ಅತ್ಯುತ್ತಮ ಸ್ಮಾರ್ಟ್‌ಬ್ಯಾಂಡ್ ಈ ಇನ್ಫಿನಿಕ್ಸ್ 'ಎಕ್ಸ್ ಬ್ಯಾಂಡ್ 3'!

|

ಹಾಕಾಂಗ್ ಮೂಲದ ಇನ್ಫಿನಿಕ್ಸ್ ಕಂಪೆನಿ ನೂತನ ಸ್ಮಾರ್ಟ್‌ಬ್ಯಾಂಡ್ ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಗಮನಸೆಳೆದಿದೆ. ಸ್ಮಾರ್ಟ್‌ಫೋನ್‌ಗಳಷ್ಟೇ ಅಲ್ಲದೇ, ವೇರಬಲ್ ಸ್ಮಾರ್ಡ್ ಡಿವೈಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಾಗಿರುವ ಇನ್ಫಿನಿಕ್ಸ್, ಇದೇ ಮೊದಲ ಬಾರಿಗೆ ಕಲರ್ ಡಿಸ್‌ಪ್ಲೇ ಹೊಂದಿರುವ ರಿಸ್ಟ್ ವಾಚ್ ಅನ್ನು ಮಾರುಕಟ್ಟೆಗೆ ತಂದಿದೆ.

ಹೌದು, ಇತ್ತೀಚಿಗಷ್ಟೇ 'ಇನ್ಫಿನಿಕ್ಸ್ ಎಸ್‌4' ಬ್ರ್ಯಾಂಡ್ ಫೋನ್ ಬಿಡುಗಡೆ ಮಾಡಿದ್ದ ಇನ್ಫಿನಿಕ್ಸ್, ಇದರ ಜತೆಯಲ್ಲಿಯೇ ಮೊದಲ ಬಾರಿಗೆ ಕಲರ್ ಡಿಸ್‌ಪ್ಲೇ ಹೊಂದಿರುವ 'ಎಕ್ಸ್ ಬ್ಯಾಂಡ್ 3' ಎಂಬ ಸ್ಮಾರ್ಟ್‌ವಾಚ್ ಅನ್ನು ಪರಿಚಯಸಿದೆ. ಇದು ಪ್ರೀಮಿಯಂ ಸ್ಮಾರ್ಟ್‌ ಫಿಟ್ ನೆಸ್ ಬ್ಯಾಂಡ್‌ ಆಗಿದ್ದು, ವಿವಿಧ ಆರೋಗ್ಯ ಅಂಶಗಳನ್ನು ಸಮಗ್ರ ಮತ್ತು ರಿಯಲ್‌ ಟೈಮ್‌ ಮಾನಿಟರ್‌ ಮಾಡಲಿದೆ.

ಅತ್ಯುತ್ತಮ ಸ್ಮಾರ್ಟ್‌ಬ್ಯಾಂಡ್ ಈ ಇನ್ಫಿನಿಕ್ಸ್ 'ಎಕ್ಸ್ ಬ್ಯಾಂಡ್ 3'!

ಹಾರ್ಟ್ ರೇಟ್, ಬಿಪಿ ಮಾನಿಟರಿಂಗ್, ನಿದ್ರೆ ಮತ್ತು ಆಕ್ಟಿವಿಟಿ ಟ್ರ್ಯಾಕಿಂಗ್, ಆಕ್ಸಿಜನ್ ಲೆವೆಲ್, ಕ್ಯಾಲರಿ ಸೇವನೆ, ಔಟ್‌ಡೋರ್ ರನಿಂಗ್, ಸ್ಟೆಪ್ ಕೌಂಟಿಂಗ್ ಸೇರಿದಂತೆ ವಿವಿಧ ಅಂಶಗಳನ್ನು ಸಮಗ್ರ ಮತ್ತು ರಿಯಲ್‌ ಟೈಮ್‌ ಮಾನಿಟರ್‌ ಮಾಡುವ ಈ 'ಎಕ್ಸ್ ಬ್ಯಾಂಡ್ 3' ಬ್ಯಾಂಡ್‌, ಒಟ್ಟು 20 ದಿನಗಳ ಬ್ಯಾಟರಿ ಬಾಳಿಕೆ ಹೊಂದಿರುವುದು ಅತ್ಯಂತ ವಿಶೇಷತೆ ಎಂದು ಹೇಳಬಹದು.

20 ದಿನಗಳ ಬ್ಯಾಟರಿ ಬಾಳಿಕೆ, ಕಲರ್ ಡಿಸ್‌ಪ್ಲೇ, ಹವಾಮಾನ ಅಪ್‌ಡೇಟ್, ಸ್ಮಾರ್ಟ್‌ ಟಾಸ್ಕ್ ಜ್ಞಾಪನೆ, ರಿಮೋಟ್‌ ಮ್ಯೂಸಿಕ್ ಕಂಟ್ರೋಲ್, ಸ್ಮಾರ್ಟ್‌ ಟಚ್ ಕೀಯಂತಹ ಸೌಲಭ್ಯಗಳನ್ನು ಹೊಂದಿರುವ ಈ ಡಿವೈಸ್ ಬೆಲೆ ಕೇವಲ 1,599 ರೂ.ಗಳಾಗಿದ್ದು, ಸೆಂಟ್ರಲೈಸ್ಡ್ ಇನ್‌ಫಿನಿಕ್ಸ್ ಲೈಫ್ ಅಪ್ಲಿಕೇಶನ್ ಅಡಿಯಲ್ಲಿ ಬಳಕೆದಾರರು 'ಎಕ್ಸ್‌ ಬ್ಯಾಂಡ್ 3' ಅನುಭವವನ್ನು ಪಡೆಯಬಹುದು.

ಅತ್ಯುತ್ತಮ ಸ್ಮಾರ್ಟ್‌ಬ್ಯಾಂಡ್ ಈ ಇನ್ಫಿನಿಕ್ಸ್ 'ಎಕ್ಸ್ ಬ್ಯಾಂಡ್ 3'!

ಇನ್ಫಿನಿಕ್ಸ್ ಫೋನ್‌ಗಳ ಜತೆಗೆ, ವಿವಿಧ ಉತ್ಪನ್ನಗಳನ್ನೂ ಭಾರತದ ಗ್ರಾಹಕರಿಗೆ ಪರಿಚಯಿಸುವುದು ನಮ್ಮ ಉದ್ದೇಶವಾಗಿದ್ದು,ಈ ನಿಟ್ಟಿನಲ್ಲಿ ಎಕ್ಸ್ ಬ್ಯಾಂಡ್ 3 ಉತ್ಪನ್ನವನ್ನು ಪರಿಚಯಿಸಿದ್ದೇವೆ. ಆರೋಗ್ಯ ಕಾಳಜಿ ಹೊಂದಿರುವವರಿಗೆ ಸ್ಮಾರ್ಟ್‌ ಫಿಟ್ನೆಸ್ ಅಕ್ಸೆಸರಿ 'ಎಕ್ಸ್‌ ಬ್ಯಾಂಡ್‌ 3' ವಾಚ್ ಅತ್ಯುತ್ತಮ ಸಾಧನವಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಓದಿರಿ: ಶಿಯೋಮಿ, ಒಪ್ಪೊ ಬಿಟ್ಟು 'ಹುವಾವೇ' ಮಾತ್ರ ಬ್ಯಾನ್ ಆಗಲು ಶಾಕಿಂಗ್ ಕಾರಣವಿದೆ!!

Best Mobiles in India

English summary
Infinix X Band 3 Fitness Band Launched in India: Price, Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X