Subscribe to Gizbot

ಲಿನೊವೊದಿಂದ ಸ್ಮಾರ್ಟ್ ಡಿಸ್ ಪ್ಲೇ ಲಾಂಚ್: ಗೂಗಲ್ ಅಸಿಸ್ಟೆಂಟ್ ನೊಂದಿಗೆ ಲಭ್ಯ..!

Written By: Lekhaka

ಚೀನಾ ಮೂಲದ ಕಂಪ್ಯೂಟರ್ ದೈತ್ಯ ಲಿನೊವೊ CES 2018 ಕಾರ್ಯಕ್ರಮದಲ್ಲಿ ಮನೆಗಳಲ್ಲಿ ಬಳಕೆ ಮಾಡಿಕೊಳ್ಳುವ ಸ್ಮಾರ್ಟ್ ಡಿಸ್ ಪ್ಲೇಯನ್ನು ಲಾಂಚ್ ಮಾಡಿದ್ದು, ಇದರೊಂದಿಗೆ ಗೂಗಲ್ ಅಸಿಸ್ಟೆಂಟ್ ಸಹ ಇದ್ದು ಸ್ಮಾರ್ಟ್ ಆಗಿ ವರ್ಕ್ ಮಾಡಲಿದೆ ಎನ್ನಲಾಗಿದೆ. ಇದರಲ್ಲಿ ಕ್ವಾಲ್ಕಮ್ ಹೋಮ್ ಹಬ್ ಪ್ಲಾಟ್ ಫಾರ್ಮ್ ಅನ್ನು ಕಾಣಬಹುದಾಗಿದೆ.

ಲಿನೊವೊದಿಂದ ಸ್ಮಾರ್ಟ್ ಡಿಸ್ ಪ್ಲೇ ಲಾಂಚ್: ಗೂಗಲ್ ಅಸಿಸ್ಟೆಂಟ್ ನೊಂದಿಗೆ ಲಭ್ಯ..!

ಕ್ವಾಲ್ಕಮ್ SDA 624 ಚಿಪ್ ಸೆಟ್ ಅನ್ನು ಲಿನೊವೊ ಸ್ಮಾರ್ಟ್ ಡಿಸ್ ಪ್ಲೇಯಲ್ಲಿ ಕಾಣಬಹುದಾಗಿದ್ದು, CPU, GPU ಮತ್ತು DSP ಯನ್ನು ಒಳಗೊಂಡಿದ್ದು, ವೈ-ಫೈ ಮತ್ತು ಬ್ಲೂಟೂಟ್ ಕನೆಕ್ಟಿವಿಟಿಯನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೇ ಈ ಸ್ಮಾರ್ಟ್ ಡಿಸ್ ಪ್ಲೇಯಲ್ಲಿ ಗೂಗಲ್ ಡಿಯೋ ವಿಡಿಯೋ ಕಾಲಿಂಗ್ ಸಹ ಮಾಡಬಹುದಾಗಿದೆ.

ಇದಲ್ಲದೇ ಇದರಲ್ಲಿ ಯೂಟ್ಯೂಬ್ ವಿಡಿಯೋಗಳನ್ನು ಪ್ಲೇ ಮಾಡಬಹುದಾಗಿದ್ದು, ಅಲ್ಲದೇ ವಿವಿಧ ಕನೆಕ್ಟೆಡ್ ಡಿವೈಸ್ ಗಳನ್ನು ಕಂಟ್ರೋಲ್ ಸಹ ಮಾಡಬಹುದಾಗಿದೆ. ಅಲ್ಲದೇ ಇದರಲ್ಲಿ ನಿಮ್ಮ ವಾಯ್ಸ್ ಕಮೆಂಡ್ ಅನ್ನು ಪಾಲಿಸುವ ಗೂಗಲ್ ಅಸಿಸ್ಟೆಂಟ್ ಅನ್ನು ಸಹ ಕಾಣಬಹುದಾಗಿದೆ.

ಇದಲ್ಲದೇ ನಿಮ್ಮ ಮನೆಯಲ್ಲಿ ಇರುವ ಸ್ಮಾರ್ಟ್ ಹೋಮ್ ಡಿವೈಸ್ ಗಳನ್ನು ಇದರೊಂದಿಗೆ ಕನೆಕ್ಟ್ ಮಾಡಿ ಅವುಗಳನ್ನು ವಾಯ್ಸ್ ಕಮೆಂಡಿಗ್ ಇಲ್ಲವೇ ಟಚ್ ಬಟನ್ ನಿಂದ ನಿರ್ವಹಿಸಬಹುದಾಗಿದೆ. ಅಲ್ಲದೇ ಸ್ಮಾರ್ಟ್ ಲೈಟ್ ಗಳನ್ನು ಇದರಿಂದಲೇ ನಿಯಂತ್ರಿಸಬಹುದಾಗಿದೆ.

How to create two accounts in one Telegram app (KANNADA)

ಈ ಫೋನಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಕಾಣಿಸುವುದೇ ಇಲ್ಲ.!

ಒಟ್ಟು ಎರಡು ಮಾದರಿಯಲ್ಲಿ ಈ ಸ್ಮಾರ್ಟ್ ಡಿಸ್ ಪ್ಲೇ ಕಾಣಿಸಿಕೊಳ್ಳಲಿದ್ದು, 10 ಇಂಚಿನ ಡಿಸ್ ಪ್ಲೇ ಬೆಲೆ $ 249.99 ಆಗಲಿದ್ದು, ಇದೇ ಮಾದರಿಯಲ್ಲಿ 8 ಇಂಚಿನ ಸ್ಮಾರ್ಟ್ ಡಿಸ್ ಪ್ಲೇ ಬೆಲೆ $ 199.99 ಆಗಲಿದೆ. ಶೀಘ್ರವೇ ಈ ಸ್ಮಾರ್ಟ್ ಡಿಸ್ ಪ್ಲೇ ಭಾರತೀಯ ಮಾರುಕಟ್ಟೆಯಲ್ಲಿ ದೊರೆಯಲಿದೆ.

English summary
The device can also be used as video calling through Google Duo, watching videos on YouTube, managing your connected devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot