ಸೆಲ್ಫೀಗಾಗಿಯೇ ಹುಟ್ಟಿರುವ ಈ ವಿಚಿತ್ರ ಸಾಧನಗಳ ಕಲ್ಪನೆ ಕೂಡ ನಿಮಗಿರುವುದಿಲ್ಲ!!

  |

  ಇಂದು ಜಗತ್ತಿಗೆರಗಿದ ಮಾರಕ ಕಾಯಿಲೆಯೊಂದಾಗಿ ಸೆಲ್ಫೀ ಹುಚ್ಚನ್ನು ಗುರುತಿಸುತ್ತಾರೆ. ತನ್ನ ಸ್ವಚಿತ್ರವನ್ನು ವಿಧ ವಿಧ ಭಂಗಿಗಳಲ್ಲಿ, ಅಪಾಯಕಾರಿ ಜಾಗಗಳಲ್ಲಿ, ಜೀವದ ಅರಿವಿಲ್ಲದೇ ಕ್ಲಿಕ್ಕಿಸುವ ಒಂದು ರೀತಿಯ ಫ್ಯಾಶನ್ ಆಗಿರುವ ಈ ಸೆಲ್ಫೀ ಸಮೂಹ ಸನ್ನಿಗೆ ತನ್ನ ಜೀವವನ್ನೇ ಬಲಿಯಾಗಿಸಿಕೊಂಡವರ ಸಂಖ್ಯೆ ಕೂಡ ಬಹಳಷ್ಟಿದೆ.!

  ಆದರೆ, ಇಂದಿನ ವಿಷಯ ಇದಕ್ಕೆ ಭಿನ್ನವಾಗಿದೆ. ತಂತ್ರಜ್ಞಾನ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಪ್ರವೃತ್ತಿಯ ಕಡೆಗೆ ಚಲಿಸುವುದರಿಂದ ಹಿಂದೆಂದಿಗಿಂತಲೂ ಹೆಚ್ಚು ಆಧುನಿಕ ಉಪಕರಣಗಳು ಸೆಲ್ಫೀಗಾಗಿಯೇ ರೂಪುಗೊಂಡಿವೆ. ಸ್ವಯಂಗೀಳಾಗಿರುವ ಸೆಲ್ಫೀ ಒಲವನ್ನು ಮತ್ತಚ್ಟು ಹೆಚ್ಚಿಸುವ ಸಲುವಾಗಿ ಹತ್ತಾರು ವಿಶಿಷ್ಟ ಸೆಲ್ಫೀ ಪೂರಕ ಗ್ಯಾಜೆಟ್‌ಗಳು ಬಿಡುಗಡೆಯಾಗುತ್ತಿವೆ.

  ಸೆಲ್ಫೀಗಾಗಿಯೇ ಹುಟ್ಟಿರುವ ಈ ವಿಚಿತ್ರ ಸಾಧನಗಳ ಕಲ್ಪನೆ ಕೂಡ ನಿಮಗಿರುವುದಿಲ್ಲ!!

  ಆಧುನಿಕ ಉಪಕರಣಗಳು ಹೆಚ್ಚಾದಂತೆ ಸೆಲ್ಫೀ ಮೆನಿಯಾ ಕೂಡ ಬದಲಾವಣೆ ಕಾಣುತ್ತಾ ಹೋಗುತ್ತಿದೆ. ಮೊಬೈಲ್‌ನಲ್ಲಿ ಸೆಲ್ಫೀ ತೆಗೆದುಕೊಳ್ಳಲು ಸೆಲ್ಫೀ ಸ್ಟಿಕ್ ಹುಟ್ಟಿದಂತೆಯೇ ಹಲವಾರು ಸೆಲ್ಫೀ ಆಧಾರಿತ ಗ್ಯಾಜೆಟ್ಸ್‌ಗಳು ಮಾರುಕಟ್ಟೆಗೆ ಕಾಲಿಟ್ಟಿವೆ. ಹಾಗಾಗಿ, ಸೆಲ್ಫೀಗಾಗಿಯೇ ರೂಪುಗೊಂಡ ವಿಶಿಷ್ಟ ಆಧುನಿಕ ಉಪಕರಣಗಳು ಯಾವುವು ಎಂಬುದನ್ನು ಮುಂದೆ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸೆಲ್ಫೀ ಟೋಸ್ಟ್!!

  ಈಗ ಸೆಲ್ಫೀಯನ್ನು ಎಲ್ಲಿ ಬೇಕಾದರೂ ಚಿತ್ರಿಸಬಹುದು ಎಂಬುದಕ್ಕೆ ಸೆಲ್ಫೀ ಟೋಸ್ಟ್ ನಿಮಗೆ ಆಶ್ಚರ್ಯ ಮೂಡಿಸುತ್ತದೆ. ಬ್ರೆಡ್ ಟೋಸ್ಟ್ ಅನ್ನು ಮೇಲೆ ಕೂಡ ನಿಮ್ಮ ಸೆಲ್ಫೀ ಚಿತ್ರವನ್ನು ಬಿಡಿಸುವ ಸಾಧನ ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯ ಗ್ಯಾಜೆಟ್ ಆಗಿದೆ.!

  ಸೆಲ್ಫೀ ಬೇಬಿ ಆಪ್!

  ನಿಮ್ಮ ಸೆಲ್ಫೀಯನ್ನು ಉತ್ತಮಪಡಿಸಲು ನೂರಾರು ಸೆಲ್ಫೀ ಆಪ್‌ಗಳು ಇರುವುದನ್ನು ನೀವು ನೋಡಿದ್ದೀರಾ. ಆದರೆ, ಚಿಕ್ಕ ಮಕ್ಕಳಿಗಾಗಿಯೇ ಸೆಲ್ಫೀ ಆಪ್ ಅಭಿವೃದ್ದಿಯಾಗಿದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ, ಈಗಿನ ಮಕ್ಕಳಿಗೆ ಸೆಲ್ಫೀ ಬಹುಮುಖ್ಯ ಕೂಡ.!

  ಬೆಲ್ಫಿ ಸ್ಟಿಕ್!

  ಈ ರೀತಿಯ ಒಂದು ಸೆಲ್ಫೀ ಗ್ಯಾಜೆಟ್ ಇದೆ ಎಂಬ ಕಲ್ಪನೆ ಕೂಡ ನಿಮಗೆ ಇರುವುದಿಲ್ಲ. ಏಕೆಂದರೆ,, ಇದು ಸೆಲ್ಫೀ ಸ್ಟಿಕ್ ಅಲ್ಲ ಬೆಲ್ಫಿ ಸ್ಟಿಕ್! ಅಯ್ಯೋ ಇದೇನಿದು ಬೆಲ್ಫಿ ಸ್ಟಿಕ್ ಎಂದು ಆಸ್ಚರ್ಯವಾದರೆ, ಇದಕ್ಕೆ ಸಿಂಪಲ್ ಉತ್ತರ ಹಿಂಭಾಗದಲ್ಲಿ ಸೆಲ್ಫೀ ಸೆರೆಹಿಡಿಯುವುದು.!

  ಸೆಲ್ಫಿ ಬ್ರಷ್!!

  ಇದು ಕೇವಲ ಮಹಿಳೆಯರಿಗೆ ಮಾತ್ರ! ಏಕೆಂದರೆ, ಈ ಒಂದು ಗ್ಯಾಜೆಟ್‌ನಲ್ಲಿ ಅಗತ್ಯವಿರುವ ಎರಡು ವಿಷಯಗಳನ್ನು ಒಟ್ಟಿಗೆ ಉಪಯೋಗಿಸುವ ಟ್ರಿಕ್. ಸೆಲ್ಫಿ ಬ್ರಷ್ ಕೆಲವು ಮಹಿಳೆಯರು ಹೆಚ್ಚು ಇಷ್ಟಪಡುವ ಎರಡು ವಿಷಯಗಳನ್ನು ಒಟ್ಟಿಗೆ ಸೇರಿಸುತ್ತದೆ - ಒಂದು ಬಾಚಣಿಗೆ ಮತ್ತು ಸೆಲ್ಫೀ ಸಾಧನ.!

  3D ಮೇಯನೇಸ್ ಸೆಲ್ಫಿ

  ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಎಲ್ಲರಿಗೂ ಅವಮಾನ ಮಾಡುವಂತಹ ಸೆಲ್ಫೀ ಗ್ಯಾಜೆಟ್ ಇದು. ನಿವಿ ತಿನ್ನುವ ಫಿಜ್ಜಾ ಮತ್ತು ಬರ್ಗರ್‌ ಮೇಲೆ ವಿಶೇಷವಾಗಿ 3D ಸೆಲ್ಫೀ ಚಿತ್ರವನ್ನು ಮುದ್ರಿಸುವ ಸಾಧನ ಇದು. ಇಂತಹ ಶೋಕಿಯ ಸೆಲ್ಫೀ ಕಾಲ ಇನ್ನೇನು ಭಾರತಕ್ಕೂ ಕಾಲಿಡಬಹುದು.

  ಸೆಲ್ಫೀ ಕನ್ನಡಿ!

  ಆಧುನಿಕ ಸೆಲ್ಫೀ ಪ್ರಪಂಚದ ಮತ್ತೊಂದು ವಿಶೇಷ ಗ್ಯಾಜೆಟ್ ಈ ಸೆಲ್ಫೀ ಕನ್ನಡಿ. ನಿಮ್ಮ ಕನ್ನಡಿಯನ್ನು ನೋಡುತ್ತಿದ್ದೀರಿ ಮತ್ತು ನೀವು ನಿಮಗೇ ಯೋಚಿಸುತ್ತಿದ್ದರೆ - "ನಾನು ತುಂಬಾ ಚೆನ್ನಾಗಿ ಕಾಣುತ್ತೇನೆ, ಇದೀಗ ನಾನೊಬ್ಬ ಚಿತ್ರ ತೆಗೆದುಕೊಳ್ಳಬಹುದು ಎಂದು ನಾನು ಬಯಸುತ್ತೇನೆ", ಈ ಕನ್ನಡಿಯು ನಿಮ್ಮನ್ನು ಹಾಗೆ ಮಾಡಲು ಅನುಮತಿಸುತ್ತದೆ.

  ಗ್ರಿಪ್ ಸ್ನ್ಯಾಪ್!

  ಈ ಗ್ಯಾಜೆಟ್ ಸೆಲ್ಫೀ ಸ್ಟಿಕ್ ಪರ್ಯಾಯವಾದ ಒಂದು ಗ್ಯಾಜೆಟ್ ಆಗಿದೆ. ಕೈನಲ್ಲಿ ಸೆಲ್ಫೀ ಸ್ಟಿಕ್ ಹಿಡಿಯುವುದನ್ನು ತಪ್ಪಿಸುವ ಸಲುವಾಗಿ ಮಾರುಕಟ್ಟೆಗೆ ಬಂದಿರುವ ಈ ಸಾಧನವನ್ನು ನಿಮಗೆ ಬೇಕಾದಂತೆ ಅಡ್ಜೆಸ್ಟ್ ಮಾಡಿಕೊಳ್ಳಬಹುದು. ಗೋಡೆ, ಗ್ಲಾಸ್, ಮರ ಹೀಗೆ ಯಾವುದಾದರೂ ಸರಿ.

  ಸೆಲ್ಫ್ ಶರ್ಟ್

  ಶರ್ಟ್ ಸೆಲ್ಫಿಯನ್ನು ತೆಗೆಯುತ್ತದೆಯೇ ಎಂದು ಗಾಬರಿಯಾಗಬೇಡಿ. ಏಕೆಂದರೆ, ವಾಸ್ತವವಾಗಿ ಇದು ಸೆಲ್ಫಿ ತೆಗೆಯುವುದಿಲ್ಲ. ಆದರೆ, ಇದು ಹಾಸ್ಯಾಸ್ಪದವಾಗಿದೆ. ಈ ಸೆಲ್ಫೀ ಶರ್ಟ್ ಹಾಕಿಕೊಂಡು ನೀವು ಸೆಲ್ಫೀ ಚಿತ್ರಿಸಿದರೆ ಅದು ನಿಮ್ಮನ್ನು ಕಂಫರ್ಟ್ ಫೀಲ್‌ನಲ್ಲಿ ಇರುವಂತೆ ಮಾಡುತ್ತದಂತೆ.!

  ಸೆಲ್ಫ್ ಹ್ಯಾಟ್

  ಸೆಲ್ಫೀ ಹ್ಯಾಟ್ ಎಂಬ ಪದದಿಂದಲೇ ನಿಮಗೆ ಈ ಸೆಲ್ಫೀ ಹ್ಯಾಟ್ ಕಾರ್ಯ ಏನು ಎಂಬುದು ನಿಮಗೆ ಅರ್ಥವಾಗಿರಬಹುದು. ತಲೆಯ ಮೇಲಿನ ಟೋಪಿಯಲ್ಲಿಯೇ ನೀವು ಸೆಲ್ಫೀ ತೆಗೆದುಕೊಳ್ಳಬಹುದಾದ ಆಯ್ಕೆ ಇದರಲ್ಲಿದೆ. ಆದರೆ, ಇದು ತೆಗೆಯುವ ಸೆಲ್ಫೀ ಹೇಗೆ ಕಾಣುತ್ತದೆ ಎಂಬುದೇ ಡೌಟ್.!

  ಸೆಲ್ಫಿ ಡ್ರೋನ್

  ಭಾರತದಲ್ಲಿ ಸೇರಿದಂತೆ ವಿಶ್ವದಲ್ಲಿಯೇ ಹೆಚ್ಚು ಪ್ರಚಲಿತವಾಗುತ್ತಿರುವ ಮತ್ತೊಂದು ವಿಶೇಷ ಸೆಲ್ಫೀ ಸಾಧನ ಸೆಲ್ಫಿ ಡ್ರೋನ್.! ಈ ಡ್ರೋಣ್ ಬಳಸಿಕೊಂಡು ತರೇಹವಾರಿ ಸೆಲ್ಫೀ ಚಿತ್ರಗಳನ್ನು ನೀವು ತೆಗೆದುಕೊಳ್ಳಬಹುದು. ಇದು ಈಗಾಗಲೇ ಭಾರತದಲ್ಲಿಯೂ ಲಭ್ಯವಿರುವ ಸೆಲ್ಫೀ ವಿಶೇಷ ಸಾಧನ.!

  ಹಾಲಿವುಡ್ ಸಿನಿಮಾಗಳಲ್ಲಿ ನಿಮ್ಮನ್ನು ಮೂರ್ಖರನ್ನಾಗಿಸಿರುವ ಚಿತ್ರಗಳಿವು!!

  ಹಾಲಿವುಡ್ ಚಿತ್ರಗಳಾದ ಜಂಗಲ್‌ ಬುಕ್‌, ಸ್ಪೈಡರ್‌ಮ್ಯಾನ್, ಅವತಾರ್, ಲೈಫ್ ಆಫ್‌ ಪೈ, ಗೇಮ್ ಆಫ್‌ ಥ್ರೋನ್, ಹ್ಯಾರಿ ಪಾಟರ್ ನಂತರ ಸಿನಿಮಾಗಳನ್ನು ನೀವು ನೋಡಿರುತ್ತೀರಾ. ಈ ಎಲ್ಲಾ ಸಿನಿಮಾಗಳಲ್ಲಿ ನಂಬಲು ಅಸಾಧ್ಯವಾದ ದೃಶ್ಯಗಳನ್ನು ಚಿತ್ರೀಕರಿಸಿರುವನ್ನು ನೀವು ಖಂಡಿತವಾಗಿಯೂ ನೋಡಿ ಆಶ್ಚರ್ಯ ಕೂಡ ವ್ಯಕ್ತಪಡಿಸಿರುತ್ತೀರಾ ಅಲ್ಲವೆ?
  ಈ ಸಿನಿಮಾಗಳನ್ನು ನೋಡುವಾಗ ಈ ದೃಶ್ಯಗಳನ್ನು ಹೇಗಪ್ಪಾ ತೆಗೆದ್ರು ಎಂದುಕೊಳ್ಳುವವರು ಇದ್ದಾರೆ. ಇನ್ನು ಕೆಲವರಿಗೆ ಇದೆಲ್ಲಾ ಗ್ರೀನ್‌ಸ್ಕ್ರೀನ್ ಸೀಕ್ರೆಟ್ ತಂತ್ರಜ್ಞಾನ ಎಂಬುದು ಸಹ ತಿಳಿದಿರುತ್ತದೆ. ಆದರೆ, ಈ ಅಸಾಮಾನ್ಯ ದೃಶ್ಯಗಳನ್ನು ಚಿತ್ರಿಸಿರುವುದಾದರೂ ಹೇಗೆ? ಗ್ರಾಫಿಕ್ಸ್ ಎನ್ನಲು ಸಾಧ್ಯವಾಗದಷ್ಟು ನಿಖರ ದೃಶ್ಯಗಳನ್ನು ಮೂಡಿಸಿದ್ದು ಹೇಗೆ ಎಂಬ ಪ್ರಶ್ನೆ ಮಾತ್ರ ಎಲ್ಲರಿಗೂ ಮೂಡುತ್ತದೆ.
  ಹಾಲಿವುಡ್ ಸಿನಿಮಾಗಳಲ್ಲಿ ಇಂತಹ ಭಯಾನಕವಾದ ಹಾಗೂ ನಂಬಲು ಅಸಾಧ್ಯವಾದ ದೃಶ್ಯಗಳನ್ನು ಚಿತ್ರೀಕರಿಸುವುದು ಸಾಮಾನ್ಯವಾಗಿರುತ್ತದೆ. ಹಾಗಾಗಿ, ಇಂದಿನ ಲೇಖನದಲ್ಲಿ ಹೆಸರಾಂತ ಹಾಲಿವುಡ್‌ ಸಿನಿಮಾಗಳ ರೋಮಾಂಚನಗೊಳಿಸುವ ದೃಶ್ಯಗಳನ್ನು ಚಿತ್ರ ನಿರ್ಮಾಣಕಾರರು ಹೇಗೆ ಸೆರೆಹಿಡಿದರು ಎಂಬುದನ್ನು ನಾವು ನಿಮಗೆ ಚಿತ್ರಗಳ ಮೂಲಕ ತೋರಿಸುತ್ತಿದ್ದೇವೆ.!

  #1 ಗೇಮ್‌ ಆಫ್‌ ಥ್ರೋನ್

  ಗೇಮ್‌ ಆಫ್‌ ಥ್ರೋನ್ ಇಂಗ್ಲೀಷ್‌ ಸಿನಿಮಾದಲ್ಲಿ ಬಂಡೆ ಮೇಲೆ ಕುಳಿತು ಅಲ್ಲಿನ ಪ್ರಾಣಿಯೊಂದನ್ನು ಚಿತ್ರ ನಟಿ ತಲೆ ಸವರುವುದನ್ನು ಚಿತ್ರೀಕರಣದ ಸಮಯದಲ್ಲಿ ಸೆರೆಹಿಡಿದದ್ದು ಹೀಗೆ.

  #2 'ಗಾರ್ಡಿಯನ್ಸ್ ಆಫ್‌ ಗೆಲಾಕ್ಸಿ'

  ಪ್ರಖ್ಯಾತ ಸಿನಿಮಾ 'ಗಾರ್ಡಿಯನ್ಸ್ ಆಫ್‌ ಗೆಲಾಕ್ಸಿ'ಯಲ್ಲಿ ಮುನುಷ್ಯನ ಕೈ ತಲೆ ಮೇಲೆ ಇರುವ ಪ್ರಾಣಿಯೂ ಸಹ ಒಬ್ಬ ಮನುಷ್ಯನೆ. ಅದನ್ನು ಗ್ರೀನ್‌ ಸ್ಕ್ರೀನ್‌ನಲ್ಲಿ ಸೆರೆಹಿಡಿಯಲಾಗಿದೆ.

  #3 ಪೈರೇಟ್ಸ್ ಆಫ್ ಕೆರಿಬಿಯನ್

  ಈ ಸಿನಿಮಾದಲ್ಲಿ ಕಾಣುವ ವಿಚಿತ್ರ ಮಾನವರಿಗೆ ವಿಶುವಲ್‌ ಎಫೆಕ್ಟ್‌ ಹೇಗೆ ನೀಡಲಾಗಿದೆ ಎಂದು ನೋಡಿ.

  #4 ಲೈಫ್ ಆಫ್‌ ಪೈ

  ಅಂದಹಾಗೆ ಲೈಫ್ ಆಫ್‌ ಪೈ ಸಿನಿಮಾ ಮೆಚ್ಚದವರಿಲ್ಲ. ಆದ್ರೆ ನೀವು ಸಿನಿಮಾದಲ್ಲಿ ನಟನೆ ಮಾಡಿದ ಹುಲಿ ಯಾವುದು ಅಂತ ಈ ಚಿತ್ರದಲ್ಲಿ ನೋಡಿ.

  #5 ದಿ ಹಾಬಿಟ್

  ದಿ ಹಾಬಿಟ್ ಸಿನಿಮಾದಲ್ಲಿ ನೀವು ನೋಡುವ ರೋಮಾಂಚನಕಾರಿ ಪ್ರದೇಶವನ್ನು ಕೇವಲ ಒಂದು ಗ್ರೀನ್‌ ಸ್ಟುಡಿಯೋದಲ್ಲಿ ಸೆರೆಹಿಡಿದು ನಂತರ ವಿಶುವಲ್‌ ಎಫೆಕ್ಟ್‌ ನೀಡಲಾಗಿದೆ.

  #6 ಆಲಿಸ್ ಇನ್ ವಂಡರ್ಲ್ಯಾಂಡ್

  ಈ ಸಿನಿಮಾವನ್ನ ಮಕ್ಕಳು ಸಹ ಹೆಚ್ಚು ಇಷ್ಟಪಡುತ್ತಾರೆ. ಯಾವುದೋ ಲೋಕದಲ್ಲಿ ಮಾಡಿದ ಸಿನಿಮಾ ತರ ಇರೊ ಈ ಸಿನಿಮಾ ಶೂಟಿಂಗ್ ನಡೆದದ್ದು ಒಂದೇ ಸ್ಟುಡಿಯೋದಲ್ಲಿ.!

  #7 ಬೋರ್ಡ್ವಾಕ್ ಎಂಪೈರ್

  ಈ ಚಿತ್ರದಲ್ಲಿ ಎಡಭಾಗದ ಚಿತ್ರ ನಿಜವಾದುದಲ್ಲಾ. ಬಲಭಾಗದ ಚಿತ್ರದಲ್ಲಿ ನೀವು ನೋಡುತ್ತಿರುವ ಹಾಗೆ ಸಿನಿಮಾ ನಿರ್ಮಾಣ ಮಾಡಿ ನಂತರ ವಿಶುವಲ್‌ ಎಫೆಕ್ಟ್‌ ನೀಡಲಾಗಿದೆ.

  #8 "ದಿ ಡಾರ್ಕ್ ನೈಟ್‌"

  ಸಸ್ಪೆನ್ಸ್, ಕ್ರೈಮ್‌ ಸಿನಿಮಾಗೆ ಹೆಸರುವಾಸಿಯಾದ "ದಿ ಡಾರ್ಕ್ ನೈಟ್‌" ಸಿನಿಮಾ ನಿರ್ಮಾಣ ಹಾಗೂ ಸಿನಿಮಾದಲ್ಲಿನ ದೃಶ್ಯ ಹೇಗಿದೆ ಕಲ್ಪಿಸಿಕೊಳ್ಳಿ.

  #9 ದಿ ಗ್ರೇಟ್ ಗೇಟ್ಸ್‌ಬೈ

  ಈ ಸಿನಿಮಾದಲ್ಲಿ ನೀವು ಅಂದುಕೊಂಡಹಾಗೆ ಸಿಟಿಯ ಮಧ್ಯೆ ಚಿತ್ರೀಕರಣ ನಡೆಸಿಲ್ಲ. ಚಿತ್ರೀಕರಣ ಗ್ರೀನ್‌ ಸ್ಕ್ರೀನ್‌ನಲ್ಲಿ. ವಿಶುವಲ್‌ ಎಫೆಕ್ಟ್ ಸಿಟಿಯದ್ದು.

  #10 ದಿ ಮ್ಯಾಟ್ರಿಕ್ಸ್

  ಕೆಲವೂ ಸಾಮಾನ್ಯ ಸಾಹಸಗಳನ್ನು ಸಹ ಗ್ರೀನ್‌ ಸ್ಕ್ರೀನ್‌ ಸ್ಟುಡಿಯೋದಲ್ಲಿ ನಿರ್ಮಾಣ ಮಾಡುತ್ತಾರೆ ಕೆಲವೊಮ್ಮೆ ಎನ್ನವುದಕ್ಕೆ ಇದು ಸಾಕ್ಷಿ.

  #11 ಗೇಮ್ ಆಫ್ ಥ್ರೋನ್ಸ್

  ನೀವು ತಿಳಿದುಕೊಂಡಿರುವ ಹಾಗೆ ಸಂಪೂರ್ಣ ಹಿಮ ಪ್ರದೇಶದಲ್ಲಿ ಚಿತ್ರ ನಿರ್ಮಾಣವಾಗಿಲ್ಲ. ವಿಶುವಲ್‌ ಎಫೆಕ್ಟ್‌ ಸಂಪೂರ್ಣ ಇದೆ.

  #12 ಎಕ್ಸ್-ಮೆನ್: ಡೇ ಆಫ್ ಫ್ಯೂಚರ್ ಪಾಸ್ಟ್

  ಬೆಂಕಿ ಉಗುಳುತ್ತಿರುವ ಈ ದೃಶ್ಯ ಎಷ್ಟು ಸತ್ಯ ನೋಡಿ.

  #13 ಓ ಜಡ್, ದಿ ಗ್ರೇಟ್ ಅಂಡ್ ಪವರ್ಫುಲ್

  ಓ ಜಡ್, ದಿ ಗ್ರೇಟ್‌ ಅಂಡ್‌ ಪವರ್‌ಫುಲ್‌" ಸಿನಿಮಾದಲ್ಲಿ ಸಿನಿಮಾದಲ್ಲಿ ಇದು ಅಂತ್ಯಂತ ಭಯಾನಕವಾದ ಪ್ರವಾಹದಲ್ಲಿ ಹೋಗುವ ದೃಶ್ಯವನ್ನು ಹೇಗೆ ಸೆರೆಹಿಡಿಯಲಾಗಿದೆ ನೋಡಿ.

  #14 ದಿ ಸೀಕ್ರೆಟ್ ಇನ್ ದೇರ್ ಐಸ್

  ಗ್ರೀನ್‌ ಸ್ಕ್ರೀನ್‌ ಬ್ಯಾಗ್ರೌಂಡ್ ಇದ್ರೆ ಸಾಕು. ಎಷ್ಟು ಬೇಕೋ ಅಷ್ಟು ಆಡಿಯನ್ಸ್‌ಗಳನ್ನು ಸಿನಿಮಾದಲ್ಲಿ ಔಟ್‌ಪುಟ್‌ ನೀಡಬಹುದು.

  #15 ಹ್ಯಾರಿ ಪಾಟರ್

  ಹ್ಯಾರಿ ಪಾಟರ್ ಸಿನಿಮಾ ನೋಡಿದವರಲ್ಲಿ ಅದನ್ನು ಮೆಚ್ಚದವರಿಲ್ಲ. ಸಿನಿಮಾ ನಿರ್ಮಾಣ ಹೇಗೆ ಮಾಡಲಾಗಿದೆ ನೋಡಿ.

  #16 ದಿ ವೂಲ್ಫ್ ಆಫ್‌ ವಾಲ್‌ ಸ್ಟ್ರೀಟ್'

  'ದಿ ವೂಲ್ಫ್ ಆಫ್‌ ವಾಲ್‌ ಸ್ಟ್ರೀಟ್' ಸಿನಿಮಾದಲ್ಲಿ ನದಿಯ ಪ್ರದೇಶದಲ್ಲಿ ಚಿತ್ರೀಕರಣ

  #17 'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್"

  'ದಿ ಲಾರ್ಡ್‌ ಆಫ್‌ ದಿ ರಿಂಗ್ಸ್" ಸಿನಿಮಾ ನೋಡಿದವರಿಗೆ ಮನುಷ್ಯ ಇಷ್ಟೊಂದು ವಿಚಿತ್ರವಾಗಿ ಇರುತ್ತಾನ ಎನಿಸಿಬಿಟ್ಟಿರುತ್ತದೆ.

  #18 ಗಾಡ್ಜಿಲಾ

  ಸಮುದ್ರದ ಎದುರಾಗಿ ನಿಂತು ಗಾಡ್ಜಿಲಾ ಬರುವಿಕೆಗಾಗಿ ಕಾಯುತ್ತಿರುವ ರಕ್ಷಣಾ ಪಡೆಯವರು ಗಾಡ್ಜಿಲಾಗೆ ನಿಜವಾಗಿ ಸಿನಿಮಾ ನಿರ್ಮಾಣ ಹಂತದಲ್ಲಿ ಕಂಡದ್ದು ಹೀಗೆ.

  #19 ಮ್ಯಾಡ್ ಮ್ಯಾಕ್ಸ್: ಫ್ಯೂರಿ ರೋಡ್

  ಭಯಾನಕ ಯುದ್ಧ ತಂತ್ರಗಾರಿಕೆಯಲ್ಲಿ ರೋಮಾಂಚನಗೊಳಿಸುವ ಯುದ್ಧದ ಈ ಚಿತ್ರ ನಿರ್ಮಾಣ ಗೊಂಡಿದ್ದು ಸಹ ಗ್ರೀನ್‌ ಸ್ಕ್ರೀನ್‌ನಲ್ಲೇ. ವಿಶುವಲ್‌ ಎಫೆಕ್ಟ್ ಹೇಗಿದೆ ನೋಡಿ.

  #20 ಡೆಡ್ ಪೂಲ್

  ತಂತ್ರಜ್ಞಾನದ ಸಹಾಯದಿಂದ ಹೀಗೆಲ್ಲಾ ತೋರಿಸಬಹುದು.

  #21 ದಿ ಮಾರ್ಟಿನ್

  ಅಂತು ಇಂತು ಮಂಗಳ ಗ್ರಹದಲ್ಲಿ ಸಹ ಸಿನಿಮಾ ತೆಗೆದರು...ಹಹಹ!

  #22 ರೋಬೊಕ್ಯಾಪ್

  ಸಿನಿಮಾ ಶೂಟಿಂಗ್ ನಡೆದದ್ದು ಪರಿಸರದ ಹೊರಾಂಗಣ ಪ್ರದೇಶದಲ್ಲೇ ಆದ್ರೆ ತೋರಿಸಿದ್ದು ವಿಶುವಲ್‌ ಎಫೆಕ್ಟ್‌ ಮೂಲಕ ಈ ರೀತಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This is a classic derivative of a pointless concept. A ‘belfie’ is a behind-selfie, just in case you didn’t know, and now there is a stick that can help you capture a belfie specifically.to know more visit to kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more