ಭಾರತದಲ್ಲಿ 'ಲೆನೊವೊ ಇಗೊ' ಸ್ಮಾರ್ಟ್‌ವಾಚ್‌ ರಿಲೀಸ್‌!.ಬೆಲೆ ಜಸ್ಟ್ 1,999,ರೂ!

|

ಸ್ಮಾರ್ಟ್‌ವಾಚ್‌ಗಳನ್ನು ಧರಿಸುವುದು ಈಗ ಸಖತ್ ಟ್ರೆಂಡ್ ಆಗಿದ್ದು, ಮಾರುಕಟ್ಟೆಯಲ್ಲಿಗ ಪ್ರಮುಖ ಕಂಪನಿಗಳಿಗೆ ಸೇರಿದ ತರಹೇವಾರಿ ಸ್ಮಾರ್ಟ್‌ವಾಚ್‌ಗಳು ಲಭ್ಯ ಇವೆ. ಇದೀಗ ಅವುಗಳ ಸಾಲಿಗ ಲೆನೊವೊ ಕಂಪನಿಯ ಇಗೊ ಸ್ಮಾರ್ಟ್‌ವಾಚ್ ಸೇರಿಕೊಳ್ಳಲಿದ್ದು, ನೂತನ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆಯಲಿದೆ. ಇಗೊ ಸ್ಮಾರ್ಟ್‌ವಾಚ್‌ ಕೇವಲ 1,999ರೂ. ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಭಾರತದಲ್ಲಿ 'ಲೆನೊವೊ ಇಗೊ' ಸ್ಮಾರ್ಟ್‌ವಾಚ್‌ ರಿಲೀಸ್‌!.ಬೆಲೆ ಜಸ್ಟ್ 1,999,ರೂ!

ಹೌದು, ಲೆನೊವೊ ಕಂಪನಿಯು ತನ್ನ ಇಗೊ ಸ್ಮಾರ್ಟ್‌ವಾಚ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದೆ. 24/7 ಹಾರ್ಟ್‌ಬೀಟ್‌ ಟ್ರಾಕಿಂಗ್, ಸ್ಟೆಪ್‌ ಟ್ರಾಕಿಂಗ್, ಸ್ಲಿಪ್‌ ಟ್ರಾಕಿಂಗ್ ಸೇರಿದಂತೆ ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರುವ ಈ ಸ್ಮಾರ್ಟ್‌ವಾಚ್‌ ಇತರೆ ಕಂಪನಿಗಳ ಸ್ಮಾರ್ಟ್‌ವಾಚ್‌ಗಳಿಗೆ ಟಫ್‌ ಪೈಪೋಟಿ ನೀಡುವ ಸೂಚನೆ ಹೊರಹಾಕಿದೆ.

ಭಾರತದಲ್ಲಿ 'ಲೆನೊವೊ ಇಗೊ' ಸ್ಮಾರ್ಟ್‌ವಾಚ್‌ ರಿಲೀಸ್‌!.ಬೆಲೆ ಜಸ್ಟ್ 1,999,ರೂ!

'ಇಗೊ ಸ್ಮಾರ್ಟ್‌ವಾಚ್‌'ನ ಫೀಚರ್ಸ್‌ಗಳು ಫಿಟನ್ನೆಸ್‌ ಟ್ರಾಕ್‌ಗೆ ಸಂಪೂರ್ಣ ಬೆಂಬಲ ನೀಡಲಿದ್ದು, ಸ್ಮಾರ್ಟ್‌ವಾಚ್‌ ಅನ್ನು ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಅದಕ್ಕಾಗಿ ಕಂಪನಿಯ ಲೆನೊವೊ ಲೈಫ್ ಆಪ್‌ ಸಹ ಇದೆ. ಹಾಗಾದರೇ ಲೆನೊವೊ ಇಗೊ ಸ್ಮಾರ್ಟ್‌ವಾಚ್‌ ಇತರೆ ಏನೆಲ್ಲಾ ಸ್ಪೆಷಲ್ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸೈನ್

ಡಿಸೈನ್

ಲೆನೊವೊ ಇಗೊ ಸ್ಮಾರ್ಟ್‌ವಾಚ್ ಹಗುರವಾದ ರಚನೆಯನ್ನು ಹೊಂದಿದ್ದು, ಇದರ ತೂಕವು 42 ಗ್ರಾಂ ಆಗಿದೆ. ಈ ಡಿವೈಸ್ ರಬ್ಬರ್‌ ಸ್ಟ್ರೀಪ್‌ನ ಬೆಲ್ಟ್‌ ರಚನೆಯನ್ನು ಹೊಂದಿದ್ದು, ಈ ರಬ್ಬರ್ ಸ್ಟ್ರೀಪ್‌ ದೀರ್ಘಕಾಲದ ಬಾಳಿಕೆಯನ್ನು ಒದಗಿಸುವ ರಚನೆಯನ್ನು ಪಡೆದಿದೆ. ಹಾಗೇ ಸ್ಮಾರ್ಟ್‌ವಾಚ್‌ ಅನ್ನು ಚಾರ್ಜ್‌ ಮಾಡಲು ಮ್ಯಾಗ್ನೇಟಿಕ್‌ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ.

ಫಿಟ್ನೆಸ್‌ ಟ್ರಾಕರ್‌

ಫಿಟ್ನೆಸ್‌ ಟ್ರಾಕರ್‌

ಬ್ಯೂಸಿ ಲೈಫ್‌ ಸ್ಟೈಲ್‌ನಲ್ಲಿ ಫಿಟ್ನೆಸ್‌ ಆಗಿರುವುದು ಅಗತ್ಯವಾಗಿದ್ದು, ದೇಹದ ಸ್ಥಿತಿಗತಿಯ ಟ್ರಾಕ್‌ ಮಾಡುವುದು ಮುಖ್ಯವಾಗಿದೆ. ಲೆನೊವೊ ಇಗೊ ಸ್ಮಾರ್ಟ್‌ವಾಚ್‌ ಬಳಕೆದಾರರಿಗೆ ಕಂಪ್ಲಿಟ್ ಫಿಟ್ನೆಸ್‌ ಟ್ರಾಕಿಂಗ್ ಸೇವೆ ಒದಗಿಸಲಿದ್ದು, 24/7 ಹಾರ್ಟ್‌ಬೀಟ್‌ ಟ್ರಾಕಿಂಗ್, ಸ್ಟೆಪ್‌ ಟ್ರಾಕಿಂಗ್, ಸ್ಲಿಪ್‌ ಮೊನಿಟರಿಂಗ್ ಸೇರಿದಂತೆ ದೈನಂದಿನ ಆಕ್ಟಿವಿಟಿಗಳನ್ನು ಸಹ ಟ್ರಾಕ್‌ ಮಾಡಲಿದೆ.

ಡಿಸ್‌ಪ್ಲೇ ಮತ್ತು ಬ್ಯಾಟರಿ

ಡಿಸ್‌ಪ್ಲೇ ಮತ್ತು ಬ್ಯಾಟರಿ

ಇಗೊ ಸ್ಮಾರ್ಟ್‌ವಾಚ್‌ 1.6 ಇಂಚಿನ ಆಂಯಟಿ ರಿಫ್ಲೇಕ್ಟಿವ್ ಮೊನೊಕ್ರೊಮ್ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಪ್ರತಿಪಲನಕ್ಕಾಗಿ ಲೈಟ್‌ ಬಟನ್ ಆಯ್ಕೆಯನ್ನು ನೀಡಲಾಗಿದೆ. ಹಾಗೇ ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಒದಗಿಸಲಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ಕಾಲ ಬಾಳಿಕೆ ಬರುವ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಇತರೆ ಫೀಚರ್ಸ್‌ಗಳು

ಇತರೆ ಫೀಚರ್ಸ್‌ಗಳು

ಸ್ಮಾರ್ಟ್‌ಫೋನ್‌ಗೆ ಕನೆಕ್ಟ್‌ ಮಾಡಬಹುದಾಗಿದ್ದು, ಮೆಸೆಜ್‌, ಕರೆ, ಇ-ಮೇಲ್ ಮತ್ತು ಸಾಮಾಜಿಕ ಜಾಲತಾಣಗಳ ನೋಟಿಫಿಕೇಶನಗಳನ್ನು ಸ್ಮಾರ್ಟ್‌ವಾಚ್‌ ನೀಡುತ್ತದೆ. ಹಾಗೇ ಕ್ಯಾಮೆರಾ ಆಯ್ಕೆಯನ್ನು ನೀಡಿದ್ದು, ವಾಚ್‌ನ ಡಿಸ್‌ಪ್ಲೇಯಲ್ಲಿ ಒನ್‌ ಟ್ಯಾಪ್‌ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ಮೂಲಕ ಕ್ಯಾಮೆರಾ ಕ್ಲಿಕ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.

ಲಭ್ಯತೆ

ಲಭ್ಯತೆ

ಲೆನೊವೊದ ಇಗೊ ಸ್ಮಾರ್ಟ್‌ವಾಚ್‌ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ಕ್ರೋಮಾ ರೀಟೆಲ್ ಸ್ಟೋರ್‌ಗಳಲ್ಲಿ ಖರೀದಿಗೆ ದೊರೆಯಲಿದ್ದು, ಬೆಲೆಯು ಕೇವಲ 1,999ರೂ.ಗಳು ಆಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿದರೇ ಆಯ್ದ ಬ್ಯಾಂಕ್‌ಗಳಿಂದ(ಆಕ್ಸಿಸ್‌ ಕ್ರೆಡಿಟ್‌ ಕಾರ್ಡ್) ಶೇ.5% ಕ್ಯಾಶ್‌ಬ್ಯಾಕ್‌ ಆಫರ್‌ ಸಹ ಲಭ್ಯವಾಗಲಿದೆ.

ಓದಿರಿ : ಪಬ್‌ಜಿ ಕಥೆ ಮುಗಿಯಿತು!..ಶುರುವಾಗಲಿದೆ ಹೊಸ ಗೇಮ್‌ನ ಅಬ್ಬರ! ಓದಿರಿ : ಪಬ್‌ಜಿ ಕಥೆ ಮುಗಿಯಿತು!..ಶುರುವಾಗಲಿದೆ ಹೊಸ ಗೇಮ್‌ನ ಅಬ್ಬರ!

ಓದಿರಿ : ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!ಓದಿರಿ : ಏರ್‌ಟೆಲ್ 399ರೂ. ಹಾಟ್‌ಸ್ಪಾಟ್ ಪ್ಲ್ಯಾನ್‌ ; 50GB ಡೇಟಾ ಖಚಿತ, ಆನಂತರ ಉಚಿತ!

Best Mobiles in India

English summary
Lenovo Ego Digital Smartwatch With Heart Rate Sensor, Fitness Tracking Features Launched in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X