ನಿಮ್ಮ ಮೆದುಳನ್ನು ಚುರುಕುಗೊಳಿಸಲು ಐದು ಉಚಿತ ಆಟಗಳು.

|

ಈ ವೇಗದ ಜೀವನ ಶೈಲಿಯಲ್ಲಿ ನಾವು ನಮ್ಮ ಆರೋಗ್ಯದ ಕಡೆ ಗಮನ ಕೊಡುವುದನ್ನೇ ಮರೆತುಬಿಟ್ಟಿದ್ದೇವೆ. ಉತ್ತಮ ಆಹಾರ ಸೇವಿಸುವುದನ್ನು, ಜಿಮ್ ಗೆ ಅಥವಾ ಆಟಗಳ ಕ್ಲಬ್ಬಿಗೆ ಸೇರುವುದನ್ನು ಮಾಡಬಹುದು. ತನ್ಮೂಲಕ ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಬಹುದು. ಇದರಿಂದ ನಾವು ದೈಹಿಕವಾಗಿ ಆರೋಗ್ಯವಂತರಾಗುತ್ತೇವೆ. ಆದರೆ ಮಾನಸಿಕ ಆರೋಗ್ಯದ ಕತೆ? ಮನಸ್ಸಿನ ಆರೋಗ್ಯ ರಕ್ಷಣೆಗೆ ನಾವೇನನ್ನಾದರೂ ಮಾಡುತ್ತಿದ್ದೇವೆಯೇ?

ನಿಮ್ಮ ಮೆದುಳನ್ನು ಚುರುಕುಗೊಳಿಸಲು ಐದು ಉಚಿತ ಆಟಗಳು.

ನಿಮ್ಮ ಉತ್ತರ 'ಇಲ್ಲ' ಎಂದಾಗಿದ್ದರೆ, ಮಾನಸಿಕ ಆರೋಗ್ಯದ ಮಹತ್ವದ ಬಗ್ಗೆ ತಿಳಿದುಕೊಳ್ಳಲಿದು ಸಕಾಲ. ದೈಹಿಕ ಆರೋಗ್ಯದ ಜೊತೆಗೆ ಆರೋಗ್ಯಕರ ಮನಸ್ಸೂ ಬಹುಮುಖ್ಯ. ನಿಮ್ಮ ಮಾನಸಿಕ ಆರೋಗ್ಯವನ್ನು ಚೆನ್ನಾಗಿಡಲು ಬೇಕಾದ ಚಟುವಟಿಕೆಗಳು ಮತ್ತು ಆಟಗಳ ಬಗ್ಗೆ ನೀವು ಗಮನಹರಿಸಬೇಕು.

ಓದಿರಿ: ಜಿಯೋ ಚಾಟ್ ಹಿಸ್ಟ್ರಿಯನ್ನು ಡಿಲೀಟ್ ಮಾಡುವುದು ಹೇಗೆ?

ಆಧ್ಯಾತ್ಮ ಮತ್ತು ಯೋಗ ನಮ್ಮನ್ನು ಶಾಂತ ಚಿತ್ತದಿಂದ ಇಡಬಲ್ಲದು, ಇದರ ಜೊತೆಗೆ ನಮ್ಮ ಮಿದುಳಿನ ನರಮಂಡಲ ಚಟುವಟಿಕೆಯಿಂದಿರುವಂತೆಯೂ ಮಾಡಬೇಕು. ನಿಮ್ಮ ಮಾನಸಿಕ ಆರೋಗ್ಯವನ್ನು ನಿಮ್ಮ ಸ್ಮಾರ್ಟ್ ಫೋನಿನಿಂದ ಉತ್ತಮಗೊಳಿಸಿಕೊಳ್ಳಬಹುದೆಂದು ನಿಮಗೆ ಗೊತ್ತೇ? ಹೌದು ಕೆಲವು ತಂತ್ರಾಂಶಗಳು ಮತ್ತು ಆಟಗಳಿಂದ ಇದು ಸಾಧ್ಯವಿದೆ. ನಿಮ್ಮ ನೆನಪಿನ ಶಕ್ತಿ, ವಿಶ್ಲೇಷಣಾ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಎಲಿವೇಟ್ - ಬ್ರೈನ್ ಟ್ರೇನಿಂಗ್.

ಎಲಿವೇಟ್ - ಬ್ರೈನ್ ಟ್ರೇನಿಂಗ್.

ಈ ಉಚಿತ ತಂತ್ರಾಂಶವನ್ನು ಉಪಯೋಗಿಸಿಕೊಂಡು ನಿಮ್ಮ ಸಂವಹನ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು ಮತ್ತು ನಿಮ್ಮಲ್ಲಿನ ಮಾಹಿತಿ ವಿಶ್ಲೇಷಣಾ ವೇಗವನ್ನು ಹೆಚ್ಚಿಸಿಕೊಳ್ಳಬಹುದು. ಈ ತಂತ್ರಾಂಶದಲ್ಲಿ ಮೂವತ್ತಕ್ಕೂ ಅಧಿಕ ಆಟಗಳಿವೆ. ವ್ಯಾಕರಣ, ಗಣಿತಕ್ಕೆ ಸಂಬಂಧಿಸಿದಂತಹ ಆಟಗಳು ಇದರಲ್ಲಿದೆ.

ತರಬೇತಿಯಲ್ಲಿ ಚಿಕ್ಕ ಚಿಕ್ಕ ಪ್ಯಾರಾಗ್ರಾಫಿನ ಬರಹಗಳಿರುತ್ತವೆ, ಅದರಲ್ಲಿರುವ ತಪ್ಪುಗಳನ್ನು ನಿಗದಿತ ಸಮಯದೊಳಗೆ ಕಂಡುಹಿಡಿದು ನೀವು ಉತ್ತೀರ್ಣರಾಗಬಹುದು. ನಿಮ್ಮ ದಿನನಿತ್ಯದ ಚಟುವಟಿಕೆಯನ್ನು ನೀವೇ ನಿರ್ಧರಿಸಿಕೊಳ್ಳಬಹುದು, ನಿಮ್ಮ ಫಲಿತಾಂಶವನ್ನು ಇತರರ ಜೊತೆಗೆ ಹೋಲಿಸಿಕೊಳ್ಳಬಹುದು.

ಲುಮಾಸಿಟಿ.

ಲುಮಾಸಿಟಿ.

ಸ್ಮಾರ್ಟ್ ಫೋನುಗಳಲ್ಲಿ ಮಿದುಳಿನ ತರಬೇತಿಗೆ ಉಪಯೋಗಿಸುವ ಅತ್ಯಂತ ಜನಪ್ರಿಯ ತಂತ್ರಾಂಶವಿದು. ಪ್ರಪಂಚದಾದ್ಯಂತ 5 ಮಿಲಿಯನ್ನಿಗಿಂತಲೂ ಅಧಿಕ ಜನ ಇದನ್ನು ಉಪಯೋಗಿಸುತ್ತಿದ್ದಾರೆ. ನರವಿಜ್ಞಾನಿಗಳು ರೂಪಿಸಿರುವ ನಲತ್ತಕ್ಕೂ ಅಧಿಕ ಕಾಗ್ನಿಟಿವ್ ಆಟಗಳು ಇದರಲ್ಲಿದೆ. ನಿಮ್ಮ ಗಮನ ಕೊಡುವ ಸಮಯ, ನೆನಪು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ಆಟ ಉತ್ತಮಗೊಳಿಸುತ್ತದೆ.

ಸುಲಭವಾಗಿ ಉಪಯೋಗಿಸುವಂತಿರುವ ತಂತ್ರಾಂಶವಿದು. ನಿಮ್ಮ ಚಟುವಟಿಕೆಯನ್ನು ಗ್ರಾಫ್ ಮೂಲಕ ನೋಡಬಹುದು, ಇತರರೊಡನೆ ಹೋಲಿಸಿ ನೋಡಬಹುದು. ವೇಗದ ಪಝಲ್ ಗಳ ಮೂಲಕ ನಿಮ್ಮ ಮಿದುಳನ್ನು ಚುರುಕಾಗಿಡುತ್ತದೆ ಈ ಆಟ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನ್ಯೂರೋನೇಷನ್.

ನ್ಯೂರೋನೇಷನ್.

ನಮ್ಮ ಪಟ್ಟಿಯಲ್ಲಿರುವ ಮುಂದಿನ ತಂತ್ರಾಂಶವನ್ನು ನರವಿಜ್ಞಾನಿಗಳ ಸಲಹೆಯೊಂದಿಗೆ ವಿಶೇಷವಾಗಿ ರೂಪಿಸಲಾಗಿದೆ. ನೂರೋನೇಷನ್ ನಲ್ಲಿ ನ್ಯೂಮೆರಸಿ, ಮೆಮೊರಿ, ರೀಸನಿಂಗ್ ಮತ್ತು ಪರ್ಸೆಪ್ಷನ್ ವಿಭಾಗದಲ್ಲಿ 60ಕ್ಕೂ ಅಧಿಕ ವ್ಯಾಯಾಮಗಳಿವೆ. ಈ ಆಟದ ವಿವಿಧ ಹಂತಗಳನ್ನು ಆಡಲು ಒಂದಷ್ಟು ತರಬೇತಿ ಅಗತ್ಯ. ಹಾಗಾಗಿ ಡೆವಲಪರ್ ಗಳು ಪ್ರತಿ ವಿಭಾಗಕ್ಕೂ ಒಂದು ಸರಳ ತರಬೇತಿಯನ್ನು ನೀಡಿದ್ದಾರೆ.

ಈ ತರಬೇತಿಗಳಿಂದ ನೀವು ಬಣ್ಣ, ವಿನ್ಯಾಸ ಮತ್ತು ಸಂಖೈಗಳನ್ನು ನೆನಪಿಡಬಹುದು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ ವಿವಿಧ ಹಂತಗಳನ್ನು ನೀವು ಆಡಬಹುದು.

ಮ್ಯಾಥ್ ಟ್ರಿಕ್ಸ್.

ಮ್ಯಾಥ್ ಟ್ರಿಕ್ಸ್.

ಸಂಖೈ ಮತ್ತು ಕಠಿಣ ಲೆಕ್ಕಾಚಾರದ ಜೊತೆಗೆ ನೀವು ಆಡಬೇಕೆಂದಿದ್ದರೆ ಇದು ನಿಮಗೆ ಹೇಳಿಮಾಡಿಸಿದ ತಂತ್ರಾಂಶ. ಲೆಕ್ಕಾಚಾರದ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲು ಈ ತಂತ್ರಾಂಶದಲ್ಲಿ ಹಲವಾರು ಆಟಗಳಿವೆ. ದಿನನಿತ್ಯದ ಚಟುವಟಿಕೆ ವೇಗಗೊಳ್ಳಲು ಇದು ನೆರವಾಗಲಿದೆ.

ಕೂಡಿಸುವಿಕೆ, ಕಳೆಯುವಿಕೆ, ಭಾಗಿಸುವಿಕೆ, ಗುಣಿಸುವಿಕೆ, ಪ್ರತಿಶತಃ ಎಂದು ವಿಭಾಗೀಕರಿಸಲಾಗಿದೆ. 15 ಸೆಕೆಂಡುಗಳೊಳಗೆ ನೀವು ಲೆಕ್ಕ ಮಾಡಿ ಮುಗಿಸಬೇಕು. ಜೊತೆಗೆ, ಪ್ರತಿ ಹಂತದಲ್ಲೂ ಕಠಿಣತೆಯನ್ನು ನೀವು ನಿರ್ಧರಿಸಿಕೊಳ್ಳಬಹುದು.

ಬ್ರೈನ್ ವಾರ್ಸ್.

ಬ್ರೈನ್ ವಾರ್ಸ್.

ಕೊನೆಯದಾಗಿ, ಬ್ರೈನ್ ವಾರ್ಸ್ ಆಟವು ತುಂಬಾ ಸ್ಪರ್ಧಾತ್ಮಕವಾಗಿದೆ ಮತ್ತು ಚಟ ಹತ್ತಿಸಿಬಿಡುತ್ತದೆ. ಈ ತಂತ್ರಾಂಶದಲ್ಲಿ ಹತ್ತಿಕ್ಕಿಂತ ಅಧಿಕ ರೀತಿಯ ಆಟಗಳಿವೆ. ನಿಮ್ಮ ವಿಶ್ಲೇಷಣಾ ಶಕ್ತಿ, ಗಣಿತ ಶಕ್ತಿ, ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಮತ್ತು ನೆನಪಿನ ಶಕ್ತಿಯನ್ನು ಇದು ಹೆಚ್ಚಿಸುತ್ತದೆ. ಈ ಆಟವು ಪ್ರತಿ ಹಂತದಲ್ಲೂ ಆಸಕ್ತಿಕರವಾಗಿದೆ, ಸ್ಪರ್ಧಾತ್ಮಕವಾಗಿದೆ, ನಿಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. 20ರಿಂದ 50 ಸೆಕೆಂಡಿನಷ್ಟು ಸಮಯವಿರುತ್ತದೆ.

ಪ್ರಪಂಚದಾದ್ಯಂತ ಇರುವ ಜನರ ಜೊತೆಗೂ ನೀವು ಸ್ಪರ್ಧಿಸಬಹುದು. ಪರದೆಯ ಕೆಳಗಿರುವ ಚಾಲೆಂಜ್ ಬಟನ್ ಅನ್ನು ಒತ್ತಿದರೆ ತಂತ್ರಾಂಶವು ಆ ಆಟವನ್ನು ಆಡಬಯಸುತ್ತಿರುವ ಇತರೆ ಸ್ಪರ್ಧಾಳನ್ನು ತೋರಿಸುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Want to be next Einstein? Train your mind with these games and keep your mental wellness in check.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X