ಆ್ಯಪಲ್ ವಾಚ್ 2: ದೊಡ್ಡ ಬ್ಯಾಟರಿ, ತೆಳುವಾದ ಪರದೆ.

|

ಆ್ಯಪಲ್ ಕಂಪನಿಯು 2014ರಲ್ಲೇ ಆ್ಯಪಲ್ ವಾಚನ್ನು ಬಿಡುಗಡೆಗೊಳಿಸಿತು. ಆಗ ಎಲ್ಲರಿಗೂ ಈ ವಾಚಿನ ಬಗ್ಗೆ ಕುತೂಹಲಗಳಿತ್ತು ಮತ್ತು ಆ್ಯಪಲ್ ಕಂಪನಿಯು ತನ್ನದೇ ಸ್ವಂತದ್ದಾದ ವಾಚ್ ಒಎಸ್ ಅನ್ನು ಪರಿಚಯಿಸಿತ್ತು.

ಆ್ಯಪಲ್ ವಾಚ್ 2: ದೊಡ್ಡ ಬ್ಯಾಟರಿ, ತೆಳುವಾದ ಪರದೆ.

ಆ್ಯಪಲ್ ತನ್ನ ಸ್ಮಾರ್ಟ್ ವಾಚನ್ನು ಬಿಡುಗಡೆಗೊಳಿಸಿ ಸರಿಸುಮಾರು 21 ತಿಂಗಳು ಕಳೆದುಹೋಗಿದೆ. ಹೊಸ ವಾಚ್ ಅನ್ನು ಕಂಪನಿ ಬಿಡುಗಡೆಗೊಳಿಸಿರಲಿಲ್ಲ. ಆಗೀಗ ಆ್ಯಪಲ್ ವಾಚ್ 2 ಬಿಡುಗಡೆಯ ಬಗ್ಗೆ ಗಾಳಿಸುದ್ದಿಗಳು ಇದ್ದವಾದರೂ ಯಾವುದೂ ನಿಜವಾಗಿರಲಿಲ್ಲ.
ಓದಿರಿ: ಜಿಯೋ ಬಳಸಿ 2ಜಿ/3ಜಿ ಕರೆಗಳನ್ನು ಮಾಡಬಹುದು! ಹೇಗೆ ಅಂತೀರಾ?

ಆ್ಯಪಲ್ ಈಗ ಸೆಪ್ಟೆಂಬರ್ ಏಳರ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಆಹ್ವಾನ ಪತ್ರಿಕೆಗಳನ್ನು ಕಳುಹಿಸಿದೆ. ಆ್ಯಪಲ್ ಐಫೋನುಗಳ ಜೊತೆಗೆ ಆ್ಯಪಲ್ ವಾಚ್ 2 ಕೂಡ ಬಿಡುಗಡೆಯಾಗಬಹುದೆಂದು ಹೇಳಲಾಗಿದೆ.

ಓದಿರಿ: ಫೋನ್ ಸ್ಕ್ರೀನ್ ಒಡೆದಿದೆಯೇ? ಖರ್ಚಿಲ್ಲದ ಉಪಾಯವೊಂದು ಇಲ್ಲಿದೆ

ಆ್ಯಪಲ್ ವಾಚ್ 2 ಸುದ್ದಿ ಮಾಡುತ್ತಿದೆ. ಅದರ ಗುಣ ವಿಶೇಷತೆಗಳನ್ನಿಲ್ಲಿ ಪಟ್ಟಿ ಮಾಡಿದ್ದೀವಿ. ಒಮ್ಮೆ ಓದಿ ನೋಡಿ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತೆಳುವಾದ ಪರದೆ.

ತೆಳುವಾದ ಪರದೆ.

ಆ್ಯಪಲ್ ಕಂಪನಿಯ ಆ್ಯಕ್ಸೆಸರೀಸ್ ಗಳನ್ನು ಮಾರುವ 'ಬೈಟ್' ಅಂಗಡಿಯಿಂದ ಈ ಸೋರಿಕೆಯಾಗಿದೆ. ನಿನ್ನೆ ದಿನ ಅವರು ಆ್ಯಪಲ್ ವಾಚ್ 2ನ ವಿಶೇಷತೆಗಳನ್ನು ಹೊರಹಾಕಿದ್ದಾರೆ.

ಆ್ಯಪಲ್ ವಾಚ್ 2 ಹಿಂದಿನ ವಾಚಿಗಿಂತ ಕೊಂಚ ತೆಳುವಾದ ಪರದೆಯನ್ನು ಹೊಂದಿರಲಿದೆ. ಆದರೆ ಹಾರ್ಡ್ ವೇರಿನ ಕಾರಣದಿಂದಾಗಿ ಒಟ್ಟಾರೆ ಗಾತ್ರ ಮುಂಚಿನಷ್ಟೇ ಇರಲಿದೆ.

ದೊಡ್ಡ ಬ್ಯಾಟರಿ

ದೊಡ್ಡ ಬ್ಯಾಟರಿ

ಬೈಟ್ ತೋರಿಸುವ ವೀಡಿಯೋದ ಪ್ರಕಾರ, ಆ್ಯಪಲ್ ವಾಚ್ 2ರ ಬ್ಯಾಟರಿ 1.28ವ್ಯಾಟ್ ಅವರ್ಸ್ ಇರಲಿದೆ. ಈ ಮುಂಚಿನ ಗಾಳಿಸುದ್ದಿಗಳು ಇದನ್ನೇ ಹೇಳಿದ್ದವು.

ಸೋರಿಕೆಯಾದ ವೀಡಿಯೋವನ್ನು ನಂಬುವುದಾದರೆ, 42ಎಂಎಂ ಆ್ಯಪಲ್ ವಾಚ್ 2ರಲ್ಲಿ 334 ಎಂ.ಎ.ಹೆಚ್ ಬ್ಯಾಟರಿ ಇರಲಿದೆ. ಇದು ಹಿಂದಿನ ವಾಚಿಗಿಂತ 35.7 ಪರ್ಸೆಂಟೆನಷ್ಟು ಜಾಸ್ತಿ. 38ಎಂಎಂ ಆ್ಯಪಲ್ ವಾಚ್ 2 ಬ್ಯಾಟರಿಯ ಬಗ್ಗೆ ಯಾವುದೇ ಮಾಹಿತಿಯಿಲ್ಲ.

ವೇಗದ ಟಿ.ಎಸ್.ಎಂ.ಸಿ ಬಿಲ್ಟ್ ಪ್ರೊಸೆಸರ್.

ವೇಗದ ಟಿ.ಎಸ್.ಎಂ.ಸಿ ಬಿಲ್ಟ್ ಪ್ರೊಸೆಸರ್.

ಆ್ಯಪಲ್ ವಾಚ್ 2ನಲ್ಲಿ ಆ್ಯಪಲ್ಲಿನ ಹೊಸ ಎಸ್2 ಪ್ರೊಸೆಸರ್ ಇರಲಿದೆ, ಇದು ಟಿ.ಎಸ್.ಎಂ.ಸಿ ಬಿಲ್ಟ್ ಪ್ರೊಸೆಸರ್.

ಅದೇ ವಿನ್ಯಾಸ.

ಅದೇ ವಿನ್ಯಾಸ.

ಐಫೋನ್ 7 ಮತ್ತು ಐಫೋನ್ 7 ಪ್ಲಸ್ ನಂತೆಯೇ ಆ್ಯಪಲ್ ವಾಚ್ 2ರ ವಿನ್ಯಾಸದಲ್ಲೂ ಯಾವುದೇ ಬದಲಾವಣೆಗಳಿಲ್ಲ. ತನ್ನ ಹಿಂದಿನ ವಾಚಿನಂತೆಯೇ ಇದರ ವಿನ್ಯಾಸವೂ ಇರಲಿದೆ, ಆದರೆ ಪರದೆ ಕೊಂಚ ತೆಳುವಾಗಿರಲಿದೆ.

ಉತ್ತಮ ಜಿಯೋಲೊಕೇಷನ್ ಸೌಕರ್ಯ.

ಉತ್ತಮ ಜಿಯೋಲೊಕೇಷನ್ ಸೌಕರ್ಯ.

ಆ್ಯಪಲ್ ವಾಚ್ 2ನಲ್ಲಿ ಆ್ಯಪಲ್ ಕಂಪನಿಯು ಬ್ಯಾರೋಮೀಟರನ್ನು ಅಳವಡಿಸುವ ಸಾಧ್ಯತೆಯಿದೆ. ಜೊತೆಗೆ ಕಂಪನಿಯು ಉತ್ತಮ ಜಿಯೋಲೊಕೇಷನ್ ಗಾಗಿ ಜಿಪಿಎಸ್ ಚಿಪ್ ಅನ್ನು ಮತ್ತಷ್ಟು ಉತ್ತಮಗೊಳಿಸಲಿದೆ.

ಸಿಮ್ ಸೌಕರ್ಯ.

ಸಿಮ್ ಸೌಕರ್ಯ.

ಇದು ಇಲ್ಲಿಯವರೆಗೆ ಬಂದಿರುವ ಗಾಳಿ ಸುದ್ದಿಗಳಲ್ಲಿ ಆಸಕ್ತಿದಾಯಕವಾದುದು. ಆ್ಯಪಲ್ ವಾಚ್ 2ನಲ್ಲಿ ಎಲ್.ಟಿ.ಇ ಸಂಪರ್ಕ ಇರಲಿದೆ. ಆದರೆ ವಿಶ್ಲೇಷಕ ಮಿಂಗ್ ಚಿ ಕುಹೊ ಪ್ರಕಾರ ಆ್ಯಪಲ್ ಅದನ್ನು 2017ರಲ್ಲಿ ಬಿಡುಗಡೆಗೊಲಿಸುತ್ತದೆ. ಆದರೆ ಸ್ಯಾಮ್ಸಂಗ್ ಗೇರ್ ಎಸ್ 3ಯಲ್ಲಿ ಸಿಮ್ ಸೌಕರ್ಯವಿರುವುದರಿಂದ ಆ್ಯಪಲ್ ಕೂಡ ಸಿಮ್ ಸೌಕರ್ಯವನ್ನು ಈಗಲೇ ನೀಡಬಹುದು.

ಬೆಲೆ ಮತ್ತು ಲಭ್ಯತೆ.

ಬೆಲೆ ಮತ್ತು ಲಭ್ಯತೆ.

ಬೆಲೆಯ ಬಗ್ಗೆ ಯಾವುದೇ ಗಾಳಿ ಸುದ್ದಿಗಳಿಲ್ಲ, ಆದರೆ ಆ್ಯಪಲ್ ವಾಚಿನ ಬೆಲೆ $250 - $350ರಷ್ಟಿರಲಿದೆ.

ಸೆಪ್ಟೆಂಬರ್ ಏಳರ ಕಾರ್ಯಕ್ರಮದಲ್ಲಿ ಆ್ಯಪಲ್ ವಾಚ್ 2 ಬಿಡುಗಡೆಯಾದರೆ ಪ್ರಿ ಆರ್ಡರ್ ತಕ್ಷಣವೇ ಪ್ರಾರಂಭವಾಗಲಿದೆ.

Best Mobiles in India

Read more about:
English summary
Apple launched the first generation of Apple Watch back in 2014. Back then, everyone was excited about the new smartwatch from the Cupertino giant and Apple also embedded a new OS called WatchOS of their own into that.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X