Subscribe to Gizbot

ಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲ

Written By:

ಆಪಲ್ 10ನೇ ವಾರ್ಷಿಕೋತ್ಸವದ ಅಂಗವಾಗಿ ನಿರೀಕ್ಷೆಯಂತೆ ಅಧಿಕೃತವಾಗಿ ಐಫೋನ್ X ಬಿಡುಗಡೆಯಾಗಿದ್ದು, ಆಪಲ್ ಪಾರ್ಕ್ ನಲ್ಲಿ ಮಡೆದ ಕಾರ್ಯಕ್ರಮದಲ್ಲಿ ಈ ಫೋನ್ ಅನ್ನು ಆಪಲ್ ಲಾಂಚ್ ಮಾಡಿದೆ.

 ಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲ

ಓದಿರಿ: ಆನ್‌ಲೈನಿನಲ್ಲಿ ಆಧಾರ್-ಮೊಬೈಲ್ ನಂಬರ್ ಲಿಂಕ್ ಮಾಡುವ ಬನ್ನಿ: ಇಲ್ಲಿದೇ ಸುಲಭ-ಸಂಫೂರ್ಣ ವಿವರ

ಈ ಐಫೋನ್ X ಅನ್ನು ಅಲ್ಯೂಮಿನಿಯಮ್ ನಿಂದ ಮಾಡಲಾಗಿದ್ದು, ಹಿಂಭಾಗದ ಮತ್ತು ಮುಂಭಾಗ ಎರಡು ಕಡೆಗಳಲ್ಲೂ ಗ್ಲಾಸ್ ಫಿನಿಷಿಂಗ್ ಹೊಂದಿದೆ. ಸ್ಪೇಸ್ ಗ್ರೇ ಮತ್ತು ಸಿಲ್ವರ್ ಬಣ್ಣದಲ್ಲಿ ಮಾತ್ರವೇ ಲಾಂಚ್ ಆಗಿದೆ. ಈ ಫೋನಿನಲ್ಲಿ ನಾವು ಸೂಪರ್ ರೆಟೀನಾ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ X ಡಿಸ್‌ಪ್ಲೇ:

ಐಫೋನ್ X ಡಿಸ್‌ಪ್ಲೇ:

ಆಪಲ್ ಮೊದಲ ಬಾರಿಗೆ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಐಫೋನ್ X ನಲ್ಲಿ ಅಳವಡಿಸಿದ್ದು, ಇದು 5.8 ಇಂಚಿನ ಸ್ಕ್ರಿನ್ ಸೂಪರ್ ರೆಟೀನಾ 2436 x 1125 ಪಿಕ್ಸಲ್ ಗುಣಮಟ್ಟದ್ದಾಗಿದೆ. ಅಲ್ಲದೇ ಎಡ್ಜ್ ಟು ಎಡ್ಜ್ ಡಿಸ್‌ಪ್ಲೆ ಇದಾಗಿದೆ. ಇದು ಉತ್ತಮ ಕಲರ್ ಕ್ಲಾರಿಟಿ ಹಾಗೂ ಟ್ರೂ ಟೋನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ.

ಹಾಡ್‌ವೇರ್:

ಹಾಡ್‌ವೇರ್:

ಆಪಲ್ ಐಫೋನ್ X ಹೊಸ A11 ಬಯೋನಿಕ್ ಪ್ರೋಸೆಸರ್ ಹೊಂದಿದ್ದು, ಇದು ವಿಶ್ವ ಸ್ಮಾರ್ಟ್‌ಫೋನ್‌ಗಳಲ್ಲೇ ಬಳಕೆಯಾಗಿರುವ ಅತೀ ಹೆಚ್ಚಿನ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಆಪಲ್ GPU ಗೇಮಿಂಗ್ ಅನುಭವನ್ನು ಅತ್ಯುತ್ತಮಗೊಳಿಸಿದೆ. ಈ ಪ್ರೋಸೆಸರ್ ಲೋ ಲೈಟ್ ನಲ್ಲಿಯೂ ಪಿಚ್ಚರ್ ಗಳನ್ನು ತೆಗೆಯಲು ಶಕ್ತವಾಗಿದೆ.

ಕ್ಯಾಮೆರಾ:

ಕ್ಯಾಮೆರಾ:

ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಹೊಂದಿದ್ದು, ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ. ಇದೆಲ್ಲಿ ಕ್ಯಾಮೆರಾವನ್ನು ವರ್ಟಿಕರ್ ಆಗಿ ನೀಡಲಾಗಿದೆ. ಅಲ್ಲದೇ ಇದರಲ್ಲಿ ಪೋಟ್ರೇಟ್ ಮೊಡ್ ಅನ್ನು ನೀಡಲಾಗಿದೆ. ಇದರಲ್ಲಿ ನೀವು ಬಣ್ಣಗಳನ್ನು ಬದಲಾಯಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಆಪಲ್‌ನ ಮೊದಲ AR:

ಆಪಲ್‌ನ ಮೊದಲ AR:

ಐಫೋನ್ X ನಲ್ಲಿರುವ ಹಿಂಬದಿಯ ಕ್ಯಾಮೆರಾಗಳು AR ಸಫೋರ್ಟ್ ಮಾಡಲಿದ್ದು, ಮೊಷನ್ ಟ್ರಾಕಿಂಗ್ ಮಾಡಲಿದೆ. ಇದನ್ನು ಆಪಲ್ ಮೊದಲ ಬಾರಿಗೆ ತನ್ನ ಫೋನಿನಲ್ಲಿ ಅಳವಡಿಸಿದೆ. ಅಲ್ಲದೇ ಇದನ್ನು ಲಾಂಚ್ ವೇಳೆಯಲ್ಲಿ ಡೊಮೊ ಸಹ ನೀಡಲಾಗಿತ್ತು.

ಫೇಸ್‌ ಐಡಿ:

ಫೇಸ್‌ ಐಡಿ:

ಐಫೋನ್ X ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಐಫೋನ್ ಅನ್‌ಲಾಕ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ನಿಮ್ಮ ಫೇಸ್ ರಿಡ್ ಆದ ನಂತರದಲ್ಲಿ ನೀವು ಹೆರ್ ಸ್ಟೈಲ್ ಬದಲಾಯಿಸಿದರೂ, ಗಡ್ಡ ಬಿಟ್ಟರು ನಿಮ್ಮನ್ನು ಗುರುತಿಸಲಿದೆ. ಇದಕ್ಕಾಗಿ ಮುಂಭಾಗದಲ್ಲಿ ಸೆಸ್ನಾರ್ ಮತ್ತು ಕ್ಯಾಮೆರಾವನ್ನು ಇಡಲಾಗಿದೆ. ಈ ಪೋನ್ ಹೋಮ್ ಬಟನ್ ಅನ್ನು ಹೊಂದಿಲ್ಲ. ನೀವು ಸ್ಕ್ರಿನ್ ಅನ್ನು ಕೆಳಗಿನಿಂದ ಮೇಲೆ ಮಾಡಿದರೆ ಸಾಕು ತೆರೆದುಕೊಳ್ಳಲಿದೆ.

ಅನ್‌ಮೋಜಿ:

ಅನ್‌ಮೋಜಿ:

ಆಪಲ್ ಹೊಸದಾಗಿ ಎಮೋಜಿಗಳ ಬದಲಾಗಿ ನಿಮ್ಮದೇ ಅನ್‌ಮೋಜಿ ಕ್ರಿಯೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಇದಕ್ಕಾಗಿ ಟ್ರೂ ಡೆಪ್ತ್ ಕ್ಯಾಮೆರಾ ಸಹಾಯ ಮಾಡಲಿದೆ. ನಿಮ್ಮ ಸ್ಟೀಕರ್ ಗಳನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಅದನ್ನು ಸ್ನೇಹಿತರಿಗೆ ಸೆಂಡ್ ಮಾಡಬಹುದಾಗಿದೆ.

ಬ್ಯಾಟರಿ:

ಬ್ಯಾಟರಿ:

ಐಫೋನ್ X ನಲ್ಲಿ ಉತ್ತಮ ಬ್ಯಾಟರಿಯನ್ನು ಅಳವಡಿಸುವುದರೊಂದಿಗೆ ಬಾಳಿಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದಲ್ಲದೇ ಇದು ವೈರ್‌ಲೈಸ್ ಚಾರ್ಜ್ ಸಪೋರ್ಟ್ ಮಾಡಲಿದೆ ಎನ್ನುವ ವಿಚಾರವು ತಿಳಿದುಬಂದಿದೆ.

ಬೆಲೆ:

ಬೆಲೆ:

ಐಫೋನ್ X ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಬೆಲೆ $999 ನಿಂದ ಶುರುವಾಗಲಿದೆ. ಆಕ್ಟೋಬರ್ 27 ರಿಂದ ಪ್ರೀ ಆರ್ಡರ್ ಶುರುವಾಗಲಿದ್ದು, ನಂಬರ್ ರಿಂದ ಮಾರಾಟ ಶುರುವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
The tenth-anniversary edition iPhone dubbed the iPhone X is finally official. Apple just unveiled this new model at the event that was held at the Steve Jobs Theater at Apple Park in Cupertino, California. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot