ಈ ಚಾರ್ಜರ್ ಇದ್ದರೆ ನಿಮ್ಮ ಮೊಬೈಲ್ ಮತ್ತು ಬ್ಯಾಟರಿ ಎಂದೂ ಹಾಳಾಗುವುದಿಲ್ಲ!!

Written By:

ಚಾರ್ಜಿಂಗ್ ಕೇಬಲ್ ಸ್ಮಾರ್ಟ್‌ಪೋನ್ ಮತ್ತು ಸ್ಮಾರ್ಟ್‌ಪೋನ್ ಬ್ಯಾಟರಿಗೂ ತುಂಬ ಪ್ರಮುಖವಾದುದು. ಕಳಪೆ ಕೇಬಲ್ ಬಳಸಿ ಚಾರ್ಜ್ ಮಾಡಲು ಹೊರಟರೆ ಸರಿಯಾಗಿ ಚಾರ್ಜ್ ಆಗದಿರುವುದು, ಅತಿಯಾಗಿ ಬಿಸಿಯಾಗುವುದು, ಕೆಲವೊಮ್ಮೆ ಬೆಂಕಿ ಕಾಣಿಸಿಕೊಳ್ಳುವುದು, ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ.!!

ಇನ್ನು ಕಂಪೆನಿಯಿಂದಲೇ ಬಂದಿರುವ ಚಾರ್ಜರ್ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಚಾರ್ಜರ್ ಆದರೂ ಅದು ಕೂಡ ಕಲವು ದ್ವಂದ್ವಗಳನ್ನು ಉಂಟು ಮಾಡುತ್ತಿದೆ.!! ಹಾಗಾಗಿಯೇ, ಕಂಪೆನಿ ಚಾರ್ಜರ್‌ಗಳಿಗಿಂತಲೂ ಹೆಚ್ಚು ನಿಖರವಾದ ಹಾಗೂ ಇನ್ನು ಹೆಚ್ಚಿನ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್‌ಗಳು ಬರುತ್ತಿವೆ.!! ಹಾಗಾದರೆ, ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್? ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್?

ಏನಿದು ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್?

ಸ್ಮಾರ್ಟ್‌ಪೋನ್ ಮತ್ತು ಸ್ಮಾರ್ಟ್‌ಪೋನ್ ಬ್ಯಾಟರಿ ಜೀವನಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸ್ಮಾರ್ಟ್‌ ಚಾರ್ಜಿಂಗ್ ಕೇಬಲ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಚಾರ್ಜರ್‌ಗಳು ಸ್ಮಾರ್ಟ್‌ಪೋನ್ ಚಾರ್ಜಿಂಗ್ ವ್ಯವಸ್ಥೆಯನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ನಿಮ್ಮ ಫೋನ್ ರಕ್ಷಿಸುತ್ತದೆ.

ಏನೆನೆಲ್ಲಾ ಕಾರ್ಯನಿರ್ವಹಿಸುತ್ತವೆ!!

ಏನೆನೆಲ್ಲಾ ಕಾರ್ಯನಿರ್ವಹಿಸುತ್ತವೆ!!

ಫೋನ್ ಚಾರ್ಜ್ ಸರಿಯಾಗಿ ಆಗುತ್ತಿದೆಯೇ, ಫೋನಿನ ನಿಗದಿತ ಚಾರ್ಜಿಂಗ್ ವಿದ್ಯುತ್ ಪ್ರವಾಹಕ್ಕಿಂತ ಹೆಚ್ಚು ವಿದ್ಯುತ್ ಪ್ರವಹಿಸುತ್ತಿದೆಯೇ, ಕೇಬಲ್ ಬಿಸಿಯಾಗುತ್ತಿದೆಯೇ, ಇತ್ಯಾದಿ ವಿಷಯಗಳನ್ನು ಸ್ಮಾರ್ಟ್‌ ಚಾರ್ಜಲ್ ಕೇಬಲ್ ತೋರಿಸುತ್ತದೆ. ಮತ್ತು ಎಚ್ಚರಿಕೆ ಸಹ ನೀಡುತ್ತದೆ.!!

ಸ್ವಯಂ ರಕ್ಷಣೆ.!!

ಸ್ವಯಂ ರಕ್ಷಣೆ.!!

ಚಾರ್ಜಿಂಗ್ ವಿದ್ಯುತ್ ಪ್ರವಾಹ, ಕೇಬಲ್ ಬಿಸಿಯಾಗುತ್ತಿರುವ ಬಗ್ಗೆ ಈ ಸ್ಮಾರ್ಟ್ಫೋನ್ ಮೊದಲೇ ತೋರಿಸುವುದರಿಂದ ಈ ಚಾರ್ಜರ್ ಬಳಕೆ ಮಾಡುವ ಗ್ರಾಹಕರು ಮೊದಲೇ ಎಚ್ಚರಿಕೆ ಸೂಚನೆಗಳನ್ನು ಪಡೆಯಬಹುದಾಗಿದೆ.! ಮನೆಯಲ್ಲಿನ ವಿಧ್ಯತ್ ತೊಂದರೆಗಳನ್ನು ಸಹ ಈ ಕೇಬಲ್‌ ಪರಿಹರಿಸಿಕೊಳ್ಳಲಿವೆ.

ಬೆಲೆ ಎಷ್ಟು? ಎಲ್ಲೆಲ್ಲಿ ಲಭ್ಯವಿದೆ?

ಬೆಲೆ ಎಷ್ಟು? ಎಲ್ಲೆಲ್ಲಿ ಲಭ್ಯವಿದೆ?

ಸ್ಮಾರ್ಟ್‌ ಚಾರ್ಜರ್ ಕೇಬಲ್‌ಗಳು ಸಧ್ಯಕ್ಕೆ ಅಮೆರಿಕದಲ್ಲಿ ಮತ್ತು ಸಿಂಗಪುರಗಳಲ್ಲಿ ಮಾತ್ರ ಲಭ್ಯವಿದೆ. ಇನ್ನುಳಿದ ದೇಶಗಳಲ್ಲಿ ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸೂಚನೆ ಇದು. ಆದರೆ, ಭಾರತಕ್ಕೆ ಯಾವಾಗ ಬರುತ್ತದೋ ಗೊತ್ತಿಲ್ಲ. ಇನ್ನು ಬೆಲೆ ಯು 2000ದಿಂದ ಶುರುವಾಗುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
single cable that works in pretty much every device you own that needs charging? to know more visit to kannada.gizbot.com
Please Wait while comments are loading...
Opinion Poll

Social Counting