Subscribe to Gizbot

ಮಾರುಕಟ್ಟೆಗೆ ಜಿಯೋ ಲ್ಯಾಪ್‌ಟಾಪ್‌: ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡ್ತೀರಾ..!

Written By:

ದೇಶಿಯ ಮಾರುಕಟ್ಟೆಯಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ಹಲವಾರು ಹೊಸತನಗಳಿಗೆ ಸಾಕ್ಷಿಯಾಗಲಿದೆ. ಈಗಾಗಲೇ ಅತೀ ಕಡಿಮೆ ಬೆಲೆಗೆ 4G ಫೀಚರ್ ಫೋನ್ ಲಾಂಚ್ ಮಾಡಿದ್ದು, ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ನಿರ್ಮಾಣಕ್ಕೂ ಕೈ ಹಾಕಿದೆ. ಇಷ್ಟು ಮಾತ್ರವಲ್ಲದೇ ಜಿಯೋ 4G ಲಾಪ್ ಟಾಪ್ ಅನ್ನು ನಿರ್ಮಿಸಲು ಮುಂದಾಗಿದ್ದು, ಸಿಮ್ ಕಾರ್ಡ್ ಹಾಕಿಕೊಳ್ಳುವ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಮಾರುಕಟ್ಟೆಗೆ ಜಿಯೋ ಲ್ಯಾಪ್‌ಟಾಪ್‌: ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡ್ತೀರಾ..!

ಇಷ್ಟು ದಿನ ಗಾಳಿ ಸುದ್ದಿಯಾಗಿ ಹರಿದಾಡುತ್ತಿದ್ದ ಜಿಯೋ 4G ಲ್ಯಾಪ್ ಟಾಪ್ ಕುರಿತ ಮಾಹಿತಿಗಳು ಸದ್ಯ ನಿಖರವಾಗುತ್ತಿದ್ದು, ಜಿಯೋ 4G ಲ್ಯಾಪ್‌ಟಾಪ್ ನಿರ್ಮಾಣದ ಸಲುವಾಗಿ ಚಿಪ್ ತಯಾರಕ ಕ್ವಾಲ್ಕಮ್ ನೊಂದಿಗೆ ಮಾತುಕತೆಯನ್ನು ನಡೆಸುತ್ತಿದೆ ಎನ್ನಲಾಗಿದೆ. ಶೀಘ್ರವೇ ಜಿಯೋ 4G ಲ್ಯಾಪ್‌ಟಾಪ್‌ಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದ್ದು, ಅತೀ ಕಡಿಮೆ ಬೆಲೆಗೆ ಮಾರಾಟವಾಗುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡೋಸ್ 10 ಕಾರ್ಯಚರಣೆ:

ವಿಂಡೋಸ್ 10 ಕಾರ್ಯಚರಣೆ:

ಜಿಯೋ 4G ಲ್ಯಾಪ್ ಟಾಪ್ ನಲ್ಲಿ ವಿಂಡೋಸ್ 10 ಕಾಣಬಹುದಾಗಿದ್ದು, ಉತ್ತಮ ಗುಣಮಟ್ಟದಿಂದ ಕೂಡಿರಲಿದೆ. ಅಲ್ಲದೇ ಈ ಲ್ಯಾಪ್‌ಟಾಪ್ ನಲ್ಲಿ ಸಿಮ್ ಕಾರ್ಡ್ ಹಾಕಿಕೊಳ್ಳಬಹುದಾಗಿದ್ದು, ಸ್ಮಾರ್ಟ್‌ ಫೋನ್ ಮಾದರಿಯಲ್ಲಿ ಡೇಟಾವನ್ನು ಪಡೆದುಕೊಳ್ಳಬಹುದು.

ಕ್ವಾಲ್ಕಮ್ ಚಿಪ್ ಸೆಟ್:

ಕ್ವಾಲ್ಕಮ್ ಚಿಪ್ ಸೆಟ್:

ಇದಕ್ಕಾಗಿ ಕ್ವಾಲ್ಕಮ್ ನೊಂದಿಗೆ ಮಾತುಕತೆ ನಡೆಸಿರುವ ಜಿಯೋ, ಜಿಯೋ 4G ಲ್ಯಾಪ್ ಟಾಪ್ ನಲ್ಲಿ 4G ಕನೆಕ್ಟಿವಿಯನ್ನು ಪಡೆಯುವ ಸಲುವಾಗಿ ಕ್ವಾಲ್ಕಮ್ ಚಿಪ್ ಸೆಟ್ ಅನ್ನು ಅಳವಡಿಸಲಿದೆ. ಇದರಿಂದಾಗಿ ಕಂಪ್ಯೂಟರ್ ಅಲ್‌ವೇಸ್ ಕನೆಕ್ಟ್ ಆಗಿರಲಿದೆ.

ವೇಗದ ಪ್ರೋಸೆಸರ್:

ವೇಗದ ಪ್ರೋಸೆಸರ್:

ಜಿಯೋ 4G ಲ್ಯಾಪ್ ಟಾಪ್ ಸ್ಮಾರ್ಟ್‌ಫೋನ್ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದ್ದು, ಸೆಲ್ಯೂರಲ್ ಕನೆಕ್ಷನ್ ನೊಂದಿಗೆ ಪ್ರೋಸೆಸರ್ ಅನ್ನು ಹೊಂದಿರಲಿವೆ. ಈ ಲ್ಯಾಪ್‌ಟಾಪ್‌ಗಳಿಗೆ ಕ್ವಾಲ್ಕಮ್ ಪ್ರೊಸೆಸರ್ ಗಳನ್ನು ನೀಡಲಿದೆ.

ಸ್ಮಾರ್ಟ್‌ಫೋನ್ ನಂತರ:

ಸ್ಮಾರ್ಟ್‌ಫೋನ್ ನಂತರ:

ಸದ್ಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ. ಇದಾದ ನಂತರದಲ್ಲಿ ಅಲ್‌ವೇಸ್ ಕನೆಕ್ಟ್ ಪಿಸಿಗಳು ಹೆಚ್ಚಿನ ಸದ್ದು ಮಾಡಲಿದೆ. ಈ ಹಿನ್ನಲೆಯಲ್ಲಿ ಜಿಯೋ ಈ ವಿಭಾಗದಲ್ಲಿ ಹೆಚ್ಚಿನ ಸಂಶೋಧನೆಯನ್ನು ಮಾಡುತ್ತಿದೆ.

ವೈ-ಫೈ ಬೇಡ;

ವೈ-ಫೈ ಬೇಡ;

ಸದ್ಯ ಮಾರುಕಟ್ಟೆಯಲ್ಲಿ ಇರುವ ಲ್ಯಾಪ್‌ಟಾಪ್‌ಗಳಿಗೆ ವೈ-ಫೈ ಇಲ್ಲವೇ ಲ್ಯಾನ್ ಕನೆಕ್ಷನ್ ಇದ್ದರೇ ಮಾತ್ರ ಡೇಟಾ ಬಳಕೆ ಮಾಡಬಹುದಾಗಿದೆ. ಆದರೆ ಅಲ್‌ವೇಸ್ ಕನೆಕ್ಟ್ ಜಿಯೋ ಲಾಪ್‌ಟಾಪ್‌ಗೆ ಸಿಮ್ ಹಾಕಿಕೊಂಡೆ ಬಳಕೆ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಬೆಲೆ ಕಡಿಮೆ:

ಬೆಲೆ ಕಡಿಮೆ:

ಜಿಯೋ ಫೋನ್ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರುವ ಸಲುವಾಗಿ ಜಿಯೋ 4G ಲ್ಯಾಪ್‌ಟಾಪ್ ಬೆಲೆಯೂ ತೀರಾ ಕಡಿಮೆ ಇರಲಿದೆ. ಮೂಲಗಳ ಪ್ರಕಾರ ರೂ.10000 ರಿಂದ 12000ಕ್ಕೆ ಮಾರಾಟ ಮಾಡಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Reliance Jio in talks with Qualcomm to launch laptops. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot