ಅಮೇಜಾನ್ ನಲ್ಲಿ ಎಂಐ ವಸ್ತುಗಳಿಗೆ ಭರ್ಜರಿ ಆಫರ್ ನೀಡುವ ಮಾರಾಟ

By Gizbot Bureau
|

ಭಾರತದಲ್ಲಿರುವ ಹೆಚ್ಚಿನ ಗ್ರಾಹಕರನ್ನು ಸೆಳೆಯುತ್ತಿರುವ, ಬಜೆಟ್ ಸ್ನೇಹಿಯಾಗಿರುವ ತನ್ನ ವಸ್ತುಗಳಿಂದ ಎಲ್ಲರಿಗೂ ಅಚ್ಚುಮೆಚ್ಚಾಗುತ್ತಿರುವ ಬ್ರ್ಯಾಂಡ್ ಎಂದರೆ ಅದು ಶಿಯೋಮಿ. ಭಾರತದಲ್ಲಿ ಸಾಕಷ್ಟು ಎಂಐ ಪ್ರೊಡಕ್ಟ್ ಗಳು ಬಿಡುಗಡೆಗೊಂಡಿವೆ. ಸದ್ಯ ಈ ಪ್ರೊಡಕ್ಟ್ ಗಳು ಅಮೇಜಾನ್ ನಲ್ಲಿ ಎಂಐ ಸೇಲ್ ನಲ್ಲಿ ಅತ್ಯಂತ ಆಕರ್ಷಕ ಬೆಲೆಯಲ್ಲಿ ಲಭ್ಯವಾಗುತ್ತಿದೆ. ನವೆಂಬರ್ 5 ರಿಂದ ನವೆಂಬರ್ 10 ರ ವರೆಗೆ ವಿಶೇಷ ಎಂಐ ಪ್ರೊಡಕ್ಟ್ ಗಳ ಮಾರಾಟ ಪ್ರಕ್ರಿಯೆಯು ಅಮೇಜಾನ್ ನಲ್ಲಿ ನಡೆಯಲಿದ್ದು ಭರ್ಜರಿ ಆಫರ್ ಗಳ ಸುರಿಮಳೆಯೇ ಇರಲಿದೆ. ಖಂಡಿತ ನೀವು ಇಂತಹ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

ಇಎಂಐ

ಆಯ್ದ ಕೆಲವು ಕಾರ್ಡ್ ಗಳಿಗೆ ನೋ ಕಾಸ್ಟ್ ಇಎಂಐ ಆಯ್ಕೆ ಇದ್ದು 3,000 ರುಪಾಯಿ ಮೇಲಿನ ಖರೀದಿಗೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. 5% ಇನ್ಸೆಂಟ್ ರಿಯಾಯಿತಿಯು ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ ಸಿಗುತ್ತದೆ,ಜಿಎಸ್ ಟಿ ಇನ್ ವಾಯ್ಸ್ ಬಳಸಿ ಅಂದರೆ ಬ್ಯುಸಿನೆಸ್ ಖರೀದಿಯಲ್ಲಿ 28% ದ ವರೆಗೆ ರಿಯಾಯಿತಿ ಇರುತ್ತದೆ.

ಇದೆಲ್ಲವನ್ನು ಹೊರತು ಪಡಿಸಿ ಏರ್ ಟೆಲ್ ಚಂದಾದಾರರು ಶಿಯೋಮಿ ಪ್ರೊಡಕ್ಟ್ ಗಳನ್ನು ಖರೀದಿಸಿದರೆ 249 ರುಪಾಯಿ ಮತ್ತು 349 ರುಪಾಯಿಯ ಪ್ರಿಪೇಯ್ಡ್ ರೀಚಾರ್ಜ್ ಗಳಿಗೆ ಅರ್ಹತೆ ಪಡೆಯುತ್ತಾರೆ.ಈ ರೀಚಾರ್ಜ್ ಆಫರ್ ಮುಂದಿನ 10 ತಿಂಗಳ ಅವಧಿಗೆ 10 ರೀಚಾರ್ಜ್ ಗಳಿಗೆ ಅವಕಾಶ ನೀಡುತ್ತದೆ.

ರೆಡ್ಮಿ 7ಎ

ರೆಡ್ಮಿ 7ಎ

ಈ ಹ್ಯಾಂಡ್ ಸೆಟ್ ನ 2ಜಿಬಿ RAM ಮತ್ತು 16ಜಿಬಿ ROM ವ್ಯವಸ್ಥೆಯ ವರ್ಷನ್ ನಿಮಗೆ 5,499 ರುಪಾಯಿ ಬೆಲೆಗೆ ಲಭ್ಯವಿದ್ದು 1,000 ರುಪಾಯಿಯನ್ನು ಉಳಿತಾಯ ಮಾಡಬಹುದು. ಇಎಂಐ ಆಯ್ಕೆಯಲ್ಲಿಯೂ ಖರೀದಿಸುವುದಕ್ಕೆ ಅವಕಾಶವಿದ್ದು 259 ರುಪಾಯಿ ಪ್ರಾರಂಭಿಕ ಇಎಂಐ ನಲ್ಲಿ ಖರೀದಿಸಬಹುದು.

ರೆಡ್ಮಿ ವೈ3

ರೆಡ್ಮಿ ವೈ3

ಈ ಡಿವೈಸ್ ಪ್ರಮುಖ ವೈಶಿಷ್ಟ್ಯತೆಯೆಂದರೆ 4,000 mAh ಬ್ಯಾಟರಿ, ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಮತ್ತು 32MP ಸೆಲ್ಫೀ ಕ್ಯಾಮರಾಗಳು. 3,000 ರುಪಾಯಿಯ ರಿಯಾಯಿತಿಯ ನಂತರ ಈ ಫೋನಿನ ಬೆಲೆ 8,999 ರುಪಾಯಿಗಳು. ಇದು HD ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ರೆಡ್ಮಿ ನೋಟ್ 8 ಪ್ರೋ

ರೆಡ್ಮಿ ನೋಟ್ 8 ಪ್ರೋ

ಈ ಹ್ಯಾಂಡ್ ಸೆಟ್ಟಿನ 6ಜಿಬಿ RAM ಮತ್ತು 128ಜಿಬಿ ROM ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು ನೀವು 15,999 ರುಪಾಯಿ ಬೆಲೆಗೆ ಖರೀದಿಸಬಹುದು. ಇಎಂಐ ಆಯ್ಕೆಯಲ್ಲಿಯೂ ಕೂಡ ಲಭ್ಯವಿದ್ದು ಮಾಸಿಕ 753 ರುಪಾಯಿ ಪಾವತಿಸಿ ಖರೀದಿಸಬಹುದು. ಈ ಫೋನಿನ ಪ್ರಮುಖ ವೈಶಿಷ್ಟ್ಯತೆಗಳೆಂದರೆ 4,500 mAh ಬ್ಯಾಟರಿ, 64MP ಎಐ ಕ್ವಾಡ್ ಹಿಂಭಾಗದ ಕ್ಯಾಮರಾ ಮತ್ತು 6.53- ಡಾಟ್ ನಾಚ್ ಹೆಚ್ ಡಿಆರ್ ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ಆರಂಭಿಕ ಇಎಂಐ 612 ರುಪಾಯಿ ಪ್ರತಿ ತಿಂಗಳಿಗೆ ಪಾವತಿಸಿ ನೀವು ಈ ಹ್ಯಾಂಡ್ ಸೆಟ್ ನ್ನು ಅಮೇಜಾನ್ ನಲ್ಲಿ ಖರೀದಿಸಬಹುದು. ಇದರ ಬೆಲೆ 12,999 ರುಪಾಯಿಗಳಾಗಿರುತ್ತದೆ. ಈ ಫೋನ್ 48MP AI ಕ್ವಾಡ್ ಕ್ಯಾಮರಾ ಜೊತೆಗೆ ಪೋಟ್ರೈಟ್, ಅಲ್ಟ್ರಾ ವೈಡ್ ಲೆನ್ಸ್, LED ಫ್ಲ್ಯಾಶ್, ಎಐ ಬೆಂಬಲ, ಮತ್ತು ಬ್ಯೂಟಿಫೈ ಗೆ ಬೆಂಬಲವನ್ನು ನೀಡುತ್ತದೆ.

ಶಿಯೋಮಿ ಎಂಐ ಎ3

ಶಿಯೋಮಿ ಎಂಐ ಎ3

ಈ ಹ್ಯಾಂಡ್ ಸೆಟ್ 12,999 ರುಪಾಯಿ ಬೆಲೆಗೆ ಲಭ್ಯವಿದ್ದು 13% ರಿಯಾಯಿತಿಯನ್ನು ಹೊಂದಿದೆ. ಸ್ಪೋರ್ಟ್ 48+8+2MP ಎಐ ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ ಜೊತೆಗೆ ಪೊಟ್ರೈಟ್ ಮೋಡ್, HDR,ಮತ್ತು PDAF ಗೆ ಬೆಂಬಲ ನೀಡುತ್ತದೆ. ಇದರಲ್ಲಿ 4,030 mAh ಬ್ಯಾಟರಿ ಸಾಮರ್ಥ್ಯವಿದೆ.

ಎಂಐ ಇಯರ್ ಫೋನ್:

ಎಂಐ ಇಯರ್ ಫೋನ್:

ಈ ಇಯರ್ ಫೋನ್ 9 ಘಂಟೆಗಳ ಬ್ಯಾಟರಿ ಲೈಫ್ ನ್ನು ನೀಡುತ್ತದೆ ಮತ್ತು IPX4 ರೇಟೆಡ್ ಆಗಿದೆ. 10mm ಸೌಂಡ್ ಡ್ರೈವರ್ ನೀವು ನಿರೀಕ್ಷಿಸುವ ಶಬ್ದಕ್ಕಿಂತ ಅತ್ಯುತ್ತಮ ಗುಣಮಟ್ಟದ ಶಬ್ಧವನ್ನು ನೀಡಬಲ್ಲದು.ಈ ಇಯರ್ ಫೋನ್ ವಾಯ್ಸ್ ಅಸಿಸ್ಟೆಂಟ್ ಗೂ ಬೆಂಬಲ ನೀಡುತ್ತದೆ.

ಪೋಕೋ ಎಫ್1

ಪೋಕೋ ಎಫ್1

ಈ ಹ್ಯಾಂಡ್ ಸೆಟ್ ನ ಬೆಲೆ 18,999 ರುಪಾಯಿಗಳು. ಈ ಬೆಲೆಗೆ 8ಜಿಬಿ RAM ಮತ್ತು 256ಜಿಬಿ ROM ಆಯ್ಕೆಯ ಫೋನ್ ಸಿಗುತ್ತದೆ. ಇಎಂಐ ಆಯ್ಕೆ ಕೂಡ ಲಭ್ಯವಿದ್ದು ತಿಂಗಳಿಗೆ Rs. 894 ರುಪಾಯಿ ಪಾವತಿಸುವ ಪ್ರಾರಂಭಿಕ ಇಎಂಐನಲ್ಲಿ ಖರೀದಿಸಬಹುದು.

ಎಂಐ ಸೂಪರ್ ಬಾಸ್ ವಯರ್ ಲೆಸ್ ಹೆಡ್ ಫೋನ್ ಗಳು

ಎಂಐ ಸೂಪರ್ ಬಾಸ್ ವಯರ್ ಲೆಸ್ ಹೆಡ್ ಫೋನ್ ಗಳು

ಈ ಹೆಡ್ ಫೋನ್ ಫೋನ್ ಗಳು ಸೂಪರ್ ಪವರ್ ಫುಲ್ ಬಾಸ್ ವ್ಯವಸ್ಥೆ ಹೊಂದಿದೆ. ಬ್ಲೂಟೂತ್ 5, ಮತ್ತು 20 ಘಂಟೆಗಳ ಬ್ಯಾಟರಿ ಲೈಫ್ ನ್ನು ಹೊಂದಿದೆ. ಈ ಆಕ್ಸಸರಿಯು ಕಿವಿಗೆ ಹೆಚ್ಚು ಒತ್ತಡ ಹಾಕದ ಇಯರ್ ಮಫ್ ಗಳನ್ನು ಹೊಂದಿರುತ್ತದೆ. ಮೃದುವಾದ ಮತ್ತು ಹಾಡುಗಳನ್ನು ಕೇಳಿಸಿಕೊಳ್ಳುವುದಕ್ಕೆ ಆಹ್ಲಾದಕರ ಅನುಭವ ನೀಡುವ ವ್ಯವಸ್ಥೆ ಇದರಲ್ಲಿದೆ.

ಶಿಯೋಮಿ ಎಂಐ ಎ2

ಶಿಯೋಮಿ ಎಂಐ ಎ2

ಈ ಹ್ಯಾಂಡ್ ಸೆಟ್ ನ್ನು ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು.ಆರಂಭಿಕ ಇಎಂಐ 894 ರುಪಾಯಿ ಪ್ರತಿ ತಿಂಗಳಿಗೆ ಆಗಿರುತ್ತದೆ. ಇದು 8,950 ರುಪಾಯಿ ಬೆಲೆಗೆ ಕೈಗೆಟುಕಲಿದ್ದು 4ಜಿಬಿ RAM ಮತ್ತು 64ಜಿಬಿ ROM ವ್ಯವಸ್ಥೆಯನ್ನು ಹೊಂದಿದೆ.

Best Mobiles in India

English summary
Mi products covering smartphones and other gadgets are currently available for purchase via Amazon under a scheme called “Mi Days”.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X