ಅತ್ಯುತ್ತಮ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳ ಲಿಸ್ಟ್‌ ಇಲ್ಲಿದೆ ನೋಡಿ!

|

ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳಿಗೂ ಈಗ ಅಧಿಕ ಬೇಡಿಕೆ ಇದೆ. ಪ್ರಮುಖ ಮೊಬೈಲ್ ಸಂಸ್ಥೆಗಳು ಫೋನ್‌ಗಳ ಜೊತೆಗೆ ಇತ್ತೀಚಿಗೆ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳನ್ನು ಲಭ್ಯ ಮಾಡಿವೆ. ಅದರಲ್ಲಿಯೂ ಶಿಯೋಮಿ, ರಿಯಲ್‌ಮಿ, ಹಾನರ್, ಒಪ್ಪೋ, ಸ್ಯಾಮ್‌ಸಂಗ್, ಒನ್‌ಪ್ಲಸ್‌ ಸೇರಿದಂತೆ ಇತರೆ ಕೆಲವು ಕಂಪನಿಗಳ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಜನಪ್ರಿಯತೆ ಪಡೆದಿವೆ.

ಮಾರುಕಟ್ಟೆಯಲ್ಲಿ ಅನೇಕ ಫಿಟ್ನೆಸ್‌

ಹೌದು, ಮಾರುಕಟ್ಟೆಯಲ್ಲಿ ಅನೇಕ ಫಿಟ್ನೆಸ್‌ ಬ್ಯಾಂಡ್‌ಗಳ ಆಯ್ಕೆ ಇದ್ದರೂ, ಅತ್ಯುತ್ತಮ ಹೆಲ್ತ್ ಫೀಚರ್ಸ್ ಒಳಗೊಂಡು ಬಜೆಟ್‌ ಬೆಲೆಯಲ್ಲಿ ಲಭ್ಯವಿರುವ ಫಿಟ್ನೆಸ್‌ ಬ್ಯಾಂಡ್‌ಗಳನ್ನು ಗ್ರಾಹಕರು ಖರೀದಿಸಲು ಇಚ್ಚಿಸುತ್ತಾರೆ. ಹಾಗೆಯೇ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳ ಬಳಕೆದಾರರ ದೈನಂದಿನ ಚಟುವಟಿಕೆಗಳನ್ನು ಟ್ರಾಕ್‌ ಮಾಡುವ, ಹೃದಯ ಬಡಿತ ಮಾನಿಟರ್ ಮಾಡುವ ಆಯ್ಕೆಗಳನ್ನು ಒಳಗೊಂಡಿವೆ. ಹಾಗಾದರೇ ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಕೆಲವು ಉತ್ತಮ ಸ್ಮಾರ್ಟ್‌ ಫಿಟ್ನೆಸ್‌ ಬ್ಯಾಂಡ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6

ಶಿಯೋಮಿ ಸ್ಮಾರ್ಟ್ ಬ್ಯಾಂಡ್ 6 ಡಿವೈಸ್‌ 1.56 ಇಂಚಿನ (152 x 486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಮಿ ಸ್ಮಾರ್ಟ್ ಬ್ಯಾಂಡ್‌ನ 1.1 ಇಂಚಿನ AMOLED ಡಿಸ್‌ಪ್ಲೇಗೆ ಹೋಲಿಸಿದರೆ ಪರದೆಯು ಗಾತ್ರದಲ್ಲಿ ದೊಡ್ಡದಾಗಿದೆ.ಇದು ಆರೋಗ್ಯ ಟ್ರ್ಯಾಕಿಂಗ್ ಜೊತೆಗೆ, ಮಿ ಸ್ಮಾರ್ಟ್ ಬ್ಯಾಂಡ್ 6 ಒತ್ತಡದ ಮೇಲ್ವಿಚಾರಣೆ, ಆಳವಾದ ಉಸಿರಾಟದ ಮಾರ್ಗದರ್ಶನ ಕಾರ್ಯ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ.

ರಿಯಲ್ ಮಿ 2

ರಿಯಲ್ ಮಿ 2

ರಿಯಲ್ ಮಿ 2 (Realme Band 2) ಒಂದು ವಿಶಿಷ್ಟವಾದ ಆಯತಾಕಾರದ 1.4 ಇಂಚಿನ HD ಬಣ್ಣದ ಪ್ರದರ್ಶನದೊಂದಿಗೆ ಪ್ರಕಾಶಮಾನವಾದ, ವರ್ಣರಂಜಿತ ಮತ್ತು ಸ್ಪಂದಿಸುವ ಸ್ಪರ್ಶ ಅನುಭವವನ್ನು ನೀಡುತ್ತದೆ. ಫಿಟ್ನೆಸ್ ಟ್ರ್ಯಾಕರ್ ಅಂತರ್ನಿರ್ಮಿತ SpO2 ಸಂವೇದಕದೊಂದಿಗೆ ನಿರಂತರ ಹೃದಯ ಬಡಿತ ಮೇಲ್ವಿಚಾರಣೆ ಮತ್ತು ರಕ್ತದ ಶುದ್ಧತ್ವ ಮಟ್ಟವನ್ನು ಒದಗಿಸುತ್ತದೆ. 90 ಕ್ರೀಡಾ ವಿಧಾನಗಳಿವೆ. ಇದು 12 ದಿನಗಳವರೆಗೆ ಕ್ಲೈಮ್ ಮಾಡಲಾದ ಬ್ಯಾಟರಿ ಬ್ಯಾಕಪ್‌ನೊಂದಿಗೆ ಲಿಥಿಯಂ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ವಿಭಿನ್ನ ಬಟ್ಟೆಗಳು ಮತ್ತು ಸಂದರ್ಭಗಳಿಗೆ ಹೊಂದಿಕೊಳ್ಳಲು 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳಿವೆ.

ಓಫ್ಪೋ ಸ್ಮಾರ್ಟ್‌ಬ್ಯಾಂಡ್

ಓಫ್ಪೋ ಸ್ಮಾರ್ಟ್‌ಬ್ಯಾಂಡ್

ಓಫ್ಪೋ ಸ್ಮಾರ್ಟ್‌ಬ್ಯಾಂಡ್ ಡಿವೈಸ್ 1.1 ಇಂಚಿನ ಅಮೋಲೆಡ್ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು 100% P3 ವೈಡ್ ಕಲರ್ ಗ್ಯಾಮಟ್ ಮತ್ತು 2.5 ಡಿ ಬಾಗಿದ ಸ್ಕ್ರಾಚ್‌ ರೆಸಿಸ್ಟೆನ್ಸ್ ಮೇಲ್ಮೈಯನ್ನು ಹೊಂದಿದೆ. ಇದು ಇನ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ರನ್ನಿಂಗ್‌, ಔಟ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ವಾಕಿಂಗ್, ಇನ್‌ಸೈಡ್‌ ಸೈಕ್ಲಿಂಗ್, ಇನ್‌ಸೈಡ್‌ ರನ್‌, ಕ್ಯಾಲೊರಿ ವೆಸ್ಟ್‌, ಬ್ಯಾಡ್ಮಿಂಟನ್, ಸ್ವಿಮ್ಮಿಂಗ್‌, ರೋಯಿಂಗ್ ಮೆಷಿನ್‌, ಎಲಿಪ್ಟಿಕಲ್ ಮೆಷಿನ್, ಸೇರಿದಂತೆ ಇತರೆ ತರಬೇತಿಯನ್ನು ಒಳಗೊಂಡಿರುವ 12 ಸಮಾದರಿಯ ಕ್ರೀಡಾ ವಿಧಾನಗಳನ್ನು ಹೊಂದಿದೆ.

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್ ಡಿವೈಸ್ 126 x 294 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.6 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ. ಅದೇ ರೀತಿ ಶಿಯೋಮಿ ಮಿ ಬ್ಯಾಂಡ್ 5 ಡಿವೈಸ್‌ 1.1 ಇಂಚಿನ ಕಲರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮಿ ಬ್ಯಾಂಡ್ 4 ನಲ್ಲಿನ 0.95 ಇಂಚಿನ ಪರದೆಗಿಂತ ದೊಡ್ಡದಾಗಿದೆ. ಇನ್ನು ಈ ಸ್ಮಾರ್ಟ್‌ಬ್ಯಾಂಡ್‌ 100 ಕ್ಕೂ ಹೆಚ್ಚು ಹೊಸ ಆನಿಮೇಟೆಡ್ ವಾಚ್ ಫೇಸ್‌ಗಳನ್ನ ಹೊಂದಿದೆ.

Best Mobiles in India

English summary
Few Trending Smart Bands in India 2022: Check Features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X