ಆಂಡ್ರೊಯಿಡ್ ವೇರ್ 2.0 ಈಗ ಇನ್ನೂ ಹೆಚ್ಚಿನ ಗಡಿಯಾರಗಳನ್ನು ತಟ್ಟಿದೆ

ನಿನ್ನೆಯಷ್ಟೇ ಗೂಗಲ್ ತಮ್ಮ ಆಂಡ್ರೊಯಿಡ್ ವೇರ್ 2.0 ತಡಗೊಳ್ಳುತ್ತಿರುವ ಬಗ್ಗೆ ಧೃಡಪಡಿಸಿದರು. ಉತ್ತಮ ಸ್ಮಾರ್ಟ್‍ವಾಚ್ ಡಿವೈಜ್ ಗಳಲ್ಲಿ ಒಂದಾಗಲು ಆಂಡ್ರೊಯಿಡ್ 2.0 ನ ಅಪ್‍ಗ್ರೇಡೆಡ್ ವರ್ಷನ್ ಬಗ್ ನಿಂದ ನಿಲ್ಲುವ ಹಾಗೆ ಆಗಿದೆ.

ಆಂಡ್ರೊಯಿಡ್ ವೇರ್ 2.0 ಈಗ ಇನ್ನೂ ಹೆಚ್ಚಿನ ಗಡಿಯಾರಗಳನ್ನು ತಟ್ಟಿದೆ

ಕಳೆದ ವರ್ಷ ಮೇ ತಿಂಗಳಿನಲ್ಲಿ ಆಂಡ್ರೊಯಿಡ್ ವೇರ್2.0 ಬಗ್ಗೆ ತಿಳಿಸಿದ್ದರೂ ಸಹ, ಈ ಬಗ್ ಈಗಲೂ ದೊಡ್ಡ ತಲೆನೋವಾಗಿ ಕಂಪನಿಗೆ ಕಾಡುತ್ತಿದೆ. ಕಂಪನಿ ಹೇಳುವ ಹಾಗೆ “ನಾವು ಆಂಡ್ರೊಯಿಡ್ ವೇರ್ 2.0 ಅನ್ನು ಫೊಸಿಲ್ ಕ್ಯು ಫೌಂಡರ್ ಗೆ ಅಪ್‍ಡೇಟ್ ಮಾಡುತ್ತಿದ್ದೇವೆ. ಕ್ಯಾಸಿಯೊ ಸ್ಮಾರ್ಟ್ ಔಟ್‍ಡೋರ್ ವಾಚ್ ಡಬ್ಲ್ಯುಎಸ್‍ಡಿ-ಎಫ್ 10 ಮತ್ತು ಟ್ಯಾಗ್ ಹಿಯುಅರ್ ಕನೆಕ್ಟೆಡ್. ನಾವು ಅಪ್‍ಡೇಟೆಡ್ ಅನ್ನು ಉಳಿದ ಡಿವೈಜ್ ಗಳಿಗೆ ಕೂಡ ಬೇಗನೆ ಸಮಸ್ಯೆ ಪರಿಹರಿಸಿ ಅದರಲ್ಲೂ ಉಪಯೋಗಿಸುವೆವು.”

ಎಲ್‍ಜಿ ವಾಚ್ ಸ್ಪೊರ್ಟ್ ಮತ್ತು ಎಲ್‍ಜಿ ವಾಚ್ ಸ್ಟೈಲ್ ಕೂಡ ಗೂಗಲ್ ನಿಂದ ಬಿಡುಗಡೆಗೊಂಡಿತ್ತು ವೇರ್ 2.0 ಬಿಡುಗಡೆ ಘೋಷಣೆ ಸಮಯದಲ್ಲಿ ಮತ್ತು ಅವುಗಳು ಕೂಡ ಈ ಅಪ್‍ಡೇಟ್ ನಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೇಲೆ ತಿಳಿಸಿದ ಡಿವೈಜ್ ಗಳನ್ನು ಬಿಟ್ಟು ಇನ್ನೂ ಹಲವಾರು ಡಿವೈಜ್ ಗಳು ಆಂಡ್ರೊಯಿಡ್ ವೇರ್ 2.0 ಅನ್ನು ಸಹಕರಿಸುತ್ತಿದ್ದು ಸರದಿಯಲ್ಲಿ ಕಾಯುತ್ತಿವೆ.

ಜಿಯೋ, ಏರಟೆಲ್ ಸೇರಿದಂತೆ ಟೆಲಿಕಾಂಗೆ ಶಾಕ್ ನೀಡಿದ ಮೋದಿ!!

ಅದುವೇ, ಕ್ಯಾಸಿಯೊ ಪ್ರೊ ಟ್ರೆಕ್ ಸ್ಮಾರ್ಟ್, ಆಸಸ್ ಜೆನ್ ವಾಚ್ 2&3, ಎಲ್‍ಜಿ ಜಿ ವಾಚ್ ಆರ್, ಮೈಕೆಲ್ ಕೊರ್ಸ್ ಆಕ್ಸೆಸ್ ಸ್ಮಾರ್ಟ್‍ವಾಚಸ್, ಫೊಸಿಲ್ ಕ್ಯು ವಾಂಡರ್, ಪೊಲಾರ್ ಎಮ್600, ನಿಕ್ಸೊನ್ ಮಿಷನ್ ವiತ್ತು ಹೊಸ ಬ್ಯಾಲೆನ್ಸ್ ರನ್‍ಐಕ್ಯು ಗಳು ಹೊಸ ಸೊಫ್ಟ್‍ವೇರ್ ಗಾಗಿ ಕಾಯುತ್ತಲಿವೆ.

ಅವುಗಳಲ್ಲಿ, 5 ಡಿವೈಜ್ ಗಳು ಈಗಾಗಲೇ ಈ ಅಪ್‍ಡೇಟನ್ನು ತಮ್ಮ ವಾಚ್ ನಲ್ಲಿ ಆರಂಭಿಸಿವೆ. ಅವುಗಳಾವುವೆಂದರೆ ಮೈಕೆಲ್ ಕೊರ್ಸ್ ಆಕ್ಸೆಸ್ ಸ್ಮಾರ್ಟ್‍ವಾಚಸ್, ಫೊಸಿಲ್ ಕ್ಯು ಮಾರ್ಷಲ್, ಫೊಸಿಲ್ ಕ್ಯು ವಾಂಡರ್, ಪೊಲಾರ್ ಎಮ್600 ಮತ್ತು ನಿಕ್ಸೊನ್ ಮಿಷನ್.

ನೋಡಿದ ಹಾಗೆ ಅರ್ಧದಷ್ಟು ಹಳೆ ಗಡಿಯಾರಗಳು ಈ ಅಪ್‍ಡೇಟ್ ಪಡೆಯುತ್ತವೆ. ಉಳಿದ ಡಿವೈಜ್‍ಗಳು ಇನ್ನೂ ಕಾಯಬೇಕಾಗಬಹುದು ಸ್ವಲ್ಪ ಸಮಯದ ಮಟ್ಟಿಗೆ. ಇದು ಒಮ್ಮೆ ಲಭ್ಯವಾದ ಮೇಲೆ ನಿಮಗೆ ಸೂಚನೆ ದೊರೆಯುವುದು. ಇಲ್ಲವಾದಲ್ಲಿ, ನೀವಾಗಿ ಇದನ್ನು ಪರೀಕ್ಷಿಸಬೇಕು ಸ್ಮಾರ್ಟ್‍ಫೋನಿನ ಸೆಟ್ಟಿಂಗ್ಸ್ ಗೆ ಹೋಗಿ.

ಯಾವ ಡಿವೈಜ್ ಈ ಅಪ್‍ಡೇಟ್ ಪಡೆಯುವುದೊ ಅದು ವೇರ್ 2.0 ವಿನ ಎಲ್ಲಾ ಫೀಚರ್ಸ್ ಉಪಯೋಗಿಸಬಹುದು ಉದಾಹರಣೆಗೆ ಗೂಗಲ್ ಅಸಿಸ್ಟೆಂಟ್, ಸುಲಭದ ಇನ್ಸ್‍ಟಂಟ್ ಮೆಸೆಜಿಂಗ್, ಸ್ಮಾರ್ಟ್ ರೆಪ್ಲೈ ಮತ್ತು ನೇರವಾಗಿ ಆಪ್ ಸ್ಟೋರ್ ನಿಂದ ಆಪ್ಸ್ ಡೌನ್‍ಲೊಡ್ ಮಾಡಿಕೊಳ್ಳುವುದು. ಜೊತೆಗೆ ಕೆಲ ಪ್ರಚಲಿತ ಆಪ್ಸ್ ಅದರೊಂದಿಗೆ ಬರಲಿವೆ ಉದಾಹರಣೆಗೆ ಫೇಸ್ಬುಕ್ ಮೆಸೆಂಜರ್, ಗೂಗಲ್ ಹ್ಯಾಂಗೌಟ್ ಮತ್ತು ವಾಟ್ಸಪ್ ಇರಲಿವೆ.

English summary
Five more compatible Android Wear 2.0 devices have already started receiving the update now.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot