Just In
Don't Miss
- News
ಪ್ರಿಯಾಳ ಮಾಸ್ಕ್: ಕೊರೊನಾ ವಿರುದ್ಧ ಸೆಣಸುವ ಮೊದಲ ಕಾಮಿಕ್ ನಾಯಕಿ ಕಥೆ, ಇದೀಗ ಕನ್ನಡದಲ್ಲೂ ಲಭ್ಯ
- Education
NIT Recruitment 2021: ಜ್ಯೂನಿಯರ್ ರಿಸರ್ಚ್ ಫೆಲೋ ಜೆಆರ್ಎಫ್ಹುದ್ದೆಗೆ ಅರ್ಜಿ ಆಹ್ವಾನ
- Sports
ಟೀಮ್ ಇಂಡಿಯಾದ 6 ಆಟಗಾರರಿಗೆ ಆನಂದ್ ಮಹೀಂದ್ರರಿಂದ ಭರ್ಜರಿ ಗಿಫ್ಟ್!
- Automobiles
ಶೀಘ್ರದಲ್ಲೇ ಬಂದ್ ಆಗಲಿದೆ ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್ ಸ್ಕೂಟರ್ ತಯಾರಕ ಕಂಪನಿ
- Movies
ಹಣೆ ಬರಹ ಚೆನ್ನಾಗಿದ್ದು ಚಪ್ಪಾಳೆ ಬೀಳುವವರೆಗು ಮಾತ್ರ ಕಲಾವಿದ ಕೈಲಾಸದಲ್ಲಿರುತ್ತಾನೆ; ನಟ ಜಗ್ಗೇಶ್
- Finance
ವಿಸ್ತಾರವಾದ ಲ್ಯಾಪ್ಟಾಪ್, ಟ್ಯಾಬ್ಗಳಿಗೆ ಹೆಚ್ಚಿದ ಬೇಡಿಕೆ
- Lifestyle
ನಿಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲಿದೆ ಈ ಲಿಂಬೆ ತೈಲ..
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿಯೋಮಿ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ವಿವರ್ಶೆ: ಅಗ್ಗದ ಬೆಲೆಗೆ ಟ್ರೆಂಡಿ ಡಿವೈಸ್!
ಶಿಯೋಮಿ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಮ್ಯೂಸಿಕ್ ಪ್ರಿಯರನ್ನು ಆಕರ್ಷಿಸಿದೆ. ಪುಟ್ಟ ರಚನೆ, ಕ್ರಿಸ್ಪಿ ಸೌಂಡ್, ದೀರ್ಘಾವಧಿಯ ಬ್ಯಾಟರಿ ಬಾಳಿಕೆ ಹಾಗೂ ಕೆಲವು ಸ್ಮಾರ್ಟ್ ಫೀಚರ್ಸ್‌ಗಳಿಂದ ಶಿಯೋಮಿಯ ಈ ಸ್ಪೀಕರ್ ಮೆಚ್ಚುಗೆ ಪಡೆದುಕೊಂಡಿದೆ. ಗ್ರಾಹಕರ ಜೇಬಿಗೆ ಹೊರೆಯಿಲ್ಲದ ಪ್ರೈಸ್‌ಟ್ಯಾಗ್ ಅನ್ನು ಪಡೆದಿರುವುದು ಈ ಸ್ಪೀಕರ್‌ನ ಮತ್ತೊಂದು ವಿಶೇಷ ಆಗಿದೆ.

ಶಿಯೋಮಿ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಗುಣಮಟ್ಟದ ಸೌಂಡ್ ಸಿಸ್ಟಮ್ ವ್ಯವಸ್ಥೆಯನ್ನು ಪಡೆದಿದ್ದು, ಡಿವೈಸ್ ರಚನೆಯು ಕಂಫರ್ಟ್ ಆಗಿದೆ. ಹಾಗೆಯೇ IPX5 ವಾಟರ್ ರೆಸಿಸ್ಟೆನ್ಸ್ ಸಾಮರ್ಥ್ಯವನ್ನು ಪಡೆದಿದ್ದು, ಸ್ಮಾರ್ಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ವಾಲ್ಯೂಮ್ ನಿಯಂತ್ರಣಕ್ಕಾಗಿ ಸರಳ ಆಯ್ಕೆಗಳನ್ನು ಪಡೆದುಕೊಂಡಿದ್ದು, ಔಟ್‌ಪುಟ್ ಸೌಂಡ್ ಕ್ವಾಲಿಟಿಯು ಹೆಚ್ಚು ಆಕರ್ಷಕವಾಗಿದೆ. ಹಾಗಾದರೆ ಈ ಡಿವೈಸ್ ಕಾರ್ಯವೈಖರಿ ಹೇಗಿದೆ ಹಾಗೂ ಖರೀದಿಗೆ ಯೋಗ್ಯವೇ?..ಮುಂದೆ ಓದಿರಿ.

ಆಕರ್ಷಕ ಡಿಸೈನ್
ಶಿಯೋಮಿಯ ಬ್ಲೂಟೂತ್ ಸ್ವೀಕರ್ ಚಿಕ್ಕದಾದ ಲುಕ್ ಪಡೆದಿದೆ. ಆದರೆ ಸೌಲಭ್ಯಗಳು ಮಾತ್ರ ದೊಡ್ಡದಾಗಿವೆ ಎನ್ನಬಹುದಾಗಿದೆ. ಈ ಡಿವೈಸ್ ಒಂದು ಬದಿಯಲ್ಲಿ ಪ್ಲೇ/ಪಾಸ್(play/pause) ಹಾಗೂ ಪವರ್ ಬಟನ್ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇನ್ನೊಂದು ಬದಿಯಲ್ಲಿ ಚಾರ್ಜಿಂಗ್ ಅನುಕೂಲ ಒದಗಿಸಿದೆ ಜೊತೆಗೆ aux ಫೋರ್ಟ್ ನೀಡಿದ್ದು, ಅಲ್ಲಿಯೇ ಮೈಕ್ರೋಫೋನ್ ರಚನೆಯನ್ನು ಪಡೆದಿದೆ. ಜೊತೆಗೆ ಆಯಂಟಿ ಸ್ಕಿಡ್(ಜಾರದಂತಹ) ರಚನೆ ಪಡೆದಿದೆ.

ಫೀಚರ್ಸ್‌ಗಳ ವಿಶೇಷತೆ
ಶಿಯೋಮಿಯ ಈ ಸ್ಪೀಕರ್ IPX5 ವಾಟರ್ ರೆಸಿಸ್ಟೆನ್ಸ್ ಸೌಲಭ್ಯವನ್ನು ಪಡೆದಿದ್ದು, ಹೀಗಾಗಿ ನೀರಿನಲ್ಲಿ ಬಿದ್ದಾಗ ಹಾನಿ ಆಗುವ ಸಾಧ್ಯತೆಗಳು ಕಡಿಮೆ. ಇದರೊಂದಿಗೆ ಇತ್ತೀಚಿನ ಜನಪ್ರಿಯ ಫೀಚರ್ ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಸಹ ಪಡೆದಿದೆ. ಗೂಗಲ್ ಅಸಿಸ್ಟಂಟ್, ಅಲೆಕ್ಸಾ ಮತ್ತು ಸಿರಿ ಸೌಲಭ್ಯಗಳನ್ನು ಬೆಂಬಲಿಸುತ್ತದೆ. ಬಳಕೆದಾರರು ವಾಯಿಸ್ ಅಸಿಸ್ಟಂಟ್ ಸೌಲಭ್ಯವನ್ನು ಬಳಸಬಹುದಾಗಿದೆ. ವಾಯಿಸ್ ಕಮಾಂಡ್ ಮೂಲಕ ಕರೆಗಳನ್ನು ಸ್ವೀಕರಿಸಲು ಮತ್ತು ಕರೆ ಕಟ್ ಮಾಡಲು ಅನುವು ಮಾಡುತ್ತದೆ.

ಬ್ಯಾಟರಿ ಬಾಳಿಕೆ
ಶಿಯೋಮಿಯ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ 2000mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯವನ್ನು ಪಡೆದಿದೆ. ಸುಮಾರು 20 ಗಂಟೆ ಮ್ಯೂಸಿಕ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದಿದ್ದು, ಹಾಗೆಯೇ ಬ್ಯಾಟರಿಯು 5W ಔಟ್‌ಪುಟ್ ಪವರ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ ಬ್ಲೂಟೂತ್ 5.0 ಸಾಮರ್ಥ್ಯ ಬ್ಲೂಟೂತ್ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಔಟ್‌ಪುಟ್ ಸೌಂಡ್ ಹೊರಹಾಕಲಿದೆ.

ಬೆಲೆ ಮತ್ತು ಲಭ್ಯತೆ
ಶಿಯೋಮಿ ಔಟ್‌ಡೋರ್ ಬ್ಲೂಟತ್ ಸ್ವೀಕರ್ ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿಗೆ ಲಭ್ಯವಿದ್ದು, ಬೆಲೆಯು 1,399ರೂ.ಗಳು ಆಗಿದೆ. ಇನ್ನು ಈ ಡಿವೈಸ್ ಅನ್ನು ಗ್ರಾಹಕರು Mi.com ಮತ್ತು ಮಿ ಹೋಮ್ಸ್ ತಾಣಗಳಲ್ಲಿ ಖರೀದಿಸಬಹುದಾಗಿದೆ. ಹಾಗೆಯೇ ಈ ಡಿವೈಸ್ ಬ್ಲ್ಯಾಕ್ ಬಣ್ಣದ ಆಯ್ಕೆಯನ್ನು ಒಳಗೊಂಡಿದೆ.

ಕೊನೆಯ ಮಾತು
ಇತ್ತೀಚಿನ ದಿನಗಳಲ್ಲಿ ಬ್ಲೂಟೂತ್ ಸ್ಪೀಕರ್‌ಗಳು ಹೆಚ್ಚು ಜನಪ್ರಿಯತೆ ಪಡೆಯುತ್ತಿವೆ. ಅಗ್ಗದ ಬೆಲೆಯಲ್ಲಿ ಪುಟ್ಟ ಬ್ಲೂಟೂತ್ ಸ್ಪೀಕರ್ ಖರೀದಿಸುವ ಯೋಜನೆ ಇದ್ದರೇ ಶಿಯೋಮಿಯ ಈ ಔಟ್‌ಡೋರ್ ಬ್ಲೂಟೂತ್ ಸ್ವೀಕರ್ ಉತ್ತಮ ಆಯ್ಕೆ ಎನ್ನಬಹುದಾಗಿದೆ. ಸೌಂಡ್, ಫೀಚರ್ಸ್ ಉತ್ತಮವಾಗಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190