ಅತ್ಯದ್ಬುತ 5 ಗ್ಯಾಜೆಕ್ಟ್ ಅವಿಷ್ಕಾರಗಳು ಇವು!!..ಅತ್ಯದ್ಬುತ ಎನ್ನಲು ಕಾರಣ?

Written By:

ತಂತ್ರಜ್ಞಾನ ಪ್ರಪಂಚದಲ್ಲಿ ಪ್ರತಿದಿನ ಒಂದಲ್ಲ ಒಂದು ಅವಿಷ್ಕಾರಗಳು ನಡೆಯುತ್ತಲೇ ಇರುತ್ತವೆ. ಅಂತಹ ಅವಿಷ್ಕಾರಗಳಲ್ಲಿ ದೊಡ್ಡ ದೊಡ್ಡ ಅವಿಷ್ಕಾರಗಳ ಸುದ್ದಿ ಮತ್ತು ವಿಷಯಗಳು ನಮ್ಮನ್ನು ತಲುಪಿದರೆ ಇನ್ನು ಕೆಲವೊಂದು ಚಿಕ್ಕ ಚಿಕ್ಕ ಅವಿಷ್ಕಾರಗಳು ನಮ್ಮನ್ನು ತಲುಪುವುದಿಲ್ಲ.! ಆದರೆ, ಇವುಗಳ ಉಪಯೋಗ ಬಹಳ ಹೆಚ್ಚಿರುತ್ತದೆ.!!

ಇಂತಹ ಚಿಕ್ಕ ಚಿಕ್ಕ ಅವಿಷ್ಕಾರಗಳು ಕೂಡ ಅದ್ಬುತವಾಗಿರುವುದರಿಂದ ಇವುಗಳ ಪರಿಚಯ ನಮಗೆ ಆಗದಿದ್ದರೆ ಹೇಗೆ? ಹಾಗಾಗಿ, ಇಂದಿನ ಲೇಖನದಲ್ಲಿ ನಿಮಗೆ ಕೆಲವು ಅದ್ಬುತ ಚಿಕ್ಕ ಚಿಕ್ಕ ಅವಿಷ್ಕಾರಗಳನ್ನು ನಿಮಗೆ ಪರಿಚಯಿಸುತ್ತೇವೆ. ಅವುಗಳು ಯಾವುವು? ಅವುಗಳ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫಿಂಗರ್ ರೀಡರ್!!

ಫಿಂಗರ್ ರೀಡರ್!!

ನೀವು ಫಿಂಗರ್ ರೀಡರ್ ಬಳಸಿ ನೀವು ಓದುವ ಪುಟದ ಮೇಲೆ ಕೈ ಇಟ್ಟರೆ ಸಾಕು. ಈ ರೀಡರ್ ಪದಗಳನ್ನು ಸ್ಕ್ಯಾನ್ ಮಾಡಿ ಜೋರಾಗಿ ಹೇಳುತ್ತದೆ. ಅಷ್ಟೇ ಅಲ್ಲದೇ ಇದು ಬಾಷೆಗಳನ್ನು ಅನುವಾದ ಮಾಡುತ್ತದೆ.

ಆಫ್-ಗ್ರೀಡ್ ಮೆಸೇಂಜರ್!!

ಆಫ್-ಗ್ರೀಡ್ ಮೆಸೇಂಜರ್!!

ಈ ಆಫ್-ಗ್ರೀಡ್ ಮೆಸೇಂಜರ್ ಅನ್ನು ನೀವು ಬಳಕೆ ಮಾಡಿಕೊಂಡು ನೀವು ಇದೇ ರೀತಿಯ ಇನ್ನೊಂದು ಸಾಧನಕ್ಕೆ ಸಿಗ್ನಲ್ ಅಥವಾ ವೈ-ಫೈ ಸಹಾಯವಿಲ್ಲದೆ ಸಂದೇಶ ರವಾನಿಸಬಹುದು.!!

ಸ್ಕ್ಯಾನ್ ಮಾಡಿ ಕಲರ್ ಆಯ್ಕೆ ಲೇಖನಿ!!

ಸ್ಕ್ಯಾನ್ ಮಾಡಿ ಕಲರ್ ಆಯ್ಕೆ ಲೇಖನಿ!!

ಪ್ರತಿಯೊಬ್ಬ ಚಿತ್ರಕಲಾ ಕಲೆಗಾರನ ಆಸೆ ಸ್ಕ್ಯಾನ್ ಮಾಡಿ ಕಲರ್ ಆಯ್ಕೆ ಮಾಡಿಕೊಳ್ಳಬಹುದಾದ ಲೇಖನಿ. ಹೌದು, ಈ ಪೆನ್‌ ಮೂಲಕ ನೀವು ಯಾವುದೇ ಕಲರ್ ಅನ್ನು ಸ್ಕ್ಯಾನ್ ಮಾಡಿದರೆ ಆ ಪೆನ್‌ ಮೂಲಕ ಅದೇ ಬಣ್ಣದ ಇಂಕ್ ಹೊರಬರುತ್ತದೆ.!!

ಪೋರ್ಟೆಬಲ್ ಪ್ರಿಂಟರ್!!

ಪೋರ್ಟೆಬಲ್ ಪ್ರಿಂಟರ್!!

ಮೊದಲೆಲ್ಲಾ ಒಂದು ಫೋಟೊ ಪ್ರಿಂಟ್ ತೆಗೆಯಲು ದಿನಗಳೇ ಬೇಕಾಗುತ್ತಿತ್ತು. ಆದರೆ, ಇಸ್ರೇಲ್ ಕಂಪೆನಿ ಜೇಬಿನಲ್ಲಿ ಇಡಬಹುದಾದ ಪ್ರಿಂಟರ್ ಅಭಿವೃದ್ದಿಪಡಿಸಿದ್ದು, ಸ್ಮಾರ್ಟ್‌ಫೋನ್ ಮೂಲಕ ಕೆಲವೇ ಕ್ಷಣದಲ್ಲಿ ಮತ್ತು ಎಲ್ಲಿಯಾದರೂ ಫೋಟೊ ಪ್ರಿಂಟ್ ತೆಗೆಯಬಹುದು.!!

ಸ್ಟಿಕ್ಕರ್‌ಗಳನ್ನು ಅಂಟಿಸಿ ಮತ್ತು ಹುಡುಕಿ |

ಸ್ಟಿಕ್ಕರ್‌ಗಳನ್ನು ಅಂಟಿಸಿ ಮತ್ತು ಹುಡುಕಿ |

ಸ್ಟಿಕ್ ಅಂಡ್ ಫೈಂಡ್ ಕಂಪೆನಿಯಿಂದ ಸಣ್ಣ ಸ್ಟಿಕ್ಕರ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಸ್ಟಿಕರ್‌ಗಳನ್ನು ಯಾವುದೇ ವಸ್ತುಗಳಿಗೆ ಅಂಟಿಸಿ ಸ್ಮಾರ್ಟ್‌ಫೋನ್ ಸಹಾಯದಿಂದ ನೀವು ಅವುಗಳನ್ನು ಪತ್ತೆಹಚ್ಚಬಹುದಾಗಿದೆ.!!

ಓದಿರಿ:ಬಿಟ್‌ಕಾಯಿನ್ ಅಂದರೆ ಏನು?.ಅದರ ಕಾರ್ಯ ಹೇಗೆ?.ಬೆಲೆ ಎಷ್ಟು?..ಇಲ್ಲಿದೆ ಸಂಪೂರ್ಣ ಡೀಟೆಲ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
AWESOME AND COOL gadgets INVENTIONS YOU NEED TO KNOW ABOUT
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot