ಆಪಲ್ ಕಂಪೆನಿ ಪರಿಚಯಿಸುತ್ತಿದೆ '18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ' ಚಾರ್ಜರ್!?

|

ಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಸಮೀಪದ ಪ್ರತಿಸ್ಪರ್ಧಿಗಳಿಗಿಂತಲೂ ಯಾವಾಗಲೂ ಒಂದು ಹೆಜ್ಜೆ ಮುಂದಿರುವ ಆಪಲ್ ಕಂಪೆನಿ ಇದೀಗ ನೂತನ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸನ್ನದ್ದವಾಗುತ್ತಿದೆ. ಮುಂಬರುವ ಐಫೋನ್‌ಗಳಿಗೆ ಹೊಸ ಮಾದರಿಯ ಚಾರ್ಜರ್‌ಗಳನ್ನು ಒದಗಿಸಲಿದೆ ಎಂಬ ಮಾಹಿತಿಯನ್ನು ಆಪಲ್ ಮೂಲಗಳು ತಿಳಿಸಿವೆ!

ಪ್ರಸ್ತುತ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿರುವ ಆಪಲ್ ಐಫೋನ್ 8 ಮತ್ತು ಆಪಲ್ ಐಫೋನ್ ಎಕ್ಸ್ ಸ್ಮಾರ್ಟ್‌ಪೋನುಗಳಿಗಿಂತಲೂ ವೇಗವಾಗಿ ಬ್ಯಾಟರಿ ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿರುವ ಹೊಸ ಚಾರ್ಜರ್‌ಗಳನ್ನು ಆಪಲ್ ಅಳವಡಿಸಿಕೊಳ್ಳಲು ಮುಂದಾಗಿದೆ. ಈ ಚಾರ್ಜರ್ ಸಹಾಯದಿಂದ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಬ್ಯಾಟರಿ ಚಾರ್ಜ್‌ ಆಗಲಿದೆ.

ಆಪಲ್ ಕಂಪೆನಿ ಪರಿಚಯಿಸುತ್ತಿದೆ '18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ' ಚಾರ್ಜರ್!?

ಚಾರ್ಜರ್ ಲ್ಯಾಬ್ ಎಂಬ ವೆಬ್‌ಸೈಟ್‌ ಈ ಬಗ್ಗೆ ವರದಿ ಮಾಡಿದ್ದು, ಈ ಹೊಸ ಚಾರ್ಜರ್‌ನಿಂದ ಒಂದು ಗಂಟೆಯೊಳಗೇ ಐಫೋನ್ ಅನ್ನು ಪೂರ್ತಿಯಾಗಿ ಚಾರ್ಜ್‌ ಮಾಡಬಹುದು ಎಂದು ಹೇಳೀದೆ. ಆಪಲ್ ಪರಿಚಯಿಸುತ್ತಿರುವ ಈ ಚಾರ್ಜರ್ 18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ ಲೈಟ್ ನಿಂಗ್ ಫಾಸ್ಟ್‌ ಚಾರ್ಜರ್ ಆಗಿರಲಿದೆ ಎಂದು ಚಾರ್ಜರ್ ಲ್ಯಾಬ್ ವರದಿಯಲ್ಲಿ ತಿಳಿದುಬಂದಿದೆ.

How to use WhatsApp in Kannada - GIZBOT KANNADA

ಸದ್ಯ ಐಫೋನ್ 8, 8 ಪ್ಲಸ್‌ ಮತ್ತು ಐಫೋನ್ ಎಕ್ಸ್‌ ಸ್ಮಾರ್ಟ್‌ಫೋನ್‌ಗಳನ್ನು ಚಾರ್ಜ್‌ ಮಾಡಲು 90 ನಿಮಿಷದಿಂದ 120 ನಿಮಿಷ ಬೇಕು. ಆದರೆ,ಆಪಲ್ ಪರಿಚಯಿಸುತ್ತಿರುವ ಲೈಟ್ ನಿಂಗ್ ಫಾಸ್ಟ್‌ 18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ ಚಾರ್ಜರ್ ಬಳಕೆಗೆ ಬಂದರೆ ಸ್ಮಾರ್ಟ್‌ಫೋನ್‌ಗಳ ಚಾರ್ಜಿಂಗ್ ಅವಧಿ ಒಂದು ಗಂಟೆಗಿಂತಲೂ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

ಆಪಲ್ ಕಂಪೆನಿ ಪರಿಚಯಿಸುತ್ತಿದೆ '18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ' ಚಾರ್ಜರ್!?

ಈಗ ಆಪಲ್ ಕಂಪೆನಿ ನೀಡಿರುವ 5 ವ್ಯಾಟ್ ಚಾರ್ಜರ್‌ಗಿಂತಲೂ ಬಹಳ ಹೆಚ್ಚಿನ ಸಾಮರ್ಥ್ಯವನ್ನು ಲೈಟ್ ನಿಂಗ್ ಫಾಸ್ಟ್‌ 18 ವ್ಯಾಟ್ ಯುಎಸ್‌ಬಿ ಟೈಪ್‌-ಸಿ ಚಾರ್ಜರ್ ಹೊಂದಿರಲಿದೆ. ಯಾವಾಗಲೂ ಹೊಸತನ್ನು ತನ್ನ ಐಫೋನ್‌ಗಳಿಗೆ ಅಳವಡಿಸುತ್ತಲೇ ಇರುವ ಆಪಲ್ ಇದೀಗ ನೂತನ ಚಾರ್ಜರ್ ಮೂಲಕ ತನ್ನ ಗ್ರಾಹಕರ ಮನಸ್ಸನ್ನು ಗೆಲ್ಲಲು ಮುಂದಾಗಿದೆ.

ಓದಿರಿ: ಮೊಬೈಲ್‌ನಲ್ಲಿ ಪೋರ್ನ್ ವೀಕ್ಷಿಸುವವರಿಗೆ ಶಾಕಿಂಗ್ ಸುದ್ದಿ!..ಗಾಬರಿ ಹುಟ್ಟಿಸುತ್ತಿದೆ ವರದಿ!!

Best Mobiles in India

English summary
Apple may finally bundle a more powerful 18-Watt USB-C wall charger with its next generation iPhones due this fall, according a relatively unfamiliar source. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X