ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

|

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಟಿವಿ ಗಳು ಕಾಣಿಸಿಕೊಳ್ಳುತ್ತಿದ್ದು, ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಖ್ಯಾತಿಯನ್ನು ಗಳಿಸಿಕೊಂಡಿರುವ TCL ಸಬ್ ಬ್ರಾಂಡ್ ಐಫಾಲ್ಕನ್ ಸಂಸ್ಥೆಯು ಗೂಗಲ್ ಸರ್ಟಿಫೈಡ್ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಇದು ಕೃತಕ ಬುದ್ಧಿಮತ್ತೆ ಗೂಗಲ್ ಅಸಿಸ್ಟೆಂಟ್ ಅನ್ನು ಹೊಂದಿದೆ ಎನ್ನಲಾಗಿದೆ.

ಭಾರತೀಯ ಮಾರುಕಟ್ಟೆಗೆ ಬಂತು ಮೊದಲ ಆಂಡ್ರಾಯ್ಡ್‌ ಸ್ಮಾರ್ಟ್‌ ಟಿವಿ..!

ಈಗಾಗಲೇ ಭಾರತೀಯ ಟಿವಿ ಮಾರುಕಟ್ಟೆಯಲ್ಲಿ ಹಲವು ಮಾದರಿಯ ಸ್ಮಾರ್ಟ್ ಟಿವಿ ಗಳನ್ನು ಕಾಣಬಹುದಾಗಿದ್ದು, ಅವುಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿರುವ ಐಫಾಲ್ಕನ್ 32K2A ಟಿವಿಯು ಆಂಡ್ರಾಯ್ಡ್ ಒರಿಯೋದಲ್ಲಿ ದಲ್ಲಿ ಕಾರ್ಯನಿರ್ವಹಿಸಲಿದೆ, ಬೆಸ್ಟ್ ಸಾಫ್ಟ್ ವೇರ್ ಆಯ್ಕೆಯನ್ನು ಹೊಂದಿದೆ.

ಗೂಗಲ್‌ ಅಸಿಸ್ಟಂಟ್

ಗೂಗಲ್‌ ಅಸಿಸ್ಟಂಟ್

ಇದಲ್ಲದೆ ಈ ಟಿವಿಯಲ್ಲಿ ಐಫಾಲ್ಕನ್ ಲಾಂಚ್ ಮಾಡಿರುವ ಗೂಗಲ್ ಸರ್ಟಿಫೈಡ್ ಐಫಾಲ್ಕನ್ 32K2A ಸ್ಮಾರ್ಟ್ ಟಿವಿಯಲ್ಲಿ ಗೂಗಲ್ ಅಸಿಸ್ಟೆಂಟ್ ಅನ್ನು ಕಾಣಬಹುದಾಗಿದ್ದು, ಇದರಿಂದಾಗಿ ಕೇವಲ ನಿಮ್ಮ ವಾಯ್ಸ್ ನಿಂದಲೇ ಟಿವಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಭಾರತೀಯ ಸ್ಮಾರ್ಟ್ ಟಿವಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಎನ್ನಬಹುದಾಗಿದೆ.

ಅಗ್ಗದ ದರ

ಅಗ್ಗದ ದರ

ಐಫಾಲ್ಕನ್ ಹೊಸದಾಗಿ ಲಾಂಚ್ ಮಾಡಿರುವ ಐಫಾಲ್ಕನ್ 32K2A ಸ್ಮಾರ್ಟ್ ಟಿವಿ ಯಲ್ಲಿ ಉತ್ತಮ ಗುಣಮಟ್ಟದ ಹಾರ್ಡ್ವೇರ್ ಕಾಣಬಹುದಾಗಿದ್ದು, ಇದರೊಂದಿಗೆ ಉತ್ತಮ ಗುಣಮಟ್ಟದ ಸಾಫ್ಟ್ ವೇರ್ ಗಳನ್ನು ಹೊಂದಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅತಿ ಕಡಿಮೆ ಬೆಲೆಗೆ ಅತಿ ಹೆಚ್ಚಿನ ತಂತ್ರಜ್ಞಾನವನ್ನು ಫಾಲ್ಕನ್ ನೀಡುತ್ತಿದೆ, ಇದರಿಂದಾಗಿ ಗುಣಮಟ್ಟದ ಟಿವಿಯನ್ನು ಕಡಿಮೆ ಬೆಲೆಗೆ ನಾವು ಇಲ್ಲಿ ಕಾಣಬಹುದಾಗಿದೆ.

TCLನ ಉಪ ಬ್ರಾಂಡ್‌

TCLನ ಉಪ ಬ್ರಾಂಡ್‌

ಈಗಾಗಲೇ ಟಿವಿ ಮಾರುಕಟ್ಟೆಯಲ್ಲಿ ಹೆಸರುವಾಸಿ ಆಗಿರುವಂತಹ tcl ಕಂಪನಿಯ ಸಬ್ ಬ್ರಾಂಡ್ ಆಗಿರುವಂತಹ ಐಫಾಲ್ಕನ್ ಹೆಚ್ಚಿನ ಪ್ರಮಾಣದಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದು, ಚೀನಾ ಮೂಲದ ಕಂಪನಿಗಳಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ

ಐಫಾಲ್ಕನ್ ಸಂಸ್ತೆಯೂ ಸದ್ಯ ಮಾರುಕಟ್ಟೆಗೆ 32, 40 ಮತ್ತು 49 ಇಂಚಿನ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದ್ದು, ಈ ಎಲ್ಲಾ ಟಿವಿ ಗಳು ಫ್ಲಿಪ್ ಕಾರ್ಟ್ ನಲ್ಲಿ ಮಾರಾಟವಾಗಲಿದೆ. ಈ ಮೂಲಕ ದೇಶದ ಮೂಲೆ ಮೂಲೆಯನ್ನು ತಲುಪುವಂಥ ಕಾರ್ಯ ಮಾಡಲಾಗುತ್ತಿದೆ.

Best Mobiles in India

English summary
iFFALCON launches 32-inch HD-ready Android TV in India. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X