡಿಯೋ ಮಾಡಲು ಟ್ವಿಟರ್ ನಲ್ಲಿ ಸಾಕಷ್ಟು ಪ್ರಚಾರ ಮಾಡಿದ್ದ ಬೀಬರ್ ಪ್ರಯತ್ನ ಸದ್ಯಕ್ಕೆ ಫಲ ಕೊಟ್ಟಿದ್ದು, ಈಗಾಗಲೇ 1.7 ಕೋಟಿ ವೀಕ್ಷಣೆ ಕಂಡಿದೆ.

ನೀವೂ ಈ ಹಾಡನ್ನು ಯೂಟ್ಯೂಬಿನಲ್ಲಿ ನೋಡಿ ಆನಂದಿಸಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot