Subscribe to Gizbot

ಮೊದಲ ಇಂಟರ್ನೆಟ್ ಟಿವಿ, ಹೈಬ್ರಿಡ್ ಸೆಟಪ್ ಬಾಕ್ಸ್ ಲಾಂಚ್ ಮಾಡಿದ ಏರ್‌ಟೆಲ್ : ಬೆಲೆ ಎಷ್ಟು..? ವಿಶೇಷತೆಗಳೇನು..!!

Written By:

ಇಡೀ ಟಿವಿ ಲೋಕವೇ ರಿಲಯನ್ಸ್ ಮಾಲೀಕತ್ವದ ಜಿಯೋ ನೂತನವಾಗಿ ಲಾಂಚ್ ಮಾಡಲು ಸಿದ್ಧತೆ ನಡೆಸಿರುವ DHT ಕುರಿತು ಚರ್ಚೆಯಲ್ಲಿ ತೊಡಗಿಕೊಂಡಿದ್ದರೆ ಇದೇ ಸಮಯದಲ್ಲಿ ಏರ್‌ಟೆಲ್ ಸೈಲೆಂಟಾಗಿ ಇಂಟರ್ನೆಟ್ ಟಿವಿಯನ್ನು ಲಾಂಚ್ ಮಾಡಿದ್ದು, ಟೆಲಿಕಾಂ ಮಾದರಿಯಲ್ಲಿ ಇಲ್ಲಿಯೂ ಜಿಯೋ ವಿರುದ್ಧ ತನ್ನ ಸ್ಪರ್ಧೆಯನ್ನು ಜಾರಿಯಲ್ಲಿಟ್ಟಿದೆ.

ದೇಶದ ಮೊದಲ ಇಂಟರ್ನೆಟ್ ಟಿವಿ ಲಾಂಚ್ ಮಾಡಿದ ಏರ್‌ಟೆಲ್ : ಬೆಲೆ ಎಷ್ಟು..? ವಿಶೇಷತೆಗ

ಏರ್‌ಟೆಲ್ ಹೈಬ್ರಿಡ್ ಸೆಟಪ್ ಬಾಕ್ಸ್ ಹೊಂದಿರುವ 4K ವಿಡಿಯೋಗಳನ್ನು ಸಪೋರ್ಟ್ ಮಾಡುವ ಏರ್‌ಟೆಲ್ ಇಂಟರ್ನೆಟ್ ಟಿವಿಯನ್ನು ಬುಧವಾರ ಲಾಂಚ್ ಮಾಡಿದೆ. ಇದು ಆನ್‌ಲೈನ್ ಎಂಟರ್ಟೆನ್ ಮೆಂಟ್ ಸೇವೆಗಳನ್ನು ಸ್ಟ್ರೀಮ್ ಮಾಡಲಿದೆ, ಅಲ್ಲದೇ ಇದು ಗೇಮ್‌ಗಳನ್ನು ಡೌನ್‌ಲೋಡ್ ಮಾಡಲಿದ್ದು, ಜೊತೆ ಆಂಡ್ರಾಯ್ ಆಪ್‌ಗಳನ್ನು ಬಳಸಿಕೊಳ್ಳಲು ಸಹಾಯಕಾರಿಯಾಗಿದೆಯಂತೆ.

ಓದಿರಿ: ಆನ್‌ಲೈನ್‌ನಲ್ಲಿ ಪ್ಯಾನ್‌ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡುವುದು ಹೇಗೆ..? ಇಲ್ಲಿದೇ ಸರಳ ವಿಧಾನ.!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಏರ್‌ಟೆಲ್ ನಿಂದ ದೇಶದ ಮೊದಲ ಆಂಡ್ರಾಯ್ಡ್ ಸೆಟೆಪ್‌ ಬಾಕ್ಸ್:

ಏರ್‌ಟೆಲ್ ನಿಂದ ದೇಶದ ಮೊದಲ ಆಂಡ್ರಾಯ್ಡ್ ಸೆಟೆಪ್‌ ಬಾಕ್ಸ್:

ಏರ್‌ಟೆಲ್ ದೇಶದ ಮೊದಲ ಹೈಬ್ರಿಡ್ ಸೆಟಪ್‌ ಬಾಕ್ಸ್ ಬಿಡುಗಡೆ ಮಾಡಿದ್ದು, ಇದು ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಇದರಲ್ಲಿ ನೆಟೆಫಿಕ್ಸ್ ಪ್ರೀಲೋಟೆಡ್ ಆಗಿದ್ದು, ಗ್ರಾಹಕರು ಆನ್‌ಲೈನ್‌ನಲ್ಲಿ ದೊರೆಯುವ ಸಿನಿಮಾ, ಧಾರಾವಾಹಿ ಮುಂದಾದವುಗಳನ್ನು ನೋಡಬಹುದಾಗಿದೆ.

ಏರ್‌ಟೆಲ್‌ ಇಂಟರ್‌ನೆಟ್ ಟಿವಿ ಬೆಲೆ..?

ಏರ್‌ಟೆಲ್‌ ಇಂಟರ್‌ನೆಟ್ ಟಿವಿ ಬೆಲೆ..?

ಸದ್ಯ ಆರಂಭಿಕ ಆಫರ್ ಆಗಿ ಏರ್‌ಟೆಲ್ ಇಂಟರ್ನೆಟ್ ಟಿವಿ ಸೆಟಪ್‌ಬಾಕ್ಸ್ ಬೆಲೆ ರೂ.4,999 ಆಗಿದೆ. ಇದು ಮೂರು ತಿಂಗಳ ಉಚಿತ ಡಿಜಿಟಲ್ ಟಿವಿ ಸಬ್‌ಕ್ರಿಪ್ಷನ್ ಹೊಂದಿರಲಿದೆ. ಏಪ್ರಿಲ್ 12 ರಿಂದ ಆನ್‌ಲೈನ್ ಶಾಪಿಂಗ್ ತಾಣ ಅಮೆಜಾನ್ ನಲ್ಲಿ ಮಾತ್ರ ದೊರೆಯಲಿದೆ. ಇದೇ ಸೆಟಪ್ ಬಾಕ್ಸ್ 7,999 ರೂ.ಗಳಿಗೆ ಲಭ್ಯವಿದ್ದು, ಇದರೊಂದಿಗೆ ಒಂದು ವರ್ಷದ ಉಚಿತ ಡಿಜಿಟಲ್ ಟಿವಿ ಸಬ್‌ಕ್ರಿಪ್ಷನ್ ದೊರೆಯಲಿದೆ.

ಏರ್‌ಟೆಲ್ ಇಂಟರ್ನೆಟ್ ಟಿವಿ ವಿಶೇಷತೆಗಳು:

ಏರ್‌ಟೆಲ್ ಇಂಟರ್ನೆಟ್ ಟಿವಿ ವಿಶೇಷತೆಗಳು:

ಏರ್‌ಟೆಲ್ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ಸೆಟಪ್ ಬಾಕ್ಸ್ ನಲ್ಲಿ 500ಕ್ಕೂ ಹೆಚ್ಚು ಸ್ಯಾಟಿಲೈಟ್ ಟಿವಿ ಚಾನಲ್‌ಗಳು ಪ್ರಸಾರವಾಗಲಿದೆ. ಇದರಲ್ಲಿ ನೆಟ್‌ಫ್ಲಿಕ್ಸ್, ಯೂಟೂಬ್, ಗೂಗಲ್ ಪ್ಲೇ ಗೇಮ್ ಮತ್ತು ಏರ್‌ಟೆಲ್ ಮೂವಿಸ್ ಪ್ರೀಲೋಡೆಡ್ ಆಗಿರಲಿದೆ. ಅಲ್ಲದೇ ಗೂಗಲ್ ಪ್ಲೇ ಸ್ಟೋರ್ ಆಕ್ಸಿಸ್ ಹೊಂದಿದ್ದು, ಆಪ್‌ಗಳನ್ನು, ಗೇಮ್‌ಗಳನ್ನು ಟಿವಿಯಲ್ಲಿ ಆಡಲು ಅವಕಾಶ ಮಾಡಿಕೊಡಲಿದೆ.

ಏರ್‌ಟೆಲ್ ಇಂಟರ್ನೆಟ್ ಟಿವಿಯಲ್ಲಿದೆ ಕ್ರೋಮ್ ಕಾಸ್ಟ್:

ಏರ್‌ಟೆಲ್ ಇಂಟರ್ನೆಟ್ ಟಿವಿಯಲ್ಲಿದೆ ಕ್ರೋಮ್ ಕಾಸ್ಟ್:

ಏರ್‌ಟೆಲ್ ಬಿಡುಗಡೆ ಮಾಡಿರುವ ಆಂಡ್ರಾಯ್ಡ್ ಸೆಟಪ್ ಬಾಕ್ಸ್ ನಲ್ಲಿ ಕ್ರೋಮ್ ಕಾಸ್ಟ್ ಇನ್‌ಬಿಲ್ಟ್ ಆಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ ಅನ್ನ ಬ್ಲೂಟೂಟ್ ಮೂಲಕ ಕನೆಕ್ಟ್ ಮಾಡಿಕೊಳ್ಳುವಂತೆ ಮಾಡಲಿದೆ. ಅಲ್ಲದೇ ರಿಮೋಟ್ ನಲ್ಲಿ ವಾಯ್ಸ್ ಕಮಾಂಡ್ ನೀಡಲು ಇದರಲ್ಲಿ ಅವಕಾಶ ಇದೆ.

4K ವಿಡಿಯೋ ಪ್ಲೇ ಮಾಡುತ್ತದೆ:

4K ವಿಡಿಯೋ ಪ್ಲೇ ಮಾಡುತ್ತದೆ:

ಏರ್‌ಟೆಲ್ ಬಿಡುಗಡೆ ಮಾಡಿರುವ ಇಂಟರ್ನೆಟ್ ಟಿವಿಯಲ್ಲಿ 4K ವಿಡಿಯೋ ಪ್ಲೇ ಆಗುತ್ತದೆ, ಅಲ್ಲದೇ ನೀವು ಶೋಗಳನ್ನು ರೇಕಾರ್ಡ್ ಮತ್ತು ರಿವೈಂಡ್ ಮಾಡಬಹುದಾಗಿದೆ. ಅಲ್ಲದೇ ಎಸ್‌ಡಿ ಕಾರ್ಡ್, ಯುಎಸೆಬಿ ಹಾಕಿಕೊಳ್ಳುವ ಮೂಲಕ ಅವುಗಳನ್ನು ಸೇವ್ ಸಹ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ವೈ-ಫೈ ಕನೆಕ್ಟ್ ಮಾಡಿಕೊಳ್ಳಬಹುದಾಗಿದೆ.

ಏರ್‌ಟೆಲ್ ಇಂಟರ್ನೆಟ್ ಟಿವಿ ಇನ್‌ಸ್ಟಾಲೆಷನ್:

ಏರ್‌ಟೆಲ್ ಇಂಟರ್ನೆಟ್ ಟಿವಿ ಇನ್‌ಸ್ಟಾಲೆಷನ್:

ಏರ್‌ಟೆಲ್ ಇಂಟರ್ನೆಟ್ ಟಿವಿ ಸೆಟಪ್‌ಬಾಕ್ಸ್‌ಗೆ ಇಂಟರ್ನೆಟ್ ಸೇವೆಯ ಅವಶ್ಯಕತೆ ಇದೆ. ಇದಕ್ಕಾಗಿ ಬ್ರಾಡ್ ಬ್ಯಾಂಡ್ ಇಲ್ಲವೇ 4G ಹಾಟ್‌ಸ್ಪಾಟ್ ಅವಶ್ಯಕತೆ ಇದೆ. ಅದುವೇ 4Mbps ವೇಗದ ಇಂಟರ್ನೆಟ್ ಇರಲೇಬೇಕಿದೆ. ಅಲ್ಲದೇ ಇದರೊಂದಿಗೆ ಏರ್‌ಟೆಲ್ ಡಿಜಿಟಲ್ ಟಿವಿಯ ಆಂಟೆನಾ ಸಹ ಅಳವಡಿಸಲಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Airtel on Wednesday launched the Airtel Internet TV, a hybrid set-top box that supports 4K content, streams online entertainment services. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot