ಪ್ರಮುಖ ದತ್ತಾಂಶ ಸಂಗ್ರಹಕ್ಕೆ 'ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌'ಗಳೇ ಬೆಸ್ಟ್!

|

ಪ್ರಸ್ತುತ ಎಲ್ಲ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯುತ್ತಮ ಆಂತರೀಕ ಸಂಗ್ರಹ ಸಾಮರ್ಥ್ಯದ ನೀಡುತ್ತಿದ್ದರು ಕೆಲವೊಮ್ಮೆ ಇನ್ನೂ ಹೆಚ್ಚಿನ ಆಂತರಿಕ ಸಂಗ್ರಹ ಸಾಮರ್ಥ್ಯದ ಅಗತ್ಯತೆ ಕಂಡು ಬರುತ್ತದೆ. ಅದಕ್ಕಾಗಿ ಎಸ್‌ಡಿ ಕಾರ್ಡ್‌ ಮೂಲಕ ‌ಬಾಹ್ಯ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ಎಸ್‌ಡಿ ಕಾರ್ಡ್‌ನಲ್ಲಿ ಪ್ರಮುಖ ದತ್ತಾಂಶಗಳ ಸಂಗ್ರಹ ಸುರಕ್ಷಿತವಲ್ಲ ಎಂದು ಬಹುತೇಕರು ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ ಬಳಸುತ್ತಾರೆ.

ಪ್ರಮುಖ ದತ್ತಾಂಶ ಸಂಗ್ರಹಕ್ಕೆ 'ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌'ಗಳೇ ಬೆಸ್ಟ್!

ಹೌದು, ಎಸ್‌ಡಿ ಕಾರ್ಡ್‌ನಲ್ಲಿ ಶೇಖರಿಸುವ ಪ್ರಮುಖ ದತ್ತಾಂಶಗಳು ಅನೇಕ ಕಾರಣಗಳಿಗಾಗಿ ನಾಶವಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ನಲ್ಲಿ ದತ್ತಾಂಶಗಳನ್ನು ಸಂಗ್ರಹಿಸಿಡುತ್ತಾರೆ. ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ಗಳು ದತ್ತಾಂಶ ಸಂಗ್ರಹಕ ಸಾಧನವಾಗಳಾಗಿದ್ದು, ವಿವಿಧ ಶೇಖರಣಾ ಸಾಮರ್ಥ್ಯದಲ್ಲಿ ಮತ್ತು ತರಹೇವಾರಿ ಮಾದರಿಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಮುಖ್ಯವಾದ ದತ್ತಾಂಶಗಳನ್ನು ಸಂಗ್ರಹಿಸಿ ಇಡಬಹುದಾಗಿದೆ.

ಪ್ರಮುಖ ದತ್ತಾಂಶ ಸಂಗ್ರಹಕ್ಕೆ 'ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌'ಗಳೇ ಬೆಸ್ಟ್!

ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಶೇಖರಣಾ ಸಾಧನಗಳು ಫೋಟೋ, ಸಿನಿಮಾ, jpg, pdf, word, excell, documents, ಸೇರಿದಂತೆ ಎಲ್ಲ ಮಾದರಿಯ ದತ್ತಾಂಶಗಳನ್ನು ಸುರಕ್ಷಿತವಾಗಿ ಶೇಖರಿಸಬಹುದಾಗಿದೆ. ಹಾರ್ಡ್‌ಡಿಸ್ಕ್‌ಗಳು ಹಗುರವಾಗಿದ್ದು, ನಿಮ್ಮೊಂದಿಗೆ ಕೊಂಡೊಯ್ಯಬಹುದು. ಹಾಗಾದರೇ ನಾವು ಈ ಕೆಳಗೆ ಕೆಲವು 1TB ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ ಸಾಧನಗಳ ಬಗ್ಗೆ ಕಿರು ಮಾಹಿತಿ ನೀಡಲಾಗಿದ್ದು, ಅವುಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

Sony 1 TB External Hard Disk Drive

Sony 1 TB External Hard Disk Drive

ಸೋನಿ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ 1TB ಸಂಗ್ರಹ ಸಾಮರ್ಥ್ಯದಲ್ಲಿದೆ. ರೆಡ್‌, ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ. ಇ ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 3,699ರೂ.ಗಳು ಆಗಿದೆ.

HP 1 TB Wired External Hard Disk Drive.

HP 1 TB Wired External Hard Disk Drive.

ಎಚ್‌ಪಿ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್‌ 1TB ಸಂಗ್ರಹ ಸಾಮರ್ಥ್ಯದಲ್ಲಿದ್ದು, ಗ್ರೇ ಕಲರ್‌ನಲ್ಲಿ ಲಭ್ಯವಿದೆ. ಜನಪ್ರಿಯ ಇ ಕಾಮರ್ಸ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 3,799ರೂ.ಗಳು ಆಗಿದೆ.

Seagate Plus Slim  Hard Disk Drive

Seagate Plus Slim Hard Disk Drive

1TB ಸಂಗ್ರಹ ಸಾಮರ್ಥ್ಯದಲ್ಲಿ ದೊರೆಯುವ ಈ ಹಾರ್ಡ್‌ಡಿಸ್ಕ್‌ ಸಾಧನವು ವಿವಿಧ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಜನಪ್ರಿಯ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 3,999ರೂ.ಗಳು ಆಗಿದೆ.

Toshiba Canvio 1 TB  Hard Disk

Toshiba Canvio 1 TB Hard Disk

ತೊಶಿಬಾ ಕಂಪನಿಯ ಈ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ 1TB ಶೇಕರಣ ಸಾಮರ್ಥ್ಯವನ್ನು ಹೊಂದಿದೆ. ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ. ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 4499ರೂ.ಗಳು ಆಗಿದೆ.

WD 1 TB External Hard Disk Drive

WD 1 TB External Hard Disk Drive


ಈ WD ಕಂಪನಿಯ ಎಕ್ಸ್‌ಟ್ರನಲ್ ಹಾರ್ಡ್‌ಡಿಸ್ಕ್ ಶೇಕರಣಾ ಸಾಮರ್ಥ್ಯವು 1TB ಆಗಿದ್ದು, ಬ್ಲ್ಯಾಕ್ ಕಲರ್‌ನಲ್ಲಿ ಲಭ್ಯವಿದೆ. ಪ್ರಮುಖ ಇ ಕಾಮರ್ಸ್ ಆನ್‌ಲೈನ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಇದರ ದರವು 4500ರೂ.ಗಳು ಆಗಿದೆ.

Best Mobiles in India

English summary
best External Hard Disk Drives.to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X