Subscribe to Gizbot

ಐ.ಎಫ್.ಎ 2016ರಲ್ಲಿ ಘೋಷಣೆಯಾದ ಸ್ಯಾಮ್ಸಂಗ್ ಗೇರ್ ಎಸ್3, ಏಸಸ್ ಝೆನ್ ವಾಚ್ 3, ಹೆಚ್.ಟಿ.ಸಿ ಒನ್ ಎ9.

Written By:

ಐ.ಎಫ್.ಎ 2016ರ ಮೊದಲ ದಿನ ಮುಕ್ತಾಯಗೊಂಡಿದೆ. ಯುರೋಪಿನ ಬರ್ಲಿನ್ನಿನಲ್ಲಿ ನಡೆಯುತ್ತಿರುವ ಅತಿ ದೊಡ್ಡ ಎಲೆಕ್ಟ್ರಾನಿಕ್ ಉಪಕರಣಗಳ ಪ್ರದರ್ಶನ ಮೇಳ ಈ ಐ.ಎಫ್.ಎ. ಸೆಪ್ಟೆಂಬರ್ ಎರಡರಿಂದ ಎಂಟರವರೆಗೆ ನಡೆಯುವ ಈ ಮೇಳದ ಪ್ರಿ ಇವೆಂಟ್ ಪತ್ರಿಕಾಗೋಷ್ಟಿಗಳು ಮುಗಿದಿವೆ ಮತ್ತು ಹಲವು ವಿಭಾಗಗಳಲ್ಲಿ ಹೊಸ ಸಾಧನಗಳನ್ನು ಬಿಡುಗಡೆಗೊಳಿಸಲಾಗಿದೆ.

ಓದಿರಿ: ಅತಿ ದೊಡ್ಡ ಸ್ಮಾರ್ಟ್‌ಫೋನ್ ಲಾಂಚ್‌ಗೆ ಇಡಿಯ ವಿಶ್ವವೇ ಸಜ್ಜು

ಐ.ಎಫ್.ಎ 2016ರ ಮೊದಲ ದಿನ ನಡೆದ ಬಿಡುಗಡೆಗಳ ಬಗ್ಗೆ ಒಮ್ಮೆ ಕಣ್ಣಾಡಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್ಸಂಗ್ ಗೇರ್ ಎಸ್3.

ಸ್ಯಾಮ್ಸಂಗ್ ಗೇರ್ ಎಸ್3.

ನಿರೀಕ್ಷೆಯಂತೆಯೇ ಸ್ಯಾಮ್ಸಂಗ್ ಉತ್ತಮ ವೈಶಿಷ್ಟ್ಯತೆಗಳಿರುವ ಸ್ಯಾಮ್ಸಂಗ್ ಗೇರ್ ಎಸ್3 ಸ್ಮಾರ್ಟ್ ವಾಚನ್ನು ಬಿಡುಗಡೆಗೊಳಿಸಿದೆ. ಹಿಂದಿನ ವಾಚಿನಂತೆಯೇ ಇದರಲ್ಲೂ ಟೈಜನ್ ಒಎಸ್ ಇದೆ ಹಾಗೂ ಎಲ್.ಟಿ.ಇ ಸೌಲಭ್ಯವಿದೆ. ಇದು ದೊಡ್ಡದಿದೆ ಮತ್ತು ಎರಡು ಆವೃತ್ತಿಗಳಲ್ಲಿ ಬರುತ್ತಿದೆ - ಕ್ಲಾಸಿಕ್ ಮತ್ತು ಫ್ರಾಂಟೀಯರ್. ಫ್ರಾಂಟೀಯರ್ ಆವೃತ್ತಿಯ ಸ್ಮಾರ್ಟ್ ವಾಚಿನಲ್ಲಿ ಜಿಪಿಎಸ್ ಸೌಲಭ್ಯ ಕೂಡ ಇದೆ. ಎರಡೂ ಮಾಡೆಲ್ಲುಗಳು ಜಲ ನಿರೋಧಕತೆಯ ಐಪಿ 68 ಸರ್ಟಿಫಿಕೇಟ್ ಪಡೆದುಕೊಂಡಿವೆ, ಎನ್.ಎಫ್.ಸಿ, ಸ್ಯಾಮ್ಸಂಗ್ ಪೇ ಬೆಂಬಲ ಹಾಗೂ ಸ್ಪೀಕರ್ ಇದೆ. ತುರ್ತು ಪರಿಸ್ಥಿತಿಯಲ್ಲಿ ಎಸ್.ಒ.ಎಸ್ ಕಳುಹಿಸಬಹುದು ಹಾಗೂ ಲೊಕೇಷನ್ ಟ್ರ್ಯಾಕ್ ಮಾಡಬಹುದು. ಬಿ.ಎಂ.ಡಬ್ಲ್ಯೂವಿನ ಪರ್ಸನಲ್ ಮೊಬೈಲಿಗೂ ಗೇರ್ ಎಸ್3 ಕಂಪ್ಯಾಟಿಬಲ್ ಆಗಿದೆ. ಅಕ್ಟೋಬರಿನಲ್ಲಿ ಬಿಡುಗಡೆಯಾಗುತ್ತದೆ. ಕ್ಲಾಸಿಕ್ ಮಾಡೆಲ್ಲಿನ ಬೆಲೆ $299 (ಅಂದಾಜು 20,000 ರುಪಾಯಿ).

ಮೊಟೋ Z ಪ್ಲೇ, ಲಿನೊವೋ ಯೋಗಾ ಬುಕ್, ಮತ್ತು ಯೋಗಾ 910.

ಮೊಟೋ Z ಪ್ಲೇ, ಲಿನೊವೋ ಯೋಗಾ ಬುಕ್, ಮತ್ತು ಯೋಗಾ 910.

ಮೊಟೊರೋಲಾ ಮತ್ತು ಲಿನೊವೋ ಮೊಟೋ Z ಪ್ಲೇಯನ್ನು ಬಿಡುಗಡೆಗೊಳಿಸಿದೆ. ಮಧ್ಯ ಬೆಲೆಯ ಈ ಸ್ಮಾರ್ಟ್ ಫೋನುಗಳು ಮೊಟೊ ಮೊಡ್ಸ್ ಅನ್ನು ಬೆಂಬಲಿಸುತ್ತದೆ ಹಾಗೂ ಉತ್ತಮ ಬ್ಯಾಟರಿಯನ್ನೊಳಗೊಂಡಿದೆ. 3.5ಎಂ.ಎಂ ಹೆಡ್ ಜ್ಯಾಕ್ ಮತ್ತು ಉತ್ತಮ ಕ್ಯಾಮೆರ ಕೂಡ ಇದರಲ್ಲಿದೆ. ಲಿನೊವೋ 10x ಝೂಮ್ ಹಾಗೂ ಜೆನಾನ್ ಫ್ಲಾಷ್ ಇರುವ ಹ್ಯಾಸಲ್ ಬ್ಲಾಡ್ ಟ್ರೂ ಜೂಮ್ ಮೊಟೋ ಮೊಡ್ ಅನ್ನು ಕೂಡ ಘೋಷಿಸಿದೆ. ಕಂಪನಿಯು ಯೋಗಾ ಬುಕ್ ಅನ್ನು ಕೂಡ ಪರಿಚಯಿಸಿತು, ಆ್ಯಂಡ್ರಾಯ್ಡ್ ಮತ್ತು ವಿಂಡೋಸ್ ಗಳೆರಡರಲ್ಲೂ ಯೋಗಾ ಬುಕ್ ಲಭ್ಯವಿದೆ. ಯೋಗಾ 910 ಎಂಬ ಕನ್ವರ್ಟಬಲ್ ಟಚ್ ಸ್ಕ್ರೀನ್ ಲ್ಯಾಪ್ ಟಾಪ್ ಕೂಡ ಬಿಡುಗಡೆಯಾಯಿತು.

ಏಸಸ್ ಝೆನ್ ವಾಚ್ 3.

ಏಸಸ್ ಝೆನ್ ವಾಚ್ 3.

ಏಸಸ್ ತನ್ನ ಪ್ರಥಮ ದುಂಡಗಿನ ವಾಚಾದ ಝೆನ್ ವಾಚ್ 3 ಅನ್ನು ಘೋಷಿಸಿತು. 1.39 ಇಂಚಿನ ಅಮೊಲೆಡ್ ಪರದೆ, ಸ್ನಾಪ್ ಡ್ರಾಗನ್ ವೇರ್ 2100 ಪ್ರೊಸೆಸರ್ ಮತ್ತು ಹೈಪರ್ ಚಾರ್ಜ್ ಚಾರ್ಜಿಂಗ್ ತಂತ್ರಜ್ಞಾನ ಇದರಲ್ಲಿದೆ. 9.7 ಇಂಚಿನ, 2048x1536 ಪರದೆ, ಮೀಡಿಯಾಟೆಕ್ 8176 ಪ್ರೊಸೆಸರ್, 4ಜಿಬಿ ರ್ಯಾಮ್ ಹಾಗೂ 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿರುವ ಝೆನ್ ಪ್ಯಾಡ್ 3ಎಸ್ 10 ಅನ್ನು ಕೂಡ ಘೋಷಿಸಿತು. ಇದರಲ್ಲಿ ಬೆರಳಚ್ಚು ಸಂವೇದಕ ಕೂಡ ಇದೆ. ಝೆನ್ ಬುಕ್ 3, ಟ್ರಾನ್ಸ್ ಫಾರ್ಮರ್ 3 ಪ್ರೊ, ಟ್ರಾನ್ಸ್ ಫಾರ್ಮರ್ 3 ಮತ್ತು ಆರ್.ಒ.ಜಿ ಜಿ701ವಿ1 ನೋಟುಬುಕ್ಕುಗಳ ವಿವರಗಳನ್ನು ತಿಳಿಸಿದ ಝೆನ್ ಕಂಪನಿ 15 ಇಂಚಿನ ಪರದೆಯ ಕೇವಲ ಎರಡು ಪೌಂಡು ತೂಕವಿರುವ ಝೆನ್ ಸ್ಕ್ರೀನನ್ನು ಬಿಡುಗಡೆಗೊಳಿಸಿತು. ಇದು ಪ್ರಪಂಚದ ಅತ್ಯಂತ ಹಗುರ ಮತ್ತು ತೆಳುವಾದ ಫುಲ್ ಹೆಚ್.ಡಿ ಪೋರ್ಟಬಲ್ ಮಾನಿಟರ್.

ಏಸರ್ ಲಿಕ್ವಿಡ್ Z6, Z6 ಪ್ಲಸ್, ಪ್ರಿಡೇಟರ್ 21ಎಕ್ಸ್ ಮತ್ತು ಕ್ರೋಮ್ ಬುಕ್ಸ್.

ಏಸರ್ ಲಿಕ್ವಿಡ್ Z6, Z6 ಪ್ಲಸ್, ಪ್ರಿಡೇಟರ್ 21ಎಕ್ಸ್ ಮತ್ತು ಕ್ರೋಮ್ ಬುಕ್ಸ್.

ಏಸರ್ ಐ.ಎಫ್.ಎ ಅಲ್ಲಿ ಎರಡು ಹೊಸ ಆ್ಯಂಡ್ರಾಯ್ಡ್ ಫೋನುಗಳನ್ನು ಬಿಡುಗಡೆಗೊಳಿಸಿದೆ - ಲಿಕ್ವಿಡ್ Z6 ಮತ್ತು Z6 ಪ್ಲಸ್. ಲಿಕ್ವಿಡ್ Z6 ಕಡಿಮೆ ಬೆಲೆಯ ಫೋನಾದರೆ Z6 ಪ್ಲಸ್ ಮಧ್ಯಮ ಬೆಲೆಯ ಫೋನ್. ಎರಡರಲ್ಲೂ ಆ್ಯಂಡ್ರಾಯ್ಡ್ ಮಾರ್ಷ್ ಮೆಲ್ಲೊ ಇದೆ. ಪ್ರಪಂಚದ ಮೊದಲ ಕರ್ವ್ಡ್ ಸ್ಕ್ರೀನ್ ಲ್ಯಾಪ್ ಟಾಪ್, ಪ್ರಿಡೇಟರ್ 21ಎಕ್ಸ್ ಮತ್ತು 13 ಇಂಚಿನ 1080ಪಿ ಪರದೆ, 4ಜಿಬಿ ರ್ಯಾಮ್ ಹಾಗೂ ಯು.ಎಸ್.ಬಿ ಟೈಪ್ ಸಿ ಪೋರ್ಟ್ ಇರುವ ಕ್ರೋಮ್ ಬುಕ್ ಆರ್13 ಅನ್ನು ಏಸರ್ ಘೋಷಿಸಿತು. ಏಸರ್ ಸ್ಪಿನ್ 7, ಸ್ವಿಫ್ಟ್ 1, ಸ್ವಿಫ್ಟ್ 3, ಸ್ವಿಫ್ಟ್ 5 ಹಾಗೂ ಅಲ್ಟ್ರಾ ಥಿನ್ ಸ್ವಿಫ್ಟ್ 7 ಅನ್ನು ಪರಿಚಯಿಸಿತು.

ಹೆಚ್.ಟಿ.ಸಿ ಒನ್ ಎ9ಎಸ್.

ಹೆಚ್.ಟಿ.ಸಿ ಒನ್ ಎ9ಎಸ್.

ವಿನ್ಯಾಸದಲ್ಲಿ ಐಫೋನನ್ನು ಹೋಲುವ ಒನ್ ಎ9ಎಸ್ ಫೋನನ್ನು ಹೆಚ್.ಟಿ.ಸಿ ಘೋಷಿಸಿದೆ. 5ಇಂಚಿನ 720ಪಿ ಹೆಚ್.ಡಿ ಪರದೆ, ಕ್ವಾಡ್ ಕೋರ್ ಮೀಡಿಯಾಟೆಕ್ ಹೀಲಿಯೋ ಪಿ10 ಪ್ರೊಸೆಸರ್, 2ಜಿಬಿ ರ್ಯಾಮ್, 16 ಅಥವಾ 32 ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಮೈಕ್ರೋ ಯು.ಎಸ್.ಬಿ ಕಿಂಡಿ, ಎಫ್/2.2 ಅಪರ್ಚರ್ ಇರುವ 13ಮೆಗಾಪಿಕ್ಸೆಲ್ಲಿನ ಪ್ರಾಥಮಿಕ ಕ್ಯಾಮೆರ ಹಾಗೂ ಸ್ವಂತೀ ತೆಗೆಯಲು 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ ಇದರಲ್ಲಿದೆ. 2,300 ಎಂ.ಎ.ಹೆಚ್ ಬ್ಯಾಟರಿ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
At the IFA 2016 day 1 event, Samsung announced the Gear S3, Asus unveiled ZenWatch 3, ZenPad 3S 10, and many laptops and Lenovo announced the Moto Z Play, Lenovo Yoga Book, and Yoga 910 covertible. Also, HTC launched One A9s, and Acer launched many devices.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot