ಪ್ರೀಮಿಯಂ ಹೆಡ್ ಫೋನ್ ಮತ್ತು ಇಯರ್ ಬಡ್ಸ್ ಗಳು

By Gizbot Bureau
|

ವಯರ್ ಲೆಸ್ ಹೆಡ್ ಫೋನ್ ಗಳು ಮತ್ತು ಇಯರ್ ಫೋನ್ ಗಳ ಟ್ರೆಂಡ್ ಇದೀಗ ಕೆಲವು ಸಮಯದಿಂದ ಆರಂಭವಾಗಿದೆ. ಸ್ಮಾರ್ಟ್ ಫೋನ್ ಬ್ರ್ಯಾಂಡ್ ಗಳು 3.5ಎಂಎಂ ಹೆಡ್ ಫೋನ್ ಜ್ಯಾಕ್ ನ್ನು ಪ್ರಾರಂಭಿಸಿದ ಸಂದರ್ಬದಲ್ಲಿ ಈ ಟ್ರೆಂಡ್ ಶುರುವಾಯಿತು.ವಯರ್ ಲೆಸ್ ಹೆಡ್ ಫೋನ್ ಗಳು ಪೋರ್ಟೇಬಿಲಿಟಿ ವಿಷಯದಲ್ಲಿ ಬಹಳ ಗ್ರೇಟ್ ಅನ್ನಿಸಿಕೊಂಡಿವೆ. ಆದರೆ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಯರ್ ಫೋನ್ ಗಳಲ್ಲಿ ಉತ್ತಮ ಆಡಿಯೋ ಕ್ವಾಲಿಟಿ ಕೊಡುವ ಇಯರ್ ಫೋನ್ ಯಾವುದು ಎಂಬುದನ್ನು ಗುರುತಿಸುವುದು ಬಹಳ ಕಷ್ಟಕರವಾಗಿರುವ ಕೆಲಸವಾಗಿದೆ.

ವಯರ್ ಲೆಸ್ ಹೆಡ್ ಫೋನ್

ನಿಧಾನವಾಗಿ ವಯರ್ ಲೆಸ್ ಹೆಡ್ ಫೋನ್ ಗಳು ನೂತನ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದು ಹೊಸ ಕೆಟಗರಿಯಾಗಿ ಬದಲಾಗಿದೆ ಮತ್ತು ಅದನ್ನು ಟ್ರೂ ವಯರ್ ಲೆಸ್ ಇಯರ್ ಬಡ್ಸ್ ಎಂದು ಕರೆಯಲಾಗುತ್ತದೆ. ಇವುಗಳು ಉತ್ತಮ ಆಡಿಯೋ ಗುಣಮಟ್ಟವನ್ನು ಒದಗಿಸುತ್ತದೆ.

ಭಾರತದಲ್ಲಿ ಲಭ್ಯವಿರುವ ಕೆಲವು ಪ್ರೀಮಿಯಂ ಹೆಡ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಸೆನ್ಹೈಸರ್ ಹೆಚ್ ಡಿ 820 (ಬೆಲೆ: Rs. 189,990)

ಸೆನ್ಹೈಸರ್ ಹೆಚ್ ಡಿ 820 (ಬೆಲೆ: Rs. 189,990)

ಅನುರಣನಗಳನ್ನು ಕಡಿಮೆ ಮಾಡುವ ಅನನ್ಯ ಗಾಜಿನ ಸಂಜ್ಞಾಪರಿವರ್ತಕ ಕವರ್‌ಗಳನ್ನು ಒಳಗೊಂಡಿರುವ ಆಡಿಯೊಫೈಲ್‌ಗಳಿಗಾಗಿ ಉನ್ನತ-ಮಟ್ಟದ ಹೆಡ್‌ಫೋನ್‌ಗಳು ಸೆನ್ಹೈಸರ್ ಹೆಚ್ ಡಿ 820. 360 ಗ್ರಾಂ ತೂಕವಿರುವ ಜಗತ್ತಿನಲ್ಲಿ ಲಭ್ಯವಿರುವ ಟ್ರಾನ್ಸ್ಪರೆಂಟ್ ಸೌಂಡಿಂಗ್ ಇರುವ ಕ್ಲೋಸ್ಡ್ ಹೆಡ್ ಫೋನ್ ಇದಾಗಿದೆ.

ಬ್ಯಾಂಗ್ ಮತ್ತು ಒಲ್ಯುಫ್ಸೆನ್ ಬಿಯೋಪ್ಲೇ ಹೆಚ್6 (ಬೆಲೆ: Rs. 89,640)

ಬ್ಯಾಂಗ್ ಮತ್ತು ಒಲ್ಯುಫ್ಸೆನ್ ಬಿಯೋಪ್ಲೇ ಹೆಚ್6 (ಬೆಲೆ: Rs. 89,640)

ಬ್ಯಾಂಗ್ ಮತ್ತು ಒಲ್ಯುಫ್ಸೆನ್ ಬಿಯೋಪ್ಲೇ ಹೆಚ್6 ಪ್ರೀಮಿಯಂ ಓವರ್ ಇಯರ್ ಹೆಡ್ ಫೋನ್ ಆಗಿದ್ದು ವೆಲ್ ಬ್ಯಾಲೆನ್ಸ್ಡ್ ಮತ್ತು ಅಥೆಂಟಿಕ್ ಸೌಂಡ್ ಅನುಭವವನ್ನು ಇದು ಒದಗಿಸುತ್ತದೆ. ಅತ್ಯುತ್ತಮ ಲುಕ್ ಮತ್ತು ಲಕ್ಸುರಿ ಮೆಟಿರಿಯಲ್ ಗಳನ್ನು ಬಳಸಿ ಇದನ್ನುತಯಾರಿಸಲಾಗಿದೆ. ಅತ್ಯುತ್ತಮ ಕಂಫರ್ಟ್ ಮತ್ತು ಹೊಂದಾಣಿಕೆ ಮಾಡಬಹುದಾದ ಫಿಟ್ ಮತ್ತು ಎರ್ಗೋಮಿಕ್ ಡಿಸೈನ್ ನ್ನು ಇದು ಹೊಂದಿದೆ.

ಸೆನ್ಹೈಸರ್ ಐಇ 60 (ಬೆಲೆ: Rs. 68,490 )

ಸೆನ್ಹೈಸರ್ ಐಇ 60 (ಬೆಲೆ: Rs. 68,490 )

ಸೆನ್ಹೈಸರ್ ಐಇ 60 ನಲ್ಲಿ ಡೈನಾಮಿಕ್ ಡ್ರೈವರ್ಸ್ ಮತ್ತು ಶಕ್ತಿಶಾಲಿಯಾಗಿರುವ ನಿಯೋಡೈನಾಮಿಯಮ್ ಮ್ಯಾಗ್ನೆಟ್ ಇದ್ದು ಅತ್ಯುತ್ತಮ ಗುಣಮಟ್ಟದ ಆಡಿಯೋ ನೀಡುತ್ತದೆ ಮತ್ತು ಸೌಂಡ್ ಔಟ್ ಪುಟ್ ಬಹಳ ಅಧ್ಬುತವಾಗಿರುತ್ತದೆ. ಕಠಿಣವಾದ ಕೇಬಲಿಂಗ್ ಮತ್ತು ಬಾಳಿಕೆ ಬರುವ ವಸತಿಗಳ ಹೊರತಾಗಿಯೂ ದೃಢತೆ ಇರುವಂತೆ ಇದನ್ನು ಡಿಸೈನ್ ಮಾಡಲಾಗಿದೆ.

ಸೋಲ್ ರಿಪಬ್ಲಿಕ್ ಟ್ರ್ಯಾಕ್ಸ್ HD 2 ಫ್ಲೆಕ್ಸ್ ಟೆಕ್ (ಬೆಲೆ: Rs. 64,050)

ಸೋಲ್ ರಿಪಬ್ಲಿಕ್ ಟ್ರ್ಯಾಕ್ಸ್ HD 2 ಫ್ಲೆಕ್ಸ್ ಟೆಕ್ (ಬೆಲೆ: Rs. 64,050)

ಸೋಲ್ ರಿಪಬ್ಲಿಕ್ ಟ್ರ್ಯಾಕ್ಸ್ ಹೆಚ್ ಡಿ 2 ಫ್ಲೆಕ್ಸ್ ಟೆಕ್ ಅಭಿವೃದ್ಧಿ ಪಡಿಸಲಾಗಿರುವ ನಾಯ್ಸ್ ಐಸೋಲೇಷನ್ ಇದ್ದು ನೈಜ ಟ್ರ್ಯಾಕ್ ಗಿಂತ ಹೆಚ್ಚಿನ ನಾಯ್ಸ್ ನ್ನು ಬ್ಲಾಕ್ ಮಾಡುತ್ತದೆ. ಪಂಚಿ ಬಾಸ್ ಮತ್ತು ಗ್ರೇಟ್ ಸೌಂಡ್ ಔಟ್ ಪುಟ್ ನ್ನು ಇದು ಒದಗಿಸುತ್ತದೆ. ದೈನಂದಿನ ಬಳಕೆಗೆ ಅಧ್ಭುತವಾಗಿರುವ ಡಿಸೈನ್ ನ್ನು ಇದರಲ್ಲಿ ಅಳವಡಿಸಲಾಗಿದೆ.

ಸೋನಿ MDR-XB950BT (ಬೆಲೆ: Rs. 62,490)

ಸೋನಿ MDR-XB950BT (ಬೆಲೆ: Rs. 62,490)

ಸೋನಿ MDR-XB950BT ಆಳವಾಗಿರುವ ಮತ್ತು ವೈಬ್ರೇಟಿಂಗ್ ಬಾಸ್ ಔಟ್ ಪುಟ್ ನ್ನು ನೀಡುತ್ತದೆ ಮತ್ತು ಅತ್ಯುತ್ತಮವಾಗಿರುವ ಮ್ಯೂಸಿಕ್ ಕೇಳುವ ಅನುಭವ ಒದಗಿಸುತ್ತದೆ. ಪ್ರೀಮಿಯಂ ಎಕ್ಸ್ಟ್ರಾ ಬಾಸ್ ಔಟ್ ಪುಟ್ ನ್ನು ಇದು ಒದಗಿಸುತ್ತದೆ. ಇದರಲ್ಲಿ ಕಂಟ್ರೋಲ್ ಗಳನ್ನು ರೀಚ್ ಮಾಡುವುದು ಸುಲಭ ಮತ್ತು ಬ್ಲೂಟೂತ್ ಕವರೇಜ್ ಸ್ಟ್ರಾಂಗ್ ಆಗಿದೆ ಮತ್ತು ಇತರೆ ಹಲವು ವಿಶೇಷತೆಗಳನ್ನು ಇದು ಒಳಗೊಂಡಿದೆ.

ಬೇಯರ್ಡೈನಾಮಿಕ್ ಅಮಿರೋನ್ ವೈರ್‌ಲೆಸ್

ಬೇಯರ್ಡೈನಾಮಿಕ್ ಅಮಿರೋನ್ ವೈರ್‌ಲೆಸ್

ಬೇಯರ್ಡೈನಾಮಿಕ್ ಅಮಿರೋನ್ ವೈರ್‌ಲೆಸ್ ಹೆಡ್ ಫೋನ್ ಆಂಡ್ರಾಯ್ಡ್ ಡಿವೈಸ್ ಮತ್ತು ಐಫೋನ್ ಎರಡರಲ್ಲೂ ಕೂಡ ಕಂಪ್ಯಾಟಿಬಲ್ ಆಗಿದೆ. ಇದು 3.5mm ಹೆಡ್ ಫೋನ್ ಜ್ಯಾಕ್ ಜೊತೆಗೆ CTIA ಪಿನ್ ಅಸೈನ್ಮೆಂಟ್ ನ್ನು ಹೊಂದಿದೆ.ಅತ್ಯುಧ್ಬುತ ಬ್ಲೂಟೂತ್ ಟ್ರಾನ್ಸ್ಮಿಷನ್ ಮತ್ತು ಅತ್ಯುಧ್ಬುತ ಟಚ್ ಪ್ಯಾಡ್ ವ್ಯವಸ್ಥೆಯನ್ನು ಹೊಂದಿದೆ.

ಸೆನ್ಹೈಸರ್ ಹೆಚ್ ಡಿ 650 (MRP: Rs. 59,999)

ಸೆನ್ಹೈಸರ್ ಹೆಚ್ ಡಿ 650 (MRP: Rs. 59,999)

ಸೆನ್ಹೈಸರ್ ಹೆಚ್ ಡಿ 650 ತೆರೆದ ಡೈನಾಮಿಕ್ ಹೆಡ್ ಫೋನ್ ಡಿಸೈನ್ ನ್ನು ಹೊಂದಿದ್ದು ಅಭಿವೃದ್ಧಿ ಪಡಿಸಲಾಗಿರುವ ಮೆಟಿರಿಯಲ್ ಗಳನ್ನು ಬಳಸಿ ಹೆಚ್ಚು ಕಾಲ ಬಾಳಿಕೆ ಬರುವಂತೆ ತಯಾರಿಸಲಾಗಿರುತ್ತದೆ. ನೈಸರ್ಗಿಕ ಸೌಂಡ್ ಔಟ್ ಪುಟ್ ಜೊತೆಗೆ ಉತ್ತಮ ಆಡಿಯೋ ಅನುಭವವನ್ನು ಇದು ಒದಗಿಸುತ್ತದೆ.

ಹುವಾಯಿ ಫ್ರೀಬಡ್ಸ್ ಲೈಟ್

ಹುವಾಯಿ ಫ್ರೀಬಡ್ಸ್ ಲೈಟ್

ಹುವಾಯಿ ಫ್ರೀಬಡ್ಸ್ ಲೈಟ್ ಟ್ರೂವಯರ್ ಲೆಸ್ ಇಯರ್ ಬಡ್ಸ್ ಆಗಿದ್ದು ಎರ್ಗೋಮಿಕ್ ಇನ್-ಇಯರ್ ಡಿಸೈನ್ ನ್ನು ಹೊಂದಿದೆ. ಟಚ್ ಕಂಟ್ರೋಲ್ ಇದರಲ್ಲಿದ್ದು 12 ಘಂಟೆಗಳ ಪ್ಲೇ ಬ್ಯಾಕ್ ಸಮಯವನ್ನು ಒದಗಿಸುವ ಭರವಸೆಯನ್ನು ಇದು ನೀಡುತ್ತದೆ. ಮೃದುವಾದ ಆಡಿಯೋ ಅನುಭವವನ್ನು ಬಳಕೆದಾರರಿಗೆ ಇದು ಒದಗಿಸುತ್ತದೆ.

Best Mobiles in India

English summary
To summarize, with the wireless headphones and true wireless earbuds, there is no hindrance of the cable as you take your phone out of your pocket or bag anymore. And, here is a list of premium wireless headphones and earbuds that are available in India now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X