ಭವಿಷ್ಯದ ಕಾರುಗಳು ಹೇಗಿರಲಿವೆ?..ಏನೆಲ್ಲಾ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಿವೆ ಗೊತ್ತಾ?

  ಸವಾರನೇ ಇಲ್ಲದೇ ಕಾರು ಓಡುವ ತಂತ್ರಜ್ಞಾನ ಅಭಿವೃದ್ದಿಯಾಗುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ಹಾಗೆಯೇ, ವಾಹನದ ಇನ್ಫೊಟೇನ್ಮೆಂಟ್ ಸಿಸ್ಟಂನಲ್ಲಿ ಕೃತಕ ಬುದ್ಧಿಮತ್ತೆಯನ್ನು ಹೇಗೆ ಅಳವಡಿಸಬಹುದು, ಇದನ್ನು ಹೇಗೆ ವೈಯಕ್ತಿಕ ಸಹಾಯಕನಾಗಿಯೂ ಪರಿವರ್ತಿಸಿಕೊಳ್ಳಬಹುದು ಎಂಬುದರ ಕುರಿತು ಸಂಶೋಧನೆ ನಡೆಯುತ್ತಿದೆ.!!

  ಭವಿಷ್ಯದಲ್ಲಿ ಕಾರು ಚಾಲನೆಯ ಭವಿಷ್ಯವನ್ನೇ ಬದಲಾಯಿಸುವಂತಹ ತಂತ್ರಜ್ಞಾನವನ್ನು ನಿಸ್ಸಾನ್ , ಹ್ಯುಂಡೈ ಹಾಗೂ ಮರ್ಸಿಡೆಸ್ ಬೆಂಝ್ ಕಂಪೆನಿಗಳು ತರಲು ಈಗಾಗಲೇ ಯಶಸ್ವಿಯಾಗಿವೆ. ಗೂಗಲ್ ಅಸಿಸ್ಟಂಟ್‌ನಂತೆಯೇ ಕೆಲಸ ನಿರ್ವಹಿಸುವ ಭವಿಷ್ಯದ ಕಾರುಗಳು ಈ ವರ್ಷದ ಒಳಗಾಗಿ ಮಾರುಕಟ್ಟೆಗೆ ಕಾಲಿಡಲಿವೆ.!!

  ಭವಿಷ್ಯದ ಕಾರುಗಳು ಹೇಗಿರಲಿವೆ?..ಏನೆಲ್ಲಾ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಿವೆ?

  ಆಜ್ಞೆಗಳಿಗೆ ಪ್ರತಿಕ್ರಿಯಿಸುವಂತೆ ವಿನ್ಯಾಸಗೊಳಿಸಿರುವುದು ಈ ಎಲ್ಲಾ ಸಾಫ್ಟ್‌ವೇರ್‌ಗಳ ವಿಶೇಷ ಗುಣವಾಗಿದ್ದು, ಹಾಗಾದರೆ, ಭವಿಷ್ಯದ ಕಾರುಗಳು ಹೇಗಿರಲಿವೆ? ಕೃತಕ ಬುದ್ದಿಮತ್ತೆ ಕಾರು ಚಾಲನೆಗೆ ಹೇಗೆ ಸಹಾಯಕವಾಗಲಿದೆ? ಏನೆಲ್ಲಾ ತಂತ್ರಜ್ಞಾನಗಳು ಅಭಿವೃದ್ದಿಯಾಗುತ್ತಿವೆ? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬ್ರೇನ್ ಟು ವೆಹಿಕಲ್ ತಂತ್ರಜ್ಞಾನ

  ಚಾಲಕ ಧರಿಸುವ ಕ್ಯಾಪ್ ಮೂಲಕ ಮೆದುಳಿನ ಕಾರ್ಯವೈಖರಿಯನ್ನು ಅಳೆಯುವ ತಂತ್ರಜ್ಞಾನ ಅಭಿವೃದ್ದಿಯಾಗುತ್ತದೆ. ನಿಸ್ಸಾನ್ ಈ ತಂತ್ರಜ್ಞಾನದಲ್ಲಿ ಮುಂದಿದ್ದು, ಚಾಲಕನ ನಡವಳಿಕೆಯನ್ನು ಊಹಿಸುವ ಈ ತಂತ್ರಜ್ಞಾನ ಚಾಲನೆಯಲ್ಲಿನ ತೊಂದರೆಗಳನ್ನು ಕಂಡುಹಿಡಿಯುವ ಸಾಧನವಾಗಿಯೂ ಬಳಕೆಯಾಗಲಿದೆ.!!

  ಸಂವಹನ ನಡೆಸುವ ಕಾರು

  ಎಲ್ಲಾ ನಿಟ್ಟಿನಿಂದಲೂ ವಾಹನದ ಸಂಪರ್ಕ, ಅಂದರೆ ವೈಫೈ ಹಾಟ್‌ಸ್ಪಾಟ್‌, ರಿಮೋಟ್ ಅನ್‌ಲಾಕಿಂಗ್‌, ಹಾಗೆಯೇ ಲೊಕೇಷನ್ ಸರ್ವೀಸ್‌ಗಳನ್ನು ಹೊಂದುವಂತೆ ಮಾಡುವ ಸಂವಹನ ತಂತ್ರಜ್ಞಾನವನ್ನು ಸೆಲ್ಯುಲರ್ ವೆಹಿಕಲ್ ಟು ಎವ್ರಿಥಿಂಗ್ (ಸಿ-ವಿ2ಎಕ್ಸ್)ಎಂದು ಕರೆಯಲಾಗುತ್ತದೆ. ಫೋರ್ಡ್ ಕಂಪೆನಿ ಈ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ.!!

  ಹ್ಯುಂಡೈನ ಇಂಟೆಲಿಜೆಂಟ್ ಪರ್ಸನಲ್!!

  ಫೋನ್ ಕಾಲ್, ಎಸ್ಎಮ್ಎಸ್, ಮ್ಯಾಪ್, ಹವಾಮಾನ ಗುರುತಿಸುವಿಕೆ, ಶೆಡ್ಯೂಲ್‌ ನಿರ್ವಹಣೆ ಎಲ್ಲವನ್ನೂ ಕಾರಿನಲ್ಲಿ ತರಲು ಹ್ಯುಂಡೈನ ಇಂಟೆಲಿಜೆಂಟ್ ಪರ್ಸನಲ್ ಸಾಧ್ಯವಾಗಲಿದೆ. ಚಾಲಕರಿಗೆ ಧ್ವನಿ ಮೂಲಕ ಎ.ಸಿ, ಸನ್‌ರೂಫ್, ಡೋರ್ ಲಾಕ್‌ಗಳ ನಿಯಂತ್ರಣ ಸಾಧ್ಯವಾಗಲಿದೆ.!!

  ವೈಯಕ್ತಿಕ ಸಹಾಯಕ!!

  ವಾಹನದ ಇನ್ಫೊಟೇನ್ಮೆಂಟ್ ಸಿಸ್ಟಂನಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಸಿ ಚಾಲಕರಿಗೆ ವೈಯಕ್ತಿಕ ಸಹಾಯಕನಾಗಿಯೂ ಈ ತಂತ್ರಜ್ಞಾನ ಬಳಕೆಯಾಗುತ್ತದೆ. ನಾಳೆ ಹವಾಮಾನ ಹೇಗಿರುತ್ತದೆ, ನನಗೆ ಮೀಟಿಂಗ್ ಇರುವುದನ್ನು ನೆನಪಿಸು' ಎಂದು ಹೇಳಿದರೆ ಏಕಕಾಲದಲ್ಲಿ ಅವುಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಕೆಲಸವನ್ನು ಈ ತಂತ್ರಜ್ಞಾನ ಮಾಡಬಲ್ಲದು.!!

  ಇಂಟ್ಯೂಟಿವ್ ಆಪರೇಟಿಂಗ್ ಸಿಸ್ಟಂ!!

  ಮರ್ಸಿಡೆಸ್ ಬೆಂಜ್ ಕೂಡ ಹೊಸ ಇನ್ಫೊಟೇನ್ಮೆಂಟ್ ಇಂಟರ್‌ಫೇಸ್ ಅನ್ನು ತನ್ನ ಕಾಂಪಾಕ್ಟ್ ವಾಹನಗಳಿಗೆ ಬಳಸುತ್ತಿದೆ. ಅದನ್ನೇ ಇಂಟ್ಯೂಟಿವ್ ಆಪರೇಟಿಂಗ್ ಸಿಸ್ಟಂ ಎಂದು ಕರೆದುಕೊಂಡಿದೆ. ಈ ತಂತ್ರಜ್ಞಾನವನ್ನು ಕಾರುಗಳಲ್ಲಿ ಅಳವಡಿಸಿ ಈ ವರ್ಷ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ.!!

  ಮೆದುಳಿನ ತರಂಗಗಳನ್ನು ತಿಳಿಯುವ ತಂತ್ರಜ್ಞಾನ!!

  ಕೃತಕ ಬುದ್ದಿಮತ್ತೆ ಮೆದುಳಿನ ತರಂಗಗಳನ್ನು ತಿಳಿದುಕೊಂಡು ಕಾರಿನ ಕ್ರಿಯೆ ಹಾಗೂ ಚಾಲಕನ ನಿರೀಕ್ಷೆ ಇವೆರಡರ ನಡುವಿನ ಅಂತರವನ್ನು ಕಡಿಮೆಗೊಳಿಸುತ್ತದೆ ಎಂದು ಅಂದಾಜಿಸಲಾಗಿದೆ. ಈ ತಂತ್ರಜ್ಞಾನವನ್ನು ಭವಿಷ್ಯದ ಸ್ವಯಂ ಚಾಲಿತ ಕಾರುಗಳಿಗೆ ಸಹಕಾರವಾಗುವಂತೆಯೂ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Artificial intelligence is taking the automobile industry by storm while all the major automobile players are utilizing their resources and technology to come up with the best. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more