ಎಂಟ್ರಿ ಕೊಡಲಿವೆ ಆಪಲ್‌ನ ಸ್ಮಾರ್ಟ್‌ 'ಐಪೊಡ್'ಗಳು.!

|

ಜನಪ್ರಿಯ ಆಪಲ್ ಸಂಸ್ಥೆ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಎಂದರೇ ಸಾಕು ಸ್ಮಾರ್ಟ್‌ ಪ್ರಿಯರೆಲ್ಲರ ಕಣ್ಣು ಆಪಲ್‌ನತ್ತ ಹರಿಬಿಡುತ್ತಾರೆ. ಏಕೆಂದರೆ ಆಪಲ್ ಗುಣಮಟ್ಟ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸಿಸುವುದರೊಂದಿಗೆ ಅತೀ ವಿನೂತನ ಫೀಚರ್ಸ್‌ಗಳನ್ನು ತನ್ನ ಹೊಸ ಉತ್ಪನ್ನಗಳಲ್ಲಿ ನೀಡುತ್ತಾ ಬಂದಿದೆ. ಇದೀಗ ಸ್ಮಾರ್ಟ್‌ ಪ್ರಿಯರು ಮತ್ತೆ ಆಪಲ್‌ನತ್ತ ತಿರುಗಿ ನೋಡುವ ಸಮಯ ಬಂದಿದೆ.

ಎಂಟ್ರಿ ಕೊಡಲಿವೆ ಆಪಲ್‌ನ ಸ್ಮಾರ್ಟ್‌ 'ಐಪೊಡ್'ಗಳು.!

ಹೌದು, ಆಪಲ್ ಸಂಸ್ಥೆ ಶೀಘ್ರದಲ್ಲಿ ಎರಡು ಹೊಸ ಎಂಟ್ರಿ ಲೇವಲ್ ಸ್ಮಾರ್ಟ್‌ ಐಪೊಡ್ ಉತ್ಪನ್ನಗಳನ್ನು ಪರಿಚಯಿಸಲು ತಯಾರಾಗಿದ್ದು, ಐಪೊಡ್ ಮಿನಿ ಮತ್ತು ಐಪೊಡ್ ಮಿನಿ 5 ಹೆಸರಿನಲ್ಲಿ ಈ ಉತ್ಪನ್ನಗಳು ಮಾರುಕಟ್ಟೆಗೆ ಬರಲಿವೆ. ಉತ್ತಮ ಡಿಸ್‌ಪ್ಲೇ ಮತ್ತು ಪ್ರೊಸೆಸರ್ ನಂತಹ ವಿಶೇಷ ಫೀಚರ್‌ಗಳನ್ನು ಒಳಗೊಂಡಿರುವ ಎಂಟ್ರಿ ಲೇವಲ್ ಮಾದರಿಯ ಸ್ಮಾರ್ಟ್‌ ಐಪೊಡ್ ಗಳಾಗಿರಲಿವೆ ಎಂದು ಆಪಲ್ ಕಂಪನಿಯ ವಿಶ್ಲೇಷಕ ಮಿಂಗ್ ಚಿ ಕುವೊ ಅವರು ತಿಳಿಸಿದ್ದಾರೆ. ಹಾಗಾದರೇ 'ಐಪೊಡ್ ಮಿನಿ 5' ಗಳ ಫೀಚರ್‌ಗಳನ್ನು ತಿಳಿಯಲು ಮುಂದೆ ಓದಿ.

ಐಪೊಡ್ ಮಿನಿ 5 ಡಿಸ್‌ಪ್ಲೇ

ಐಪೊಡ್ ಮಿನಿ 5 ಡಿಸ್‌ಪ್ಲೇ

ಆಪಲ್ ಕಂಪನಿಯ ಎಂಟ್ರಿ ಲೆವಲ್ ಮಾದರಿಯ ಈ ಸ್ಮಾರ್ಟ್‌ ಐಪೊಡ್ ಮಿನಿ 7.9 ಇಂಚಿನ ವಿಸೃತ LED ಸ್ಕ್ರೀನ್‌ನೊಂದಿಗೆ 1536x2048 ಪಿಕ್ಸೆಲ್ ಸಾಮರ್ಥ್ಯವನ್ನು ಡಿಸ್‌ಪ್ಲೇ ಹೊಂದಿರಲಿದೆ. ಎನ್ನಲಾಗುತ್ತಿದೆ. ಇದರೊಂದಿಗೆ ಡಿಸ್‌ಪ್ಲೇ ಪಿಕ್ಸಲ್‌ನ ಡೇನ್ಸಿಟಿಯು 324ppi ಆಗಿರಲಿದೆ. ಉತ್ತಮ ಡಿಸ್‌ಪ್ಲೇಯನ್ನು ಹೊಂದಿರುವ ಐಪೊಡ್ ಮಿನಿ 5 ಭಾರಿ ಕಮಾಲ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಪ್ರೊಸೆಸರ್ ಮತ್ತು ಬ್ಯಾಟರಿ

ಪ್ರೊಸೆಸರ್ ಮತ್ತು ಬ್ಯಾಟರಿ

1.84Ghz ಡ್ಯುಯಲ್ ಕೋರ್‌ ಹೊಂದಿರಲಿದ್ದು, ಇದರೊಂದಿಗೆ ಪವರ್‌ ವಿಆರ್‌ GT7600 ಗ್ರಾಫಿಕ್ ಸೌಲಭ್ಯವನ್ನು ಐಮೊಡ್ ಮಿನಿ 5 ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ 2GB RAM ನೀಡಲಾಗಿದೆ ಎನ್ನಲಾಗುತ್ತಿದೆ. ಐಮೊಡ್ ಮಿನಿ 5 ಬ್ಯಾಟರಿ ಸಾಮರ್ಥ್ಯದ ಬಗ್ಗೆ ಕಂಪನಿ ಮಾಹಿತಿ ಲಭ್ಯವಿಲ್ಲ ಆದರೆ ಅತ್ಯುತ್ತಮ ಬಾಳಿಕೆಯ ಬ್ಯಾಟರಿ ನೀಡಲಾಗುವದು ಎನ್ನಲಾಗುತ್ತಿದೆ.

ಕ್ಯಾಮೆರಾ

ಕ್ಯಾಮೆರಾ

ಆಪಲ್ ಐಪೊಡ್ ಮಿನಿ 5 ಎರಡು ಕ್ಯಾಮೆರಾಗಳನ್ನು ಹೊಂದಿರಲಿದ್ದು, ಐಪೊಡ್ ಹಿಂಭಾಗದಲ್ಲಿ 12 ಮೆಗಾಪಿಕ್ಸಲ್ ಸಾಮರ್ಥ್ಯ ಇರುವ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಇನ್ನೂ ಚಿತ್ರಗಳು 4000x3000 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿವೆ ಎನ್ನಲಾಗುತ್ತಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಬಹುನಿರೀಕ್ಷಿತ ಆಪಲ್‌ನ ಐಪೊಡ್ ಮಿನಿ 5 ಈ ವರ್ಷದ ಮೊದಲಾರಂಭದಲ್ಲಿಯೇ ಬಿಡುಗಡೆ ಮಾಡುವುದಾಗಿ ಕಂಪನಿ ತಿಳಿಸಿದೆ. ಮತ್ತು ಇದರ ಬೆಲೆಯು ಸುಮಾರು 40,000ರೂ.ಗಳಿಂದ 45,000ರೂ.ಗಳ ವರೆಗೂ ಇರಬಹುದು ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಮಾರುಕಟ್ಟೆಗೆ ಬರುವ ಮಾಹಿತಿ ಇನ್ನೂ ಲಭ್ಯವಿಲ್ಲ.

Best Mobiles in India

English summary
This year, Apple is reportedly working on launching two new products in the first half of the year itself — an entry-level iPad and an iPad Mini 5.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X