25,000ರೂ. ಒಳಗಿರುವ ಕೆಲವು ಆಕರ್ಷಕ ಸ್ಮಾರ್ಟ್‌ಟಿವಿಗಳು;..ಫೀಚರ್ಸ್‌ ಹೇಗಿವೆ?

|

ತಂತ್ರಜ್ಞಾನ ಹೆಚ್ಚಾದಂತೆ ನಾವು ಬಳಕೆ ಮಾಡುವ ಎಲ್ಲಾ ರೀತಿಯ ಸ್ಮಾರ್ಟ್‌ ಡಿವೈಸ್‌ಗಳು ವಿವಿಧ ರೀತಿಯಲ್ಲಿ ಅಪ್‌ಡೇಟ್ ಆಗಿ ಜನರ ಕೈ ಸೇರುತ್ತಿವೆ. ಅದರಲ್ಲೂ ಇದೀಗ ಸ್ಮಾರ್ಟ್‌ಟಿವಿಗಳು ಹೆಚ್ಚು ಬೇಡಿಕೆಯಲ್ಲಿವೆ. ಹಲವಾರು ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ನೂತನ ಮಾದರಿಯ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆದರೆ 25,000 ರೂ. ಗಳ ಬೆಲೆ ಒಳಗಿರುವ ಕೆಲವು ಸ್ಮಾರ್ಟ್‌ಟಿವಿಗಳು ಆಕರ್ಷಕ ಎನಿಸಿವೆ. ಅವುಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಸ್ಮಾರ್ಟ್‌ಟಿವಿ

ಹೌದು, ಸ್ಮಾರ್ಟ್‌ಟಿವಿ ವಿಭಾಗದಲ್ಲಿ ಕ್ರೋಮಾ, ಅಮೆಜಾನ್‌, ಸ್ಯಾಮ್‌ಸಂಗ್‌, ಒನ್‌ಪ್ಲಸ್‌ ಹಾಗೂ ತೋಷಿಬಾ ,ಮಿ ನಂತಹ ಕಂಪೆನಿಗಳು ಕಡಿಮೆ ಬೆಲೆಯಲ್ಲಿ ಅದರಲ್ಲೂ ಒಳ್ಳೆಯ ಫೀಚರ್ಸ್ ಇರುವ ಸ್ಮಾರ್ಟ್‌ಟಿವಿಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪರಿಚಯಿಸುತ್ತಾ ಬಂದಿವೆ. ನಾವು ಈ ಲೇಖನದಲ್ಲಿ ಕೇವಲ 25,000 ರೂ. ಗಳ ಬೆಲೆ ಒಳಗೆ ಇರುವ ಪ್ರಮುಖ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಟಿವಿಗಳ ಬಗ್ಗೆ ವಿವರಿಸಲಿದ್ದೇವೆ. ಈಗ ನೀವೇನಾದರೂ ಸ್ಮಾರ್ಟ್‌ಟಿವಿ ಕೊಂಡುಕೊಳ್ಳಬೇಕು ಎಂದುಕೊಂಡಿದ್ದರೆ ಈ ಲೇಖನ ನಿಮಗೆ ಸಹಾಯಕವಾಗಲಿದೆ. ಹಾಗಿದ್ರೆ ಬನ್ನಿ ಸ್ಮಾರ್ಟ್‌ಟಿವಿಗಳ ವಿವರವನ್ನು ಪಡೆಯೋಣ.

ಕ್ರೋಮಾ 80 cm HD ಆಂಡ್ರಾಯ್ಡ್ ಸ್ಮಾರ್ಟ್ ಟಿವಿ

ಕ್ರೋಮಾ 80 cm HD ಆಂಡ್ರಾಯ್ಡ್ ಸ್ಮಾರ್ಟ್ ಟಿವಿ

ಈ ಸ್ಮಾರ್ಟ್‌ಟಿವಿ 2022 ರಲ್ಲಿ ಬಿಡುಗಡೆಯಾಗಿದ್ದು, 32 ಇಂಚಿನ ಅಗಲದ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆಯ ಜೊತೆಗೆ 60 Hz ರಿಫ್ರೆಶ್ ದರ ಹೊಂದಿದೆ. 20 Wನ ಶಕ್ತಿಯುತ ಡಾಲ್ಬಿ ಆಡಿಯೋ ಸ್ಪೀಕರ್ ಈ ಸ್ಮಾರ್ಟ್‌ಟಿವಿಯಲ್ಲಿದ್ದು, ಸಿನಿಮಾ ಥಿಯೇಟರ್‌ನ ಅನುಭವವನ್ನು ನೀಡುತ್ತದೆ. ಹಾಗೆಯೇ ಆಡ್ರಾಯ್ಡ್‌ ಓಎಸ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಸ್ಮಾರ್ಟ್‌ಟಿವಿಯಲ್ಲಿ 1GB RAM ಹಾಗೂ 8 GB ಆಂತರಿಕ ಸ್ಟೋರೇಜ್‌ ಇದೆ. ಇದರ ಬೆಲೆ 12.990 ರೂ.ಗಳು.

ಒನ್‌ಪ್ಲಸ್‌ Y ಸೀರಿಸ್ ಸ್ಮಾರ್ಟ್‌ಟಿವಿ

ಒನ್‌ಪ್ಲಸ್‌ Y ಸೀರಿಸ್ ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ 2022 ರಲ್ಲಿ ಬಿಡುಗಡೆಯಾಗಿದ್ದು, 32 ಇಂಚಿನ ಅಗಲದ ಡಿಸ್ಪ್ಲೇ ಮತ್ತು 1366 x 768 ಪಿಕ್ಸೆಲ್‌ ರೆಸಲ್ಯೂಶನ್‌ ಆಯ್ಕೆಯ ಜೊತೆಗೆ 60 Hz ರಿಫ್ರೆಶ್ ದರ ಹೊಂದಿದೆ. 20 Wನ ಶಕ್ತಿಯುತ ಡಾಲ್ಬಿ ಆಡಿಯೋ ಸ್ಪೀಕರ್ ಈ ಸ್ಮಾರ್ಟ್‌ಟಿವಿಯಲ್ಲಿದ್ದು, ಸಿನಿಮಾ ಥಿಯೇಟರ್‌ನ ಅನುಭವವನ್ನು ನೀಡುತ್ತದೆ. ಹಾಗೆಯೇ ಆಡ್ರಾಯ್ಡ್‌ ಓಎಸ್‌ ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಸ್ಮಾರ್ಟ್‌ಟಿವಿಯಲ್ಲಿ 1GB RAM ಹಾಗೂ 8 GB ಆಂತರಿಕ ಸ್ಟೋರೇಜ್‌ ಇದೆ. ಇದರ ಬೆಲೆ 12.990 ರೂ.ಗಳು.

ತೋಷಿಬಾ 108 cm ನ V ಸರಣಿಯ ಸ್ಮಾರ್ಟ್‌ ಟಿವಿ

ತೋಷಿಬಾ 108 cm ನ V ಸರಣಿಯ ಸ್ಮಾರ್ಟ್‌ ಟಿವಿ

ಈ ಸ್ಮಾರ್ಟ್‌ಟಿವಿ ಪೂರ್ಣ ಹೆಚ್‌ಡಿ 1920x1080 ಪಿಕ್ಸೆಲ್‌ನ ರೆಸಲ್ಯೂಶನನ್ನು ಹೊಂದಿದೆ. ಹಾಗೆಯೇ ಇದರ ರಿಫ್ರೆಶ್ ದರ 60 Hz ಆಗಿದೆ. ಈ ಸ್ಮಾರ್ಟ್‌ಟಿವಿ 20W ಶಕ್ತಿಯುತ ಸ್ಟಿರಿಯೊ ಸ್ಪೀಕರ್‌ಗಳ ಮೂಲಕ ಉತ್ತಮ ಆಡಿಯೋ ಅನುಭವ ನೀಡಲಿದೆ. ಇದರಲ್ಲಿ ಡಾಲ್ಬಿ ಆಡಿಯೋ, DTS ವರ್ಚುವಲ್ ವೈಶಿಷ್ಟ್ಯ ಸಹ ಇವೆ. ಪ್ರಮಾಣೀಕೃತ ಆಂಡ್ರಾಯ್ಡ್‌ TV 11 ರಲ್ಲಿ ಕಾರ್ಯನಿರ್ವಹಿಸಲಿದೆ. ಅಷ್ಟೇ ಅಲ್ಲದೆ ಪ್ಲೇ ಸ್ಟೋರ್‌ನಿಂದ 5000+ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ. ಕ್ವಾಡ್ ಕೋರ್ ಪ್ರೊಸೆಸರ್ ಇರುವ ಈ ಸ್ಮಾರ್ಟ್‌ಟಿವಿಯಲ್ಲಿ ಡ್ಯುಯಲ್ ಬ್ಯಾಂಡ್ ವೈ-ಫೈ ಇದೆ. ಇದರಲ್ಲಿ 1GB RAM + 8GB ಸಂಗ್ರಹಣೆ ಸಾಮರ್ಥ್ಯ ಇದ್ದು, ಇದರ ಬೆಲೆ 22,999 ರೂ.ಗಳು.

ಸ್ಯಾಮ್‌ಸಂಗ್‌ 80 cm  ವಂಡರ್ಟೈನ್ಮೆಂಟ್ ಸ್ಮಾರ್ಟ್‌ಟಿವಿ

ಸ್ಯಾಮ್‌ಸಂಗ್‌ 80 cm ವಂಡರ್ಟೈನ್ಮೆಂಟ್ ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ 2021 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಆಗಿದೆ. 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 1366x768 ಪಿಕ್ಸೆಲ್‌ನ ಹೆಚ್‌ಡಿ ರೆಸಲ್ಯೂಶನ್‌ ಜೊತೆಗೆ 60 Hz ರಿಫ್ರೆಶ್ ದರ ಹೊಂದಿದೆ. 20W ಔಟ್‌ಪುಟ್ ನ ಡಾಲ್ಬಿ ಡಿಜಿಟಲ್ ಪ್ಲಸ್ ಸ್ಪೀಕರ್‌ ಆಯ್ಕೆ ಹೊಂದಿದ್ದು, ಇದರಲ್ಲಿ ಪರ್ಸನಲ್ ಕಂಪ್ಯೂಟರ್, ಸ್ಕ್ರೀನ್ ಶೇರ್, ಮ್ಯೂಸಿಕ್ ಸಿಸ್ಟಂ ಮತ್ತು ಕಂಟೆಂಟ್ ಗೈಡ್ ಸೇರಿದಂತೆ ವಿವಿಧ ವೈಶಿಷ್ಟ್ಯದ ಆಯ್ಕೆಗಳಿವೆ. 1.5RAM ನ ಸ್ಟೋರೇಜ್‌ ಸಾಮರ್ಥ್ಯ ಇರುವ ಈ ಸ್ಮಾರ್ಟ್‌ಟಿವಿ ಬೆಲೆ 15,490ರೂ.ಗಳು.

ಅಮೆಜಾನ್‌  ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ

ಅಮೆಜಾನ್‌ ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ

ಅಮೆಜಾನ್‌ ಬೇಸಿಕ್ಸ್‌ ಹೆಚ್‌ಡಿ ರೆಡಿ ಸ್ಮಾರ್ಟ್‌ಟಿವಿ 2020 ರಲ್ಲಿ ಬಿಡುಗಡೆಯಾಗಿದ್ದು, 32 ಇಂಚಿನ ಹೆಚ್‌ಡಿ ಡಿಸ್‌ಪ್ಲೆ ಹೊಂದಿದೆ. 60 Hz ರಿಫ್ರೆಶ್ ದರ ಇದರಲ್ಲಿದೆ. A+ ಗ್ರೇಡ್ ಎಲ್‌ಇಡಿ ಡಿಸ್‌ಪ್ಲೇ ಜೊತೆಗೆ ಅಮ್ಲೋಜಿಕ್ 7 ನೇ ತಲೆಮಾರಿನ ಇಮೇಜಿಂಗ್ ಎಂಜಿನ್ ಹಾಗೂ ಅಲ್ಟ್ರಾ ಬ್ರೈಟ್ ಸ್ಕ್ರೀನ್ ಆಯ್ಕೆ ಇದೆ. 20Wನ ಶಕ್ತಿಯುತ ಸ್ಪೀಕರ್‌ಗಳು ಹಾಗೂ ಡಾಲ್ಬಿ ಆಡಿಯೋ ಮತ್ತು ಡಿಟಿಎಸ್‌ ಟ್ರೂ ಸರೌಂಡ್ ಆಯ್ಕೆ ಇದರಲ್ಲಿದೆ. ವಿಶೇಷ ಪೀಚರ್ಸ್‌ಗಳ ಆಯ್ಕೆಯಲ್ಲಿ ಅಲೆಕ್ಸಾ ವಾಯ್ಸ್‌ ಕಂಟ್ರೋಲ್‌ ನೀಡಲಾಗಿದೆ. ಇದು 1 GB ಯ ಸಾಮರ್ಥ್ಯ ಹೊಂದಿದ್ದು, ಇದರ ಆರಂಭಿಕ ಬೆಲೆ 12,000 ರೂ. ಗಳು.

ಮಿ 5 A ಸರಣಿಯ ಸ್ಮಾರ್ಟ್‌ಟಿವಿ

ಮಿ 5 A ಸರಣಿಯ ಸ್ಮಾರ್ಟ್‌ಟಿವಿ

ಈ ಸ್ಮಾರ್ಟ್‌ಟಿವಿ 2022 ರಲ್ಲಿ ಬಿಡುಗಡೆ ಆಗಿದ್ದು, 32 ಇಂಚಿನ ಸಂಪೂರ್ಣ ಹೆಚ್‌ಡಿ ಡಿಸ್‌ಪ್ಲೇ ಹೊಂದಿದೆ. ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್ಸ್‌ನ್ನು ಈ ಸ್ಮಾರ್ಟ್‌ಟಿವಿ ಒಳಗೊಂಡಿದೆ. 1366 x 768 ಹೆಚ್‌ಡಿ ಪಿಕ್ಸೆಲ್‌ ರೆಸಲ್ಯೂಶನ್ ಹೊಂದಿರುವ ಈ ಸ್ಮಾರ್ಟ್‌ಟಿವಿ 60 Hz ರಿಫ್ರೆಶ್ ದರ ಹೊಂದಿದೆ. ಹಾಗೆಯೇ 20W ಔಟ್‌ಪುಟ್ ಹಾಗೂ ಡಾಲ್ಬಿ ಆಡಿಯೋ, ಡಿಟಿಎಸ್‌ ವರ್ಚುವಲ್ ಆಯ್ಕೆ ಒಳಗೊಂಡಿದೆ. ಇದು ಆಂಡ್ರಾಯ್ಡ್‌ TV 11 ನಲ್ಲಿಕಾರ್ಯನಿರ್ವಹಿಸಲಿದ್ದು, 15+ ಭಾಷೆಗಳ ಆಯ್ಕೆ ಇದೆ. ಹಾಗೆಯೇ ಪ್ಲೇ ಸ್ಟೋರ್‌ನಿಂದ 5000+ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳಬಹುದು. 1GB RAM + 8GB ಸಂಗ್ರಹಣೆ ಯೊಂದಿಗೆ ಇದರ ಬೆಲೆ 13,999 ರೂ. ಗಳು.

Best Mobiles in India

English summary
We are introduce some of the smart TVs available at low prices in India. These will be available for just under 25,000

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X