'ಫಿಟ್ನೆಸ್‌ ಟ್ರಾಕರ್' ಖರೀದಿಸುವಾಗ ಈ ಅಂಶಗಳನ್ನು ಮರೆಯದೆ ಗಮನಿಸಿ!

|

ಸ್ಮಾರ್ಟ್‌ಫೋನ್‌ನಂತೆಯೇ ಇದೀಗ ಸ್ಮಾರ್ಟ್ ವಾಚ್‌ ಮತ್ತು ಫಿಟ್ನೆಸ್‌ ಟ್ರಾಕರ್‌ಗಳು ಅಗತ್ಯ ಸ್ಥಾನ ಪಡೆದುಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ತರಹೇವಾರಿ ಫಿಟ್ನೆಸ್‌ ಡಿವೈಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದು, ಆ ಪೈಕಿ ಹಲವು ಡಿವೈಸ್‌ಗಳು ಗ್ರಾಹಕರನ್ನು ಆಕರ್ಷಿಸುತ್ತವೆ ಮತ್ತು ಇನ್ನು ಕೆಲವು ಯಾವುದೇ ಸದ್ದು ಇಲ್ಲದೇ ಹಿಂದೆ ಸರಿಯುತ್ತವೆ. ಆದರೆ ಫಿಟ್ನೆಸ್‌ ಖರೀದಿಸುವ ಗ್ರಾಹಕರಲ್ಲಿ ಯಾವ ಫಿಟ್ನೆಸ್‌ ಟ್ರಾಕರ್‌ ಖರೀದಿಸಬೇಕು ಎನ್ನುವ ಗೊಂದಲ ಉಳಿದಿರುತ್ತದೆ.

'ಫಿಟ್ನೆಸ್‌ ಟ್ರಾಕರ್' ಖರೀದಿಸುವಾಗ ಈ ಅಂಶಗಳನ್ನು ಮರೆಯದೆ ಗಮನಿಸಿ!

ಹೌದು, ಸದ್ಯ ಮಾರುಕಟ್ಟೆಗೆ ವೆರೈಟಿ ಫಿಟ್ನೆಸ್‌ ಟ್ರಾಕರ್‌ಗಳು ಪರಿಚಯವಾಗಿದ್ದರೂ, ಬಹುತೇಕರು ಬಜೆಟ್‌ ಬೆಲೆಯಲ್ಲಿ ಲಾಂಚ್ ಆಗುವ ಡಿವೈಸ್‌ಗಳತ್ತ ಹೆಚ್ಚು ವಾಲುತ್ತಾರೆ. ಖರೀದಿಸುವ ಡಿವೈಸ್‌ನಲ್ಲಿ ಅಗತ್ಯವಿರುವ ಫೀಚರ್ಸ್‌ಗಳು ಇವೆಯಾ ಎಂಬುದನ್ನು ಗಮನಿಸುವುದು ಮುಖ್ಯವಾಗಿರುತ್ತದೆ. ಹಾಗಾದರೇ ಫಿಟ್ನೆಸ್‌ ಟ್ರಾಕರ್ ಖರೀದಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

<strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!</strong>ಓದಿರಿ : ಶಿಯೋಮಿ ಇಂಥ ಅಚ್ಚರಿ ನೀಡಲಿದೆ ಎಂದು ಬಹುಶಃ ಯಾರು ಊಹಿಸಿರಲಿಲ್ಲ!

ಖರೀದಿಸುವ ಉದ್ದೇಶ

ಖರೀದಿಸುವ ಉದ್ದೇಶ

ಫಿಟ್ನೆಸ್‌ ಟ್ರಾಕರ್ ಡಿವೈಸ್‌ ಅನ್ನು ಯಾಕೆ ಖರೀದಿಸುತ್ತಿರುವಿರಿ ಎಂಬುದುದನ್ನು ಮೊದಲು ಅರ್ಥೈಸಿಕೊಳ್ಳಿರಿ. ಉದ್ದೇಶ ತಿಳಿದರೇ ನಿಮಗೆ ಅಗತ್ಯವಿರುವ ಫೀಚರ್‌ ಹೊಂದಿದ ಫಿಟ್ನೆಸ್‌ ಟ್ರಾಕರ್ ಖರೀದಿಸಲು ಸುಲಭವಾಗಲಿದೆ. ಹೃದಯ ಬಡಿತ, ದೈನಂದಿನ ಆಕ್ಟಿವಿಟಿಗಳ ಟ್ರಾಕ್, ಸ್ಲಿಪ್ ಟ್ರಾಕ್ ಈ ಫೀಚರ್ಸ್‌ಗಳು ಸಾಮಾನ್ಯವಾಗಿ ಹೊಂದಿರುತ್ತವೆ. ಆದರೆ ಕೆಲವು ಈ ಆಯ್ಕೆಗಳಲ್ಲಿಯೇ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತವೆ. ಹೀಗಾಗಿ ಉದ್ದೇಶ ಗೊತ್ತು ಪಡಿಸಿಕೊಳ್ಳುವುದು ಮುಖ್ಯ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಫಿಟ್ನೆಸ್‌ ಟ್ರಾಕರ್‌ ಡಿವೈಸ್‌ಗಳು ಭಿನ್ನ ಮಾದರಿ ಆಯ್ಕೆಗಳಲ್ಲಿ ಲಭ್ಯವಿದೆ. ಈ ಡಿವೈಸ್‌ಗಳು ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದ್ದು, ಫೋನಿನಲ್ಲಿ ಪ್ರತ್ಯೇಕ ಆಪ್‌ ಇರುತ್ತದೆ ಆ ಆಪ್‌ನಲ್ಲಿ ಟ್ರಾಕಿಂಗ್ ಮಾಹಿತಿ ನೋಡಬಹುದು. ಹಾಗೆಯೇ ಇತ್ತೀಚಿನ ಟ್ರಾಕರ್‌ಗಳು OLED ಡಿಸ್‌ಪ್ಲೇಯನ್ನು ಹೊಂದಿದ್ದು, ಅಗತ್ಯ ಟೈಮ್, ಸ್ಟೆಪ್ಸ್ ಕೌಂಟ್, ಹಾರ್ಟ್ ಬೀಟ್ ರೇಟ್, ಸೇರಿದಂತೆ ಅಗತ್ಯ ಮಾಹಿತಿಗಳನ್ನು ಡಿಸ್‌ಪ್ಲೇ ಮಾಡುತ್ತದೆ.

ವಾಟರ್ ರೆಸಿಸ್ಟಂಟ್

ವಾಟರ್ ರೆಸಿಸ್ಟಂಟ್

ಇತ್ತೀಚಿನ ಹೊಸ ಫಿಟ್ನೆಸ್ ಟ್ರಾಕರ್‌ಗಳನ್ನು ವಾಟರ್ ರೆಸಿಸ್ಟಂಟ್ ಆಯ್ಕೆಯನ್ನು ಒಳಗೊಂಡಿದ್ದು, ಸ್ವಿಮಿಂಗ್ ಮಾಡುವಾಗು ಮತ್ತು ಮಳೆಯಲ್ಲಿಯೂ ಸಹ ಧರಿಸಬಹುದಾದ ಸೌಲಭ್ಯವನ್ನು ಪಡೆದಿವೆ. ಸ್ಯಾಮ್‌ಸಂಗ್ ಗೇರ್‌ ಫಿಟ್‌ 2, ಫಿಟ್‌ಬಿಟ್‌ ಚಾರ್ಜ್2, ಶಿಯೋಮಿ ಮಿ ಬ್ಯಾಂಡ್2, ಈ ಟ್ರಾಕಿಂಗ್ ಡಿವೈಸ್‌ಗಳು 'ವಾಟರ್ ರೆಸಿಸ್ಟಂಟ್' ಫೀಚರ್‌ನಿಂದ ಗಮನ ಸೆಳೆದಿವೆ. ವಾಟರ್‌ ರೆಸಿಸ್ಟಂಟ್‌ ಫೀಚರ್‌ಗೆ ಆದ್ಯತೆ ನೀಡಿರಿ.

ಬಿಲ್ಟ್‌ಇನ್ ಜಿಪಿಎಸ್‌

ಬಿಲ್ಟ್‌ಇನ್ ಜಿಪಿಎಸ್‌

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಫಿಟ್ನೆಸ್‌ ಟ್ರಾಕರ್‌ ಡಿವೈಸ್‌ಗಳಲ್ಲಿ ಕೆಲವು ಜನಪ್ರಿಯ ಡಿವೈಸ್‌ಗಳು ಬಿಲ್ಟ್‌ಇನ್‌ ಜಿಪಿಎಸ್‌ ಸೌಲಭ್ಯಗಳನ್ನು ಒಳಗೊಂಡಿವೆ. ಜಾಗಿಂಗ್ ಮಾಡುವಾಗ, ವಾಕಿಂಗ್ ಮಾಡುವಾಗ ಲೊಕೇಶನ್ ಲಾಗ್ ಇನ್ ಮಾಡಬಹುದಾಗಿದೆ. ರನ್ನಿಂಗ್ ಮತ್ತು ನಡಿಗೆಯ ಲೊಕೇಶನ್ ಸಹ ಟ್ರಾಕ್ ಮಾಡುವ ಆಯ್ಕೆಗಳಿಗೆ ಜಿಪಿಎಸ್‌ ನೆರವಾಗಲಿದೆ. ಹೀಗಾಗಿ ನೀವು ಖರೀದಿಸುವ ಫಿಟ್ನೆಸ್ ಟ್ರಾಕರ್ ಡಿವೈಸ್‌ನಲ್ಲಿ ಬಿಲ್ಟ್ ಇನ್ ಜಿಪಿಎಸ್ ಇದ್ದರೇ ಸೂಪರ್.

<strong>ಓದಿರಿ : ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!</strong>ಓದಿರಿ : ಶುರುವಾಯ್ತು 'ಜಿಯೋ ಗಿಗಾಫೈಬರ್' ಅಬ್ಬರ್!..ಆಫರ್‌ ಭರಪೂರ!

ಬ್ಯಾಟರಿ ಲೈಫ್

ಬ್ಯಾಟರಿ ಲೈಫ್

ಫಿಟ್ನೆಸ್‌ ಟ್ರಾಕರ್ ಡಿವೈಸ್‌ಗಳಲ್ಲಿ ಖರೀದಿಸುವಾಗ ಬ್ಯಾಟರಿ ಬಾಳಿಕೆಯನ್ನು ಗಮನಿಸಬೇಕು. ಅಧಿಕ ಬ್ಯಾಟರಿ ಬಾಳಿಕೆಯನ್ನು ಪಡೆದಿರುವ ಡಿವೈಸ್‌ಗಳು ಉತ್ತಮ. ಶಿಯೋಮಿಯ ಬ್ಯಾಂಟ್‌ 2 ಡಿವೈಸ್‌ ಸುಮಾರು 20ದಿನಗಳ ಬ್ಯಾಟರಿ ಲೈಫ್ ಹೊಂದಿದ್ದರೇ, ಇತರೆ ಡಿವೈಸ್‌ಗಳು ಸಾಮಾನ್ಯವಾಗಿ 5 ರಿಂದ 10 ದಿನಗಳವರೆಗೂ ಬ್ಯಾಟರಿ ಬಾಳಿಕೆಯನ್ನು ಒದಗಿಸುತ್ತವೆ. ಹಾರ್ಟ್‌ರೇಟ್ ಟ್ರಾಕರ್ ಮತ್ತು ಓಎಲ್‌ಡಿ ಡಿಸ್‌ಪ್ಲೇ ಫೀಚರ್ಸ್‌ ಹೊಂದಿರುವ ಡಿವೈಸ್‌ಗಳು ಹೆಚ್ಚು ಬ್ಯಾಟರಿ ಕಬಳಿಸುತ್ತವೆ.

Best Mobiles in India

English summary
Many fitness trackers available in the market. but you have to choose best one accordinf to your need. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X