Subscribe to Gizbot

ಗೂಗಲ್ ಮ್ಯಾಪ್‌ನಲ್ಲಿ ಒಲಾ, ಉಬರ್ ಕ್ಯಾಬ್ ಬುಕ್ ಮಾಡುವುದು ಹೇಗೆ?

Written By:

ಓಲಾ ಮತ್ತು ಉಬರ್‌ನಲ್ಲಿ ಕ್ಯಾಬ್ ಬುಕ್ ಮಾಡಲು ಇನ್ನು ಆಪ್‌ ಡೌನ್‌ಲೋಡ್ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ.!! ಹೌದು, ಇನ್ನು ಗೂಗಲ್ ಮ್ಯಾಪ್ ಮೂಲಕವೇ ಒಲಾ ಮತ್ತು ಉಬರ್ ಕ್ಯಾಬ್ ಬುಕ್ ಮಾಡಬಹುದಾಗಿದ್ದು, ಪ್ರಯಾಣಿಕರಿಗೆ ಗೂಗಲ್ ಮತ್ತೊಂದು ಅತ್ಯುತ್ತಮ ಸೇವೆಯನ್ನು ನೀಡಿದೆ!!

ಚಾರ್ಜಿಂಗ್ ಸಮಯದಲ್ಲಿ ಫೋನ್ ಬಳಕೆ ಸ್ಪೋಟಕ್ಕೆ ಕಾರಣವಲ್ಲ!! ಹಾಗಾದರೆ ನಿಜವಾದ ಕಾರಣ?

ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಗೂಗಲ್ ಮ್ಯಾಪ್ ಆಯ್ಕೆ ಇದ್ದೇ ಇರುತ್ತದೆ. ಇದನ್ನು ಪರಿಣಾಮಕಾರಿಯಾಗಿ ಉಪಯೋಗಿಸುವ ನಿಟ್ಟಿನಲ್ಲಿ ಗೂಗಲ್ ಸಂಸ್ಥೆ ಮ್ಯಾಪ್ ಮೂಲಕವೇ ನೇರವಾಗಿ ಕ್ಯಾಬ್ ಬುಕ್ ಮಾಡುವ ಅವಕಾಶವನ್ನು ನೀಡಿದ್ದು, ಗೂಗಲ್ ಮ್ಯಾಪ್ ಮೂಲಕ ಕ್ಯಾಬ್ ಹೇಗೆ ಬುಕ್ ಮಾಡುವುದು ಹೇಗೆ? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಮ್ಯಾಪ್ ತೆರೆಯಿರಿ.

ಗೂಗಲ್ ಮ್ಯಾಪ್ ತೆರೆಯಿರಿ.

ಗೂಗಲ್ ಮ್ಯಾಪ್ ಮೂಲಕ ಕ್ಯಾಬ್ ಬುಕ್ ಮಾಡಲು ಗೂಗಲ್ ಮ್ಯಾಪ್ ತೆರೆಯಿರಿ. ನಂತರ ನೀವು ತಲುಪಬೇಕಾಗುವ ಸ್ಥಳವನ್ನು ಸರ್ಚ್ ಟೂಲ್‌ನಲ್ಲಿ ಹುಡುಕಿ.

 ಕಾರ್ ಐಕಾನ್‌ ಮೇಲೆ ಕ್ಲಿಕ್ ಮಾಡಿ.

ಕಾರ್ ಐಕಾನ್‌ ಮೇಲೆ ಕ್ಲಿಕ್ ಮಾಡಿ.

ನೀವು ತಲುಪಬೇಕಾಗುವ ಸ್ಥಳವನ್ನು ಸರ್ಚ್ ಟೂಲ್‌ನಲ್ಲಿ ಹುಡುಕಿದ ನಂತರ ಕಾರ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಒಂದು ಕೈಯನ್ನು ಮೇಲಕ್ಕೆ ಹಿಡಿದುಕೊಂಡಿರುವ ವ್ಯಕ್ತಿಯ ಚಿತ್ರ ತೋರುತ್ತದೆ ಅದನ್ನು ಕ್ಲಿಕ್ ಮಾಡಿ.

ಕ್ಯಾಬ್ ಬುಕ್ ಮಾಡಿ!!

ಕ್ಯಾಬ್ ಬುಕ್ ಮಾಡಿ!!

ಕಾರ್ ಐಕಾನ್ ಕ್ಲಿಕ್ ಮಾಡಿದ ನಂತರ ಒಂದು ಕೈಯನ್ನು ಮೇಲಕ್ಕೆ ಹಿಡಿದುಕೊಂಡಿರುವ ವ್ಯಕ್ತಿಯ ಚಿತ್ರ ತೋರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಉಬರ್ ಮತ್ತು ಒಲಾ ಕಾರ್ ಬುಕ್ ಮಾಡಲು ಕೇಳುತ್ತದೆ. ನಂತರ ನಿಮಗೆ ಬೇಕಾದ ಕ್ಯಾಬ್ ಆಯ್ಕೆ ಮಾಡಿ.

50 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.!!

50 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯಿರಿ.!!

ಗೂಗಲ್ ಮ್ಯಾಪ್ ಮೂಲಕ ಕ್ಯಾಬ್ ಬುಕ್ ಮಾಡಿದರೆ ಉಬರ್ ಮತ್ತು ಒಲಾ ಕಂಪೆನಿಗಳು ಪ್ರತಿ ರೈಡ್‌ಗೆ 50 ರೂಪಾಯಿ ಕ್ಯಾಶ್ ಬ್ಯಾಕ್ ಆಫರ್ ನೀಡಿವೆ. ಅದನ್ನು ಉಪಯೋಗಿಸಿಕೊಳ್ಳಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
You can look up both Uber and Ola cabs via Google Maps. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot