ಹಳೆಯ ಐಫೋನ್ ಬಳಸಿ ಇಷ್ಟೆಲ್ಲಾ ಮಾಡಬಹುದೇ?

By Shwetha
|

ಮಾರುಕಟ್ಟೆಗೆ ಬಂದಿರುವ ಹೊಸ ಐಫೋನ್ ಅನ್ನು ಖರೀದಿಸುವ ಮನಸ್ಸಾಗಿದೆಯೇ? ಹಾಗಾದರೆ ಹಳೆಯ ಫೋನ್ ಅನ್ನು ಮಾರಿಬಿಡುವ ಮುನ್ನ ಅದರಿಂದ ಕ್ರಿಯಾತ್ಮಕ ಕೆಲಸಗಳನ್ನು ಮಾಡಿಕೊಳ್ಳಬಹುದಲ್ಲವೇ? ನಿಮ್ಮ ಹಳೆಯ ಐಫೋನ್ ನಿಮ್ಮ ಚಟುವಟಿಕೆಗಳನ್ನು ನಿರ್ವಹಿಸುವ ಉತ್ತಮ ಸ್ನೇಹಿತನಾಗಿದ್ದು ಇದರಿಂದ ಹತ್ತು ಹಲವು ಕೆಲಸಗಳನ್ನು ನಿರ್ವಹಿಸಿಕೊಳ್ಳಬಹುದಾಗಿದೆ.

ಓದಿರಿ: ಡ್ರೈವಿಂಗ್‌ನಲ್ಲಿರುವಾಗ ಫೋನ್ ಬಳಸಿದಳು! ಮುಂದೇನಾಯಿತು ವೀಡಿಯೊ ನೋಡಿ

ನಿಮ್ಮ ಹಳೆಯ ಐಫೋನ್ ಸ್ಕ್ರೀನ್ ಗುಣಮಟ್ಟ ಮತ್ತು ಪವರ್‌ಗೆ ಹೋಲಿಸಿದಾಗ ಸ್ವಲ್ಪ ನಿಧಾನವಾಗಿರಬಹುದು ಆದರೆ ಈ ಡಿವೈಸ್ ಅನ್ನು ನಿಮ್ಮ ಹಲವಾರು ಕೆಲಸಗಳಿಗೆ ಬಳಸಿಕೊಳ್ಳಬಹುದಾಗಿದೆ. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿದ್ದು ಹಳೆಯ ಐಫೋನ್ ಬಳಸಿ ಏನೆಲ್ಲಾ ಕೆಲಸಗಳನ್ನು ಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ.

#1

#1

ಉಚಿತ ಅಪ್ಲಿಕೇಶನ್ ಅನ್ನು ಇದರಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವ ಮೂಲಕ ನಿಮ್ಮ ಹಳೆಯ ಐಫೋನ್ ಅನ್ನು ವೈಬ್ರೇಟರ್‌ನಂತೆ ಬಳಸಿಕೊಳ್ಳಬಹುದಾಗಿದೆ. iVibe Massager ಅಪ್ಲಿಕೇಶನ್ ನಿಮಗೆ ಈ ಮಾದರಿಯಲ್ಲಿ ಸಹಾಯ ಮಾಡಲಿದೆ.

#2

#2

ನಿಮ್ಮ ಐಫೋನ್‌ನ ವೈಬ್ರೇಟ್ ಅನ್ನು ಪರೀಕ್ಷಿಸಿಕೊಂಡಾಯಿತು. ಇನ್ನು ನಿಮ್ಮ ಐಫೋನ್ ಅನ್ನು ಮನೆಯನ್ನು ಕಾಪಾಡುವ ಸುಭದ್ರ ಕ್ಯಾಮೆರಾದಂತೆ ಬಳಸಿಕೊಳ್ಳಬಹುದಾಗಿದೆ. AtHome Camera ನಿಮ್ಮ ಹಳೆಯ ಹ್ಯಾಂಡ್‌ಸೆಟ್ ಅನ್ನು ಐಪಿ ಕ್ಯಾಮೆರಾದಂತೆ ಬಳಸಿಕೊಳ್ಳಬಹುದಾಗಿದೆ. ಇಂಟರ್ನೆಟ್ ಮೂಲಕ ಇದರ ಲೈವ್ ಫೀಡ್ ಅನ್ನು ವಿಶ್ವದಲ್ಲಿ ಎಲ್ಲಿದ್ದರೂ ವೀಕ್ಷಿಸಬಹುದಾಗಿದೆ.

#3

#3

ನಿಮ್ಮ ಹಳೆಯ ಐಫೋನ್ ಅನ್ನು ರಿಮೋಟ್ ಕಂಟ್ರೋಲರ್‌ನಂತೆ ಬಳಸಿಕೊಂಡು ರಿಮೋಟ್‌ಗಾಗಿ ನಿಮ್ಮ ಸಹೋದರರೊಂದಿಗೆ ಕಿತ್ತಾಡುವುದಕ್ಕೆ ಅಂತ್ಯ ಹಾಡಬಹುದು. ಆಪಲ್ ಟಿವಿಯಲ್ಲಾದರೆ ನಿಜಕ್ಕೂ ನಿಮ್ಮ ಹಳೆಯ ಐಫೋನ್ ಅನ್ನು ಬಳಸಿ ಸಾಕಷ್ಟನ್ನು ಮಾಡಬಹುದಾಗಿದೆ. ವೈಫೈಗೆ ಇದನ್ನು ಸಂಪರ್ಕಪಡಿಸಿಕೊಂಡು ಸ್ಪೀಕರ್ ನಿಯಂತ್ರಣ, ಮನೆಯ ಲೈಟ್‌ಗಳನ್ನು ನಿಯಂತ್ರಿಸುವುದು ಹೀಗೆ ಸಾಕಷ್ಟು ಕೆಲಸಗಳನ್ನು ನಿರ್ವಹಿಸಿಕೊಳ್ಳಬಹುದು.

#4

#4

ನಿಮ್ಮ ಹಳೆಯ ಐಫೋನ್ ಅನ್ನು ಬಳಸಿಕೊಂಡು ಕಾರಿನ ಮನರಂಜನಾ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಿಕೊಳ್ಳಬಹುದಾಗಿದೆ.

#5

#5

ನಿಮ್ಮ ಹಳೆಯ ಐಫೋನ್ ಅನ್ನು ಬಳಸಿ ಡಿಜಿಟಲ್ ಫೋಟೋ ಫ್ರೇಮ್ ಅನ್ನು ತಯಾರಿಸಿಕೊಳ್ಳಬಹುದಾಗಿದೆ. ನಿಮ್ಮ ಐಫೋನ್ ಅನ್ನು ವೈಫೈಗೆ ಸಂಪರ್ಕಪಡಿಸಲಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಐಕ್ಲೌಡ್ ಖಾತೆಗೆ ಸಿಂಕ್ ಮಾಡಿಕೊಳ್ಳಿ ಮತ್ತೆ ನೋಡಿ ಮ್ಯಾಜಿಕ್.

#6

#6

ಆಪಲ್‌ನ ಬ್ಲ್ಯೂ ಲೈಟ್ ರೆಡ್ಯೂಸಿಂಗ್, ಸ್ಲೀಪ್ ಫ್ರೆಂಡ್ಲಿ ಮೋಡ್‌ ಮೂಲಕ ನಿಮ್ಮ ಹೊಸ ಐಫೋನ್ ನಿಮಗೆ ಸಾಥ್ ನೀಡುತ್ತಿರಬಹುದು. ಹಾಗಿದ್ದರೆ ಹಳೆಯ ಐಫೋನ್ ಅನ್ನು ಅಲರಾಮ್ ಕ್ಲಾಕ್‌ನಂತೆ ಬಳಸಿಕೊಳ್ಳಬಹುದಾಗಿದೆ. Sleep Cycle ನಂತಹ ಅಪ್ಲಿಕೇಶನ್ ಬಳಸಿ ನಿಮ್ಮ ನಿದ್ದೆಯ ಗುಣಮಟ್ಟವನ್ನು ನಿರ್ವಹಿಸಿಕೊಳ್ಳಬಹುದು.

#7

#7

ನಿಮ್ಮ ಹೊಸ ಐಫೋನ್ ಅನ್ನು ಅತಿಯಾಗಿ ಬೈಕ್‌ನಲ್ಲಿ ಬಳಸಿಕೊಳ್ಳುತ್ತೀರಿ ಎಂದಾದಲ್ಲಿ ಅದು ಧೂಳು ಕೊಳೆಯಿಂದ ತುಂಬಿಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಹಳೆಯ ಐಫೋನ್ ಬಳಸಿ ಪ್ರಯಾಣಕ್ಕೆ ದಾರಿಯನ್ನು ಕಂಡುಕೊಳ್ಳಿ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್‌ಗಾಗಿ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ಗಳು</a><br /><a href=ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಉಚಿತ ಕರೆ ವರ್ಗಾವಣೆ: ಬಿಎಸ್ಎನ್ಎಲ್
ಅಂತೂ ಬಿಡುಗಡೆಗೊಂಡ ವಿಶ್ವದ ಅತ್ಯಂತ ದುಬಾರಿ ಫೋನ್ ಸೊಲರಿನ್" title="ಆಂಡ್ರಾಯ್ಡ್‌ಗಾಗಿ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ಗಳು
ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಉಚಿತ ಕರೆ ವರ್ಗಾವಣೆ: ಬಿಎಸ್ಎನ್ಎಲ್
ಅಂತೂ ಬಿಡುಗಡೆಗೊಂಡ ವಿಶ್ವದ ಅತ್ಯಂತ ದುಬಾರಿ ಫೋನ್ ಸೊಲರಿನ್" loading="lazy" width="100" height="56" />ಆಂಡ್ರಾಯ್ಡ್‌ಗಾಗಿ ಅತ್ಯುತ್ತಮ ಸೆಲ್ಫಿ ಅಪ್ಲಿಕೇಶನ್‌ಗಳು
ಮೊಬೈಲ್‌ನಿಂದ ಲ್ಯಾಂಡ್‌ಲೈನ್‌ಗೆ ಉಚಿತ ಕರೆ ವರ್ಗಾವಣೆ: ಬಿಎಸ್ಎನ್ಎಲ್
ಅಂತೂ ಬಿಡುಗಡೆಗೊಂಡ ವಿಶ್ವದ ಅತ್ಯಂತ ದುಬಾರಿ ಫೋನ್ ಸೊಲರಿನ್

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Best Mobiles in India

English summary
Instead of sending this costly bit of kit to the gadget grave in the kitchen cupboard, just remove its SIM card and fill it full of useful apps to give it a new lease of life.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X