ಹೊಗೆ ಹಾಕಿಸಿಕೊಂಡ ಆಪಲ್ ಐಫೋನ್:ವೀಡಿಯೋ

By Varun
|
ಹೊಗೆ ಹಾಕಿಸಿಕೊಂಡ ಆಪಲ್ ಐಫೋನ್:ವೀಡಿಯೋ

ಜಗತ್ತಿನಲ್ಲಿ ಆಪಲ್ ನ ಐಫೋನ್ ಖ್ಯಾತಿಯಲ್ಲಿ ಇವತ್ತಿಗೂ ನಂ. 1 ಸ್ಮಾರ್ಟ್ ಫೋನ್ ಆಗಿದೆ. ಅದಕ್ಕೆ ಕಾರಣ ಈ ಫೋನ್ ನ ಫೀಚರುಗಳು ಹಾಗು ಅದರ ತಂತ್ರಜ್ಞಾನ.

ತನ್ನ ಗುಣಮಟ್ಟದಿಂದಲೇ ಪ್ರಸಿದ್ಧಿಯಾಗಿರುವ ಈ ಫೋನ್ ನ ಬಗ್ಗೆ ದೂರುಗಳು ತೀರಾ ಕಮ್ಮಿ. ಆದರೆ ಕಿಸೆಯಲ್ಲಿ ಇಟ್ಟುಕೊಂಡಿದ್ದ ಬಳಕೆದಾರನ ಐಫೋನ್ ಒಂದು ಇದ್ದಕ್ಕಿದ್ದಂತೆ ಹೊತ್ತಿಕೊಂಡು ಸುಟ್ಟುಹೋದ ವೀಡಿಯೋ ಎಲ್ಲಾದರೂ ನೋಡಿದ್ದೀರಾ?.

ಈ ಘಟನೆ ನಡೆದಿದ್ದು ಫಿನ್ ಲ್ಯಾಂಡ್ ದೇಶದಲ್ಲಿ. ಹೆನ್ರಿ ಹೆಲ್ಮಿನೆನ್ ಎಂಬ 17 ವರ್ಷದ ಹುಡಗನೊಬ್ಬ ಒಂದು ದಿನ ತನ್ನ ಜೇಬಿನಲ್ಲಿ ಐಫೋನ್ ಅನ್ನು ಕಿಸೆಯಲ್ಲಿ ಇಟ್ಟುಕೊಂಡು ಗಾಡಿಯಲ್ಲಿ ಕೆಲಸಕ್ಕೆ ಹೋದ. ಗಾಡಿಯಿಂದ ಇಳಿದು ನಡೆದುಕೊಂಡು ಹೋಗುತ್ತಾ ಇರುವಾಗ ಹಾಗೆ ನೋಡಿದರೆ ಕಿಸೆಯಿಂದ ಹೊಗೆ ಬರುತ್ತಿದ್ದನ್ನು ನೋಡಿ ಫೋನ್ ಅನ್ನು ತೆಗೆದು ರೋಡಿನಲ್ಲಿ ಬಿಸಾಕುತ್ತಾನೆ. ಖರೀದಿಸಿ 90 ದಿನಗಳೂ ಆಗಿರದ ಫೋನ್ ಹೊಗೆ ಹಾಕಿಸಿಕೊಳ್ಳುವವರೆಗೂ ಚೆನ್ನಾಗಿಯೇ ಇತ್ತಂತೆ.

ಆದರೆ ಅವನ ಅದೃಷ್ಟ ಫೋನನ್ನು ಹೊಗೆ ಬಂದ ತಕ್ಷಣ ಬಿಸಾಕಿದ್ದರಿಂದ ಅವನಿಗೆ ಯಾವುದೇ ಗಾಯಗಳಾಗಲಿಲ್ಲ. ಫೋನ್ ಸುಟ್ಟು ಹೋದ ಕಾರಣಗಳೂ ಇದುವರೆಗೂ ತಿಳಿದು ಬಂದಿಲ್ಲ.

ಐಫೋನ್ ಸುಟ್ಟು ಹೋದ ವೀಡಿಯೋವನ್ನು cctv ಒಂದು ಸೆರೆ ಹಿಡಿದಿದ್ದು ಇಲ್ಲಿದೆ ನೋಡಿ, ಅದು ಹೊಗೆ ಹಾಕಿಸಿಕೊಂಡಿದೆ ಅಂತ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X