Subscribe to Gizbot

ಹೊಸ ಆಪಲ್ ವಾಚ್: ಐಫೋನ್ ಇಲ್ಲದೇ ಕರೆ ಮಾಡಬಹುದು

Written By:

ಆಪಲ್ ನೂತನ ಮೂರು ಐಫೋನ್‌ನೊಂದಿಗೆ ವಾಚ್‌ವೊಂದನ್ನು ಅನ್ನು ಲಾಂಚ್ ಮಾಡಿದ್ದು, ಆಪಲ್ ವಾಚ್ ಸಿರಿಸ್ 3 ಬಿಡುಗಡೆಯಾಗಿದ್ದು, ಐಫೋನ್ 8, ಐಫೋನ್ 8 ಪ್ಲಸ್ ಮತ್ತು ಐಫೋನ್ ‍‍X ನೊಂದಿಗೆ ಕಾಣಿಸಿಕೊಂಡಿದೆ.

ಹೊಸ ಆಪಲ್ ವಾಚ್: ಐಫೋನ್ ಇಲ್ಲದೇ ಕರೆ ಮಾಡಬಹುದು

ಓದಿರಿ: ಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲ

ಆಪಲ್ ವಾಚ್ ಸಿರಿಸ್ 3 ಹಿಂದಿನ ವಾಚ್ ಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದು, ಇದರಲ್ಲಿ ಬಿಲ್ಟ್ ಇನ್ ಸೆಲ್ಯುಲರ್ ಕನೆಕ್ಟ್ವಿಟಿಯನ್ನು ನೀಡಲಾಗಿದ್ದು, ಐಪೋನ್‌ನಿಂದಿಗೆ ಸುಲಭವಾಗಿ ಕನೆಕ್ಟ್ ಆಗಲಿದ ಎನ್ನಲಾಗಿದೆ. ಇದರಲ್ಲಿ GPS ಸಹ ನೀಡಲಾಗಿದ್ದು, ಏರ್‌ಪಾಡ್ ನೊಂದಿಗೆ ಮ್ಯೂಸಿಕ್ ಅನ್ನು ಪ್ಲೇ ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶೇಷತೆಗಳು:

ವಿಶೇಷತೆಗಳು:

ಮೂರನೇ ತಲೆಮಾರಿನ ಆಪಲ್ ವಾಚ್ ಸಿರಿಸ್ 3 ಹಿಂದಿನ ವಾಚ್ ನಷ್ಟೆ ಗಾತ್ರವನ್ನು ಹೊಂದಿದೆ. ಈ ಬಾರಿ ರೆಡ್ ಬಟನ್‌ನೊಂದಿಗೆ ಕಾಣಿಸಿಕೊಮಡಿದೆ. ಇದರಲ್ಲಿ ಮೈಕ್ರೋಫೋನ್ ನಿಡಲಾಗಿದ್ದು, ಇದರಲ್ಲೇ ಕರೆ ಸ್ವೀಕರಿಸುವ ಮತ್ತು ಕರೆ ಮಾಡುವ ಅವಕಾಶವನ್ನು ನೀಡಲಾಗಿದೆ.

ಡ್ಯುಯಲ್ ಕೋರ್ ಪ್ರೋಸೆಸರ್:

ಡ್ಯುಯಲ್ ಕೋರ್ ಪ್ರೋಸೆಸರ್:

ಆಪಲ್ ವಾಚ್ ಸಿರಿಸ್ 3ನಲ್ಲಿ ಡ್ಯುಯಲ್ ಕೋರ್ ಪ್ರೋಸೆಸರ್ ಅನ್ನು ಆಪ್ ಅಳವಡಿಸಿದ್ದು, ಹಿಂದಿನ ವಾಚ್ ಗಳಿಗಿಂತಲೂ 70% ವೇಗದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ 50 % ಹೆಚ್ಚಿನ ಬ್ಯಾಟರಿ ಕ್ಷಮತೆಯನ್ನು ಹೊಂದಿದೆ.

ವಾಚ್‌ನಲ್ಲೂ ಸಿರಿ:

ವಾಚ್‌ನಲ್ಲೂ ಸಿರಿ:

ಇದೇ ಮೊದಲ ಬಾರಿಗೆ ಆಪಲ್ ತನ್ನ ಆಪಲ್ ವಾಚ್ ಸಿರಿಸ್ 3ನಲ್ಲಿ ಸಿಸಿಯನ್ನು ಅಳವಡಿಸಿದೆ. ನೀವು ಐಫೋನ್ ಮಾದರಿಯಲ್ಲಿ ವಾಚ್ ನಲ್ಲಿಯೂ ಆಪಲ್ ನೊಂದಿಗೆ ಮಾತನಾಡಬಹುದಾಗಿದೆ. ಅಲ್ಲದೇ ಇದರಲ್ಲಿ ಬ್ಲೂಟೂತ್ ಕನೆಕ್ಟಿವಿಟಿಯನ್ನು ನೀಡಲಾಗಿದೆ.

ವಾಚ್ OS4:

ವಾಚ್ OS4:

ಆಪಲ್ ವಾಚ್ ಸಿರಿಸ್ 3 ಕಾರ್ಯನಿರ್ವಹಿಸಲು ಆಪಲ್ ವಾಚ್ OS4 ಅನ್ನು ಬಿಡುಗಡೆ ಮಾಡಲಿದ್ದು, ಇದನ್ನು ಸೆಪ್ಟಂಬರ್ 19 ರಂದು ಮುಕ್ತಗೊಳಿಸಲಿದ್ದು, ಇದರಲ್ಲಿ ಸ್ವಿಮರ್ ಗಳಿಗಾಗಿಯೇ ಹೊಸ ಆಯ್ಕೆಯನ್ನು ನೀಡಲಾಗಿದೆ. ಅಲ್ಲದೇ ನಿಮ್ಮ ಹಾರ್ಟ್ ಬಿಟ್ ನೋಡಿಕೊಳ್ಳಬಹುದು.

ಬ್ಯಾಟರಿ:

ಬ್ಯಾಟರಿ:

ಈ ವಾಚ್ LET ಸೇವೆಯನ್ನು ಹೊಂದಿದ್ದು, ಆದರೂ ಸಹ 18 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಇದು ಶಕ್ತವಾಗಿದೆ. ಅಲ್ಲದೇ ಎರಡು ಆವೃತ್ತಿಗಳಲ್ಲಿ ಇದು ದೊರೆಯಲಿದೆ.

ಬೆಲೆ:

ಬೆಲೆ:

ಈ ಬಾರಿ ಆಪಲ್ ವಾಚ್ ಸಿರಿಸ್ 3 ಹೊಸ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದು, ಅಲ್ಯೂಮಿನಿಯಮ್ ಗೋಲ್ಡ್ ಬಣ್ಣದಲ್ಲಿದೆ. ವಾಟ್ಸ್ ಫ್ರೋಫ್ ಆಗಿದೆ. ಸೆಪ್ಟಂಬರ್ 12 ರಂದು ಲಾಂಚ್ ಆಗಲಿದೆ. ಸೆಲ್ಯೂಲರ್ ವಾಚ್ ಬೆಲೆ $399 ಆಗಿದ್ದು, ಸೆಲ್ಯೂಲರ್ ಇಲ್ಲದ ವಾಚ್ ಬೆಲೆ $329 ಆಗಲಿದೆ. ಸೆಪ್ಟೆಂಬರ್ 22 ರಿಂದ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Apple has announced the Watch Series 3 at the ongoing launch event at the Apple Park in California. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot