ಚಳಿಗಾಲಕ್ಕಾಗಿ ಬೆಚ್ಚನೆಯ ಗ್ಯಾಜೆಟ್ಸ್‌ಗಳು

By Suneel
|

ಗಿಜ್‌ಬಾಟ್‌ನ ಟೆಕ್‌ ನ್ಯೂಸ್‌ನಲ್ಲಿ ಇದುವರೆಗೆ ನೀವು ಯಾವಾಗಲು ದಿನನಿತ್ಯ ಬಳಕೆಗೆ ಕೂಲ್‌ ಗ್ಯಾಜೆಟ್ಸ್‌ಗಳ ಬಗ್ಗೆ ಮಾತ್ರ ಮಾಹಿತಿ ಪಡೆದಿದ್ದೀರಿ. ಆದರೆ ಕಾಲ ಬದಲಾದಂತೆ ನ್ಯೂಸ್ ಸಹ ಬದಲಾಗುತ್ತದೆ. ಅಂತೆಯೇ ಇಂದು ಚಳಿಗಾಲದ ಋತುಮಾನಕ್ಕೆ ಗಿಜ್‌ಬಾಟ್‌ ನಿಮ್ಮನ್ನು ನೀವು ಚಳಿಯಿಂದ ರಕ್ಷಿಸಿಕೊಳ್ಳಲು ವಾರ್ಮ್‌ ಗ್ಯಾಜೆಟ್ಸ್‌ಗಳ ಮಾಹಿತಿ ನೀಡುತ್ತಿದೆ. ಈ ಗ್ಯಾಜೆಟ್ಸ್‌ಗಳು ನಿಮ್ಮನ್ನು ಚಳಿಯಿಂದ ರಕ್ಷಿಸಲಿದ್ದು ಕಡಿಮೆ ಬೆಲೆಗಳಲ್ಲಿ ಖರೀದಿಸಬಹುದಾಗಿದೆ.

ಓದಿರಿ: ಜಪಾನೀ ಮಹಿಳೆಯರ ಸೌಂದರ್ಯ ಗುಟ್ಟು ರಟ್ಟು

 USB ಹೀಟಿಂಗ್ ಬ್ಲಾಂಕೆಟ್‌

USB ಹೀಟಿಂಗ್ ಬ್ಲಾಂಕೆಟ್‌

ಚಳಿಗಾಲದಲ್ಲಿ ಆಫೀಸ್‌ನೊಳಗೆ ಎಸಿ ಆಫ್‌ ಮಾಡಿ ಕುಳಿತರು ಸಹ ಬೆಚ್ಚನೆಯ ಫೀಲ್‌ ಸಿಗುವುದೇ ಇಲ್ಲ. ಹಾಗಾದರೆ ಅಷ್ಟು ದೊಡ್ಡ ಆಫೀಸ್ ಒಳಗೆ ನೀವು ಮಾತ್ರ ಬೆಚ್ಚಗಿರಲು ಈಗ ಗ್ಯಾಜೆಟ್‌ಗಳು ಲಭ್ಯವಿವೆ. ಅದರ ಹೆಸರು 'USB ಹೀಟಿಂಗ್ ಬ್ಲಾಂಕೆಟ್'. ಇದು USB ಕನೆಕ್ಷನ್ ಮೂಲಕ ಪವರ್‌ ಪಡೆದು ನಿಮ್ಮನ್ನು ಬೆಚ್ಚಗಿರಿಸುತ್ತದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

ಕೋಜಿ ಫೂಟ್‌ ವಾರ್ಮರ್‌ ಪ್ಲೋರ್ಮ್ಯಾಟ್‌

ಕೋಜಿ ಫೂಟ್‌ ವಾರ್ಮರ್‌ ಪ್ಲೋರ್ಮ್ಯಾಟ್‌

ನೀವು ಎಷ್ಟೇ ಅಧಿಕವಾದ ಹುಲ್ಲನ್ನು ಸಾಕ್ಸ್‌ ಹೊಂದಿದ್ದರೂ ಸಹ ನಿಮ್ಮ ಪಾದಗಳನ್ನು ಚಳಿಗಾಲ ಕೂಲ್‌ ಫೀಲ್‌ನಿಂದ ರಕ್ಷಿಸಲು ಸಾಧ್ಯವಿಲ್ಲ. ಆದರೆ ಈಗ 'ಕೋಜಿ ಫೂಟ್‌ ವಾರ್ಮರ್‌ ಪ್ಲೋರ್ಮ್ಯಾಟ್' ಬಳಸಿ ನೀವು ಕಂಪ್ಯೂಟರ್‌ ಮುಂದೆ ಕುಳಿತಲ್ಲಿ, ಟಿವಿ ನೋಡುವಾಗ ಆರಾಮದಾಯಕವಾಗಿ ಅದನ್ನು ನಿಮ್ಮ ಪಾದದಡಿ ಇರಿಸಿ ಪವರ್ ಗೆ ಪ್ಲಗ್‌ ಇನ್‌ ಮಾಡಿ. ಪಾದಗಳಿಗೂ ಬೆಚ್ಚನೆಯ ಫೀಲ್‌ ನೀಡಿ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

Thanko USB ಬೆಚ್ಚಗಿನ ಕುಷನ್

Thanko USB ಬೆಚ್ಚಗಿನ ಕುಷನ್

ನೀವು ನಿಮ್ಮ ಮನೆಗಳ ಚೇರ್‌ಗಳ ಮೇಲೆ ಕುಳಿತಾಗ ಬೆಚ್ಚನೆಯ ಫೀಲ್‌ ಬೇಕಾದಲ್ಲಿ 'Thanko USB ಬೆಚ್ಚಗಿನ ಕುಷನ್' ಬಳಸಿ.ನೀವು ಕೂರುವ ಚೇರ್‌ ಮೇಲೆ ಗ್ಯಾಜೆಟ್‌ ಇಟ್ಟು ಪವರ್‌ಗೆ USB ಕನೆಕ್ಟ್‌ ಮಾಡಿ ಕಂಟ್ರೋಲ್‌ ಡಯಲ್‌ನಿಂದ ಬೆಚ್ಚನೆಯ ಫೀಲ್‌ ನಿಯಂತ್ರಿಸಬಹುದು.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

 USB ವಾರ್ಮರ್‌ ಮೌಸ್

USB ವಾರ್ಮರ್‌ ಮೌಸ್

ಚಳಿಗಾಲದಲ್ಲಿ ಕಂಪ್ಯೂಟರ್‌ ಮುಂದೆ ಕುಳಿತು ಮೌಸ್‌ ಹಿಡಿದು ಕೆಲಸ ನಿರ್ವಹಿಸಲು ಕೈ ಸರಿಯಾಗಿ ಕೆಲಸ ಮಾಡುವುದಿಲ್ಲ. ಇಂತಹ ಮುಜುಗರ ಹೋಗಲಾಡಿಸಲು ಈಗ USB ವಾರ್ಮರ್ ಮೌಸ್ ಗ್ಯಾಜೆಟ್‌ ರೆಡಿ ಇದೆ. ಇದು ಇಂಟರ್ನಲ್‌ ಹೀಟರ್‌ ಉತ್ಪಾದಿಸಲಿದ್ದು, ಕಂಪ್ಯೂಟರ್‌ಗಳ ಸಾಮಾನ್ಯ ಮೌಸ್‌ ರೀತಿ ಇದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

ಬ್ರೂಕ್‌ಸ್ಟೋನ್‌ ಆಕ್ಟಿಹೀಟ್ ಹೀಟೆಡ್‌ ಜಾಕೆಟ್‌

ಬ್ರೂಕ್‌ಸ್ಟೋನ್‌ ಆಕ್ಟಿಹೀಟ್ ಹೀಟೆಡ್‌ ಜಾಕೆಟ್‌

ಮೆನ್ಸ್‌ ಸೈಜ್‌ನಲ್ಲಿ ಲಭ್ಯವಿರುವ 'ಬ್ರೂಕ್‌ಸ್ಟೋನ್‌ ಆಕ್ಟಿಹೀಟ್ ಹೀಟೆಡ್‌ ಜಾಕೆಟ್‌' ಗಾಳಿಯ ಮೂಲಕ ಹೀಟ್‌ ಉತ್ಪಾದನೆ ಮಾಡಿಕೊಳ್ಳತ್ತದೆ. ಇದು ಹೊರಗೆ ಯಾವುದೇ ಕೆಲಸ ಮಾಡುತ್ತಾ ಬೇಕಾದರೂ ಧರಿಸಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

 180s ಪಫಿ ಕ್ವಿಲ್ಟ್ ಹೆಡ್‌ಫೋನ್‌

180s ಪಫಿ ಕ್ವಿಲ್ಟ್ ಹೆಡ್‌ಫೋನ್‌

ಇದು ನಿಮ್ಮ ಕಿವಿಗಳನ್ನು ಚಳಿಯಿಂದ ಬೆಚ್ಚಗಿರಿಸಲು ಅಭಿವೃದ್ದಿಗೊಳಿಸಿದ ಗ್ಯಾಜೆಟ್‌ ಆಗಿದ್ದು, ಹೆಡ್‌ಫೋನ್‌ ಆಗಿಯೂ ಬಳಸಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

USB ಹೀಟಿಂಗ್ ಸ್ಲಿಪ್ಪರ್‌ಗಳು

USB ಹೀಟಿಂಗ್ ಸ್ಲಿಪ್ಪರ್‌ಗಳು

ಬ್ರಿಟನ್‌ ಮೂಲದ ಈ ಸ್ಲಿಪ್ಪರ್‌ಗಳು USB ಆಧಾರಿತ ಹೀಟಿಂಗ್‌ ಪ್ಯಾಡ್‌ ಹೊಂದಿದೆ. ಪವರ್‌ಗೆ ಕನೆಕ್ಟ್‌ ಮಾಡಿ ನಿಮಗೆ ಸರಿಹೊಂದುವ ರೀತಿ ಬೆಚ್ಚನೆಯ ಫೀಲ್‌ ಪಡೆಯಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

DRYGUY Wide-Body

DRYGUY Wide-Body

ಚಳಿಗಾಲದಲ್ಲಿ ನೀವು ಹೊರಗೆ ಹೋಗಿ ಬಂದಾಗ ಸಾಮಾನ್ಯವಾಗಿ ಹಿಮಕ್ಕೆ ನೀವು ಧರಿಸಿರುವ ಗ್ಲೌಸ್‌, ಬೂಟುಗಳು, ಹ್ಯಾಟ್‌ಗಳು ತೇವವಾಗಿರುತ್ತವೆ. ಅವುಗಳನ್ನು ಬಹುಬೇಗ ಒಣಗಿಸಲು 'DRYGUY Wide-Body' ಇದನ್ನು ಉಪಯೋಗಿಸಬಹುದಾಗಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

USB ಮೌಸ್‌ ಪ್ಯಾಡ್‌

USB ಮೌಸ್‌ ಪ್ಯಾಡ್‌

ಕಂಪ್ಯೂಟರ್‌ ಬಳಕೆಗೆ ಇದು ಪ್ರಾಕ್ಟಿಕಲ್‌ ಆಗಿ ಫೀಲ್‌ ನೀಡುವ ಮೌಸ್‌ ಪ್ಯಾಡ್‌ ಆಗಿದೆ. ಮೌಸ್‌ ಬಳಸುವ ಸರ್ಫೇಸ್‌ ಅನ್ನು ಬೆಚ್ಚಗಿರಿಸಿ ಕಂಪ್ಯೂಟರ್‌ ನಿರ್ವಹಿಸಲು ಹಿತ ಅನುಭವ ನೀಡುತ್ತದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ.

USB Cup ವಾರ್ಮರ್ ಜೊತೆಗೆ USB ಹಬ್‌ ಕ್ಲಾಕ್‌

USB Cup ವಾರ್ಮರ್ ಜೊತೆಗೆ USB ಹಬ್‌ ಕ್ಲಾಕ್‌

USB Cup ವಾರ್ಮರ್ ಕೇವಲ ನಾವು ಬಳಸುವ ವಸ್ತುಗಳನ್ನು ಬೆಚ್ಚನೆಯ ಹಿತ ನೀಡುವಂತೆ ಮಾಡುತ್ತದೆ. ಅಲ್ಲದೇ ಇದು ಡಿಜಿಟಲ್‌ ಕ್ಲಾಕ್‌ ಹೊಂದಿದೆ.
ಖರೀದಿಸಲು ಇಲ್ಲಿ ಕ್ಲಿಕ್‌ ಮಾಡಿ

Best Mobiles in India

English summary
10 Gadgets to Keep You Warm Through Winter. You can check and buy through website's link below on this article slides.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X