ವಿಶ್ವದ ಮೊದಲ 1TB ಎಸ್‌ಡಿ ಕಾರ್ಡ್ ಮಾರುಕಟ್ಟೆಗೆ!

|

2019ನೇ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ವಿಶ್ವದ ಮೊಟ್ಟ ಮೊದಲ 1TB ಮೈಕ್ರೊ ಸ್ಟೋರೆಜ್​ ಮೆಮೊರಿ ಕಾರ್ಡ್ ಅನಾವರಣಗೊಳ್ಳುವ ಮೂಲಕ ತಂತ್ರಜ್ಞಾನ ಜಗತ್ತನ್ನು ಹುಬ್ಬೇರಿಸುವಂತೆ ಮಾಡಿದೆ. ಪ್ರಖ್ಯಾತ ಗ್ಯಾಜೆಟ್ ಪರಿಕರಗಳ ತಯಾರಕ ಕಂಪೆನಿ ಸ್ಯಾನ್‌ಡಿಸ್ಕ್, ವಿಶ್ವದ ಮೊದಲ 1TB ರೂಪದಲ್ಲಿರುವ ಎಸ್‌ಡಿ ಕಾರ್ಡ್ ಪರಿಚಯಿಸಿರುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ.

ಎಸ್‌ಎಸ್‌ಡಿ ಕಾರ್ಡ್‌ಗಳಷ್ಟೇ TB ಸಾಮರ್ಥ್ಯದಲ್ಲಿ ಶೇಖರಣೆ ಮಾಡಿಕೊಳ್ಳಬಹುದು ಎಂಬ ಮಾತನ್ನು ಸುಳ್ಳಾಗಿಸಿರುವ ಸ್ಯಾನ್​ ಡಿಸ್ಕ್​ ಕಾರ್ಪೋರೇಷನ್​ ಸಂಸ್ಥೆಯು, ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ '1TB ಮೈಕ್ರೊ ಸ್ಟೋರೆಜ್​ ಮೆಮೊರಿ ಕಾರ್ಡ್ ಬಿಡುಗಡೆ ಪರಿಚಯಿಸಿದೆ. ಈ ಮೂಲಕ ಎಸ್‌ಡಿಕಾರ್ಡ್ ತಂತ್ರಜ್ಞಾನದಲ್ಲಿ ಬದಲಾವಣೆ ತಂದಿದೆ.

ವಿಶ್ವದ ಮೊದಲ 1TB ಎಸ್‌ಡಿ ಕಾರ್ಡ್ ಮಾರುಕಟ್ಟೆಗೆ!

ಮಲ್ಟಿ ಕ್ಯಾಮೆರಾ ಮತ್ತು ಹೈ ರೆಸಲ್ಯೂಷನ್​ ವಿಡಿಯೋಗಳಿಂದ ಸ್ಟೋರೆಜ್​ ಸಮಸ್ಯೆಯನ್ನು ಎದುರಿಸುತ್ತಿದ್ದ ಸ್ಮಾಟ್‌ಫೋನ್​ ಬಳಕೆದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚು ಸಾಮರ್ಥ್ಯದ ಎಸ್‌ಡಿ ಕಾರ್ಡ್ ತಯಾರಿಸಲಾಗಿದೆ ಎಂದು ಸ್ಯಾನ್​ ಡಿಸ್ಕ್​ ಕಾರ್ಪೋರೇಷನ್ ಸಂಸ್ಥೆ ತಿಳಿಸಿದ್ದು, ಸ್ಮಾರ್ಟ್​ ಪೋನ್​ಗಳು ಬ್ಯುಲ್ಟ್​ ಸ್ಟೋರೆಜ್​ ಸಮಸ್ಯೆಯನ್ನು ಹೊಂದಿದ್ದವು ಎಂದು ಸಹ ಹೇಳಿದೆ.

ಕಾರ್ಪೋರೇಷನ್​ ಸಂಸ್ಥೆ​ ಪರಿಚಯಿಸುತ್ತಿರುವ ಈ ನೂತನ 1TB ಮೈಕ್ರೊ ಎಸ್‌ಡಿ ಕಾರ್ಡ್​ 160MB/s ಯಷ್ಟು ಹೈ ಸ್ಪೀಡ್​ ಕೆಪಾಸಿಟಿ ಹೊಂದಿದ್ದು, ಹೈ ರೆಸಲ್ಯೂಶನ್​ ಹೊಂದಿದ ಡ್ರೋನ್​ ಮತ್ತು ಆಕ್ಷನ್​ ಕ್ಯಾಮೆರಾಗಳಿಗೂ ಬಳಸಬಹುದಾಗಿದೆ. ಹಾಗಾಗಿ, ಇನ್ಮುಂದೆ ಎಸ್‌ಡಿ ಕಾರ್ಡ್‌ಗಲ ಮೂಲಕವೂ ಎಲ್ಲಾ ಡಿವೈಸ್‌ಗಳ ಮೆಮೊರಿ ಸಮಸ್ಯೆಯನ್ನು ಸಹ ಪರಿಹರಿಸಿಕೊಳ್ಳಬಹುದಾಗಿದೆ.

ವಿಶ್ವದ ಮೊದಲ 1TB ಎಸ್‌ಡಿ ಕಾರ್ಡ್ ಮಾರುಕಟ್ಟೆಗೆ!

ಇನ್ನು ಇಂದಷ್ಟೇ ಪರಿಚಿತವಾಗಿರುವ ಈ ಎಸ್‌ಡಿ ಕಾರ್ಡ್ ಮಾರಾಟವನ್ನು ಸಹ ಸ್ಯಾನ್​ ಡಿಸ್ಕ್​ ಕಾರ್ಪೋರೇಷನ್ ಆರಂಭಿಸಿದೆ. ಭಾರತೀಯ ಬೆಲೆಯಲ್ಲಿ 35,000 ರೂ.ಗಳಾಗುವ ಈ ಗ್ರಾಹಕ ಪರಿಚಿತ ಹೊಸ 1TB ಮೈಕ್ರೊ ​ಎಸ್‌ಡಿ ಕಾರ್ಟ್ ಸ್ಯಾನ್​ಡಿಸ್ಕ್​ ವೆಬ್​ಸೈಟ್​ನಲ್ಲಿ ಖರೀದಿಗೆ ಲಭ್ಯವಿದ್ದು, ಏಪ್ರಿಲ್​ 2019 ರಿಂದ ಮಳಿಗೆಗಳಲ್ಲಿ ಮಾರಾಟಕ್ಕೆ ಬರಲಿದೆ ಎಂದು ಕಂಪೆನಿ ತಿಳಿಸಿದೆ.

ಓದಿರಿ: ಟ್ರಾಯ್‌ ಹೊಸ ನಿಯಮದ 'ಕೇಬಲ್​ ಬಿಲ್' ನೋಡಿ ಬೆಚ್ಚಿಬಿದ್ದ ಜನ!!

Best Mobiles in India

English summary
SanDisk Launches the World's First 1TB SD Card. 1TB microSD cards are now a thing.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X