Subscribe to Gizbot

4G LTE ಸ್ಮಾರ್ಟ್ ವಾಚ್: ಇನ್ನು ಮುಂದೆ ಸ್ಮಾರ್ಟ್‌ಫೋನ್ ಬೇಕಾಗಿಲ್ಲ

Written By:

ಸ್ಮಾರ್ಟ್‌ಫೋನ್ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ವಾಚ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಲಾಂಚ್ ಆಗುತ್ತಿವೆ. ಜಾಗತೀಕವಾಗಿ ಆಪಲ್ ವಾಚ್ ಸಿರಿಸ್ 3 ಬಿಡುಗಡೆಯಾದ ಮಾದರಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ವಿಶ್ವದ ಟಾಪ್ 2 ಸ್ಮಾರ್ಟ್‌ಫೋನ್ ತಯಾರಕ ಹುವಾವೆ ವಾಚ್ 2 ಅನ್ನ ಬಿಡುಗಡೆ ಮಾಡಿದೆ.

4G LTE ಸ್ಮಾರ್ಟ್ ವಾಚ್: ಇನ್ನು ಮುಂದೆ ಸ್ಮಾರ್ಟ್‌ಫೋನ್ ಬೇಕಾಗಿಲ್ಲ

ಓದಿರಿ: ಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲ

4G ಕನೆಕ್ಟ್ ಮಾಡುವ ಈ ವಾಚ್ ಮೂರು ಆವೃತ್ತಿಯಲ್ಲಿ ಲಾಂಚ್ ಆಗಿದ್ದು, ಕ್ಲಾಸಿಕ್, ಸ್ಪೋಡ್ಸ್ ಮತ್ತು 4G ಕನೆಕ್ಟ್ ಎಂಬ ಮೂರು ಮಾದರಿಗಳು ಮಾರುಕಟ್ಟೆಗೆ ಕಾಲಿರಿಸಿವೆ. ಈ ಎಲ್ಲಾ ಆವೃತ್ತಿಗಳು ಬ್ಲಾಕ್ ಬಣ್ಣದಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುವಾವೆ ವಾಚ್ 2:

ಹುವಾವೆ ವಾಚ್ 2:

ಹುವಾವೆ ವಾಚ್ 2 ಸ್ಫೋಡ್ಸ್ ಆವೃತ್ತಿ ಮಾತ್ರವೇ ಅಮೆಜಾನ್ ನಲ್ಲಿ ಲಭ್ಯವಿದ್ದು, ಬೇರೆ ಆವೃತ್ತಿಯ ವಾಚ್ ಗಳು ಆಫ್‌ಲೈನ್ ಮಾರುಕಟ್ಟೆಯಲ್ಲಿ ದೊರೆಯಲಿದೆ. 4G LTE ಸಫೋರ್ಟ್ ಮಾಡಲಿದ್ದು, ಇಲ್ಲಿ ಮೆಸೇಜ್ ಮಾಡುವುದಲ್ಲದೇ ಕರೆ ಮಾಡುವ-ಸ್ವೀಕರಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಇದ್ಯಾವುದಕ್ಕೂ ಮೊಬೈಲ್ ಕನೆಕ್ಟ್ ಆಗುವುದೇ ಬೇಡವಾಗಿದೆ.

ಆಂಡ್ರಾಯ್ಡ್ ವೇರ್ 2:

ಆಂಡ್ರಾಯ್ಡ್ ವೇರ್ 2:

ಹುವಾವೆ ವಾಚ್ 2 ಸದ್ಯ ಆಂಡ್ರಾಯ್ಡ್ ವೇರ್ 2 ನಲ್ಲಿ ಕಾರ್ಯನಿರ್ವಹಿಸಲಿದ್ದು, ವೇಗವಾಗಿ ಮತ್ತು ಸುಲಭವಾದ ಕಾರ್ಯಚರಣೆಯನ್ನು ಹೊಂದಿದೆ. ಜೊತೆಗೆ 420mAH ಬ್ಯಾಟರಿಯನ್ನು ಹೊಂದಿದ್ದು, ಲೋಬ್ಯಾಟರಿ ಸಮಯದಲ್ಲಿ ವಾಚ್ ಮೋಡ್ ಬಳಕೆಯಾಗುತ್ತದೆ.

4GB ಸ್ಟೋರೆಜ್:

4GB ಸ್ಟೋರೆಜ್:

ಹುವಾವೆ ವಾಚ್ 2 ನಲ್ಲಿ 4GB ಸ್ಟೋರೆಜ್ ಅವಕಾಶವನ್ನು ನೀಡಲಾಗಿದೆ. ಇದರಲ್ಲಿ 2.3 GB ಮಾತ್ರ ಬಳಕೆಗೆ ದೊರೆಯಲಿದೆ. ಅಲ್ಲದೇ ಇದರಲ್ಲಿ ಸ್ನಾಪ್ಡ್ರಾಗನ್ 2100 ಪ್ರೋಸೆಸರ್ ಕಾಣಬಹುದು. wifi, ಬ್ಲೂಟೂತ್, NFC, GPS ಸೇವೆಯೂ ಇದರಲ್ಲಿದೆ.

ಬೆಲೆ:

ಬೆಲೆ:

ಹುವಾವೆ ವಾಚ್ 2 ಮೂರು ಆವೃತ್ತಿಯ ಬೆಲೆಯೂ ಬೇರೆ ಬೇರೆ ಇದೆ. ಕ್ಲಾಸಿಕ್ ಬೆಲೆ ರೂ: 20,999, ಸ್ಪೋಡ್ಸ್ ಬೆಲೆ ರೂ: 25,999 ಹಾಗೂ 4G ಸಫೋರ್ಟ್ ವಾಚ್ ಬೆಲೆ ರೂ.29,999 ಆಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
the Huawei Watch 2 has been launched in India. The smartwatch will come in three variants, a Sports version, which comes with Bluetooth connectivity. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot