ಅತಿ ದೊಡ್ಡ ಸ್ಮಾರ್ಟ್‌ಫೋನ್ ಲಾಂಚ್‌ಗೆ ಇಡಿಯ ವಿಶ್ವವೇ ಸಜ್ಜು

By Shwetha
|

ಕಳೆದ ವಾರವಷ್ಟೇ ಆಪಲ್ ವಿಶ್ವದ ಅತಿದೊಡ್ಡ ಫೋನ್ ಲಾಂಚ್‌ಗೆ ಸಿದ್ಧತೆಯನ್ನು ಮಾಡಿಕೊಳ್ಳುವುದಾಗಿ ಘೋಷಣೆಯನ್ನು ಮಾಡಿತ್ತು. ಸಪ್ಟೆಂಬರ್ 7 ಕ್ಕೆ ನೆಕ್ಸ್ಟ್ ಜನರೇಶನ್ ಐಫೋನ್ ಅನ್ನು ಆಪಲ್ ಇಂದು ಲಾಂಚ್ ಮಾಡಲಿದ್ದು ಇದರೊಂದಿಗೆ ಕಂಪೆನಿಯ ಏನೆಲ್ಲಾ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಐಫೋನ್‌ಗಳನ್ನು ಆಪಲ್ ವಾಚ್‌ನೊಂದಿಗೆ ಅಪ್‌ಗ್ರೇಡ್ ಕೂಡ ಮಾಡಬಹುದಾಗಿದೆ.

ಓದಿರಿ: ಐಫೋನ್ 7, ಐಫೋನ್ 7 ಪ್ಲಸ್ ಆಕರ್ಷಕ ವಿಶೇಷತೆಗಳೇನು?

ಈ ಲಾಂಚ್ ಈವೆಂಟ್ ಅನ್ನು ನೀವು ಯಾವೆಲ್ಲಾ ಡಿವೈಸ್‌ಗಳ ಮೂಲಕ ನೋಡಬಹುದು ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದೇವೆ.

ಮ್ಯಾಕ್‌ಬುಕ್

ಮ್ಯಾಕ್‌ಬುಕ್

ಮ್ಯಾಕ್‌ಬುಕ್ ಬಳಕೆದಾರರು ತಮ್ಮ ಸಫಾರಿ ಬ್ರೌಸರ್ ಅನ್ನು ತೆರೆಯುವ ಮೂಲಕ ಈವೆಂಟ್ ಅನ್ನು ಲೈವ್ ಆಗಿ ನೋಡಬಹುದಾಗಿದೆ. ಅದಾಗ್ಯೂ, ಸಫಾರಿ ಬ್ರೌಸರ್ ಆವೃತ್ತಿ 6.0.5 ಮತ್ತು ಮೇಲಿನದ್ದಾಗಿರಬೇಕು.

ಆಪಲ್ ಟಿವಿ

ಆಪಲ್ ಟಿವಿ

ಸೆಕೆಂಡ್ ಅಥವಾ ಥರ್ಡ್ ಜನರೇಶನ್ ಆಪಲ್ ಟಿವಿಯೊಂದಿಗೆ ಓಎಸ್ 6.2 ಹೊಂದಿರುವವರು ಈವೆಂಟ್ ಅನ್ನು ಲೈವ್ ಆಗಿ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.

ಐಫೋನ್, ಐಪ್ಯಾಡ್, ಮತ್ತು ಐಪೋಡ್

ಐಫೋನ್, ಐಪ್ಯಾಡ್, ಮತ್ತು ಐಪೋಡ್

ಐಫೋನ್, ಐಪ್ಯಾಡಮ್ ಅಥವಾ ಐಪೋಡ್ ಹೊಂದಿರುವವರು ಈವೆಂಟ್ ಅನ್ನು ಲೈವ್ ಆಗಿ ಸ್ಟ್ರೀಮ್ ಮಾಡಿಕೊಳ್ಳಬಹುದಾಗಿದೆ. ಐಓಎಸ್ 7.0 ಮತ್ತು ನಂತರದ ಆವೃತ್ತಿ ಅವರ ಡಿವೈಸ್‌ಗಳಲ್ಲಿ ಚಾಲನೆಗೊಳ್ಳುತ್ತಿರಬೇಕು.

ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್

ಮೈಕ್ರೋಸಾಫ್ಟ್ ಎಡ್ಜ್ ಬ್ರೌಸರ್

ಆಪಲ್ ಡಿವೈಸ್‌ಗಳಲ್ಲದೆ ಇದೇ ಪ್ರಥಮ ಬಾರಿಗೆ ಆಪಲ್ ಅಲ್ಲದ ಉತ್ಪನ್ನಕ್ಕೆ ಲಾಂಚ್ ಈವೆಂಟ್‌ನ ಭಾಗ್ಯವನ್ನು ಕಂಪೆನಿ ಒದಗಿಸಿದೆ. ವಿಂಡೋಸ್ 10 ನಲ್ಲಿ ಎಡ್ಜ್ ಬ್ರೌಸರ್ ಪ್ರಿಇನ್‌ಸ್ಟಾಲ್‌ಡ್ ವಿಂಡೋಸ್ 10 ಅನ್ನು ಹೊಂದಿದ್ದು ಇದರ ಮೂಲಕ ಈವೆಂಟ್ ಅನ್ನು ವೀಕ್ಷಿಸಬಹುದಾಗಿದೆ.

ಪರ್ಯಾಯ ವಿಧಾನಗಳು

ಪರ್ಯಾಯ ವಿಧಾನಗಳು

ಮೇಲೆ ತಿಳಿಸಿದ ಯಾವೊಂದೂ ಡಿವೈಸ್‌ಗಳನ್ನು ನೀವು ಹೊಂದಿಲ್ಲ ಎಂದಾದಲ್ಲಿ ಕೆಲವೊಂದು ಬ್ಲಾಗ್‌ಗಳಾದ ದ ವರ್ಜ್, ಎಂಗಾಡ್‌ಜೆಟ್, ಆಂಡ್ರಾಯ್ಡ್ ಸೆಂಟ್ರಲ್ ಮೊದಲಾದವುಗಳ ಮೂಲಕ ಈವೆಂಟ್ ಅನ್ನು ಲೈವ್ ಆಗಿ ವೀಕ್ಷಿಸಬಹುದಾಗಿದೆ.

Best Mobiles in India

English summary
Less than a week ago, Apple sent out the media invites for an event to be held on September 7. And, we are just 24 hours away from the launch event.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X