ಈ ಜನಪ್ರಿಯ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಗೆ ಲಭ್ಯ!

|

ಪ್ರಸ್ತುತ ಸ್ಮಾರ್ಟ್‌ ಡಿವೈಸ್‌ಗಳು ಹೆಚ್ಚು ಅಗತ್ಯ ಮತ್ತು ಅವಶ್ಯ ಎನಿಸಿಕೊಂಡಿವೆ. ಸ್ಮಾರ್ಟ್‌ಫೋನ್ ಜೊತೆಗೆ ಸ್ಮಾರ್ಟ್‌ ವಾಚ್ ಹಾಗೂ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಪ್ರಮುಖ ಮೊಬೈಲ್ ತಯಾರಿಕಾ ಸಂಸ್ಥೆಗಳು ಭಿನ್ನ ಶ್ರೇಣಿಯಲ್ಲಿ ಹಲವು ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳನ್ನು ಪರಿಚಯಿಸಿ ಗ್ರಾಹಕರನ್ನು ಆಕರ್ಷಣೆ ಮಾಡಿವೆ. ಆದರೆ ಬ್ಯಾಂಡ್ ಖರೀದಿಸುವ ಗ್ರಾಹಕರು ಮಾತ್ರ ಅತ್ಯುತ್ತಮ ಫೀಚರ್ಸ್‌ ಒಳಗೊಂಡು, ಬಜೆಟ್‌ ಪ್ರೈಸ್‌ಟ್ಯಾಗ್‌ ಹೊಂದಿರುವ ಡಿವೈಸ್‌ಗಳತ್ತ ಮನಸ್ಸು ಮಾಡುತ್ತಾರೆ.

ಈ ಜನಪ್ರಿಯ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಗೆ ಲಭ್ಯ!

ಹೌದು, ಇಂದಿನ ಬಹುತೇಕ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು, ಹೃದಯ ಬಡಿತ, ಎಸ್‌ಪಿಓ 2 ಸೇರಿದಂತೆ ಇತರೆ ಆರೋಗ್ಯ ಟ್ರಾಕ್ ಮಾಡುವ ಫೀಚರ್ಸ್‌ಗಳನ್ನು ಪಡೆದಿವೆ. ಆಕರ್ಷಕ ಡಿವೈಸ್, ಸ್ಪೋರ್ಟ್ಸ್‌ ಮೋಡ್‌ಗಳನ್ನು ಪಡೆದಿವೆ. ಈ ನಿಟ್ಟಿನಲ್ಲಿ ಒಪ್ಪೊ, ಶಿಯೋಮಿ, ರಿಯಲ್‌ಮಿ, ಹುವಾವೆ ಕಂಪನಿಗಳ ಡಿವೈಸ್‌ಗಳು ಹೆಚ್ಚು ಆಕರ್ಷಕ ಎನಿಸಿಕೊಂಡಿವೆ. ಹಾಗಾದರೇ ಇಂದಿನ ಈ ಲೇಖನದಲ್ಲಿ ಸದ್ಯ ಬಜೆಟ್ ಬೆಲೆಗೆ ಲಭ್ಯ ಇರುವ ಉತ್ತಮ ಫಿಟ್ನೆಸ್‌ ಬ್ಯಾಂಡ್‌ಗಳ ಬಗ್ಗೆ ತಿಳಿಯೋಣ ಬನ್ನಿರಿ.

ಮಿ ಬ್ಯಾಂಡ್‌ 6
ಶಿಯೋಮಿ ಸಂಸ್ಥೆಯ ಹೊಸ ಮಿ ಬ್ಯಾಂಡ್ 6 ಈಗ ಸ್ವಲ್ಪ ದೊಡ್ಡದಾದ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 5 ನಲ್ಲಿ ಕಂಡುಬರುವ 1.1-ಇಂಚಿನ AMOLED ಡಿಸ್‌ಪ್ಲೇ ಬದಲು 1.56-ಇಂಚಿನ ಫುಲ್‌-ಟಚ್‌ AMOLED ಸ್ಕ್ರೀನ್‌ ಅನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 326ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಅಲ್ಲದೆ ಈ ಬ್ಯಾಂಡ್ 30 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡುತ್ತದೆ. ಜೊತೆಗೆ ಹೃದಯ ಬಡಿತ ಮಾನಿಟರ್ ಮತ್ತು SpO2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಜೊತೆಗೆ ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ತಲುಪಿಸಲು ಸಾಧ್ಯವಾಗುತ್ತದೆ ಎಂದು ಶಿಯೋಮಿ ಹೇಳಿಕೊಂಡಿದೆ.

ಈ ಜನಪ್ರಿಯ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಗೆ ಲಭ್ಯ!

ಮಿ ಬ್ಯಾಂಡ್‌ 5
ಮಿ ಸ್ಮಾರ್ಟ್ ಬ್ಯಾಂಡ್ 5 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಸೇರಿದಂತೆ ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ.

ಈ ಜನಪ್ರಿಯ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಬಜೆಟ್‌ ಬೆಲೆಗೆ ಲಭ್ಯ!

ಒನ್‌ಪ್ಲಸ್‌ ಬ್ಯಾಂಡ್
ಒನ್‌ಪ್ಲಸ್ ಬ್ಯಾಂಡ್ ಡಿವೈಸ್‌ 126 x 294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.1-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಮಿ ಬ್ಯಾಂಡ್‌ 5 ಡಿವೈಸ್‌ 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಒನ್‌ಪ್ಲಸ್ ಬ್ಯಾಂಡ್ ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌, ತ್ರೀ-ಆಕ್ಸಿಸ್‌ ಅಕ್ಸಿಲೆರೊಮೀಟರ್‌ ಮತ್ತು ಗೈರೊಸ್ಕೋಪ್ ಮತ್ತು ಆಪ್ಟಿಕಲ್ ಹಾರ್ಟ್‌ ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಒನ್‌ಪ್ಲಸ್‌ ಬ್ಯಾಂಡ್‌ ಇತರ ಫಿಟ್‌ನೆಸ್ ಬ್ಯಾಂಡ್‌ಗಳಂತೆಯೇ, ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ.

ಹುವಾವೇ ಬ್ಯಾಂಡ್ 6
ಹುವಾವೇ ಬ್ಯಾಂಡ್ 6 194x368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.47-ಇಂಚಿನ ಅಮೋಲೆಡ್ ಫುಲ್-ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 64 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಫೋನ್ ಮೂಲಕ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಆದರೆ ಈ ಎರಡೂ ವೈಶಿಷ್ಟ್ಯಗಳು ಆಂಡ್ರಾಯ್ಡ್‌ನಲ್ಲಿ ಮಾತ್ರ ಬೆಂಬಲಿತವಾಗಿದೆ. ಹಾಗೆಯೇ ಈ ಫಿಟ್ನೆಸ್‌ ಬ್ಯಾಂಡ್‌ನಲ್ಲಿ 96 ಕ್ಕೂ ಹೆಚ್ಚು ವರ್ಕೌಟ್‌ ಮೋಡ್‌ಗಳನ್ನು ನೀಡಲಾಗಿದೆ. ಇದರಲ್ಲಿ ರನ್ನಿಂಗ್‌, ಸ್ವಿಮ್ಮಿಂಗ್‌, ಎಲಿಪ್ಟಿಕಲ್, ರೋಯಿಂಗ್, ಟ್ರೆಡ್‌ಮಿಲ್ ಮುಂತಾದ ಮೋಡ್‌ಗಳನ್ನು ನೀಡಲಾಗಿದೆ. ಇದರೊಂದಿಗೆ ಈ ಫಿಟ್‌ನೆಸ್ ಬ್ಯಾಂಡ್ 5ATM (50 ಮೀಟರ್ ವರೆಗೆ) ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದೆ.

Best Mobiles in India

English summary
Best Budget Smart Bands In India 2021.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X