ಎಲ್ಲಾ ಓಕೆ ಸಾಮಾನ್ಯ ವಾಚ್ ಯಾಕೆ: ಬಜೆಟ್ ಬೆಲೆಯ ಸ್ಮಾರ್ಟ್‌ ವಾಚ್‌ಗಳ ಲಿಸ್ಟ್..!

|

ನಾವು ನಿತ್ಯ ಬಳಕೆ ಮಾಡುವ ಹಲವು ವಸ್ತುಗಳು ಸ್ಮಾರ್ಟ್‌ ಆಗುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಸ್ಮಾರ್ಟ್‌ ವಾಚ್ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ. ಕೇವಲ ಸಮಯವನ್ನು ನೋಡಲು ಮಾತ್ರವೇ ಬಳಕೆಯಾಗುತ್ತಿದ್ದ ವಾಚ್ ಇಂದು ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಯನ್ನು ಹೊಂದಿದೆ. ಆರೋಗ್ಯದ ಮೇಲೆ ಗಮನ ಇಡುವುದರಿಂದ ಹಿಡಿದು ನಮ್ಮ ಮೊಬೈಲ್ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮಾಡಲಿದೆ. ಈ ಹಿನ್ನಲೆಯಲ್ಲಿಯೇ ಅನೇಕ ಮಂದಿ ಸಾಮಾನ್ಯ ವಾಚ್ ಬದಲಿಗೆ ಸ್ಮಾರ್ಟ್‌ ವಾಚ್ ಅನ್ನು ಖರೀದಿ ಮಾಡಲು ಮುಂದಾಗಿದ್ದಾರೆ.

ಎಲ್ಲಾ ಓಕೆ ಸಾಮಾನ್ಯ ವಾಚ್ ಯಾಕೆ: ಬಜೆಟ್ ಬೆಲೆಯ ಸ್ಮಾರ್ಟ್‌ ವಾಚ್‌ಗಳ ಲಿಸ್ಟ್..!

ಆದರೆ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ವಾಚ್ ದುಬಾರಿ ಎನ್ನಲಾಗಿದೆ. ಆದರೆ ಇಂದಿನ ಲೇಖನದಲ್ಲಿ ನೀವು ಕೇವಲ ರೂ.10000ದ ಒಳಗೆ ಖರೀದಿ ಮಾಡಬಹುದಾದ ಸ್ಮಾರ್ಟ್‌ ವಾಚ್‌ಗಳ ವಿವರಗಳನ್ನು ನೀಡಲಾಗಿದೆ. ಇವುಗಳು ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿವೆ ಎನ್ನಲಾಗಿದ್ದು, ಅವುಗಳ ಮಾಹಿತಿ ಮುಂದಿದೆ. ಆನ್‌ಲೈನಿನಲ್ಲಿ ಈ ಸ್ಮಾರ್ಟ್‌ವಾಚ್‌ಗಳು ದೊರೆಯುತ್ತಿವೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗರೆಯನ್ನು ನೀಡಲು ಹೇಳಿ ಮಾಡಿಸಿದಂತೆ.

ಹುವಾಮಿ ಅಮಾಜ್ ಫಿಟ್ ಬಿಪ್:

ಹುವಾಮಿ ಅಮಾಜ್ ಫಿಟ್ ಬಿಪ್:

ಶಿಯೋಮಿಯ ಅಂಗ ಸಂಸ್ಥೆಯಾಗಿರುವ ಹುವಾಮಿ ಕಂಪನಿಯೂ ಬಿಡುಗಡೆ ಮಾಡಿರುವ ಸ್ಮಾರ್ಟ್‌ವಾಚ್ ಇದಾಗಿದೆ. ಇದಲ್ಲಿ ಬಳಕೆದಾರರಿಗೆ ಹೆಚ್ಚಿನ ಪ್ರಮಾಣದ ಫೀಚರ್‌ಗಳು ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದರಲ್ಲಿ 1.28 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಇದಕ್ಕೆ 2.5D ಕರ್ವಡ್ ಗ್ಲಾಸ್ ವಿನ್ಯಾಸವನ್ನು ಮಾಡಲಾಗಿದೆ. ಹೆಚ್ಚಿನ ಪ್ರಮಾಣದ ಬ್ಯಾಟರಿ ಬ್ಯಾಕಪ್ ಅನ್ನು ಈ ಸ್ಮಾರ್ಟ್‌ ವಾಚ್ ನೀಡಲಿದೆ. ಇದು ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಫ್ಲಿಪ್‌ಕಾರ್ಟಿನಲ್ಲಿ ಮಾರಾಟವಾಗಲಿದ್ದು ರೂ.5499ಕ್ಕೆ ಲಭ್ಯವಿದೆ.

ಬೊಲ್ಟ್ ಹವಾಕ್ ಸ್ಮಾರ್ಟ್‌ವಾಚ್:

ಬೊಲ್ಟ್ ಹವಾಕ್ ಸ್ಮಾರ್ಟ್‌ವಾಚ್:

ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಬೊಲ್ಟ್ ಹವಾಕ್ ಸ್ಮಾರ್ಟ್‌ ವಾಚ್ ಸಹ ಬಳಕೆದಾರರಿಗೆ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಫೀಚರ್ ಗಳನ್ನು ನೀಡಲಿದೆ. ಫಿಟ್ ಬ್ಯಾಂಡ್ ಮಾದರಿಯಲ್ಲಿಯೂ ಬಳಕೆ ಮಾಡಿಕೊಳ್ಳಲು ಹೇಳಿ ಮಾಡಿಸಿದಂತಿದೆ. ಇದು ಸಹ ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಅಮೆಜಾನ್‌ನಲ್ಲಿ ಮಾರಾಟವಾಗಲಿದ್ದು ರೂ.8999ಕ್ಕೆ ಲಭ್ಯವಿದೆ.

ಮಾರ್ಟಿನ್ ನೋಟಿಪೈಯರ್:

ಮಾರ್ಟಿನ್ ನೋಟಿಪೈಯರ್:

ಇದು ಪೂರ್ಣ ಪ್ರಮಾಣದಲ್ಲಿ ಸ್ಮಾರ್ಟ್ ವಾಚ್ ಅಲ್ಲವಾದರು ಸಹ ಬಳಕೆದಾರರಿಗೆ ಸ್ಮಾರ್ಟ್‌ ಆಯ್ಕೆಗಳನ್ನು ನೀಡಿದೆ. ಇದು ಆನಲಾಗ್ ವಾಚ್ ಮಾದರಿಯಲ್ಲಿದ್ದು, ಕೆಳ ಭಾಗದಲ್ಲಿ ಮಾತ್ರವೇ ಸಣ್ಣ ಪ್ರಮಾಣದ ಡಿಸ್‌ಪ್ಲೇ ಹೊಂದಿದೆ. ಇದರಲ್ಲಿ ನಿಮ್ಮ ಸ್ಮಾರ್ಟ್‌ ಫೋನಿನ ನೋಟಿಫಿಕೇಷನ್‌ಗಳು ಕಾಣಿಸಿಕೊಳ್ಳುತ್ತವೆ. ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಅಮೆಜಾನ್‌ನಲ್ಲಿ ಮಾರಾಟವಾಗಲಿದ್ದು ರೂ.9542ಕ್ಕೆ ಲಭ್ಯವಿದೆ.

ನೊಯ್ಸಿ ಇಗ್ಲೈಟ್ ಸ್ಮಾರ್ಟ್‌ವಾಚ್:

ನೊಯ್ಸಿ ಇಗ್ಲೈಟ್ ಸ್ಮಾರ್ಟ್‌ವಾಚ್:

1.2 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರುವ ನೊಯ್ಸಿ ಇಗ್ಲೈಟ್ ಸ್ಮಾರ್ಟ್‌ ವಾಚ್ ಉತ್ತಮವಾದ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. ಇದು ಸಹ ನಿಮ್ಮ ಆರೋಗ್ಯದ ಮೇಲೆ ಗಮನವನ್ನು ಇರಿಸಲಿದೆ ಎನ್ನಲಾಗಿದೆ. ಅಲ್ಲದೇ ನಿಮ್ಮ ಸ್ಮಾರ್ಟ್‌ಫೋನಿನ ನೋಟಿಫಿಕೇಷನ್ ಗಳನ್ನು ನಿಖರವಾಗಿ ತೋರಿಸುತ್ತೆ. ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಅಮೆಜಾನ್‌ನಲ್ಲಿ ಮಾರಾಟವಾಗಲಿದ್ದು ರೂ.4999ಕ್ಕೆ ಲಭ್ಯವಿದೆ.

ವಾಚ್ಔಟ್ ಬೈಲ್ಸ್ ಬ್ಲಾಕ್ ಪ್ಯಾಂಥರ್:

ವಾಚ್ಔಟ್ ಬೈಲ್ಸ್ ಬ್ಲಾಕ್ ಪ್ಯಾಂಥರ್:

ವಾಚಿನ ಹೆಸರೇ ವಿಚಿತ್ರವಾಗಿದೆ. ಇದರಲ್ಲಿಯೂ 1.22 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ರೌಂಡ್ ಮಾದರಿಯ ಡಿಸ್‌ಪ್ಲೇ ಇದಾಗಿದ್ದು, ಬಳಕೆದಾರರಿಗೆ ಉತ್ತಮ ಆಯ್ಕೆಗಳನ್ನು ಬಳಕೆಗೆ ನೀಡಲಿದೆ. ಅಲ್ಲದೇ ನೋಡಲು ಉತ್ತವಾಗಿದೆ. ಇದಲ್ಲದೇ ಕ್ಯಾಮೆರಾ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ. ಆಂಡ್ರಾಯ್ಡ್ ಮತ್ತು iOS ಸಫೋರ್ಟ್ ಮಾಡಲಿದೆ. ಅಲ್ಲದೇ ಇದು ಫ್ಲಿಪ್‌ಕಾರ್ಟಿನಲ್ಲಿ ಮಾರಾಟವಾಗಲಿದ್ದು ರೂ.6299ಕ್ಕೆ ಲಭ್ಯವಿದೆ.

Best Mobiles in India

English summary
5 Best Smartwatches Under 10000 INR. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X