Subscribe to Gizbot

ಫೇಸ್‌ಬುಕ್‌ನಲ್ಲಿ ವಯಕ್ತಿಕ ಡೇಟಾ ದುರುಪಯೋಗವಾಗಿದ್ದು ಎಷ್ಟು ಬಳಕೆದಾರರದ್ದು ಗೊತ್ತಾ?!

Written By:

ಇತ್ತೀಚಿಗಷ್ಟೆ ಭಾರೀ ವಿವಾದ ಸೇಷ್ಟಿಸಿದ್ದ ಕೇಂಬ್ರಿಜ್ ಅನಲಿಟಿಕಾ ಪ್ರಕರಣ ಸಂಬಂಧಪಟ್ಟಂತೆ ಎಷ್ಟು ಜನರ ವಯಕ್ತಿಕ ಮಾಹಿತಿ ದುರುಪಯೋಗವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ. 2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಕೇಂಬ್ರಿಜ್ ಅನಲಿಟಿಕಾ ಜತೆ 8.7 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಳ್ಳಲಾಗಿದೆ ಎಂದು ಫೇಸ್‌ಬುಕ್ ಒಪ್ಪಿಕೊಂಡಿದೆ.

ಫೇಸ್‌ಬುಕ್‌ ಖಾತೆದಾರರ ಮಾಹಿತಿಗೆ ಕನ್ನ ಹಾಕಿ ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತಿರುವ ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಗೆ 5 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಅಂದಾಜಿಸಲಾಗಿತ್ತು. ಆದರೆ, ಮಾಧ್ಯಮ ವರದಿಗಳನ್ನು ದೂರಕ್ಕಿಟ್ಟಿರುವ ಫೇಸ್‌ಬುಕ್ ಇದೇ ಮೊದಲ ಬಾರಿಗೆ ದತ್ತಾಂಶ ಹಂಚಿಕೊಂಡಿರುವ ಬಗ್ಗೆ ಮಾಹಿತಿ ನೀಡಿದೆ.

ಫೇಸ್‌ಬುಕ್‌ನಲ್ಲಿ ವಯಕ್ತಿಕ ಡೇಟಾ ದುರುಪಯೋಗವಾಗಿದ್ದು ಎಷ್ಟು ಬಳಕೆದಾರರದ್ದು ಗೊತ್ತ

ಇನ್ನು ಫೇಸ್‌ಬುಕ್ ಬಳಕೆದಾರರ ಖಾಸಗಿತನ ರಕ್ಷಿಸಲು ಫೇಸ್‌ಬುಕ್ ಮುಂದಾಗಿದ್ದು, ಯುರೋಪ್‌ನ ಖಾಸಗಿತನದ ನಿಯಮಗಳ ಪ್ರಕಾರವೇ ಎಲ್ಲ ಫೇಸ್‌ಬುಕ್ ಬಳಕೆದಾರರಿಗೂ ಸೆಕ್ಯುರಿಟಿ ಟೂಲ್‌ಗಳನ್ನು ಒದಗಿಸುವುದಾಗಿ ಫೇಸ್‌ಬುಕ್‌ ಸಂಸ್ಥಾಪಕ ಹಾಗೂ ಪ್ರಸ್ತುತ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್ ಅವರು ಘೋಷಿಸಿದ್ದಾರೆ.

ಹಾಗಾಗಿ, ಫೇಸ್‌ಬುಕ್ ಬಳಕೆದಾರರು ತಮ್ಮ ಡಿಜಿಟಲ್ ದತ್ತಾಂಶವನ್ನು ಕಂಪೆನಿಗಳು ಉಪಯೋಗಿಸುವುದರ ಮೇಲೆ ಜನರಿಗೆ ಹೆಚ್ಚಿನ ನಿಯಂತ್ರಣ ಒದಗಿಸುವ ಯುರೋಪ್‌ನ ಖಾಸಗಿತನದ ನಿಯಮಗಳು ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.ಇದರಿಂದ ಫೇಸ್‌ಬುಕ್ ಬಳಕೆದಾರರಿಗೆ ತಮ್ಮ ಖಾಸಾಗಿತನದ ಮೇಲೆ ಮತ್ತಷ್ಟು ಬಲಬಂದಂತಾಗುತ್ತದೆ.

ಫೇಸ್‌ಬುಕ್‌ನಲ್ಲಿ ವಯಕ್ತಿಕ ಡೇಟಾ ದುರುಪಯೋಗವಾಗಿದ್ದು ಎಷ್ಟು ಬಳಕೆದಾರರದ್ದು ಗೊತ್ತ

ರಾಜಕೀಯ ಪಕ್ಷಗಳಿಗೆ ಅನುಕೂಲ ಮಾಡಿಕೊಟ್ಟ ಆರೋಪ ಹೊತ್ತಿರುವ ಕೇಂಬ್ರಿಜ್ ಅನಲಿಟಿಕಾ ಕಂಪನಿಯ ಸೇವೆಗೆ ಸಂಬಂಧಿಸಿ ಭಾರತದಲ್ಲಿಯೂ ಇತ್ತೀಚೆಗೆ ವ್ಯಾಪಕ ಚರ್ಚೆಯಾಗಿತ್ತಿದೆ. ಹಾಗಾಗಿ, ಭಾರತದ ಬಳಕೆದಾರರ ಮಾಹಿತಿ ಹಂಚಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಫೇಸ್‌ಬುಕ್‌ಗೆ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೆಳಿದ್ದಾರೆ.

English summary
Cambridge Analytica harvested the user's information through a simple app. The whole thing is believed to be controlled by Russian hackers. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot